सुपारी, मिरी, आंबा, आले उत्पादक शेतकऱ्यांना ₹60 कोटींचा दिलासा! पीक विमा वितरण सुरू ; खासदार विश्वेश्वर हेगडे कागेरी यांच्या प्रयत्नांना यश.
उत्तर कन्नड : प्रतिनिधी
अडिके, मिरी, आंबा व आले उत्पादक शेतकऱ्यांसाठी आनंदाची बातमी असून, 2025-26 या वर्षातील हवामान आधारित पीक विमा योजनेअंतर्गत (WBCIS) ₹60 कोटींहून अधिक विमा भरपाईची रक्कम शेतकऱ्यांच्या बँक खात्यात जमा होण्यास सुरुवात झाली आहे. ही माहिती कॅनरा (उत्तर कन्नड) चे खासदार विश्वेश्वर हेगडे-कागेरी यांनी दिली.
गत सप्टेंबर महिन्यातच वितरित होणे अपेक्षित असलेली अडिके, आंबा, मिरी व आले पिकांची विमा भरपाई तांत्रिक कारणांमुळे विलंबित झाली होती. या प्रकरणाची गांभीर्याने दखल घेऊन संबंधित वरिष्ठ अधिकाऱ्यांशी सातत्याने संपर्क साधत पाठपुरावा करण्यात आला. या प्रयत्नांमुळे तांत्रिक अडथळे पूर्णपणे दूर करण्यात यश आले असून, आता ₹60 कोटींहून अधिक विमा भरपाईची रक्कम थेट शेतकऱ्यांच्या बँक खात्यात डीबीटीद्वारे जमा केली जात आहे.
आर्थिक संकटाचा सामना करणाऱ्या शेतकऱ्यांना ही मदत दिलासा देणारी ठरेल आणि त्यांचा आर्थिक भार कमी करण्यास हातभार लागेल, असा विश्वास खासदार कागेरी यांनी व्यक्त केला. विमा भरपाईच्या त्वरित वितरणासाठी सहकार्य करणाऱ्या केंद्रीय कृषिमंत्र्यांसह राज्य सरकारच्या संबंधित सर्व विभागांचे त्यांनी शेतकरी बांधवांच्या वतीने आभार मानले.
मात्र, पर्जन्यमापक यंत्रांच्या देखभालीकडे दुर्लक्ष नको!….
पीक विमा भरपाई निश्चित करण्यात महत्त्वाची भूमिका बजावणाऱ्या स्वयंचलित पर्जन्यमापक यंत्रांची (AWS) योग्य देखभाल करण्याची मागणीही खासदार कागेरी यांनी केली आहे. राज्यातील अनेक ग्रामपंचायत क्षेत्रांमध्ये ही यंत्रे व्यवस्थित कार्यरत नसल्यामुळे संबंधित शेतकऱ्यांना मिळायला हवी असलेली संपूर्ण विमा भरपाई मिळू शकलेली नाही.
त्यामुळे राज्य सरकारने पर्जन्यमापक यंत्रांची नियमित देखभाल व दुरुस्ती सुनिश्चित करावी. तांत्रिक त्रुटींमुळे शेतकऱ्यांवर अन्याय होऊ नये आणि त्यांना पात्र विमा भरपाई मिळावी, यासाठी तातडीने ठोस उपाययोजना कराव्यात, अशी मागणी त्यांनी केली.
शेतकऱ्यांचे हित हेच सर्वोच्च प्राधान्य असून, त्यांच्या कल्याणासाठी आपली सेवा सदैव सुरू राहील, असे खासदार विश्वेश्वर हेगडे-कागेरी यांनी स्पष्ट केले.
ಅಡಿಕೆ, ಕಾಳುಮೆಣಸು, ಮಾವು, ಶುಂಠಿ ಬೆಳೆಗಾರರಿಗೆ ₹60 ಕೋಟಿಗೂ ಅಧಿಕ ವಿಮೆ ಪರಿಹಾರ! ಬೆಳೆ ವಿಮೆ ವಿತರಣೆ ಆರಂಭ; ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಪ್ರಯತ್ನಕ್ಕೆ ಸಿಕ್ಕ ಯಶಸ್ಸು.
