फिश मार्केटजवळील रखडलेला रस्ता अखेर मार्गी ; शेतकऱ्यांना नुकसानभरपाई देण्याची जिल्हाधिकाऱ्यांची हमी; आमदार हलगेकरांच्या पाठपुराव्याला यश, रस्ता दुरुस्तीला सुरुवात.
खानापूर : खानापूर शहरातील मराठा मंडळ डिग्री कॉलेज ते करंबळ क्रॉसदरम्यान फिश मार्केटजवळील रखडलेल्या रस्त्याचा प्रश्न अखेर मार्गी लागला आहे. शेतकऱ्यांना योग्य नुकसानभरपाई मिळावी आणि नागरिकांची गैरसोय दूर व्हावी, यासाठी खानापूरचे आमदार विठ्ठलराव हलगेकर यांनी केलेल्या पाठपुराव्याला यश आले असून, आजपासून या रस्त्याच्या दुरुस्तीच्या कामाला सुरुवात झाली आहे.
पूर्वी हा रस्ता तयार करताना संबंधित शेतकऱ्यांच्या जमिनीचा कायदेशीर पद्धतीने ताबा घेण्यासाठी आवश्यक असलेली भूसंपादन प्रक्रिया (ॲक्विझिशन) पूर्ण करण्यात आली नसल्याचा तसेच शेतकऱ्यांना मोबदला देण्यात आला नसल्याचा मुद्दा उपस्थित झाला होता. यामुळे हे प्रकरण न्यायालयात गेले आणि रस्त्याचे काम अडविण्यात आले. परिणामी, देखभालीअभावी रस्त्यावर मोठमोठे खड्डे पडून रस्ता पूर्णपणे नादुरुस्त झाला होता.
या प्रश्नावर तोडगा काढण्यासाठी आमदार विठ्ठलराव हलगेकर यांच्या पुढाकाराने नुकतीच बेळगाव जिल्हाधिकारी मोहम्मद रोशन यांच्या उपस्थितीत बैठक घेण्यात आली. बैठकीला संबंधित शेतकरी, एनएच-4 विभाग धारवाडचे प्रोजेक्ट डायरेक्टर, बेळगाव सार्वजनिक बांधकाम विभागाचे वरिष्ठ अधिकारी, खानापूरचे सार्वजनिक बांधकाम विभागाचे सहाय्यक कार्यकारी अभियंता संजय गस्ती तसेच इतर अधिकारी उपस्थित होते.

बैठकीत शेतकऱ्यांच्या नुकसानभरपाईचा प्रश्न प्राधान्याने सोडविण्याबाबत चर्चा झाली. जिल्हाधिकारी मोहम्मद रोशन यांनी बैठकीला उपस्थित शेतकऱ्यांना विश्वासात घेत नुकसानभरपाई मिळवून देण्याची जबाबदारी प्रशासन घेईल, असे आश्वासन दिले. गणपती उत्सवाच्या पार्श्वभूमीवर नागरिकांना होणारी गैरसोय लक्षात घेऊन सध्या रस्ता दुरुस्तीचे काम करू द्यावे आणि नुकसानभरपाईची प्रक्रिया लवकर पूर्ण केली जाईल, असे त्यांनी सांगितले.
जिल्हाधिकाऱ्यांच्या आश्वासनानंतर संबंधित शेतकऱ्यांनी रस्त्याच्या दुरुस्तीला सहमती दर्शविली. त्यानंतर आज मंगळवार दिनांक 8 सप्टेंबर रोजी सार्वजनिक बांधकाम विभागाच्या माध्यमातून तसेच कंत्राटदाराच्या यंत्रसामग्रीने रस्त्याच्या कामाला प्रत्यक्ष सुरुवात झाली आहे. जेसीबीसह आवश्यक यंत्रसामग्री तातडीने घटनास्थळी दाखल करण्यात आली असून, रस्त्याचे काम अर्जंट स्वरूपात पूर्ण करण्याचे निर्देश देण्यात आले आहेत.
शेतकरी राहुल सावंत यांचे अभिनंदन….
