अथणी : जजसमोरच महिलेची हत्या करण्याचा प्रयत्न; आरोपी ताब्यात.
अथणी : कोर्टाची कार्यवाही सुरू असताना महिलेवर चाकूने हल्ला करून हत्या करण्याचा प्रयत्न झाल्याची घटना मंगळवारी दुपारी अथणी न्यायालयात घडली आहे. मीनाक्षी रामचंद्र शिंदे (50) या हल्ल्यात गंभीर जखमी झालेल्या असून सध्या रुग्णालयात उपचार घेत आहेत. कोतनट्टी गावातील बाबासाहेब चौहान हा हल्ला करणारा आरोपी आहे.
मालमत्तेच्या वादाच्या संबंधित बाबतीत आरोपी बाबासाहेबच्या आत्त्या (वडिलांची बहीण) मीनाक्षी कोर्टात हजर झाली होती. याच विषयावर यापूर्वीही अनेक वेळा वाद झाले होते. मंगळवारी त्या महिलेचा पाठलाग करून आरोपीने हत्या करण्याचा प्रयत्न केला.
त्याने सदर महिलेवर विळ्याने हल्ला करण्याचा प्रयत्न केल्यावर स्वतःला वाचण्यासाठी महिलेने कोर्ट हॉलमध्ये धावत प्रवेश केला. प्रिन्सिपल दिवाणी न्यायालयाच्या न्यायाधीशांसमोरच ही घटना घडल्याने क्षणभर कोर्ट परिसरात घबराट आणि तणावाचे वातावरण निर्माण झाले होते.
महिलेवर हल्ला करण्याचा प्रयत्न करणाऱ्या आरोपीला अथणी पोलिसांनी अटक केली आहे.
ಅಥಣಿ : ಜಡ್ಜ್ ಎದುರಲ್ಲೇ ಮಹಿಳೆ ಕೊಲೆಗೆ ಯತ್ನ ; ಆರೋಪಿ ಬಂಧನ.
ಅಥಣಿ : ಕೋರ್ಟ್ ಕಲಾಪ ನಡೆಯುವ ವೇಳೆ ಮಹಿಳೆಯನ್ನು ಕೊಚ್ಚಿ ಕೊಲೆ ಮಾಡಲು ಯತ್ನಿಸಿದ ಘಟನೆ ಮಂಗಳವಾರ ಮಧ್ಯಾಹ್ನ ಅಥಣಿ ನ್ಯಾಯಾಲಯದಲ್ಲಿ ನಡೆದಿದೆ.
ಮೀನಾಕ್ಷಿ ರಾಮಚಂದ್ರ ಶಿಂಧೆ ( 50 ) ಹಲ್ಲೆಗೊಳಗಾದ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕೋತನಟ್ಟಿ ಗ್ರಾಮದ ಬಾಬಾಸಾಹೇಬ್ ಚೌಹಾನ್ ಎಂಬಾತ ಹಲ್ಲೆ ಮಾಡಿದ್ದ ಆರೋಪಿ.
ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿ ಬಾಬಾಸಾಹೇಬ್ ಸೋದರತ್ತೆ ಮೀನಾಕ್ಷಿ ಕೋರ್ಟ್ ಮೆಟ್ಟಿಲೇರಿದ್ದಳು. ಇದೇ ವಿಚಾರವಾಗಿ ಅನೇಕ ಬಾರಿ ಜಗಳವಾಗಿತ್ತು. ಇವತ್ತು ಮಹಿಳೆ ಬೆನ್ನಟ್ಟಿದ ವ್ಯಕ್ತಿ ಕೊಲೆಗೆ ಯತ್ನಿಸಿದ್ದಾನೆ.
ಕುಡುಗೋಲಿನಿಂದ ಮಹೆಳೆ ಮೇಲೆ ಹಲ್ಲೆಗೆ ಯತ್ನಿಸಿದ್ದವೇಳೆ ತಪ್ಪಿಸಿಕೊಳ್ಳಲು ಮಹಿಳೆ ಕೋರ್ಟ್ ಹಾಲ್ ಗೆ ನುಗ್ಗಿದ್ದಾಳೆ.
ಪ್ರಧಾನ ದಿವಾನಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಘಟನೆ ನಡೆದಿದ್ದು ಕ್ಷಣಕಾಲ ಆತಂಕದ ವಾತಾವರಣ ಮನೆಮಾಡಿತ್ತು.
ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ್ದ ಆರೋಪಿಯನ್ನು ಅಥಣಿ ಪೊಲೀಸರು ಬಂಧಿಸಿದ್ದಾರೆ.

