तब्बल 15 वर्षांनंतर शेडेगाळी-खानापूर बससेवा सुरू; विद्यार्थी व ग्रामस्थांची गैरसोय दूर ; बस सेवेसाठी राजु गुरव यांचे मोलाचे प्रयत्न.
खानापूर : खानापूर तालुक्यातील शेडेगाळी-खानापूर बससेवेला तब्बल 15 वर्षांनंतर आज शुक्रवार दिनांक 4 सप्टेंबर पासून पुन्हा प्रारंभ करण्यात आला. गोकुळाष्टमीच्या शुभमुहूर्तावर शेडेगाळी येथे बसचे पूजन करून या सेवेला सुरुवात करण्यात आली. बससेवा सुरू झाल्यामुळे शेडेगाळी व परिसरातील शाळा-महाविद्यालयीन विद्यार्थी तसेच ग्रामस्थांना खानापूरला ये-जा करण्यासाठी मोठी सोय उपलब्ध झाली आहे. ग्रामस्थांची गैरसोय लक्षात घेता आमदार विठ्ठलराव हलगेकर यांनी ही बस सेवा सुरू केली आहे. यासाठी शेडेगाळी येथील सामाजिक कार्यकर्ते राजू परसराम गुरव यांनी अथक प्रयत्न केले आहेत.

सुमारे 15 वर्षांपूर्वी ही बससेवा सुरू करण्यात आली होती; मात्र त्यावेळी केवळ चार दिवस सेवा सुरू राहिल्यानंतर ती बंद झाली होती. त्यानंतर तब्बल दीड दशकापासून शेडेगाळी गाव बससेवेपासून वंचित होते. त्यामुळे विद्यार्थी, नोकरदार, व्यापारी तसेच ग्रामस्थांना खासगी वाहनांवर अवलंबून राहावे लागत होते.
ही बससेवा पुन्हा सुरू व्हावी यासाठी सामाजिक कार्यकर्ते राजू परशराम गुरव यांच्या पुढाकाराने गावातील ग्रामस्थ व युवा वर्गाने खानापूरचे आमदार विठ्ठलराव हलगेकर यांच्याकडे सातत्याने पाठपुरावा केला. त्यांच्या प्रयत्नांना अखेर यश मिळून बससेवा सुरू करण्यात आली.
गोकुळाष्टमीच्या मुहूर्तावर बसचे पूजन…
शेडेगाळी येथे झालेल्या बससेवा प्रारंभ कार्यक्रमावेळी आमदार विठ्ठलराव हलगेकर यांचे विश्वासू सहकारी, लैला शुगरचे एमडी तथा भाजपा किसान मोर्चाचे जिल्हा उपाध्यक्ष सदानंद पाटील, भाजपा महिला मोर्चाच्या अध्यक्षा सुनिता पाटील, सामाजिक कार्यकर्ते राजू परशराम गुरव, बाबू चव्हाण, मशनू नारायण गुरव, संजय परशराम गुरव यांच्यासह ग्रामस्थ व विद्यार्थी मोठ्या संख्येने उपस्थित होते.
यावेळी बसचे चालक एम. ए. बोगुर व वाहक नागेश कातगार यांच्यासह सदानंद पाटील व राजू गुरव यांचा ग्रामस्थांच्या वतीने शाल व हार घालून सत्कार करण्यात आला.
अशी असेल बसची वेळ….
नवीन बससेवा दररोज सकाळी नेरसा–अशोकनगर–मणतुर्गा मार्गे शेडेगाळी येथे सकाळी 9.45 वाजता पोहोचेल. त्यानंतर ही बस शेडेगाळीहून खानापूरकडे रवाना होणार आहे. तसेच सायंकाळी 5 वाजता खानापूर बसस्थानकातून बस सुटून शेडेगाळीमार्गे तिओली गावाकडे जाणार आहे.
या वेळापत्रकामुळे शाळा-महाविद्यालयीन विद्यार्थ्यांसह खानापूर येथे विविध कामांसाठी येणाऱ्या ग्रामस्थांना मोठा फायदा होणार आहे.
गावाच्या विकासासाठी राजू गुरव यांचा सातत्यपूर्ण पाठपुरावा…

बससेवा सुरू करण्यासाठी सामाजिक कार्यकर्ते राजू परशराम गुरव यांनी आमदार विठ्ठलराव हलगेकर यांची वारंवार भेट घेऊन सातत्याने पाठपुरावा केला. ग्रामस्थांच्या दैनंदिन अडचणी सोडविण्यासाठी तसेच गावाच्या विकासासाठी ते नेहमीच प्रयत्नशील असल्याचे ग्रामस्थांनी सांगितले.
गावात पाणीपुरवठा सुरळीत करण्यासाठी ‘हर घर जल’ योजनेच्या अंमलबजावणीसाठी त्यांनी ग्रामस्थांसोबत प्रयत्न केले. तसेच गावातील शाळेच्या इमारतीला गळती लागल्याने विद्यार्थ्यांना होत असलेल्या त्रासाची दखल घेऊन आमदार व संबंधित शासकीय यंत्रणेकडे पाठपुरावा करून शाळेची दुरुस्ती करून घेण्यातही त्यांनी पुढाकार घेतला.
