धर्मस्थळ देवस्थानाचे नाव बदनाम करण्याच्या षडयंत्राविरोधात मंगळवारी बेळगावात भव्य मोर्चा
खानापूर : धर्मस्थळ या ठिकाणी हिंदू धर्माच्या विरोधात षडयंत्र रचले जात असून देवस्थानाचे नाव बदनाम करण्याचा प्रयत्न सुरू आहे. या पार्श्वभूमीवर याला तीव्र विरोध दर्शविण्यासाठी आणि पुढील रूपरेषा ठरविण्यासाठी बेळगाव येथील धर्मनाथ भवन येथे हिंदू धर्मातील सर्व पक्षीय ज्येष्ठ नेतेमंडळी व सामाजिक कार्यकर्त्यांची महत्त्वपूर्ण बैठक घेण्यात आली.
या बैठकीत येत्या मंगळवार, दिनांक 19 ऑगस्ट रोजी बेळगाव शहरातून भव्य मूक मोर्चा काढून जिल्हाधिकाऱ्यांना निवेदन देण्याचा निर्णय घेण्यात आला.
बैठकीस आमदार अभय पाटील, खासदार इराण्णा कडाडी, माजी विधान परिषद सदस्य महांतेश कवटगीमठ, माजी खासदार अमरसिंह पाटील, बेळगावचे महापौर साळुंखे, माजी आमदार संजय पाटील, माजी आमदार अरविंद पाटील, आमदार विठ्ठल हलगेकर यांच्यासह जिल्ह्यातील अनेक प्रमुख नेते उपस्थित होते.
खानापूर तालुक्यातून भाजपाचे जिल्हा उपाध्यक्ष प्रमोद कोचेरी, माजी तालुका अध्यक्ष संजय कुबल, भाजपा युवा नेते व बेळगाव जिल्हा युवा मोर्चाचे उपाध्यक्ष पंडित ओगले, भाजपचे जनरल सेक्रेटरी गुंडू तोपीनकट्टी तसेच तालुक्यातील अनेक सामाजिक कार्यकर्त्यांनीही हजेरी लावली.
दरम्यान, बेळगाव येथे होणाऱ्या या मूक मोर्चामध्ये खानापूर तालुक्यातील सर्व हिंदू बांधव, जैन बांधव तसेच धर्मस्थळाशी संबंधित महिला स्वसहाय्य संघाच्या महिला कार्यकर्त्यांनी मोठ्या संख्येने सहभागी व्हावे, असे आवाहन भाजपा जिल्हा उपाध्यक्ष प्रमोद कोचेरी, माजी तालुका अध्यक्ष संजय कुबल आणि युवा नेते पंडित ओगले यांनी केले आहे.
ಧರ್ಮಸ್ಥಳ ದೇವಾಲಯದ ಅಪಖ್ಯಾತಿಗೆ ಸಂಚು ರೂಪಿಸಿರುವುದನ್ನು ಖಂಡಿಸಿ ಮಂಗಳವಾರ ಬೆಳಗಾವಿಯಲ್ಲಿ ಬೃಹತ್ ಮೆರವಣಿಗೆ
ಖಾನಾಪುರ : ಧರ್ಮಸ್ಥಳ ದೇವಸ್ಥಾನದ ಹೆಸರು ಕೆಡಿಸಲು ಹಾಗೂ ಹಿಂದೂ ಧರ್ಮದ ವಿರುದ್ಧ ಸಂಚು ನಡೆಯುತ್ತಿದೆ ಎಂಬ ಹಿನ್ನೆಲೆಯಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಲು ಮತ್ತು ಮುಂದಿನ ಹೋರಾಟದ ರೂಪುರೇಷೆ ನಿಗದಿಪಡಿಸಲು, ಬೆಳಗಾವಿ ಧರ್ಮನಾಥ ಭವನದಲ್ಲಿ ಹಿಂದೂ ಧರ್ಮದ ವಿವಿಧ ಪಕ್ಷಗಳ ಹಿರಿಯ ನಾಯಕರು ಹಾಗೂ ಸಾಮಾಜಿಕ ಕಾರ್ಯಕರ್ತರ ಮಹತ್ವದ ಸಭೆ ಮಂಗಳವಾರ ಜರುಗಲಿದೆ.
ಈ ಸಭೆಯಲ್ಲಿ ಬರುವ ಮಂಗಳವಾರ, ಆಗಸ್ಟ್ 19ರಂದು ಬೆಳಗಾವಿ ನಗರದಲ್ಲಿ ಭವ್ಯ ಮೌನ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ನಿರ್ಧಾರ ಕೈಗೊಳ್ಳಲಾಯಿತು.
ಸಭೆಗೆ ಶಾಸಕ ಅಭಯ ಪಾಟೀಲ, ಸಂಸದ ಈರಣ್ಣ ಕಡಾಡಿ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ಮಾಜಿ ಸಂಸದ ಅಮರ್ಸಿಂಗ್ ಪಾಟೀಲ, ಮಾಜಿ ಶಾಸಕ ಸಂಜಯ ಪಾಟೀಲ, ಮಾಜಿ ಶಾಸಕ ಅರವಿಂದ ಪಾಟೀಲ, ಶಾಸಕ ವಿಠ್ಠಲ ಹಲಗೇಕರ್ ಸೇರಿದಂತೆ ಜಿಲ್ಲೆಯ ಪ್ರಮುಖ ನಾಯಕರು ಹಾಜರಿರುವರು.
ಖಾನಾಪುರ ತಾಲ್ಲೂಕಿನಿಂದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೂದ್ ಕೋಚೇರಿ, ಮಾಜಿ ತಾಲ್ಲೂಕು ಅಧ್ಯಕ್ಷ ಸಂಜಯ ಕುಬಲ, ಬಿಜೆಪಿ ಯುವ ಮುಖಂಡ ಹಾಗೂ ಬೆಳಗಾವಿ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷ ಪಂಡಿತ ಒಗಲೆ ಸೇರಿದಂತೆ ಅನೇಕ ಸಾಮಾಜಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಇದರ ಅಂಗವಾಗಿ ಬೆಳಗಾವಿಯಲ್ಲಿ ನಡೆಯಲಿರುವ ಈ ಮೌನ ಮೆರವಣಿಗೆಯಲ್ಲಿ ಖಾನಾಪುರ ತಾಲ್ಲೂಕಿನ ಎಲ್ಲಾ ಹಿಂದೂ ಭಾಂದವರು, ಜೈನ ಭಾಂದವರು ಹಾಗೂ ಧರ್ಮಸ್ಥಳಕ್ಕೆ ಸಂಬಂಧಿಸಿದ ಮಹಿಳಾ ಸ್ವಸಹಾಯ ಸಂಘದ ಮಹಿಳಾ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಮೊದ್ ಕೋಚೇರಿ, ಮಾಜಿ ತಾಲ್ಲೂಕು ಅಧ್ಯಕ್ಷ ಸಂಜಯ ಕುಬಲ ಹಾಗೂ ಯುವ ಮುಖಂಡ ಪಂಡಿತ ಒಗಲೆ ಅವರು ಕೋರಿದ್ದಾರೆ.



