यल्लामा देवीच्या दर्शनाला निघालेल्या पुण्याच्या मांडरे कुटुंबावर दुःखाचा डोंगर; अपघातात चिमुकल्यासह तिघांचा अंत.
बेळगाव : प्रतिनिधी
सौंदत्ती येथील श्री रेणुका यल्लम्मा देवीच्या दर्शनासाठी निघालेल्या पुण्यातील मांडरे कुटुंबावर काळाने घाला घातला आहे. बेळगाव जिल्ह्यातील गोकाक तालुक्यात मालदिन्नी क्रॉसजवळ कार आणि ट्रक यांच्यात झालेल्या भीषण समोरासमोरच्या धडकेत चिमुकल्यासह एकाच कुटुंबातील तिघांचा जागीच मृत्यू झाला, तर अन्य तिघेजण गंभीर जखमी झाले आहेत. या हृदयद्रावक घटनेमुळे परिसरात हळहळ व्यक्त होत आहे.
दर्शनासाठी जात असताना काळाचा घाला….
मिळालेल्या माहितीनुसार, पुण्यातील मांडरे कुटुंब सौंदत्ती येथील श्री रेणुका यल्लम्मा देवीच्या दर्शनासाठी कारमधून प्रवास करत होते. दरम्यान, गोकाक तालुक्यातील मालदिन्नी क्रॉसजवळ त्यांच्या कारची ट्रकशी जोरदार समोरासमोर धडक झाली. ही धडक इतकी भीषण होती की कारचा अक्षरशः चुराडा झाला.
या दुर्घटनेत ओंकार चंद्रशेखर मांडरे (वय २६), रेश्मा मांडरे (वय ३२) आणि देवांश मांडरे (वय ४) यांचा जागीच मृत्यू झाला. एकाच कुटुंबातील तिघांचा, त्यात चार वर्षांच्या चिमुकल्याचा समावेश असल्याने या घटनेने सर्वत्र शोककळा पसरली आहे.
अन्य तिघे गंभीर जखमी….
या अपघातात श्रीकांत मांडरे, वंदना मांडरे आणि हर्षदा मांडरे हे तिघे गंभीर जखमी झाले आहेत. अपघातानंतर घटनास्थळी उपस्थित स्थानिक नागरिकांनी तातडीने मदतकार्य सुरू केले. जखमींना उपचारासाठी जवळच्या रुग्णालयात दाखल करण्यात आले असून त्यांच्यावर उपचार सुरू आहेत.
गोकाक ग्रामीण पोलिसांकडून तपास सुरू….
घटनेची माहिती मिळताच गोकाक ग्रामीण पोलिसांनी घटनास्थळी धाव घेतली. पोलिसांनी अपघाताचा पंचनामा करून पुढील तपास सुरू केला आहे. अपघाताचे नेमके कारण शोधण्याचे काम सुरू आहे.
देवीच्या दर्शनासाठी श्रद्धेने निघालेल्या कुटुंबातील तिघांचा प्रवास मृत्यूच्या दारात संपल्याने परिसरात हळहळ व्यक्त होत आहे. विशेषतः चार वर्षांच्या देवांशच्या मृत्यूने अनेकांचे मन हेलावले आहे.
ಶ್ರೀ ಯಲ್ಲಮ್ಮ ದೇವಿಯ ದರ್ಶನಕ್ಕೆ ಹೊರಟ ಪುಣೆಯ ಮಾಂಡರೆ ಕುಟುಂಬದ ಮೇಲೆ ಜವರಾಯನ ಅಟ್ಟಹಾಸ; ಅಪಘಾತದಲ್ಲಿ ಪುಟ್ಟ ಮಗುವಿನ ಸಹಿತ ಮೂವರ ದುರ್ಮರಣ!
ಬೆಳಗಾವಿ : ಪ್ರತಿನಿಧಿ
ಸೌಂದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದರ್ಶನಕ್ಕೆ ಹೊರಟಿದ್ದ ಪುಣೆಯ ಮಾಂಡರೆ ಕುಟುಂಬದ ಮೇಲೆ ವಿಧಿಯ ಕ್ರೂರ ಅಟ್ಟಹಾಸ ಮೆರೆದಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮಾಲದಿನ್ನಿ ಕ್ರಾಸ್ ಬಳಿ ಕಾರು ಮತ್ತು ಟ್ರಕ್ ನಡುವೆ ಸಂಭವಿಸಿದ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ ಪುಟ್ಟ ಮಗು ಸೇರಿದಂತೆ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಹೃದಯವಿದ್ರಾವಕ ಘಟನೆಯಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ದರ್ಶನಕ್ಕೆ ತೆರಳುತ್ತಿದ್ದಾಗ ವಿಧಿಯ ಕ್ರೂರತೆ ….
