मुख्यमंत्र्यांचा सकारात्मक निर्णय; आशा कार्यकर्त्यांच्या मानधनात दोन हजारांची वाढ.
बेंगलोर; कर्नाटकातील आशा (ASHA) कार्यकर्त्यांच्या मासिक मानधनात दरमहा 2,000 रुपयांची वाढ करण्याचा निर्णय मुख्यमंत्री यांनी घेतला आहे. ही वाढ 1 जानेवारी 2027 पासून लागू करण्याचे निश्चित करण्यात आले असून, यासंदर्भातील आवश्यक प्रशासकीय प्रक्रिया प्राधान्याने सुरू करण्याचे निर्देश देण्यात आले आहेत.
28 नोव्हेंबर 2026 रोजी मुख्यमंत्री यांनी आशा कार्यकर्त्यांच्या प्रतिनिधींसोबत सविस्तर बैठक घेऊन त्यांच्या विविध मागण्यांवर चर्चा केली. या बैठकीत आशा कार्यकर्त्यांच्या मानधनवाढीचा प्रश्न प्रमुखत्वाने मांडण्यात आला. प्रतिनिधींनी केलेल्या मागणीचा सकारात्मक विचार करून मुख्यमंत्र्यांनी मासिक मानधनात 2,000 रुपयांची वाढ करण्यास सहमती दर्शविली आहे.
मानधनवाढ लागू करण्याच्या तारखेबाबतही बैठकीत चर्चा झाली. त्यानंतर ही वाढ 1 जानेवारी 2027 पासून लागू करण्याचा निर्णय घेण्यात आला. या निर्णयामुळे आशा कार्यकर्त्यांना नववर्षापासून वाढीव मानधनाचा लाभ मिळणार आहे.
मुख्यमंत्र्यांच्या या निर्णयानंतर आशा कार्यकर्त्यांच्या प्रतिनिधींनी त्यांचे आभार मानले. तसेच आपल्या मागण्यांबाबत सकारात्मक निर्णय झाल्याने सुरू असलेले आंदोलन मागे घेण्यास सहमती दर्शविली आहे.
मुख्यमंत्र्यांचे सचिव एस. एस. नाकुल (भा.आ.से.) यांनी 29 नोव्हेंबर 2026 रोजी जारी केलेल्या टिपणीत, 1 जानेवारी 2027 पासून आशा कार्यकर्त्यांच्या मासिक मानधनात 2,000 रुपयांची वाढ लागू करण्यासाठी आवश्यक प्रक्रिया प्राधान्याने सुरू करण्याचे निर्देश संबंधित आरोग्य व कुटुंब कल्याण विभागाच्या प्रधान सचिवांना दिले आहेत.
या निर्णयामुळे राज्यातील आशा कार्यकर्त्यांना आर्थिक दिलासा मिळणार असून, त्यांच्या आंदोलनाला सकारात्मक तोडगा मिळाल्याचे मानले जात आहे.
ಮುಖ್ಯಮಂತ್ರಿಗಳ ಸಕಾರಾತ್ಮಕ ನಿರ್ಧಾರ; ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನದಲ್ಲಿ 2 ಸಾವಿರ ರೂ. ಹೆಚ್ಚಳ.
ಬೆಂಗಳೂರು : ಕರ್ನಾಟಕ ರಾಜ್ಯದ ಆಶಾ (ASHA) ಕಾರ್ಯಕರ್ತೆಯರ ಮಾಸಿಕ ಗೌರವಧನದಲ್ಲಿ 2,000 ರೂ. ಹೆಚ್ಚಳ ಮಾಡಲು ಮುಖ್ಯಮಂತ್ರಿ ನಿರ್ಧಾರ ಕೈಗೊಂಡಿದ್ದಾರೆ. ಈ ಹೆಚ್ಚಳವು 2027ರ ಜನವರಿ 1ರಿಂದ ಜಾರಿಗೆ ಬರಲಿದ್ದು, ಈ ಸಂಬಂಧ ಅಗತ್ಯವಿರುವ ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಆದ್ಯತೆಯ ಮೇರೆಗೆ ಆರಂಭಿಸುವಂತೆ ಸೂಚನೆ ನೀಡಲಾಗಿದೆ.
