प्रभुनगर येथील महामार्गावरील पुलावर दुचाकी अपघात; खानापूरचा युवक ठार, एक गंभीर जखमी
खानापूर : प्रभुनगर (ता. खानापूर) येथील राष्ट्रीय महामार्गावरील पुलावर झालेल्या भीषण दुचाकी अपघातात खानापूर येथील एका युवकाचा दुर्दैवी मृत्यू झाला असून त्याचा मित्र गंभीर जखमी झाला आहे. नववर्षाच्या सुरुवातीलाच ही हृदयद्रावक घटना घडल्याने खानापूर शहरासह परिसरात हळहळ व्यक्त करण्यात येत आहे.
याबाबत सविस्तर माहिती अशी की, खानापूर येथील निंगापूर गल्ली येथील युवक सुरज संजय कुंडेकर (वय 22) व दुर्गानगर येथील गणेश बुचडी (वय 23) हे दोघे युवक ३१ डिसेंबरच्या निमित्ताने एका धाब्यावर जेवण करून दुचाकीवरून खानापूरकडे परतत होते. दरम्यान प्रभुनगर येथील महामार्गावरील पुलावर दुचाकीवरील नियंत्रण सुटल्याने दुचाकी पुलाच्या बाजूच्या संरक्षक कठड्याला जोरदार धडकली.
या अपघातात दुचाकीवरील दोघेही युवक उडून थेट पुलाखालील सर्विस रस्त्यावर कोसळले. यामध्ये सुरज कुंडेकर याच्या डोक्याला गंभीर दुखापत होऊन मोठ्या प्रमाणात रक्तस्त्राव झाला. त्याला तातडीने बेळगाव येथील जिल्हा रुग्णालयात दाखल करण्यात आले. मात्र उपचारादरम्यान त्याचा मृत्यू झाला.
दरम्यान, या अपघाताची माहिती मिळताच भाजप युवा मोर्चाचे जिल्हा उपाध्यक्ष पंडित ओगले यांनी तातडीने बेळगावकडे धाव घेत जखमी युवकांच्या मदतीसाठी प्रयत्न केले. मात्र दुर्दैवाने सुरज कुंडेकर याचा जीव वाचू शकला नाही.
अपघातात गंभीर जखमी झालेल्या गणेश बुचडी याला पुढील उपचारासाठी बेळगाव येथील केएलई रुग्णालयात दाखल करण्यात आले असून त्याच्यावर सध्या उपचार सुरू आहेत. त्याची प्रकृती चिंताजनक पण स्थीर असल्याचे समजते.
नववर्षाच्या पहिल्याच दिवशी घडलेल्या या दुर्दैवी घटनेमुळे खानापूर शहर व परिसरात शोककळा पसरली असून सर्व स्तरातून हळहळ व्यक्त करण्यात येत आहे.
ಪ್ರಭುನಗರದ ಹೆದ್ದಾರಿ ಸೇತುವೆ ಮೇಲೆ ನಡೆದ ದ್ವಿಚಕ್ರ ವಾಹನ ಅಪಘಾತ; ಖಾನಾಪುರ ಯುವಕನ ಸಾವು , ಮತ್ತೊಬ್ಬನಿಗೆ ಗಂಭೀರ ಗಾಯ.
ಖಾನಾಪುರ : ಖಾನಾಪುರ ತಾಲ್ಲೂಕಿನ ಪ್ರಭುನಗರ ಪ್ರದೇಶದ ಹೆದ್ದಾರಿಯಲ್ಲಿರುವ ಸೇತುವೆಯ ಮೇಲೆ ನಡೆದ ಭೀಕರ ದ್ವಿಚಕ್ರ ವಾಹನ ಅಪಘಾತದಲ್ಲಿ ಖಾನಾಪುರದ ಯುವಕ ಸಾವನ್ನಪ್ಪಿದ್ದು, ಮತ್ತೊಬ್ಬ ಯುವಕ ಗಂಭೀರವಾಗಿ ಗಾಯಗೊಂಡಿದ್ದಾನೆ.