ಲಭ್ಯವಾದ ಮಾಹಿತಿಯ ಪ್ರಕಾರ, ಪುಣೆಯ ಮಾಂಡರೆ ಕುಟುಂಬವು ಸೌಂದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ದರ್ಶನಕ್ಕಾಗಿ ಕಾರಿನಲ್ಲಿ ಪ್ರಯಾಣಿಸುತ್ತಿತ್ತು. ಈ ಸಂದರ್ಭದಲ್ಲಿ ಗೋಕಾಕ ತಾಲೂಕಿನ ಮಾಲದಿನ್ನಿ ಕ್ರಾಸ್ ಬಳಿ ಅವರ ಕಾರು ಟ್ರಕ್ಗೆ ಬಲವಾಗಿ ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಈ ಭೀಕರ ಅಪಘಾತದಲ್ಲಿ ಓಂಕಾರ್ ಚಂದ್ರಶೇಖರ್ ಮಾಂಡರೆ (ವಯಸ್ಸು 26), ರೇಶ್ಮಾ ಮಾಂಡರೆ (ವಯಸ್ಸು 32) ಮತ್ತು ದೇವಾಂಶ್ ಮಾಂಡರೆ (ವಯಸ್ಸು 4) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಒಂದೇ ಕುಟುಂಬದ ಮೂವರು, ಅದರಲ್ಲೂ ನಾಲ್ಕು ವರ್ಷದ ಪುಟ್ಟ ಮಗುವಿನ ಸಾವು ಸಂಭವಿಸಿರುವುದರಿಂದ ಈ ಘಟನೆ ಎಲ್ಲೆಡೆ ತೀವ್ರ ಶೋಕವನ್ನುಂಟು ಮಾಡಿದೆ.
ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ….
ಈ ಅಪಘಾತದಲ್ಲಿ ಶ್ರೀಕಾಂತ್ ಮಾಂಡರೆ, ವಂದನಾ ಮಾಂಡರೆ ಮತ್ತು ಹರ್ಷದಾ ಮಾಂಡರೆ ಎಂಬ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತ ಸಂಭವಿಸಿದ ತಕ್ಷಣ ಸ್ಥಳದಲ್ಲಿದ್ದ ಸ್ಥಳೀಯರು ಧಾವಿಸಿ ತುರ್ತು ಸಹಾಯ ಕಾರ್ಯ ಆರಂಭಿಸಿದರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಮೇಲೆ ಚಿಕಿತ್ಸೆ ಮುಂದುವರಿದಿದೆ.
ಗೋಕಾಕ ಗ್ರಾಮೀಣ ಪೊಲೀಸರಿಂದ ತನಿಖೆ ಆರಂಭ….
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಗೋಕಾಕ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಧಾವಿಸಿದು ಪೊಲೀಸರು ಅಪಘಾತದ ಮಹಜರು ನಡೆಸಿ ಮುಂದಿನ ತನಿಖೆ ಆರಂಭಿಸಿದ್ದಾರೆ. ಅಪಘಾತಕ್ಕೆ ನಿಖರವಾದ ಕಾರಣವೇನು ಎಂಬುದನ್ನು ಪತ್ತೆಹಚ್ಚುವ ಕಾರ್ಯ ನಡೆಯುತ್ತಿದೆ.
ದೇವಿಯ ದರ್ಶನಕ್ಕಾಗಿ ಭಕ್ತಿಯಿಂದ ಹೊರಟ ಕುಟುಂಬದ ಮೂವರ ಪ್ರಯಾಣವು ಸಾವಿನ ದುರಂತದಲ್ಲಿ ಅಂತ್ಯಗೊಂಡಿರುವುದು ಎಲ್ಲರಲ್ಲೂ ತೀವ್ರ ದುಃಖವನ್ನುಂಟು ಮಾಡಿದೆ. ವಿಶೇಷವಾಗಿ ನಾಲ್ಕು ವರ್ಷದ ಪುಟ್ಟ ದೇವಾಂಶ್ನ ಸಾವಿನಿಂದ ಅನೇಕ ಜನರ ಮನಸ್ಸು ಮರುಗಿದೆ.