2026ರ ನವೆಂಬರ್ 28ರಂದು ಮುಖ್ಯಮಂತ್ರಿ ಅವರು ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳೊಂದಿಗೆ ಸವಿಸ್ತಾರ ಸಭೆ ನಡೆಸಿ, ಅವರ ವಿವಿಧ ಬೇಡಿಕೆಗಳ ಕುರಿತು ಚರ್ಚಿಸಿದರು. ಈ ಸಭೆಯಲ್ಲಿ ಆಶಾ ಕಾರ್ಯಕರ್ತೆಯರ ಗೌರವಧನ ಹೆಚ್ಚಳದ ವಿಷಯ ಪ್ರಮುಖವಾಗಿ ಪ್ರಸ್ತಾಪಿಸಲಾಯಿತು. ಪ್ರತಿನಿಧಿಗಳು ಮಂಡಿಸಿದ ಬೇಡಿಕೆಯನ್ನು ಸಕಾರಾತ್ಮಕವಾಗಿ ಪರಿಗಣಿಸಿದ ಮುಖ್ಯಮಂತ್ರಿ, ಮಾಸಿಕ ಗೌರವಧನದಲ್ಲಿ 2,000 ರೂ. ಹೆಚ್ಚಳ ಮಾಡಲು ಸಮ್ಮತಿ ಸೂಚಿಸಿದ್ದಾರೆ.
ಗೌರವಧನ ಹೆಚ್ಚಳ ಜಾರಿಗೆ ಬರುವ ದಿನಾಂಕದ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಬಳಿಕ ಈ ಹೆಚ್ಚಳವನ್ನು 2027ರ ಜನವರಿ 1ರಿಂದ ಜಾರಿಗೆ ತರಲು ನಿರ್ಧರಿಸಲಾಯಿತು. ಇದರಿಂದ ಆಶಾ ಕಾರ್ಯಕರ್ತೆಯರಿಗೆ ಹೊಸ ವರ್ಷದ ಆರಂಭದಿಂದಲೇ ಹೆಚ್ಚುವರಿ ಗೌರವಧನದ ಲಾಭ ದೊರೆಯಲಿದೆ.
ಮುಖ್ಯಮಂತ್ರಿಗಳ ಈ ನಿರ್ಧಾರದ ಬಳಿಕ ಆಶಾ ಕಾರ್ಯಕರ್ತೆಯರ ಪ್ರತಿನಿಧಿಗಳು ಅವರಿಗೆ ಕೃತಜ್ಞತೆ ಸಲ್ಲಿಸಿದರು. ತಮ್ಮ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ದೊರೆತ ಹಿನ್ನೆಲೆಯಲ್ಲಿ, ನಡೆಯುತ್ತಿದ್ದ ಪ್ರತಿಭಟನೆಯನ್ನು ಹಿಂಪಡೆಯಲು ಸಹ ಒಪ್ಪಿಗೆ ಸೂಚಿಸಿದರು.
ಮುಖ್ಯಮಂತ್ರಿಗಳ ಕಾರ್ಯದರ್ಶಿ ಎಸ್.ಎಸ್. ನಕುಲ್ (ಭಾ.ಆ.ಸೇ.) ಅವರು 2026ರ ನವೆಂಬರ್ 29ರಂದು ಹೊರಡಿಸಿದ ಟಿಪ್ಪಣಿಯಲ್ಲಿ, 2027ರ ಜನವರಿ 1ರಿಂದ ಆಶಾ ಕಾರ್ಯಕರ್ತೆಯರ ಮಾಸಿಕ ಗೌರವಧನದಲ್ಲಿ 2,000 ರೂ. ಹೆಚ್ಚಳ ಜಾರಿಗೆ ತರಲು ಅಗತ್ಯ ಪ್ರಕ್ರಿಯೆಗಳನ್ನು ತುರ್ತಾಗಿ ಕೈಗೊಳ್ಳುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದ್ದಾರೆ.
ಈ ನಿರ್ಧಾರದಿಂದ ರಾಜ್ಯದ ಆಶಾ ಕಾರ್ಯಕರ್ತೆಯರಿಗೆ ಆರ್ಥಿಕ ನೆರವು ದೊರೆಯಲಿದ್ದು, ಅವರ ಬಹುಕಾಲದ ಬೇಡಿಕೆಗೆ ಸ್ಪಂದಿಸಿದ ಸರ್ಕಾರದ ಕ್ರಮದಿಂದ ಪ್ರತಿಭಟನೆಗೆ ಸಕಾರಾತ್ಮಕ ಪರಿಹಾರ ದೊರೆತಂತಾಗಿದೆ.