या प्रकरणातील नुकसानग्रस्त शेतकरी राहुल सावंत यांनी ‘आपलं खानापूर’शी बोलताना सांगितले की, शेतकऱ्यांना नुकसानभरपाई मिळवून देण्यासाठी जिल्हाधिकारी मोहम्मद रोशन यांनी जबाबदारी स्वीकारल्याने समाधान वाटत आहे. तसेच आमदार विठ्ठल हलगेकर यांनी सुद्धा बरेच प्रयत्न केले आहेत. त्यामुळे नागरिकांची गैरसोय लक्षात घेऊन रस्ता दुरुस्तीला सहकार्य करण्याचा निर्णय शेतकऱ्यांनी घेतला आहे.
रस्त्याचा प्रश्न सोडविण्यासाठी पुढाकार घेतल्याबद्दल त्यांनी आमदार विठ्ठलराव हलगेकर तसेच जिल्हाधिकारी मोहम्मद रोशन यांचे अभिनंदन केले.

दरम्यान, या रस्त्याच्या कामाला गती मिळाल्याबद्दल आमदार विठ्ठलराव हलगेकर यांनी बेंगळुरूहून संपर्क साधत सहकार्य करणाऱ्या खानापूर संबंधित शेतकरी बांधवांचे आभार मानले आहेत. रस्ता लवकरात लवकर पूर्ण करून नागरिकांची गैरसोय दूर करण्यासाठी प्रशासनाकडून प्रयत्न सुरू असल्याचे त्यांनी सांगितले.
ಫಿಶ್ ಮಾರ್ಕೆಟ್ ಬಳಿಯ ಸ್ಥಗಿತಗೊಂಡ ರಸ್ತೆ ಕಾಮಗಾರಿಗೆ ಕೊನೆಗೂ ಚಾಲನೆ; ರೈತರಿಗೆ ಪರಿಹಾರ ನೀಡುವ ಭರವಸೆ ನೀಡಿದ ಜಿಲ್ಲಾಧಿಕಾರಿ; ಶಾಸಕ ವಿಠ್ಠಲರಾವ್ ಹಲಗೇಕರ್ ಅವರ ನಿರಂತರ ಪ್ರಯತ್ನಕ್ಕೆ ಕೊನೆಗೂ ಯಶಸ್ಸು, ರಸ್ತೆ ದುರಸ್ತಿ ಕಾಮಗಾರಿ ಬರದಿಂದ ಆರಂಭ.
ಖಾನಾಪುರ : ಖಾನಾಪುರ ನಗರದ ಮರಾಠಾ ಮಂಡಳ ಡಿಗ್ರಿ ಕಾಲೇಜಿನಿಂದ ಕರಂಬಳ ಕ್ರಾಸ್ ನಡುವಿನ ಫಿಶ್ ಮಾರ್ಕೆಟ್ ಬಳಿಯ ಸ್ಥಗಿತಗೊಂಡಿದ್ದ ರಸ್ತೆಯ ಸಮಸ್ಯೆಗೆ ಕೊನೆಗೂ ಪರಿಹಾರ ದೊರೆತಿದೆ. ರೈತರಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವುದರ ಜೊತೆಗೆ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ನಿವಾರಿಸುವ ಉದ್ದೇಶದಿಂದ ಖಾನಾಪುರ ತಾಲೂಕಿನ ಜನಪ್ರಿಯ ಶಾಸಕ ವಿಠ್ಠಲರಾವ್ ಹಲಗೇಕರ್ ಅವರು ನಡೆಸಿದ ನಿರಂತರ ಪ್ರಯತ್ನಕ್ಕೆ ಯಶಸ್ಸು ದೊರೆತಿದ್ದು, ಇಂದಿನಿಂದ ಈ ರಸ್ತೆಯ ದುರಸ್ತಿ ಕಾಮಗಾರಿಗೆ ಚಾಲನೆ ನೀಡಿದ್ದು ಕೆಲಸ ಕಾರ್ಯಗಳು ಬರದಿಂದ ಸಾಗಿವೆ.
