
या गावच्या नवीन बस सेवेचे उद्घाटन, आमदारांच्या हस्ते..
खानापूर ; खानापूर-बरगाव-भंडरगाळी नवीन बससेवेचे उद्घाटन, खानापूर तालुक्याचे आमदार विठ्ठलराव हलगेकर, यांच्या हस्ते आज सोमवार दिनांक 12 ऑगस्ट 2024 रोजी, सकाळी बरगाव या ठिकाणी करण्यात आले. यावेळी ग्रामस्थ व विद्यार्थी वर्ग उपस्थित होता.गर्लगुजी येथून खानापूरकडे येणाऱ्या बस विद्यार्थी व नागरिक यांच्या गर्दीमुळे, बस भरून येत होती. त्यामुळे बरगाव व भंडरगाळी येथील विद्यार्थ्यांना बस मध्ये उभारण्यास सुद्धा जागा मिळत नव्हती, काही वेळेला बस मध्ये जागा नसल्याने, बस वाहक बस सुद्धा थांबवत नव्हते. त्यामुळे भंडरगाळी व बरगांव येथील विद्यार्थी वर्गाला व ग्रामस्थांना खानापूरला येताना त्रास सहन करावा लागत होता. विद्यार्थ्यांना, तर खानापूर पर्यंत चालत येऊन, शाळा गाठावी लागत होती. काही वेळेला शाळा चुकत सुद्धा होती. याची माहिती भंडरगाळी व बरगांव ग्रामस्थांनी, खानापूर तालुक्याचे आमदार विठ्ठलराव हलगेकर, यांना दिली असता, त्यांनी तात्काळ, आज सोमवार पासून खानापूर-बरगाव- भंडरगाळी, व परत वापस, भंडरगाळी-बरगाव-खानापूर अशी बस सेवा सुरू केल्याने, विद्यार्थी व ग्रामस्थांचे होणारे त्रास वाचले आहेत. त्यामुळे ग्रामस्थांनी व विद्यार्थी वर्गाने खानापूरचे आमदार विठ्ठलराव हलगेकर यांना धन्यवाद दिले असून, त्याचबरोबर आभार ही मानलें.
ಬರಗಾಂವ-ಭಂಡರಗಲಿ ಗ್ರಾಮದ ನೂತನ ಬಸ್ ಸೇವೆ ಶಾಸಕರಿಂದ ಉದ್ಘಾಟನೆ,
ಖಾನಾಪುರ; ಖಾನಾಪುರ-ಬರಗಾಂವ-ಭಂಡರಗಲಿ ಹೊಸ ಬಸ್ ಸೇವೆಯನ್ನು ಖಾನಾಪುರ ತಾಲೂಕಿನ ಶಾಸಕ ವಿಠ್ಠಲರಾವ್ ಹಲಗೇಕರ ಅವರು ಇಂದು ಆಗಸ್ಟ್ 12, 2024, ಸೋಮವಾರ ಬೆಳಿಗ್ಗೆ ಬರಗಾಂವದಲ್ಲಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ವಿದ್ಯಾರ್ಥಿಗಳು ಮತ್ತು ನಾಗರಿಕರ ನೂಕು ನುಗ್ಗಲಿನಿಂದ ಗರ್ಲಗುಂಜ್ಜಿಯಿಂದ ಖಾನಾಪುರಕ್ಕೆ ಬರುತ್ತಿದ್ದ ಬಸ್ ತುಂಬಿ ಬರುತ್ತದೆ. ಹೀಗಾಗಿ ಬರಗಾಂವ, ಭಂಡರಗಲಿಯ ವಿದ್ಯಾರ್ಥಿಗಳಿಗೆ ಬಸ್ನಲ್ಲಿ ನಿಲ್ಲಲು ಕೂಡ ಜಾಗ ಸಿಗುತ್ತಿಲ್ಲ, ಕೆಲವೊಮ್ಮೆ ಬಸ್ ಕಂಡಕ್ಟರ್ ಬಸ್ ಕೂಡ ನಿಲ್ಲಿಸಿರುತಿಲ್ಲ. ಹೀಗಾಗಿ ಖಾನಾಪುರಕ್ಕೆ ಬರುವ ಭಂಡರಗಲಿ, ಬರಗಾಂವ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪರದಾಡಬೇಕಾಗಿತು. ವಿದ್ಯಾರ್ಥಿಗಳು ಶಾಲೆ ತಲುಪಲು ಖಾನಾಪುರದವರೆಗೆ ನಡೆದುಕೊಂಡು ಹೋಗಬೇಕಿತ್ತು. ಕೆಲವೊಮ್ಮೆ ಅವರು ಶಾಲೆಗೆ ಸರಿಯಾದ ಸಮಯಕ್ಕೆ ಹೋಗದೆ ಹಾಜರಾತಿ ಕಡಿಮೆ ಯಾಗಿ ಕಷ್ಟ ಪಟ್ಟಿದ್ದಾರೆ. ಖಾನಾಪುರ ತಾಲೂಕು ಶಾಸಕ ವಿಠ್ಠಲರಾವ್ ಹಲಗೇಕರ ಅವರಿಗೆ ಈ ಮಾಹಿತಿ ನೀಡಿದ ಭಂಡಾರಗಲಿ ಹಾಗೂ ಬರಗಾಂವ ಗ್ರಾಮಸ್ಥರು ಖಾನಾಪುರ- ಬರಗಾಂವ-ಭಂಡರಗಾಳಿ ಮರಳಿ ಭಂಡರಗಲಿ-ಬಾರಗಾಂವ-ಖಾನಾಪುರಕ್ಕೆ ಬಸ್ ಸಂಚಾರ ಆರಂಭಿಸವಲು ಮನವಿ ಮಾಡಿದ್ದರು, ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಶಾಸಕರು ಬಸ್ ಸೇವೆ ಇಂದು ಆರಂಭಿಸಿದರು ಇದರಿಂದ ಗ್ರಾಮಸ್ಥರ ಸಂಕಷ್ಟ ದೂರವಾಗಿದೆ. ಆದ್ದರಿಂದ ಖಾನಾಪುರ ಶಾಸಕ ವಿಠ್ಠಲರಾವ್ ಹಲಗೇಕರ ಅವರಿಗೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ಸಾಮಾಜಿಕ ಹೋರಾಟಗಾರರಾದ ಭರಮಣಿ ಪಾಟೀಲ, ಪ್ರಮೋದ ಪಾಟೀಲ, ನಿವೃತ್ತಿ ಪಾಟೀಲ, ಹಾಗೂ ಬರಗಾಂವ, ಭಂಡರಗಲಿ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
