रायबाग : शाळकरी मुलींना कारची धडक; एका विद्यार्थिनीचा जागीच मृत्यू.
रायबाग : शाळेतून घरी परतत असताना दोन सख्ख्या बहिणींना भरधाव कारने धडक दिल्याची दुर्दैवी घटना रायबाग तालुक्यातील मेखळी गावाच्या बाहेरील परिसरात घडली. या अपघातात एका विद्यार्थिनीचा जागीच मृत्यू झाला असून दुसरी गंभीर जखमी झाली आहे.

मेखळी येथील अनुदानित सरकारी शाळेत शिक्षण घेत असलेल्या जयश्री कोटरे आणि भाग्यश्री कोटरे या दोघी बहिणी शाळा सुटल्यानंतर पायी चालत घरी जात होत्या. यावेळी नागरमुन्नोळी गावाकडून रायबागकडे येणाऱ्या भरधाव कारवरील चालकाचे नियंत्रण सुटल्याने रस्त्याच्या कडेला चालत असलेल्या दोन्ही बहिणींना जोरदार धडक बसली.
अपघात इतका भीषण होता की जयश्री कोटरे हिचा घटनास्थळीच मृत्यू झाला. तर भाग्यश्री कोटरे ही गंभीर जखमी झाली असून तिची प्रकृती चिंताजनक असल्याचे समजते. जखमी भाग्यश्रीला पुढील उपचारासाठी तातडीने बेळगाव जिल्हा रुग्णालयात हलविण्यात आले आहे.
घटनेची माहिती मिळताच बेळगावचे अतिरिक्त पोलीस अधीक्षक आर. बी. बसर्गी तसेच रायबागचे सीपीआय यांनी घटनास्थळी भेट देऊन पाहणी केली. या घटनेमुळे परिसरात हळहळ व्यक्त होत आहे.
ರಾಯಬಾಗ : ಶಾಲಾ ಬಾಲಕಿಯರ ಮೇಲೆ ಹರಿದ ಕಾರು, ವಿದ್ಯಾರ್ಥಿನಿ ಸಾವು..!
ರಾಯಬಾಗ : ಶಾಲೆಯಿಂದ ಮನೆಗೆ ಮರಳುತ್ತಿದ್ದ ಇಬ್ಬರು ಅಕ್ಕ-ತಂಗಿಯರ ಮೇಲೆ ವೇಗವಾಗಿ ಬಂದ ಕಾರು ಹರಿದ ಪರಿಣಾಮ, ಓರ್ವ ವಿದ್ಯಾರ್ಥಿನಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮೇಖಳಿ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಮೇಖಳಿ ಗ್ರಾಮದ ಅನುದಾನಿತ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರಾದ ಜಯಶ್ರೀ ಕೋಟರೆ ಮತ್ತು ಭಾಗ್ಯಶ್ರೀ ಕೋಟರೆ ಅವರು ಶಾಲೆ ಮುಗಿಸಿಕೊಂಡು ಮನೆಗೆ ನಡೆದುಕೊಂಡು ಬರುತ್ತಿದ್ದರು.
ಈ ವೇಳೆ ನಾಗರಮುನ್ನೋಳಿ ಗ್ರಾಮದಿಂದ ರಾಯಬಾಗ ಪಟ್ಟಣದ ಕಡೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಸಹೋದರಿಯರ ಮೇಲೆ ಹರಿದಿದೆ.
ಅಪಘಾತದ ತೀವ್ರತೆಗೆ ಜಯಶ್ರೀ ಕೋಟರೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮತ್ತೋರ್ವ ಸಹೋದರಿ ಭಾಗ್ಯಶ್ರೀ ಗಂಭೀರವಾಗಿ ಗಾಯಗೊಂಡಿದ್ದು, ಅವಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಗಾಯಾಳು ಭಾಗ್ಯಶ್ರೀಯನ್ನು ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣವೇ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತ ಸಂಭವಿಸಿದ ಸ್ಥಳಕ್ಕೆ ಬೆಳಗಾವಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ ಹಾಗೂ ರಾಯಬಾಗ ಸಿಪಿಐ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.



