अरुण इंजिनिअरिंग उद्योगाचा किर्लोस्कर कंपनीकडून सन्मान; कर्नाटक छत्रिय मराठा परिषदेचा सत्कार
खानापूर : मंगळवार दिनांक 16 नोव्हेंबर 2025 रोजी अरुण इंजिनिअरिंग उद्योगाचे संचालक श्री. भूषण काकतकर यांना किर्लोस्कर कंपनीतर्फे उत्तम पुरवठादार (Best Vendor) म्हणून गौरविण्यात आले. किर्लोस्कर कंपनीच्या एकूण 800 वेंडर्समधून अरुण इंजिनिअरिंग उद्योगाची निवड झाल्याबद्दल कर्नाटक छत्रिय मराठा परिषदेच्या पदाधिकाऱ्यांतर्फे श्री. काकतकर यांचा यथोचित सत्कार करण्यात आला.
या उल्लेखनीय यशाबद्दल कर्नाटक छत्रिय मराठा परिषदेतर्फे श्री. भूषण काकतकर यांचे हार्दिक अभिनंदन करण्यात आले. उद्योग क्षेत्रात गुणवत्ता, विश्वासार्हता आणि उत्कृष्ट सेवा यांचा आदर्श निर्माण केल्याबद्दल त्यांच्या कार्याचे सर्वत्र कौतुक होत आहे.
या सत्कारप्रसंगी के. के. एम. पी. चे जिल्हा उपाध्यक्ष श्री. दिलीप दादा पवार, जिल्हा सेक्रेटरी श्री. संजीव भोसले, बेळगाव दक्षिणचे अध्यक्ष श्री. सतीश बाचीकर तसेच खानापूरचे श्री. प्रवीण सुळकर आदी मान्यवर उपस्थित होते. उपस्थितांनी श्री. काकतकर यांच्या पुढील वाटचालीस शुभेच्छा दिल्या.
ಅರುಣ್ ಎಂಜಿನಿಯರಿಂಗ್ ಉದ್ಯಮಕ್ಕೆ ಕಿರ್ಲೋಸ್ಕರ್ ಕಂಪನಿ ವತಿಯಿಂದ ಗೌರವ ಪುರಸ್ಕಾರ ಪ್ರಧಾನ; ಮಾಲಿಕರಿಗೆ ಕರ್ನಾಟಕ ಛತ್ರಿಯ ಮರಾಠಾ ಪರಿಷತ್ತ ವತಿಯಿಂದ ಸನ್ಮಾನ
ಖಾನಾಪುರ : ಮಂಗಳವಾರ ದಿನಾಂಕ 16 ನವೆಂಬರ್ 2025 ರಂದು ಅರುಣ್ ಎಂಜಿನಿಯರಿಂಗ್ ಉದ್ಯಮದ ನಿರ್ದೇಶಕ ಶ್ರೀ ಭೂಷಣ್ ಕಾಕತ್ಕರ್ ಅವರನ್ನು ಕಿರ್ಲೋಸ್ಕರ್ ಕಂಪನಿಯ ವತಿಯಿಂದ ಉತ್ತಮ ಪೂರೈಕೆದಾರ (Best Vendor) ಎಂದು ಸನ್ಮಾನ ಮಾಡಿ ಗೌರವಿಸಲಾಯಿತು. ಕಿರ್ಲೋಸ್ಕರ್ ಕಂಪನಿಯ ಒಟ್ಟು 800 ವೆಂಡರ್ಗಳಲ್ಲಿ ಅರುಣ್ ಎಂಜಿನಿಯರಿಂಗ್ ಉದ್ಯಮದ ಆಯ್ಕೆ ಆದ ಹಿನ್ನೆಲೆಯಲ್ಲಿ ಕರ್ನಾಟಕ ಛತ್ರಿಯ ಮರಾಠಾ ಪರಿಷತ್ತಿನ ಪದಾಧಿಕಾರಿಗಳಿಂದ ಶ್ರೀ ಕಾಕತ್ಕರ್ ಅವರಿಗೆ ಯಥೋಚಿತ ಸನ್ಮಾನ ಮಾಡಲಾಯಿತು.
ಈ ಗಮನಾರ್ಹ ಯಶಸ್ಸಿನ ನಿಮಿತ್ತ ಕರ್ನಾಟಕ ಛತ್ರಿಯ ಮರಾಠಾ ಪರಿಷತ್ತಿನ ವತಿಯಿಂದ ಶ್ರೀ ಭೂಷಣ್ ಕಾಕತ್ಕರ್ ಅವರಿಗೆ ಹಾರ್ದಿಕ ಅಭಿನಂದನೆಗಳು ಸಲ್ಲಿಸಲಾಯಿತು. ಉದ್ಯಮ ಕ್ಷೇತ್ರದಲ್ಲಿ ಗುಣಮಟ್ಟ, ವಿಶ್ವಾಸಾರ್ಹತೆ ಮತ್ತು ಅತ್ಯುತ್ತಮ ಸೇವೆಯ ಆದರ್ಶವನ್ನು ನಿರ್ಮಿಸಿದ್ದಕ್ಕಾಗಿ ಅವರ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಈ ಸನ್ಮಾನ ಸಮಾರಂಭದಲ್ಲಿ ಕೆ. ಕೆ. ಎಂ. ಪಿ. ಯ ಜಿಲ್ಲಾ ಉಪಾಧ್ಯಕ್ಷ ಶ್ರೀ ದಿಲೀಪ್ ದಾದಾ ಪವಾರ್, ಜಿಲ್ಲಾ ಕಾರ್ಯದರ್ಶಿ ಶ್ರೀ ಸಂಜೀವ್ ಭೋಸಲೆ, ಬೆಳಗಾವ್ ದಕ್ಷಿಣದ ಅಧ್ಯಕ್ಷ ಶ್ರೀ ಸತೀಶ್ ಬಾಚಿಕರ್ ಹಾಗೂ ಖಾನಾಪುರದ ಶ್ರೀ ಪ್ರವೀಣ್ ಸುಳ್ಕರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಉಪಸ್ಥಿತರು ಶ್ರೀ ಕಾಕತ್ಕರ್ ಅವರ ಮುಂದಿನ ಯಶಸ್ವಿ ಪಯಣಕ್ಕೆ ಶುಭಾಶಯಗಳನ್ನು ಕೋರಿದರು.



