
अनमोड तपासणी नाक्यानजीक, ट्रक व कॅन्टरचा भीषण अपघात. कॅन्टर चालक जागीच ठार.
खानापूर ; अनमोड तपासणी नाक्यानजीक अवजड वाहतूक करणारा 18 चाकी ट्रक व कॅन्टरचा भीषण अपघात होऊन, यामध्ये कॅन्टर चालक जागीच ठार. तर अवजड वाहतूक करणाऱ्या ट्रकचा चालक गंभीर जखमी झाल्याची दुदैवी घटना, आज शनिवार दिनांक 4 जानेवारी 2025 रोजी घडली आहे.
याबाबत सविस्तर माहिती अशी की अनमोड चेक नाक्यापासून काही अंतरावर असलेल्या, हॉटेलच्या समोरील वळणावर, गोव्याहून अनमोडच्या दिशेने येणारा, अवजड वाहतूक करणारा 18 चाकी ट्रक आणि रामनगर कडून गोव्याच्या दिशेने जाणारा, प्लायवूड वाहतूक करणारा कॅन्टर, यांच्यात समोरासमोर धडक बसल्याने, कॅन्टरची समोरील बाजू चक्काचूर झाली व कँटर पलटी झाला. त्यामुळे कॅन्टर चालक जागीच ठार झाला. तर अवजड वाहतूक करणारा ट्रकचा चालक गंभीर जखमी झाल्याने, त्याला उपचारासाठी रुग्णालयात दाखल करण्यात आले आहे. घटनास्थळी रामनगर पोलिसांनी भेट देऊन पंचनामा केला व विस्कळीत झालेली वाहतूक सुरळीत केली. मात्र या मार्गावरील वाहतूक बराच वेळ ठप्प होती.
ಅನ್ಮೋಡ್ ತಪಾಸಣಾ ನಾಕಾ ಬಳಿ ಟ್ರಕ್ ಮತ್ತು ಕ್ಯಾಂಟರ್ ನಡುವೆ ಭೀಕರ ಅಪಘಾತ. ಕ್ಯಾಂಟರ್ ಚಾಲಕ ಸ್ಥಳದಲ್ಲೇ ಸಾವು.
ಖಾನಾಪುರ; ಭಾರೀ ಸರಕು ಸಾಗಿಸುವ 18 ಚಕ್ರಗಳ ಟ್ರಕ್ ಮತ್ತು ಕ್ಯಾಂಟರ್ ನಡುವೆ ಅನ್ಮೋಡ್ ತಪಾಸಣಾ ನಾಕೆಯ ಬಳಿ ಅಪಘಾತಕ್ಕೆ ಒಳಗಾಗಿದ್ದು, ಕ್ಯಾಂಟರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಟ್ರಕ್ನ ಚಾಲಕ ಗಂಭೀರವಾಗಿ ಗಾಯಗೊಂಡ ದುರದೃಷ್ಟಕರ ಘಟನೆ ಇಂದು ಶನಿವಾರ, ಜನೆವರಿ 4, 2025 ರಂದು ನಡೆದಿದೆ.
ಈ ಬಗ್ಗೆ ಅಧಿಕ ಮಾಹಿತಿ ಪ್ರಕಾರ, ಗೋವಾದಿಂದ ಅನಮೋಡ್ ಕಡೆಗೆ ಬರುತ್ತಿದ್ದ 18 ಚಕ್ರಗಳ ಟ್ರಕ್ ಮತ್ತು ರಾಮನಗರದಿಂದ ಗೋವಾ ಕಡೆಗೆ ಪ್ಲೈವುಡ್ ಸಾಗಿಸುತ್ತಿದ್ದ ಕ್ಯಾಂಟರ್ ಅನ್ಮೋಡ್ ಚೆಕ್ ಪೋಸ್ಟ್ ಬಳಿ ಹೋಟೆಲ್ ಮುಂಭಾಗದ ತಿರುವಿನಲ್ಲಿ ಮುಖಾಮುಖಿ ಡಿಕ್ಕಿ ಹೊಡೆದಿದೆ, ಕ್ಯಾಂಟರ್ನ ಮುಂಭಾಗ ಪೂರ್ಣ ಒಡೆದು ಭಾರಿ ಹಾನಿ ಆಗಿ ಮತ್ತು ಕ್ಯಾಂಟರ್ ಪಲ್ಟಿ ಹೊಡೆದಿತದೆ . ಪರಿಣಾಮ ಕ್ಯಾಂಟರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಭಾರಿ ಲಾರಿ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಮನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿ ಅಸ್ತವ್ಯಸ್ತಗೊಂಡ ಸಂಚಾರವನ್ನು ಸುಗಮಗೊಳಿಸಿದರು. ಆದರೆ ಈ ಮಾರ್ಗದಲ್ಲಿ ಬಹಳ ಹೊತ್ತು ಸಂಚಾರ ಸ್ಥಗಿತಗೊಂಡಿತ್ತು.
