नंदगड-बिडी मार्गावर रस्त्यावर कोसळली महाकाय झाडाची फांदी; दोन दुचाकीस्वार थोडक्यात बचावले, एक जखमी.
खानापूर : प्रतिनिधी
खानापूर तालुक्यातील नंदगड येथे नंदगड-बिडी मार्गावर संगोळी रायान्ना चौकाजवळ शुक्रवारी (3 जुलै) दुपारच्या सुमारास एक महाकाय झाडाची भली मोठी फांदी अचानक रस्त्यावर कोसळल्याने मोठा अनर्थ टळला. या दुर्घटनेत दोन दुचाकीस्वार झाडाखाली अडकण्याच्या स्थितीत आले. त्यापैकी एकाने प्रसंगावधान राखून वेळीच बाजूला उडी मारल्याने त्याचा जीव वाचला, तर दुसरा दुचाकीस्वार किरकोळ जखमी झाला. मात्र यामध्ये दुचाकींचे मोठे नुकसान झाले आहे.
मिळालेल्या माहितीनुसार, नंदगड पोलीस ठाण्यापासून काही अंतरावर असलेल्या व्हन्नवा देवी सोसायटी इमारतीसमोर ही घटना घडली. झाडाची फांदी कोसळत असतानाच तेथून एक टीव्हीएस एक्सल आणि एक सीडी-100 दुचाकी जात होती. झाडाची फांदी पडत असल्याचे लक्षात येताच सीडी-100 चालकाने तत्काळ दुचाकी सोडून बाजूला धाव घेतल्याने तो सुरक्षित बचावला.
मात्र, टीव्हीएस एक्सलवरील दुचाकीस्वार झाडाच्या फांद्यांमध्ये अडकून किरकोळ जखमी झाला. स्थानिक नागरिकांनी तातडीने त्याची सुटका करून नंदगड येथील शासकीय रुग्णालयात उपचारासाठी दाखल केले. त्याची प्रकृती धोक्याबाहेर असल्याचे समजते.
दरम्यान, झाड रस्त्याच्या मध्यभागी कोसळल्याने नंदगड-बिडी मार्गावरील वाहतूक काही काळ विस्कळीत झाली होती. घटनेची माहिती मिळताच स्थानिक नागरिकांनी आणि संबंधित यंत्रणांनी झाड हटवून वाहतूक पूर्ववत करण्यासाठी प्रयत्न केले. सुदैवाने या दुर्घटनेत कोणतीही जीवितहानी झाली नसल्याने मोठा अनर्थ टळल्याची भावना नागरिकांनी व्यक्त केली.
ನಂದಗಡ–ಬೀಡಿ ರಸ್ತೆಯಲ್ಲಿ ರಸ್ತೆ ಮಧ್ಯೆ ಕುಸಿದ ಬೃಹತ್ ಮರದ ಕೊಂಬೆ; ಇಬ್ಬರು ದ್ವಿಚಕ್ರ ವಾಹನ ಸವಾರರು ಕೂದಲೆಳೆಯ ಅಂತರದಲ್ಲಿ ಪಾರು, ಓರ್ವ ಗಾಯ.