ಪ್ರಭುನಗರದ ಹೆದ್ದಾರಿ ಸೇತುವೆಯ ಬದಿಯ ರಕ್ಷಣಾ ಗೋಡೆಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು, ವಾಹನ ಸವಾರರಿಬ್ಬರು ಯುವಕರು ಸೇತುವೆಯಿಂದ ಕೆಳಗಿನ ಸರ್ವಿಸ್ ರಸ್ತೆಗೆ ಬಿದ್ದ ಪರಿಣಾಮ, ಒಬ್ಬ ಯುವಕನಿಗೆ ತಲೆಗೆ ಗಂಭೀರ ಗಾಯವಾಗಿ ಹೆಚ್ಚಿನ ರಕ್ತಸ್ರಾವ ಸಂಭವಿಸಿ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಇನ್ನೊಬ್ಬ ಯುವಕ ಗಂಭೀರವಾಗಿ ಗಾಯಗೊಂಡು ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಅಪಘಾತದ ಸುದ್ದಿ ತಿಳಿದ ಕೂಡಲೇ ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಪಂಡಿತ್ ಒಗಲೆ ಅವರು ತಕ್ಷಣ ಬೆಳಗಾವಿಗೆ ಧಾವಿಸಿ ಗಾಯಗೊಂಡ ಯುವಕರಿಗೆ ಸಹಾಯ ಮಾಡಲು ಪ್ರಯತ್ನಿಸಿದರು. ಆದರೆ ದುರದೃಷ್ಟವಶಾತ್, ಒಬ್ಬ ಯುವಕ ಮೃತಪಟ್ಟಿದ್ದಾನೆ.
ಈ ಸಂಬಂಧ ವಿವರವಾದ ಮಾಹಿತಿ ಪ್ರಕಾರ:
ಖಾನಾಪುರದ ಇಬ್ಬರು ಯುವಕರು ಡಿಸೆಂಬರ್ 31ರ ಪ್ರಯುಕ್ತ ಒಂದು ಧಾಬಾದಲ್ಲಿ ಊಟ ಮಾಡಿಕೊಂಡು ಖಾನಾಪುರದತ್ತ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ, ಪ್ರಭುನಗರದ ಹೆದ್ದಾರಿ ಸೇತುವೆ ಬಳಿ ಚಾಲಕನ ನಿಯಂತ್ರಣ ತಪ್ಪಿ, ಸೇತುವೆಯ ರಕ್ಷಣಾ ಕಬ್ಬಿಣದ ತಡೆಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ಯುವಕರು ಸೇತುವೆಯಿಂದ ಕೆಳಗಿನ ಸರ್ವಿಸ್ ರಸ್ತೆಗೆ ಬಿದ್ದಿದ್ದಾರೆ.
ಈ ಅಪಘಾತದಲ್ಲಿ ಖಾನಾಪುರದ ನಿಂಗಾಪುರ ಗಲ್ಲಿ ನಿವಾಸಿ ಸೂರಜ್ ಸಂಜಯ ಕುಂಡೇಕರ್ (ವಯಸ್ಸು 22 ವರ್ಷ) ಎಂಬ ಯುವಕನಿಗೆ ತಲೆಗೆ ಗಂಭೀರ ಗಾಯವಾಗಿ ಹೆಚ್ಚಿನ ರಕ್ತಸ್ರಾವ ಸಂಭವಿಸಿದ ಕಾರಣ, ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ಸಾವನ್ನಪ್ಪಿದ್ದಾನೆ.
ಇನ್ನೊಬ್ಬ ಯುವಕ ಖಾನಾಪುರದ ದುರ್ಗಾನಗರ ನಿವಾಸಿ ಗಣೇಶ್ ಬುಚಡಿ (ವಯಸ್ಸು 23 ವರ್ಷ) ಗಂಭೀರವಾಗಿ ಗಾಯಗೊಂಡಿದ್ದು, ಅವನನ್ನು ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಚಿಕಿತ್ಸೆ ಮುಂದುವರಿದಿದೆ.
ನವವರ್ಷದ ಆರಂಭದಲ್ಲೇ ಈ ದುರ್ಘಟನೆ ಸಂಭವಿಸಿದ್ದರಿಂದ, ಖಾನಾಪುರ ನಗರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ತೀವ್ರ ದುಃಖ ಹಾಗೂ ಶೋಕ ವ್ಯಕ್ತವಾಗುತ್ತಿದೆ.


