मळवाड येथे 9 ऑक्टोबरला प्रजासेवा आंदोलन.
खानापूर : प्रतिनिधी
खानापूर तालुक्यातील नागरिकांच्या विविध समस्या व तक्रारींचे निराकरण करण्याच्या उद्देशाने प्रजासेवा आंदोलन (सार्वजनिक भेट व तक्रार निवारण) कार्यक्रमाचे आयोजन करण्यात आले आहे.
खानापूर तालुक्यातील गुंजी विभाग अंतर्गत कापोली के.जी. ग्रामपंचायत कार्यक्षेत्रातील मळवाड येथे शुक्रवार, 9 ऑक्टोबर 2026 रोजी सकाळी 11 वाजता प्रजासेवा आंदोलनाची सभा आयोजित करण्यात आली आहे. मळवाड येथील श्री लक्ष्मी मंदिरात ही सभा होणार असून, खानापूरचे आमदार विठ्ठलराव हलगेकर यांच्या अध्यक्षतेखाली कार्यक्रम पार पडणार आहे.
राज्य सरकारच्या निर्देशानुसार तालुका पातळीवर नागरिकांच्या तक्रारी व अडचणी जाणून घेऊन त्यावर योग्य तोडगा काढण्यासाठी प्रजासेवा आंदोलनाचे आयोजन करण्यात येत आहे.
खानापूर तालुक्यातील सर्व नागरिकांनी या कार्यक्रमास उपस्थित राहून आपल्या समस्या व तक्रारी मांडाव्यात आणि कार्यक्रमाचा लाभ घ्यावा, असे आवाहन खानापूरचे तहसीलदार दुंडाप्पा कोमार यांनी प्रसिद्धीपत्रकाद्वारे केले आहे.
ಮಳವಾಡದಲ್ಲಿ ಅಕ್ಟೋಬರ್ 9ರಂದು ಪ್ರಜಾಸೇವಾ ಆಂದೋಲನ.
ಖಾನಾಪುರ : ಪ್ರತಿನಿಧಿ
ಖಾನಾಪುರ ತಾಲೂಕಿನ ನಾಗರಿಕರ ವಿವಿಧ ಸಮಸ್ಯೆಗಳು ಹಾಗೂ ದೂರುಗಳನ್ನು ಪರಿಹರಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ (ಸಾರ್ವಜನಿಕ ಭೇಟಿ ಹಾಗೂ ದೂರು ನಿವಾರಣೆ) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಖಾನಾಪುರ ತಾಲೂಕಿನ ಗುಂಜಿ ಹೋಬಳಿಯ ವ್ಯಾಪ್ತಿಯಲ್ಲಿರುವ ಕಾಪೋಲಿ ಕೆ.ಜಿ. ಗ್ರಾಮ ಪಂಚಾಯಿತಿ ಕಾರ್ಯಕ್ಷೇತ್ರದ ಮಳವಾಡ ಗ್ರಾಮದಲ್ಲಿ ಶುಕ್ರವಾರ, ಅಕ್ಟೋಬರ್ 9, 2026ರಂದು ಬೆಳಿಗ್ಗೆ 11 ಗಂಟೆಗೆ ಪ್ರಜಾಸೇವಾ ಆಂದೋಲನದ ಸಭೆಯನ್ನು ಆಯೋಜಿಸಲಾಗಿದೆ. ಮಳವಾಡ ಗ್ರಾಮದ ಶ್ರೀ ಲಕ್ಷ್ಮೀ ದೇವಸ್ಥಾನದಲ್ಲಿ ಈ ಸಭೆ ನಡೆಯಲಿದ್ದು, ಖಾನಾಪುರ ಶಾಸಕ ವಿಠ್ಠಲರಾವ್ ಹಲಗೆಕರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಲಿದೆ.
ರಾಜ್ಯ ಸರ್ಕಾರದ ನಿರ್ದೇಶನದಂತೆ ತಾಲೂಕು ಮಟ್ಟದಲ್ಲಿ ನಾಗರಿಕರ ದೂರುಗಳು ಹಾಗೂ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಸೂಕ್ತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನವನ್ನು ಆಯೋಜಿಸಲಾಗುತ್ತಿದೆ.
ಖಾನಾಪುರ ತಾಲೂಕಿನ ಎಲ್ಲಾ ನಾಗರಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಮಸ್ಯೆಗಳು ಹಾಗೂ ದೂರುಗಳನ್ನು ಮಂಡಿಸುವ ಮೂಲಕ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ಖಾನಾಪುರ ತಹಶೀಲ್ದಾರ್ ದುಂಡಪ್ಪ ಕೋಮಾರ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಮನವಿ ಮಾಡಿದ್ದಾರೆ.