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ನಂದಗಡ–ಬೀಡಿ ರಸ್ತೆಯ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಶುಕ್ರವಾರ (ಜುಲೈ 3) ಮಧ್ಯಾಹ್ನದ ವೇಳೆ ಬೃಹತ್ ಮರವೊಂದರ ಕೊಂಬೆ ಏಕಾಏಕಿ ರಸ್ತೆಗೆ ಬಿದ್ದ ಪರಿಣಾಮ ದೊಡ್ಡ ಅನಾಹುತವೊಂದು ತಪ್ಪಿದೆ. ಈ ದುರ್ಘಟನೆಯಲ್ಲಿ ಇಬ್ಬರು ದ್ವಿಚಕ್ರ ವಾಹನ ಸವಾರರು ಮರದಡಿ ಸಿಲುಕುವ ಪರಿಸ್ಥಿತಿ ಎದುರಿಸಿದರು. ಅವರಲ್ಲಿ ಒಬ್ಬರು ಸಮಯಪ್ರಜ್ಞೆ ಮೆರೆದು ತಕ್ಷಣವೇ ವಾಹನ ಬಿಟ್ಟು ಪಕ್ಕಕ್ಕೆ ಜಿಗಿದ ಕಾರಣ ಪ್ರಾಣಾಪಾಯದಿಂದ ಪಾರಾದರೆ, ಮತ್ತೋರ್ವ ದ್ವಿಚಕ್ರ ವಾಹನ ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಲಭ್ಯವಾದ ಮಾಹಿತಿಯ ಪ್ರಕಾರ, ನಂದಗಡ ಪೊಲೀಸ್ ಠಾಣೆಯಿಂದ ಸ್ವಲ್ಪ ದೂರದಲ್ಲಿರುವ ವ್ಹನ್ನವಾ ದೇವಿ ಸೊಸೈಟಿ ಕಟ್ಟಡದ ಎದುರು ಈ ಘಟನೆ ನಡೆದಿದೆ. ಮರದ ಕೊಂಬೆ ಕುಸಿಯುತ್ತಿದ್ದ ವೇಳೆಯಲ್ಲೇ ಅಲ್ಲಿಂದ ಒಂದು ಟಿವಿಎಸ್ ಎಕ್ಸೆಲ್ ಹಾಗೂ ಒಂದು ಸಿಡಿ-100 ದ್ವಿಚಕ್ರ ವಾಹನಗಳು ಸಂಚರಿಸುತ್ತಿದ್ದವು. ಮರ ಬೀಳುತ್ತಿರುವುದನ್ನು ಗಮನಿಸಿದ ಸಿಡಿ-100 ಸವಾರ ತಕ್ಷಣವೇ ವಾಹನವನ್ನು ಬಿಟ್ಟು ಪಕ್ಕಕ್ಕೆ ಓಡಿದ ಕಾರಣ ಅವರು ಸುರಕ್ಷಿತವಾಗಿ ಪಾರಾಗಿದ್ದಾರೆ. ಆದರೆ ಟಿವಿಎಸ್ ಎಕ್ಸೆಲ್ ಸವಾರ ಮರದ ಕೊಂಬೆಗಳಲ್ಲಿ ಸಿಲುಕಿ ಸಣ್ಣಪುಟ್ಟ ಗಾಯಗೊಂಡಿದ್ದಾರೆ.
ಸ್ಥಳೀಯ ನಾಗರಿಕರು ತಕ್ಷಣವೇ ಗಾಯಾಳು ಮರದ ಕೊಂಬೆಗಳಿಂದ ಹೊರತೆಗೆದು ನಂದಗಡದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ. ಅವರ ಆರೋಗ್ಯ ಸ್ಥಿತಿ ಅಪಾಯದಿಂದ ಪಾರಾಗಿದೆ ಎಂದು ತಿಳಿದುಬಂದಿದೆ.
ಇನ್ನೊಂದೆಡೆ, ಬೃಹತ್ ಮರ ರಸ್ತೆಯ ಮಧ್ಯಭಾಗಕ್ಕೆ ಉರುಳಿಬಿದ್ದ ಪರಿಣಾಮ ನಂದಗಡ–ಬೀಡಿ ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು. ಘಟನೆಯ ಮಾಹಿತಿ ತಿಳಿದ ತಕ್ಷಣ ಸ್ಥಳೀಯ ನಾಗರಿಕರು ಹಾಗೂ ಸಂಬಂಧಿತ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮರದ ಕೊಂಬೆ ತೆರವುಗೊಳಿಸಿ ವಾಹನ ಸಂಚಾರವನ್ನು ಪುನಃ ಆರಂಭಿಸಲು ಕ್ರಮ ಕೈಗೊಂಡರು.
ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸದಿರುವುದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಸ್ಥಳೀಯ ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ.