ಈ ಹಿಂದೆ ರಸ್ತೆ ನಿರ್ಮಾಣ ಮಾಡುವ ಸಂದರ್ಭದಲ್ಲಿ ಸಂಬಂಧಿಸಿದ ರೈತರ ಜಮೀನನ್ನು ಕಾನೂನುಬದ್ಧವಾಗಿ ಸ್ವಾಧೀನಪಡಿಸಿಕೊಳ್ಳಲು ಅಗತ್ಯವಿದ್ದ ಭೂಸ್ವಾಧೀನ ಪ್ರಕ್ರಿಯೆ (ಅಕ್ವಿಸಿಷನ್) ಪೂರ್ಣಗೊಳಿಸಲಾಗಿರಲಿಲ್ಲ ಎಂಬುದಲ್ಲದೆ, ರೈತರಿಗೆ ಪರಿಹಾರದ ಮೊತ್ತವನ್ನೂ ನೀಡಲಾಗಿಲ್ಲ ಎಂಬ ವಿಚಾರ ಮುನ್ನೆಲೆಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ್ದು, ರಸ್ತೆ ಕಾಮಗಾರಿಯನ್ನು ತಡೆಹಿಡಿಯಲಾಗಿತ್ತು. ಪರಿಣಾಮವಾಗಿ ನಿರ್ವಹಣೆಯ ಕೊರತೆಯಿಂದ ರಸ್ತೆಯಲ್ಲಿ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿ, ರಸ್ತೆ ಸಂಪೂರ್ಣವಾಗಿ ಹದಗೆಟ್ಟಿತ್ತು.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶಾಸಕ ವಿಠ್ಠಲರಾವ್ ಹಲಗೇಕರ್ ಅವರ ಮುಂದಾಳತ್ವದಲ್ಲಿ ಇತ್ತೀಚೆಗೆ ಬೆಳಗಾವಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರ ಸಮ್ಮುಖದಲ್ಲಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಸಂಬಂಧಿಸಿದ ರೈತರು, ಎನ್ಎಚ್-4 ವಿಭಾಗ ಧಾರವಾಡದ ಪ್ರಾಜೆಕ್ಟ್ ಡೈರೆಕ್ಟರ್, ಬೆಳಗಾವಿ ಸಾರ್ವಜನಿಕ ಕಾಮಗಾರಿಗಳ ಇಲಾಖೆಯ ಹಿರಿಯ ಅಧಿಕಾರಿಗಳು, ಖಾನಾಪುರ ಸಾರ್ವಜನಿಕ ಕಾಮಗಾರಿಗಳ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಂಜಯ ಗಸ್ತಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯಲ್ಲಿ ರೈತರಿಗೆ ನೀಡಬೇಕಾದ ಪರಿಹಾರದ ಸಮಸ್ಯೆಯನ್ನು ಆದ್ಯತೆಯ ಮೇರೆಗೆ ಬಗೆಹರಿಸುವ ಕುರಿತು ಚರ್ಚಿಸಲಾಯಿತು. ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸಭೆಗೆ ಹಾಜರಾಗಿದ್ದ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ರೈತರಿಗೆ ಪರಿಹಾರ ದೊರಕಿಸಿಕೊಡುವ ಜವಾಬ್ದಾರಿಯನ್ನು ಆಡಳಿತವೇ ವಹಿಸಿಕೊಳ್ಳಲಿದೆ, ಎಂದು ಭರವಸೆ ನೀಡಿದರು.
ಗಣಪತಿ ಉತ್ಸವದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು, ಸದ್ಯ ರಸ್ತೆ ದುರಸ್ತಿ ಕಾಮಗಾರಿಗೆ ಅವಕಾಶ ನೀಡಬೇಕು ಮತ್ತು ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾಧಿಕಾರಿಗಳ ಭರವಸೆಯ ಬಳಿಕ ಸಂಬಂಧಿಸಿದ ರೈತರು ರಸ್ತೆ ದುರಸ್ತಿ ಕಾಮಗಾರಿಗೆ ಸಹಮತ ವ್ಯಕ್ತಪಡಿಸಿದರು. ಇದರ ನಂತರ ಇಂದು ಮಂಗಳವಾರ, ಸೆಪ್ಟೆಂಬರ್ 8ರಂದು ಸಾರ್ವಜನಿಕ ಕಾಮಗಾರಿಗಳ ಇಲಾಖೆಯ ಮೂಲಕ ಹಾಗೂ ಗುತ್ತಿಗೆದಾರರ ಯಂತ್ರೋಪಕರಣಗಳ ಸಹಾಯದಿಂದ ರಸ್ತೆ ಕಾಮಗಾರಿಗೆ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದ್ದು ರಸ್ತೆ ಕಾಮಗಾರಿ ಬರದಿಂದ ಸಾಗಿದೆ.
