
देवराई गावाजवळ अस्वलाचा हल्ला : शेतकरी जखमी
खानापुरा : तालुक्यातील देवराई गावाजवळ सोमवारी 29 जुलै रोजी, सायंकाळी गुरे चारून घरी परतणाऱ्या एका वृद्ध शेतकऱ्यावर अस्वलाने हल्ला केल्याने तो गंभीर जखमी झाला. अस्वलाने गावातील शेतकरी नारायण चावरी (65) यांच्यावर पाठीमागून हल्ला करून, त्यांच्या पाठीला व डोक्याला दुखापत केली.
ही घटना नागरगाळी वनपरिक्षेत्रातील देवराई गावाजवळ घडली, नारायणचा आरडाओरडा ऐकून, गावकरी नारायणच्या दिशेने धावून आले. त्यामुळे अस्वलाने नारायणला सोडून जंगलात पळ काढलीं. जखमी नारायणला ग्रामस्थांनी खासगी वाहनातून नंदागड येथील सामुदायिक आरोग्य केंद्रात दाखल करून प्राथमिक उपचार केले. घटनेची माहिती मिळताच एसीएफ सुनीता निंबर्गी आणि आरएफओ नागराज बालेहोसूर यांनी नंदगड रुग्णालयात जाऊन नारायण यांची विचारपूस केली. व आमदारांच्या सल्ल्यानुसार पुढील उपचारासाठी बेळगाव जिल्हा रुग्णालयात पाठवले आहे.
खानापूर तालुक्याचे आमदार विठ्ठलराव हलगेकर यांना याबाबतची माहिती मिळताच, त्यांनी वनखात्याच्या अधिकाऱ्यांशी संपर्क साधून माहिती घेतली असून, जखमींला योग्य ते व अधिक उपचारासाठी बेळगाव येथील दवाखान्यात दाखल करण्यास सांगितले. त्यामुळे पुढील उपचारासाठी त्यांना बेळगाव येथील दवाखान्यात दाखल करण्यात आले आहे.
ದೇವರಾಯಿ ಗ್ರಾಮದ ಬಳಿ ಕರಡಿ ದಾಳಿ: ರೈತನಿಗೆ ಗಾಯ
ಖಾನಾಪುರ: ತಾಲ್ಲೂಕಿನ ದೇವರಾಯಿ ಗ್ರಾಮದ ಬಳಿ ಸೋಮವಾರ ಸಂಜೆ ದನಗಳನ್ನು ಮೇಯಿಸಿಕೊಂಡು ಮನೆಗೆ ಮರಳುತ್ತಿದ್ದ ವೃದ್ಧ ರೈತನ ಮೇಲೆ ಕರಡಿಯೊಂದು ದಾಳಿ ನಡೆಸಿದ್ದರಿಂದ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗ್ರಾಮದ ರೈತ ನಾರಾಯಣ ಚೌರಿ (65) ಅವರ ಮೇಲೆ ಹಿಂದಿನಿಂದ ದಾಳಿ ನಡೆಸಿದ ಕರಡಿ ಅವರ ಬೆನ್ನು ಮತ್ತು ಮೈಮೇಲೆ ಪರಚಿ ಗಾಯಗೊಳಿಸಿದೆ.
ನಾಗರಗಾಳಿ ಅರಣ್ಯ ವ್ಯಾಪ್ತಿಯ ದೇವರಾಯಿ ಗ್ರಾಮದ ಸಮೀಪ ಈ ಘಟನೆ ನಡೆದಿದ್ದು, ನಾರಾಯಣ ಅವರ ಚೀರಾಟ ಕೇಳಿದ ಗ್ರಾಮದ ಜನರು ಅವರ ಬಳಿ ಬರುತ್ತಿರುವುದನ್ನು ಗಮನಿಸಿದ ಕರಡಿ ಅವರನ್ನು ಬಿಟ್ಟು ಅರಣ್ಯದಲ್ಲಿ ಮರೆಯಾಗಿದೆ. ಗಾಯಗೊಂಡ ನಾರಾಯಣ ಅವರನ್ನು ಗ್ರಾಮಸ್ಥರು ಖಾಸಗಿ ವಾಹನದಲ್ಲಿ ನಂದಗಡದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯ ಮಾಹಿತಿ ಪಡೆದ ಎ.ಸಿ.ಎಫ್ ಸುನೀತಾ ನಿಂಬರಗಿ ಮತ್ತು ಆರ್.ಎಫ್.ಒ ನಾಗರಾಜ ಬಾಳೆಹೊಸೂರ ನಂದಗಡ ಆಸ್ಪತ್ರೆಗೆ ಭೇಟಿ ನೀಡಿ ಮುಂದಿನ ಚಿಕಿತ್ಸೆಗಾಗಿ ನಾರಾಯಣ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ಈ ಬಗ್ಗೆ ಮಾಹಿತಿ ಪಡೆದ ಖಾನಾಪುರ ತಾಲೂಕು ಶಾಸಕ ವಿಠ್ಠಲರಾವ್ ಹಲಗೇಕರ ಅವರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಗಾಯಾಳುಗಳನ್ನು ಸೂಕ್ತ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದರು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಲಾಗಿದೆ
