
आज खानापूर येथे विठ्ठलराव यशवंतराव चव्हाण पॉलिटेक्निकचे उद्घाटन आर व्ही देशपांडे यांच्या हस्ते होणार.
खानापूर ; खानापूर येथे लोकमान्य एज्युकेशन सोसायटी संचलित माजी आमदार कै. “विठ्ठलराव यशवंतराव चव्हाण पॉलिटेक्निक” चे उद्घाटन आज शुक्रवार, 25 जुलै रोजी सकाळी 11.00 वाजता महाविद्यालयाच्या परिसरात होणार आहे. हल्याळचे आमदार आणि कर्नाटक सरकारच्या प्रशासकीय सुधारणा आयोगाचे अध्यक्ष व माजी मंत्री श्री. आर. व्ही. देशपांडे यांच्या हस्ते या पॉलिटेक्निकचे उद्घाटन होणार असून कार्यक्रमाच्या अध्यक्षस्थान लोकमान्य शिक्षण संस्थेचे संस्थापक व विद्यमान अध्यक्ष डॉक्टर किरण ठाकूर भूषविणार आहेत, तसेच या कार्यक्रमाला अनेक मान्यवर मंडळी उपस्थित राहणार आहेत, सर्वांनी उपस्थित राहण्याचे आवाहन लोकमान्य शिक्षण संस्थेच्या वतीने करण्यात आले आहे.

या कार्यक्रमाला खानापूरचे आमदार श्री. विठ्ठल हलगेकर प्रमुख अतिथी म्हणून उपस्थित राहणार आहेत. व्हीटीयूचे कुलगुरू डॉ. एस. विद्याशंकर आणि आरसीयूचे कुलगुरू प्रा. सी. एम. त्यागराजा हे सन्माननीय पाहुणे असतील. खानापूरचे माजी आमदार श्री. दिगंबर पाटील, श्री. अरविंद पाटील आणि डॉ. श्रीमती अंजली निंबाळकर हे विशेष निमंत्रित असतील. तसेच, डॉ. वाय. एन. दोड्डमणी, जेडी (निरीक्षण), डीटीई बेंगलोर आणि श्री. वासुदेव अप्पाजीगोल, प्राचार्य, सरकारी पॉलिटेक्निक, बेळगाव हे देखील विशेष निमंत्रित म्हणून उपस्थित राहणार आहेत.

ವಿಠ್ಠಲರಾವ್ ಯಶವಂತರಾವ್ ಚವಾಣ್ ಪಾಲಿಟೆಕ್ನಿಕ್ ಇಂದು ಖಾನಾಪುರದಲ್ಲಿ ಉದ್ಘಾಟನೆ
ಖಾನಾಪುರ; ಲೋಕಮಾನ್ಯ ಎಜುಕೇಶನ್ ಸೊಸೈಟಿ ವತಿಯಿಂದ ನಿರ್ಮಿಸಲಾದ, ದಿವಂಗತ ಮಾಜಿ ಶಾಸಕ ವಿಠ್ಠಲರಾವ್ ಯಶವಂತರಾವ್ ಚವಾಣ್ ಸ್ಮರಣಾರ್ಥ “ವಿಠ್ಠಲರಾವ್ ಯಶವಂತರಾವ್ ಚವಾಣ್ ಪಾಲಿಟೆಕ್ನಿಕ್” ಅನ್ನು ಇಂದು, ಶುಕ್ರವಾರ, ಜುಲೈ 25 ರಂದು ಬೆಳಿಗ್ಗೆ 11:00 ಗಂಟೆಗೆ ಕಾಲೇಜು ಆವರಣದಲ್ಲಿ ಉದ್ಘಾಟಿಸಲಾಗುವುದು. ಹಳಿಯಾಳ ಶಾಸಕರು, ಕರ್ನಾಟಕ ಸರ್ಕಾರದ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಮಾಜಿ ಸಚಿವರಾದ ಶ್ರೀ. ಆರ್. ವಿ. ದೇಶಪಾಂಡೆ ಅವರು ಪಾಲಿಟೆಕ್ನಿಕ್ ಅನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೋಕಮಾನ್ಯ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು ಮತ್ತು ಹಾಲಿ ಅಧ್ಯಕ್ಷರಾದ ಡಾ. ಕಿರಣ್ ಠಾಕೂರ್ ವಹಿಸಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಹಲವು ಗಣ್ಯರು ಉಪಸ್ಥಿತರಿರಲಿದ್ದು, ಖಾನಾಪುರದ ಶಾಸಕರಾದ ಶ್ರೀ. ವಿಠ್ಠಲ್ ಹಲಗೇಕರ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಟಿಯು ಕುಲಪತಿ ಡಾ. ಎಸ್. ವಿದ್ಯಾಶಂಕರ್ ಮತ್ತು ಆರ್ಸಿಯು ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು. ಖಾನಾಪುರದ ಮಾಜಿ ಶಾಸಕರಾದ ಶ್ರೀ. ದಿಗ್ಂಬರ್ ಪಾಟೀಲ್, ಶ್ರೀ. ಅರವಿಂದ್ ಪಾಟೀಲ್ ಮತ್ತು ಡಾ. ಶ್ರೀಮತಿ ಅಂಜಲಿ ನಿಂಬಾಳ್ಕರ್ ಅವರು ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಇದರ ಜೊತೆಗೆ, ಡಿಟಿಇ ಬೆಂಗಳೂರಿನ ಜೆಡಿ (ನಿರೀಕ್ಷಣೆ) ಡಾ. ವೈ. ಎನ್. ದೊಡ್ಡಮನಿ ಮತ್ತು ಬೆಳಗಾವಿಯ ಸರ್ಕಾರಿ ಪಾಲಿಟೆಕ್ನಿಕ್ನ ಪ್ರಾಂಶುಪಾಲರಾದ ಶ್ರೀ. ವಾಸುದೇವ ಅಪ್ಪಾಜಿಗೋಳ್ ಅವರೂ ಸಹ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುವರು. ಲೋಕಮಾನ್ಯ ಶಿಕ್ಷಣ ಸಂಸ್ಥೆಯು ಎಲ್ಲರೂ ಕಾರ್ಯಕ್ರಮಕ್ಕೆ ಹಾಜರಾಗುವಂತೆ ಮನವಿ ಮಾಡಿದೆ.
