वाढदिवसाची पार्टी न दिल्याने मित्राची कायदेशीर नोटीस; 41,250 रुपयांची नुकसानभरपाई मागितली.
भोपाळ : मित्रांमधील वाढदिवसाची पार्टी, चेष्टा-मस्करी आणि छोट्या-मोठ्या कुरबुरी सहसा मैत्रीपुरत्याच मर्यादित राहतात. मात्र मध्य प्रदेशातील दमोह येथे वाढदिवसाच्या पार्टीचे दिलेले आश्वासन पूर्ण न झाल्याने दोन वकिलांमधील मैत्रीचा वाद थेट कायदेशीर नोटीसपर्यंत पोहोचला आहे. पार्टीचे वचन पाळले नसल्याचा आरोप करत वकील विशाल राजपूत यांनी त्यांचे सहकारी वकील गोविंद तिवारी यांना तब्बल 41 हजार 250 रुपयांच्या नुकसानभरपाईची नोटीस बजावली आहे.
पार्टीचे आश्वासन ठरले वादाचे कारण…
दमोह जिल्हा न्यायालयातील वकील गोविंद तिवारी यांनी अलीकडेच आपला वाढदिवस साजरा केला. जिल्हा बार असोसिएशनच्या प्रथेनुसार बार रूममध्ये सहकाऱ्यांनी त्यांना शुभेच्छा दिल्या. यावेळी त्यांनी आपल्या काही जवळच्या मित्रांसाठी पार्टी देण्याचे आश्वासन दिल्याचे सांगितले जाते.
वकील विशाल राजपूत हेही या मित्रपरिवारातील असल्याने त्यांनी पार्टीची अपेक्षा केली. मात्र ठरल्याप्रमाणे पार्टी न झाल्याने मित्रांनी तिवारी यांच्याकडे विचारणा केली. त्यानंतर पार्टी आयोजित करण्याचे लेखी आश्वासन देण्यात आल्याचा दावा राजपूत यांनी केला.
ठरलेल्या दिवशी फोनची प्रतीक्षा….
लेखी आश्वासनानंतर पार्टीच्या ठरलेल्या दिवशी विशाल राजपूत आणि इतर मित्र पार्टीची वाट पाहत होते. मात्र संपूर्ण संध्याकाळ उलटून गेल्यानंतरही गोविंद तिवारी यांच्याकडून कोणताही फोन किंवा पुढील माहिती मिळाली नसल्याचा आरोप राजपूत यांनी केला.
यानंतर त्यांना बाहेर जेवण करावे लागले. त्यासाठी 1,750 रुपये खर्च झाल्याचे नोटीसमध्ये नमूद करण्यात आले आहे. उशिरा जेवण केल्याने प्रकृती बिघडली आणि त्यांना रुग्णालयात दाखल व्हावे लागले. उपचारासाठी 39,500 रुपये खर्च झाल्याचा दावा करण्यात आला आहे.
नुकसानभरपाईची मागणी…
या सर्व बाबींचा आधार घेत विशाल राजपूत यांनी गोविंद तिवारी यांना कायदेशीर नोटीस पाठवली. त्यामध्ये जेवणाचा खर्च, वैद्यकीय खर्च तसेच झालेल्या मानसिक त्रासाचा उल्लेख करून एकूण 41,250 रुपये नुकसानभरपाई मागण्यात आली आहे.
दोन्ही बाजूंकडून वकिलांची नियुक्ती…
या वादाला कायदेशीर स्वरूप आल्यानंतर दोन्ही बाजूंनी आपापली भूमिका मांडण्यासाठी वकिलांची मदत घेतली आहे. विशाल राजपूत यांनी दमोहमधील एका नामांकित वकिलाची नियुक्ती केली आहे. तर गोविंद तिवारी यांनी आपली बाजू मांडण्यासाठी ज्येष्ठ वकील मनीष नागैच यांच्यावर जबाबदारी सोपवली आहे.
नागैच यांच्या म्हणण्यानुसार, नोटीसमधील काही दावे वस्तुस्थितीशी जुळत नाहीत. तिवारी यांनी पार्टीचे आश्वासन पाळले असून ठरलेल्या दिवशी पार्टी आयोजित करण्यात आली होती आणि त्यासंदर्भातील बिलेही उपलब्ध आहेत, असा दावा त्यांनी केला आहे.