ಉತ್ತರ ಕನ್ನಡ : ಪ್ರತಿನಿಧಿ
ಅಡಿಕೆ, ಕಾಳುಮೆಣಸು, ಮಾವು ಹಾಗೂ ಶುಂಠಿ ಬೆಳೆಗಾರರಿಗೆ ಕೊನೆಗೂ ಸಂತಸದ ಸುದ್ದಿ ದೊರೆತಿದ್ದು, 2025-26ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ (WBCIS) ₹60 ಕೋಟಿಗೂ ಅಧಿಕ ವಿಮೆ ಪರಿಹಾರದ ಮೊತ್ತ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲು ಆರಂಭವಾಗಿದೆ. ಈ ಮಾಹಿತಿಯನ್ನು ಕೆನರಾ (ಉತ್ತರ ಕನ್ನಡ) ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರು ತಿಳಿಸಿದ್ದಾರೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿಯೇ ವಿತರಣೆ ಆಗಬೇಕಿದ್ದ ಅಡಿಕೆ, ಮಾವು, ಕಾಳುಮೆಣಸು ಹಾಗೂ ಶುಂಠಿ ಬೆಳೆಗಳ ವಿಮೆ ಪರಿಹಾರವು ತಾಂತ್ರಿಕ ಕಾರಣಗಳಿಂದ ವಿಳಂಬವಾಗಿತ್ತು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸಂಸದರು ಸಂಬಂಧಪಟ್ಟ ಹಿರಿಯ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ, ಈ ಸಮಸ್ಯೆಯ ಪರಿಹಾರಕ್ಕಾಗಿ ಸತತವಾಗಿ ಪ್ರಯತ್ನ ನಡೆಸಿದರು. ಈ ಪ್ರಯತ್ನಗಳ ಫಲವಾಗಿ ತಾಂತ್ರಿಕ ಅಡಚಣೆಗಳನ್ನು ಸಂಪೂರ್ಣವಾಗಿ ನಿವಾರಿಸುವಲ್ಲಿ ಯಶಸ್ಸು ದೊರೆತಿದ್ದು, ಇದೀಗ ₹60 ಕೋಟಿಗೂ ಅಧಿಕ ವಿಮೆ ಪರಿಹಾರದ ಮೊತ್ತವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಡಿಬಿಟಿ (DBT) ಮೂಲಕ ಜಮಾ ಮಾಡಲಾಗುತ್ತಿದೆ.
ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ರೈತರಿಗೆ ಈ ನೆರವು ದೊಡ್ಡ ಮಟ್ಟದ ಸಮಾಧಾನ ನೀಡಲಿದ್ದು, ಅವರ ಆರ್ಥಿಕ ಹೊರೆ ಕಡಿಮೆ ಮಾಡಲು ಸಹಕಾರಿಯಾಗಲಿದೆ ಎಂಬ ವಿಶ್ವಾಸವನ್ನು ಸಂಸದ ಕಾಗೇರಿ ಅವರು ವ್ಯಕ್ತಪಡಿಸಿದ್ದಾರೆ. ವಿಮೆ ಪರಿಹಾರದ ತ್ವರಿತ ವಿತರಣೆಗೆ ಸಹಕರಿಸಿದ ಕೇಂದ್ರ ಕೃಷಿ ಸಚಿವರು ಹಾಗೂ ರಾಜ್ಯ ಸರ್ಕಾರದ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೂ ರೈತ ಬಾಂಧವರ ಪರವಾಗಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಆದರೆ, ಮಳೆ ಮಾಪಕ ಯಂತ್ರಗಳ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಬೇಡ!
ಬೆಳೆ ವಿಮೆ ಪರಿಹಾರವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸ್ವಯಂಚಾಲಿತ ಮಳೆ ಮಾಪಕ ಯಂತ್ರಗಳ (AWS) ಸಮರ್ಪಕ ನಿರ್ವಹಣೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಒತ್ತಾಯಿಸಿದ್ದಾರೆ. ರಾಜ್ಯದ ಅನೇಕ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಈ ಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸದ ಕಾರಣ, ಸಂಬಂಧಪಟ್ಟ ರೈತರಿಗೆ ದೊರೆಯಬೇಕಾದ ಸಂಪೂರ್ಣ ವಿಮೆ ಪರಿಹಾರ ಲಭ್ಯವಾಗಿಲ್ಲ.
ಆದ್ದರಿಂದ ರಾಜ್ಯ ಸರ್ಕಾರವು ಮಳೆ ಮಾಪಕ ಯಂತ್ರಗಳ ನಿಯಮಿತ ನಿರ್ವಹಣೆ ಹಾಗೂ ದುರಸ್ತಿಯನ್ನು ಖಚಿತಪಡಿಸಿಕೊಳ್ಳಬೇಕು. ತಾಂತ್ರಿಕ ದೋಷಗಳಿಂದ ರೈತರಿಗೆ ಅನ್ಯಾಯವಾಗದಂತೆ ಹಾಗೂ ಅವರಿಗೆ ಅರ್ಹವಾದ ವಿಮೆ ಪರಿಹಾರ ದೊರೆಯುವಂತೆ ತಕ್ಷಣವೇ ಸೂಕ್ತ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ರೈತರ ಹಿತವೇ ತಮ್ಮ ಅತ್ಯುನ್ನತ ಆದ್ಯತೆಯಾಗಿದ್ದು, ಅವರ ಕಲ್ಯಾಣಕ್ಕಾಗಿ ತಮ್ಮ ಸೇವೆ ಸದಾ ಮುಂದುವರಿಯಲಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ-ಕಾಗೇರಿ ಅವರು ಸ್ಪಷ್ಟಪಡಿಸಿದ್ದಾರೆ.

