
नरेगाचे काम न दिल्याने, नागरगाळीच्या आरएफओ विरोधात मजुरांचे आंदोलन.
खानापुर : घोटगाळी ग्रामपंचायतीच्या नरेगा मजुरांनी शुक्रवारी 21 जून रोजी, तालुक्यातील नागरगाळी वीभागीय वनाधिकारी कार्यालयासमोर धरणे आंदोलन केले. नरेगा योजनेंतर्गत मजूरांना कामं न दिल्याने, नागरगाळी विभागीय वनअधिकारी यांच्या विरोधात संताप व्यक्त केला.
वनविभागाने नरेगा योजनेंतर्गत मजूरांना कामं उपलब्ध करून द्यावेत, या मागणीसाठी गुरुवारी मजुरांनी घोटगाळी ग्रामपंचायतच्या आवारात ठिय्या आंदोलन केले होते. आंदोलनाचे वृत्त समजल्यानंतर नरेगा सहायक संचालक रुपाली यांच्यामार्फत, आरएफओ प्रशांत यांच्याशी संपर्क साधून, मजुरांना वनक्षेत्रात कामं देण्याची विनंती केली. परंतु आरएफओ म्हणाले की, नरेगा वनक्षेत्रातील मजुरांना काम देऊ शकत नाही. त्यामुळे नाराज झालेल्या मजुरांनी शुक्रवारी थेट नागरगाळी आरएफओ कार्यालयात जाऊन ठिय्या आंदोलन केले.
तालुका पंचायत ईओ व नरेगा सहाय्यक संचालक घटनास्थळी येऊनही, मजुरांची गाऱ्हाणी ऐकून घेत नसल्याबद्दल नागरगाळी वीभागीय वनाधिकारी कार्यालयासमोर, तीन तास धरणे आंदोलन करणाऱ्या पन्नासहून अधिक नरेगा मजुरांनी संताप व्यक्त केला आहे.
यावेळी बोलताना मजुरांनी सांगितले की, घोटगाळी ग्राम पंचायत अंतर्गत असलेली सर्व गावे वनक्षेत्राने वेढलेली आहेत. वनपरिक्षेत्र वगळता इतर ठिकाणी कामाची जागा नसल्याने, वनक्षेत्रात खंदक, सीपीटी व इतर कामे करण्यास परवानगी देण्याचे निवेदन ग्राम पंचायत कार्यालयामार्फत, वनविभागाला देण्यात आले आहे. निवेदन देऊन बरेच दिवस उलटले, तरी संबंधितांकडून प्रतिसाद मिळत नाही. यामुळे नरेगा योजनेवर पोट भरणाऱ्या शेकडो कामगारांच्या उदरनिर्वाहाचा प्रश्न निर्माण झाला असल्याचे मजुरानी बोलताना सांगितले.
आंदोलनाची माहिती समजल्यानंतर आरएफओ घटनास्थळी आले व त्यांनी आंदोलनकर्त्याशी चर्चा केली. यावेळी मजूरांनी वनक्षेत्रात कामं देण्याची मागणीचे निवेदन सादर केले. मजुरांचे मागणीचे निवेदन स्वीकारल्यानंतर, आरएफओ यांनी या प्रकरणात लक्ष घालून, चार दिवसांत वनक्षेत्रातील सर्व मजुरांना कामे देण्याचे आश्वासन दिले. त्यानंतर मजुरांनी संप मागे घेतला.
ನರೇಗಾ ಕೆಲಸ ನೀಡದ ನಾಗರಗಾಳಿ ಆರ್.ಎಫ್.ಒ ವಿರುದ್ಧ ಕೂಲಿಗಾರರ ಧರಣಿ
ಖಾನಾಪುರ: ತಾಲ್ಲೂಕಿನ ನಾಗರಗಾಳಿ ವಲಯ ಅರಣ್ಯ ಅಧಿಕಾರಿಗಳ ಕಚೇರಿ ಮುಂದೆ ಶುಕ್ರವಾರ ಗೋಟಗಾಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನರೇಗಾ ಕೂಲಿಕಾರರು ಧರಣಿ ನಡೆಸಿ ತಮಗೆ ನರೇಗಾ ಯೋಜನೆಯಡಿ ಕೂಲಿ ಕೆಲಸ ನೀಡದೇ ತೊಂದರೆ ನೀಡುತ್ತಿರುವ ನಾಗರಗಾಳಿ ವಲಯ ಅರಣ್ಯ ಅಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆಯಿಂದ ನರೇಗಾ ಯೋಜನೆಯಡಿ ಕೂಲಿ ಕೆಲಸ ಒದಗಿಸುವಂತೆ ಗುರುವಾರ ಗೋಟಗಾಳಿ ಗ್ರಾಪಂ ಆವರಣದಲ್ಲಿ ಕೂಲಿಕಾರರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆಯ ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ನರೇಗಾ ಸಹಾಯಕ ನಿರ್ದೇಶಕಿ ರೂಪಾಲಿ ಅವರ ಮೂಲಕ ನಾಗರಗಾಳಿ ಆರ್.ಎಫ್.ಒ ಪ್ರಶಾಂತ ಅವರನ್ನು ಸಂಪರ್ಕಿಸಿ ಅರಣ್ಯ ಪ್ರದೇಶದಲ್ಲಿ ಕೆಲಸ ನೀಡುವಂತೆ ಕೋರಿದ್ದರು. ಆದರೆ ಆರ್ಎಫ್ಒ, ಅರಣ್ಯ ಪ್ರದೇಶದಲ್ಲಿ ನರೇಗಾ ಕೂಲಿಕಾರರಿಗೆ ಕೆಲಸ ನೀಡಲು ಸಾಧ್ಯವಿಲ್ಲ ಎಂದಿದ್ದರು. ಇದರಿಂದ ಅಸಮಾಧಾನಗೊಂಡ ಕೂಲಿಕಾರರು ಶುಕ್ರವಾರ ನೇರವಾಗಿ ನಾಗರಗಾಳಿ ಆರ್ಎಫ್ಒ ಕಚೇರಿಗೆ ತೆರಳಿ ಧರಣಿ ಕೈಗೊಂಡರು.