मैत्री टिकवण्यासाठी तडजोडीचे प्रयत्न…
या संपूर्ण प्रकरणात दोन्ही व्यक्ती वकील असून त्यांच्यात पूर्वीपासून मैत्रीचे संबंध आहेत. त्यामुळे हा वाद न्यायालयीन लढाईत रूपांतरित होण्याआधीच परस्पर सामंजस्याने सोडवण्याचे प्रयत्न सुरू असल्याचे सांगण्यात येत आहे.
मात्र तडजोड झाली नाही, तर हे प्रकरण कायदेशीर मार्गाने पुढे नेण्याची शक्यता आहे. त्यामुळे एका वाढदिवसाच्या पार्टीच्या आश्वासनातून सुरू झालेला मित्रांमधील वाद आता 41 हजार 250 रुपयांच्या नुकसानभरपाईच्या कायदेशीर नोटीसेपर्यंत पोहोचला आहे.
सध्या या दोन मित्रांमध्ये समेट घडवून आणण्याचे प्रयत्न सुरू आहेत.
ಹುಟ್ಟುಹಬ್ಬದ ಪಾರ್ಟಿ ನೀಡದಿದ್ದಕ್ಕೆ ಸ್ನೇಹಿತನಿಗೆ ಕಾನೂನು ನೋಟಿಸ್; ₹41,250 ಪರಿಹಾರಕ್ಕೆ ಆಗ್ರಹ.
ಭೋಪಾಲ್ : ಸ್ನೇಹಿತರ ನಡುವಿನ ಹುಟ್ಟುಹಬ್ಬದ ಪಾರ್ಟಿ, ತಮಾಷೆ-ಮಸ್ಕರಿ ಹಾಗೂ ಸಣ್ಣಪುಟ್ಟ ಮನಸ್ತಾಪಗಳು ಸಾಮಾನ್ಯವಾಗಿ ಸ್ನೇಹದ ಮಟ್ಟದಲ್ಲಿಯೇ ಉಳಿಯುತ್ತವೆ. ಆದರೆ ಮಧ್ಯಪ್ರದೇಶದ ದಮೋಹ್ನಲ್ಲಿ ಹುಟ್ಟುಹಬ್ಬದ ಪಾರ್ಟಿ ನೀಡುವುದಾಗಿ ನೀಡಿದ್ದ ಭರವಸೆ ಈಡೇರದ ಹಿನ್ನೆಲೆಯಲ್ಲಿ ಇಬ್ಬರು ವಕೀಲರ ನಡುವಿನ ಸ್ನೇಹದ ವಿಚಾರ ಇದೀಗ ಕಾನೂನು ನೋಟಿಸ್ ಹಂತಕ್ಕೆ ತಲುಪಿದೆ. ಪಾರ್ಟಿ ನೀಡುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿ ವಕೀಲ ವಿಶಾಲ್ ರಾಜಪೂತ್ ಅವರು ತಮ್ಮ ಸಹೋದ್ಯೋಗಿ ವಕೀಲ ಗೋವಿಂದ್ ತಿವಾರಿ ಅವರಿಗೆ ₹41,250 ಪರಿಹಾರ ನೀಡುವಂತೆ ಕಾನೂನು ನೋಟಿಸ್ ಕಳುಹಿಸಿದ್ದಾರೆ.
ಪಾರ್ಟಿಯ ಭರವಸೆಯೇ ವಿವಾದಕ್ಕೆ ಕಾರಣ…
ದಮೋಹ್ ಜಿಲ್ಲಾ ನ್ಯಾಯಾಲಯದ ವಕೀಲ ಗೋವಿಂದ್ ತಿವಾರಿ ಅವರು ಇತ್ತೀಚೆಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಜಿಲ್ಲಾ ಬಾರ್ ಅಸೋಸಿಯೇಷನ್ನ ಸಂಪ್ರದಾಯದಂತೆ ಬಾರ್ ರೂಮ್ನಲ್ಲಿ ಸಹೋದ್ಯೋಗಿಗಳು ಅವರಿಗೆ ಶುಭಾಶಯ ಕೋರಿದ್ದರು. ಈ ಸಂದರ್ಭದಲ್ಲಿ ತಮ್ಮ ಕೆಲವು ಆಪ್ತ ಸ್ನೇಹಿತರಿಗೆ ಪಾರ್ಟಿ ನೀಡುವುದಾಗಿ ಅವರು ಭರವಸೆ ನೀಡಿದ್ದರು ಎನ್ನಲಾಗಿದೆ. ವಕೀಲ ವಿಶಾಲ್ ರಾಜಪೂತ್ ಕೂಡ ಈ ಸ್ನೇಹಿತರ ಬಳಗದಲ್ಲಿದ್ದರಿಂದ ಅವರು ಪಾರ್ಟಿಯ ನಿರೀಕ್ಷೆಯಲ್ಲಿದ್ದರು.
