खानापूरमधील 9 सप्टेंबरची ‘प्रजासेवा आंदोलन’ सभा पुढे ढकलली.
खानापूर : खानापूर शहरातील लोकमान्य भवन येथे बुधवार, 9 सप्टेंबर 2026 रोजी सकाळी 10 वाजता आयोजित करण्यात आलेली तालुकास्तरीय ‘प्रजासेवा आंदोलन’ (जनता भेट व तक्रार निवारण) सभा पुढे ढकलण्यात आली आहे.
जिल्हाधिकारी, बेळगावी यांच्या निर्देशानुसार जिल्ह्याचे पालकमंत्री यांच्या अध्यक्षतेखाली ही सभा आयोजित करण्यात आली होती. मात्र, अनिवार्य कारणांमुळे सदर सभा पुढे ढकलण्यात आली असून नवीन तारीख नंतर कळविण्यात येणार आहे.
ही सभा खानापूर शहरातील लोकमान्य भवन येथे, माकावी पेट्रोल पंपाजवळ आयोजित करण्यात येणार होती. या कार्यक्रमात नागरिकांच्या विविध समस्या, तक्रारी व शासकीय कामांबाबतच्या अडचणी ऐकून घेऊन त्यावर संबंधित विभागांकडून कार्यवाही करण्याचा उद्देश होता.
मात्र प्रजासेवा आंदोलन पुढे ढकलण्यात आली आहे. खानापूर तहसीलदार कार्यालयाकडून याबाबतची अधिकृत माहिती प्रसिद्ध करण्यात आली असून, नवीन सभेची तारीख जाहीर झाल्यानंतर नागरिकांना कळविण्यात येणार आहे.
ಖಾನಾಪುರದಲ್ಲಿ ಸೆಪ್ಟೆಂಬರ್ 9 ರಂದು ಆಯೋಜಿಸಲಾಗಿದ್ದ ‘ಪ್ರಜಾಸೇವಾ ಆಂದೋಲನ’ ಸಭೆ ಮುಂದೂಡಿಕೆ.
ಖಾನಾಪುರ : ಖಾನಾಪುರ ನಗರದ ಲೋಕಮಾನ್ಯ ಭವನದಲ್ಲಿ ಬುಧವಾರ, ಸೆಪ್ಟೆಂಬರ್ 9, 2026ರಂದು ಬೆಳಿಗ್ಗೆ 10 ಗಂಟೆಗೆ ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ‘ಪ್ರಜಾಸೇವಾ ಆಂದೋಲನ’ (ಜನತಾ ಭೇಟಿ ಹಾಗೂ ದೂರು ನಿವಾರಣಾ) ಸಭೆಯನ್ನು ಅನಿವಾರ್ಯ ಕಾರಣದಿಂದ ಮುಂದೂಡಲಾಗಿದೆ.
ಬೆಳಗಾವಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಜಿಲ್ಲೆಯ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಈ ಸಭೆಯನ್ನು ಆಯೋಜಿಸಲಾಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದಾಗಿ ಸದರಿ ಸಭೆಯನ್ನು ಮುಂದೂಡಲಾಗಿದ್ದು, ಹೊಸ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ತಿಳಿಸಲಾಗಿದೆ.
ಈ ಸಭೆಯನ್ನು ಖಾನಾಪುರ ನಗರದ ಲೋಕಮಾನ್ಯ ಭವನದಲ್ಲಿ, ಮಾಕಾವಿ ಪೆಟ್ರೋಲ್ ಪಂಪ್ ಎದುರು ಆಯೋಜಿಸಲು ನಿರ್ಧರಿಸಲಾಗಿತ್ತು. ಕಾರ್ಯಕ್ರಮದಲ್ಲಿ ನಾಗರಿಕರ ವಿವಿಧ ಸಮಸ್ಯೆಗಳು, ದೂರುಗಳು ಹಾಗೂ ಸರ್ಕಾರಿ ಕೆಲಸಗಳಿಗೆ ಸಂಬಂಧಿಸಿದ ಅಡಚಣೆಗಳನ್ನು ಆಲಿಸಿ, ಅವುಗಳಿಗೆ ಸಂಬಂಧಪಟ್ಟ ಇಲಾಖೆಗಳ ಮೂಲಕ ಸೂಕ್ತ ಕ್ರಮ ಕೈಗೊಳ್ಳುವ ಉದ್ದೇಶ ಹೊಂದಲಾಗಿತ್ತು.
ಆದರೆ ಇದೀಗ ಪ್ರಜಾಸೇವಾ ಆಂದೋಲನ ಸಭೆಯನ್ನು ಮುಂದೂಡಲಾಗಿದೆ. ಈ ಕುರಿತು ಖಾನಾಪುರ ತಹಶೀಲ್ದಾರ್ ಕಚೇರಿಯಿಂದ ಅಧಿಕೃತ ಮಾಹಿತಿ ಪ್ರಕಟಿಸಲಾಗಿದ್ದು, ಹೊಸ ಸಭೆಯ ದಿನಾಂಕವನ್ನು ಪ್ರಕಟಿಸಿದ ನಂತರ ನಾಗರಿಕರಿಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಲಾಗಿದೆ.