ನಾಗರಗಾಳಿ ವಲಯ ಅರಣ್ಯ ಅಧಿಕಾರಿಗಳ ಕಚೇರಿಯ ಮುಂದೆ ಮೂರು ಗಂಟೆಗಳ ಕಾಲ ಧರಣಿ ನಡೆಸಿದ ಐವತ್ತಕ್ಕೂ ಹೆಚ್ಚು ನರೇಗಾ ಕೂಲಿಕಾರರು ತಮ್ಮ ಧರಣಿಯ ವಿಷಯ ಅರಿತ ತಾಪಂ ಇಒ ಮತ್ತು ನರೇಗಾ ಸಹಾಯಕ ನಿರ್ದೇಶಕರು ಸ್ಥಳಕ್ಕಾಗಮಿಸಿ ತಮ್ಮ ಅಹವಾಲು ಆಲಿಸಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೂಲಿಕಾರರು, ಗೋಟಗಾಳಿ ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮಗಳು ಅರಣ್ಯ ಪ್ರದೇಶದಿಂದಲೇ ಸುತ್ತುವರೆದಿವೆ. ಅರಣ್ಯ ವಲಯವನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಕೆಲಸ ಸ್ಥಳಾವಕಾಶ ಇಲ್ಲದಿರುವುದರಿಂದ ಅರಣ್ಯ ಪ್ರದೇಶದಲ್ಲಿ ಟ್ರಂಚ್, ಸಿಪಿಟಿ ಸೇರಿ ಇನ್ನಿತರೆ ಕಾಮಗಾರಿಗಳಲ್ಲಿ ಕೆಲಸ ನಿರ್ವಹಿಸಲು ಅವಕಾಶ ನೀಡುವಂತೆ ಗ್ರಾಪಂ ಕಚೇರಿಯ ಮೂಲಕ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಮನವಿ ಸಲ್ಲಿಸಿ ದಿನಗಳೇ ಗತಿಸಿದರೂ ಸಂಬಂಧಿಸಿದವರು ಸ್ಪಂದಿಸುತ್ತಿಲ್ಲ. ಇದರಿಂದ ನರೇಗಾ ಯೋಜನೆಯನ್ನೇ ನಂಬಿರುವ ನೂರಾರು ಕಾರ್ಮಿಕರ ಉದರನಿರ್ವಹಣೆಗೆ ತೊಂದರೆ ಉಂಟಾಗಿದೆ ಎಂದರು.
ಧರಣಿಯ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಆರ್ಎಫ್ಒ ಅವರೊಡನೆ ಚರ್ಚಿಸಿದ ಧರಣಿ ನಿರತರು ಅರಣ್ಯ ಪ್ರದೇಶದಲ್ಲಿ ಕೆಲಸ ನೀಡುವಂತೆ ಕೂಲಿ ಬೇಡಿಕೆ ಮನವಿಯನ್ನು ಸಲ್ಲಿಸಿದರು. ಕೂಲಿಕಾರರಿಂದ ಬೇಡಿಕೆ ಸ್ವೀಕರಿಸಿ ಮಾತನಾಡಿದ ಆರ್ಎಫ್ಒ, ಈ ಬಗ್ಗೆ ಪರಿಶೀಲಿಸಿ ನಾಲ್ಕು ದಿನಗಳಲ್ಲಿ ಎಲ್ಲ ಕೂಲಿಕಾರರಿಗೆ ಅರಣ್ಯ ಪ್ರದೇಶದಲ್ಲಿ ಕೆಲಸ ನೀಡುವುದಾಗಿ ಭರವಸೆ ನೀಡಿದರು. ಬಳಿಕ ಕೂಲಿಕಾರರು ಧರಣಿ ಹಿಂಪಡೆದರು.