ಆದರೆ ನಿಗದಿಯಂತೆ ಪಾರ್ಟಿ ನಡೆಯದ ಹಿನ್ನೆಲೆಯಲ್ಲಿ ಸ್ನೇಹಿತರು ತಿವಾರಿಯವರನ್ನು ವಿಚಾರಿಸಿದರು. ಬಳಿಕ ಪಾರ್ಟಿ ಆಯೋಜಿಸುವುದಾಗಿ ಲಿಖಿತ ಭರವಸೆ ನೀಡಲಾಗಿತ್ತು ಎಂದು ರಾಜಪೂತ್ ಅವರು ತಮ್ಮ ನೋಟಿಸ್ನಲ್ಲಿ ತಿಳಿಸಿದ್ದಾರೆ.
ನಿಗದಿತ ದಿನ ಫೋನ್ಗಾಗಿ ಕಾದ ಸ್ನೇಹಿತರು…
ಲಿಖಿತ ಭರವಸೆಯ ನಂತರ ಪಾರ್ಟಿ ನಡೆಯಬೇಕಿದ್ದ ದಿನ ವಿಶಾಲ್ ರಾಜಪೂತ್ ಹಾಗೂ ಇತರ ಸ್ನೇಹಿತರು ಪಾರ್ಟಿಗಾಗಿ ಕಾಯುತ್ತಿದ್ದರು. ಆದರೆ ಇಡೀ ಸಂಜೆ ಕಳೆದರೂ ಗೋವಿಂದ್ ತಿವಾರಿ ಅವರಿಂದ ಯಾವುದೇ ಫೋನ್ ಅಥವಾ ಮಾಹಿತಿ ಬಂದಿಲ್ಲ ಎಂದು ರಾಜಪೂತ್ ಆರೋಪಿಸಿದ್ದಾರೆ.
ಇದರಿಂದಾಗಿ ತಾವು ಹೊರಗೆ ಊಟ ಮಾಡಬೇಕಾಯಿತು. ಇದಕ್ಕಾಗಿ ₹1,750 ವೆಚ್ಚವಾಯಿತು ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ತಡವಾಗಿ ಊಟ ಮಾಡಿದ್ದರಿಂದ ಆರೋಗ್ಯದಲ್ಲಿ ಸಮಸ್ಯೆ ಉಂಟಾಗಿ ಆಸ್ಪತ್ರೆಗೆ ದಾಖಲಾಗಬೇಕಾಯಿತು. ಚಿಕಿತ್ಸೆಗಾಗಿ ₹39,500 ವೆಚ್ಚವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.
₹41,250 ಪರಿಹಾರಕ್ಕೆ ಬೇಡಿಕೆ…
ಈ ಎಲ್ಲ ಅಂಶಗಳನ್ನು ಆಧಾರವಾಗಿಸಿಕೊಂಡು ವಿಶಾಲ್ ರಾಜಪೂತ್ ಅವರು ಗೋವಿಂದ್ ತಿವಾರಿ ಅವರಿಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ. ಅದರಲ್ಲಿ ಊಟದ ವೆಚ್ಚ, ವೈದ್ಯಕೀಯ ವೆಚ್ಚ ಹಾಗೂ ಉಂಟಾದ ಮಾನಸಿಕ ತೊಂದರೆಯನ್ನು ಉಲ್ಲೇಖಿಸಿ ಒಟ್ಟು ₹41,250 ಪರಿಹಾರ ನೀಡುವಂತೆ ಬೇಡಿಕೆ ಇಡಲಾಗಿದೆ.