ಜೆಸಿಬಿ ಸೇರಿದಂತೆ ಅಗತ್ಯ ಯಂತ್ರೋಪಕರಣಗಳನ್ನು ತುರ್ತಾಗಿ ಸ್ಥಳಕ್ಕೆ ತರಲಾಗಿದ್ದು, ರಸ್ತೆ ಕಾಮಗಾರಿಯನ್ನು ತುರ್ತು ಸ್ವರೂಪದಲ್ಲಿ ಗುಣಮಟ್ಟ ಕಾಪಾಡಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ.
ರೈತ ರಾಹುಲ್ ಸಾವಂತ್ ಅವರಿಗೆ ಅಭಿನಂದನೆ….
ಈ ಪ್ರಕರಣದಲ್ಲಿ ನಷ್ಟಕ್ಕೊಳಗಾದ ರೈತ ರಾಹುಲ್ ಸಾವಂತ್ ಅವರು ‘ಆಪಲ ಖಾನಾಪುರ’ದೊಂದಿಗೆ ಮಾತನಾಡಿ, ರೈತರಿಗೆ ಪರಿಹಾರ ದೊರಕಿಸಿಕೊಡುವ ಜವಾಬ್ದಾರಿಯನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ವಹಿಸಿಕೊಂಡಿರುವುದರಿಂದ ತೃಪ್ತಿ ಉಂಟಾಗಿದೆ ಎಂದು ಹೇಳಿದರು.
ಅದೇ ರೀತಿ ಶಾಸಕ ವಿಠ್ಠಲರಾವ್ ಹಲಗೇಕರ್ ಅವರೂ ಈ ವಿಷಯದಲ್ಲಿ ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದಾರೆ. ಹೀಗಾಗಿ ಸಾರ್ವಜನಿಕರಿಗೆ ಉಂಟಾಗುತ್ತಿರುವ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ರಸ್ತೆ ದುರಸ್ತಿ ಕಾಮಗಾರಿಗೆ ಸಹಕಾರ ನೀಡುವ ನಿರ್ಧಾರವನ್ನು ರೈತರು ಕೈಗೊಂಡಿದ್ದಾರೆ ಎಂದು ಅವರು ತಿಳಿಸಿದರು.
ರಸ್ತೆಯ ಸಮಸ್ಯೆ ಬಗೆಹರಿಸಲು ಮುಂದಾಗಿರುವ ಜನ ಪ್ರಿಯ ಶಾಸಕ ವಿಠ್ಠಲರಾವ್ ಹಲಗೇಕರ್ ಹಾಗೂ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಅವರು ಅಭಿನಂದನೆ ಸಲ್ಲಿಸಿದರು.
ಈ ನಡುವೆ, ರಸ್ತೆ ಕಾಮಗಾರಿಗೆ ವೇಗ ದೊರೆತಿರುವ ಹಿನ್ನೆಲೆಯಲ್ಲಿ ಶಾಸಕ ವಿಠ್ಠಲರಾವ್ ಹಲಗೇಕರ್ ಅವರು ಬೆಂಗಳೂರಿನಿಂದ ಸಂಪರ್ಕಿಸಿ ಸಹಕಾರ ನೀಡಿದ ಖಾನಾಪುರದ ಸಂಬಂಧಿಸಿದ ರೈತ ಬಾಂಧವರಿಗೆ ಧನ್ಯವಾದ ತಿಳಿಸಿದ್ದಾರೆ.
ರಸ್ತೆ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಾರ್ವಜನಿಕರ ತೊಂದರೆ ನಿವಾರಿಸಲು ಆಡಳಿತದ ವತಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