ಎರಡೂ ಕಡೆಯಿಂದ ವಕೀಲರ ನೇಮಕ…
ವಿವಾದ ಕಾನೂನು ಸ್ವರೂಪ ಪಡೆದ ನಂತರ ಎರಡೂ ಕಡೆಯವರು ತಮ್ಮ ತಮ್ಮ ವಾದ ಮಂಡಿಸಲು ವಕೀಲರ ನೆರವು ಪಡೆದಿದ್ದಾರೆ. ವಿಶಾಲ್ ರಾಜಪೂತ್ ಅವರು ದಮೋಹ್ನ ಖ್ಯಾತ ವಕೀಲರೊಬ್ಬರನ್ನು ನೇಮಿಸಿಕೊಂಡಿದ್ದಾರೆ. ಮತ್ತೊಂದೆಡೆ ಗೋವಿಂದ್ ತಿವಾರಿ ಅವರು ತಮ್ಮ ಪರ ವಾದ ಮಂಡಿಸಲು ಹಿರಿಯ ವಕೀಲ ಮನೀಷ್ ನಾಗೈಚ್ ಅವರಿಗೆ ಜವಾಬ್ದಾರಿ ವಹಿಸಿದ್ದಾರೆ.
ಮನೀಷ್ ನಾಗೈಚ್ ಅವರ ಪ್ರಕಾರ, ನೋಟಿಸ್ನಲ್ಲಿರುವ ಕೆಲವು ಆರೋಪಗಳು ವಾಸ್ತವಾಂಶಗಳಿಗೆ ಹೊಂದಿಕೆಯಾಗುವುದಿಲ್ಲ. ತಿವಾರಿ ಅವರು ಪಾರ್ಟಿಯ ಭರವಸೆಯನ್ನು ಈಡೇರಿಸಿದ್ದು, ನಿಗದಿತ ದಿನವೇ ಪಾರ್ಟಿ ಆಯೋಜಿಸಲಾಗಿತ್ತು ಹಾಗೂ ಅದಕ್ಕೆ ಸಂಬಂಧಿಸಿದ ಬಿಲ್ಗಳೂ ಲಭ್ಯವಿವೆ, ಎಂದು ಅವರು ತಿಳಿಸಿದ್ದಾರೆ.
ಸ್ನೇಹ ಉಳಿಸಿಕೊಳ್ಳಲು ರಾಜಿ ಪ್ರಯತ್ನ…
ಈ ಪ್ರಕರಣದಲ್ಲಿರುವ ಇಬ್ಬರೂ ವಕೀಲರಾಗಿದ್ದು, ಅವರ ನಡುವೆ ಈ ಹಿಂದೆ ಸ್ನೇಹದ ಸಂಬಂಧವಿತ್ತು. ಹೀಗಾಗಿ ಈ ವಿವಾದ ನ್ಯಾಯಾಲಯದ ಮೆಟ್ಟಿಲೇರುವ ಮುನ್ನವೇ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ.
ಆದರೆ ರಾಜಿ ಸಾಧ್ಯವಾಗದಿದ್ದರೆ ಪ್ರಕರಣವನ್ನು ಕಾನೂನು ಮಾರ್ಗದಲ್ಲಿ ಮುಂದುವರಿಸುವ ಸಾಧ್ಯತೆಯೂ ಇದೆ. ಹೀಗಾಗಿ ಒಂದು ಹುಟ್ಟುಹಬ್ಬದ ಪಾರ್ಟಿ ನೀಡುವ ಭರವಸೆಯಿಂದ ಆರಂಭವಾದ ಸ್ನೇಹಿತರ ನಡುವಿನ ವಿವಾದ ಇದೀಗ ₹41,250 ಪರಿಹಾರದ ಕಾನೂನು ನೋಟಿಸ್ವರೆಗೆ ತಲುಪಿದೆ.
ಸದ್ಯ ಈ ಇಬ್ಬರು ಸ್ನೇಹಿತರ ನಡುವೆ ಸಂಧಾನ ಮಾಡಿಸಲು ಪ್ರಯತ್ನಗಳು ನಡೆಯುತ್ತಿವೆ.