गाव स्वच्छ ठेवण्यासाठी गटारी व कचरा साफसफाईबाबत ग्रामपंचायत प्रशासनाशी संपर्क साधून नियमित पाठपुरावा करण्याचे कामही ते करीत आहेत. गावात अनेक वर्षांपूर्वी बांधण्यात आलेल्या पाण्याच्या टाकीत पाणी सोडले जात नसल्याची समस्या सोडविण्यासाठीही त्यांनी प्रयत्न केले आहेत.
15 वर्षांनंतर गावात पुन्हा बससेवा सुरू झाल्याने शेडेगाळी ग्रामस्थ, विद्यार्थी व युवा वर्गातून समाधान व्यक्त होत असून, ही सेवा कायमस्वरूपी सुरळीत सुरू राहावी, अशी अपेक्षा व्यक्त करण्यात येत आहे.
ಸುದೀರ್ಘ 15 ವರ್ಷಗಳ ನಂತರ ಶೇಡೆಗಾಳಿ–ಖಾನಾಪುರ ಬಸ್ ಸೇವೆ ಆರಂಭ; ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ಭಾರಿ ಅನುಕೂಲದ ಜೊತೆ ತೊಂದರೆ ನಿವಾರಣೆ; ಬಸ್ ಸೇವೆಗಾಗಿ ರಾಜು ಗುರವ ಅವರ ಅಮೂಲ್ಯ ಪ್ರಯತ್ನ.
ಖಾನಾಪುರ : ಖಾನಾಪುರ ತಾಲೂಕಿನ ಶೇಡೆಗಾಳಿ–ಖಾನಾಪುರ ಬಸ್ ಸೇವೆಯನ್ನು ಬರೋಬ್ಬರಿ 15 ವರ್ಷಗಳ ನಂತರ ಇಂದು ಶುಕ್ರವಾರ, ಸೆಪ್ಟೆಂಬರ್ 4ರಿಂದ ಪುನಃ ಆರಂಭ ಮಾಡಲಾಗಿದೆ. ಗೋಕೂಲಾಷ್ಟಮಿಯ ಶುಭ ಮುಹೂರ್ತದಲ್ಲಿ ಶೇಡೆಗಾಳಿ ಊರಿನಲ್ಲಿ ಬಸ್ಗೆ ಪೂಜೆ ಸಲ್ಲಿಸುವ ಮೂಲಕ ಈ ಸೇವೆಗೆ ಚಾಲನೆ ನೀಡಲಾಯಿತು. ಬಸ್ ಸೇವೆ ಆರಂಭಗೊಂಡಿರುವುದರಿಂದ ಶೇಡೆಗಾಳಿ ಹಾಗೂ ಸುತ್ತಮುತ್ತಲಿನ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಖಾನಾಪುರಕ್ಕೆ ತೆರಳಿ-ಬರಲು ಹೆಚ್ಚಿನ ಅನುಕೂಲ ದೊರೆತಿದೆ. ಗ್ರಾಮಸ್ಥರ ತೊಂದರೆಯನ್ನು ಗಮನದಲ್ಲಿಟ್ಟುಕೊಂಡು ಖಾನಾಪುರ ಶಾಸಕ ವಿಠ್ಠಲರಾವ್ ಹಲಗೇಕರ ಅವರು ಈ ಬಸ್ ಸೇವೆಯನ್ನು ಆರಂಭಿಸಿದ್ದಾರೆ. ಇದಕ್ಕಾಗಿ ಶೇಡೆಗಾಳಿ ಗ್ರಾಮದ ಸಾಮಾಜಿಕ ಕಾರ್ಯಕರ್ತ ರಾಜು ಪರಶರಾಮ್ ಗುರವ ಅವರು ನಿರಂತರವಾಗಿ ಶ್ರಮಿಸಿ ಪ್ರಯತ್ನಿಸಿದ್ದಾರೆ.
ಸುಮಾರು 15 ವರ್ಷಗಳ ಹಿಂದೆ ಈ ಬಸ್ ಸೇವೆಯನ್ನು ಆರಂಭಿಸಲಾಗಿತ್ತು. ಆದರೆ ಆ ಸಂದರ್ಭದಲ್ಲಿ ಕೇವಲ ನಾಲ್ಕು ದಿನಗಳ ಕಾಲ ಸೇವೆ ನಡೆಸಿ ನಂತರ ಅದನ್ನು ಸ್ಥಗಿತಗೊಳಿಸಲಾಗಿತ್ತು. ಬಳಿಕ ಬರೋಬ್ಬರಿ ಒಂದೂವರೆ ದಶಕದಿಂದ ಶೇಡೆಗಾಳಿ ಗ್ರಾಮವು ಬಸ್ ಸೇವೆಯಿಂದ ವಂಚಿತವಾಗಿತ್ತು. ಇದರಿಂದ ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಿಗಳು ಹಾಗೂ ಗ್ರಾಮಸ್ಥರು ಖಾಸಗಿ ವಾಹನಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.
ಈ ಬಸ್ ಸೇವೆ ಪುನಃ ಆರಂಭವಾಗಬೇಕೆಂದು ಸಾಮಾಜಿಕ ಕಾರ್ಯಕರ್ತ ರಾಜು ಪರಶರಾಮ್ ಗುರವ ಅವರ ಮುಂದಾಳತ್ವದಲ್ಲಿ ಗ್ರಾಮದ ಗ್ರಾಮಸ್ಥರು ಹಾಗೂ ಯುವಕರು ಖಾನಾಪುರ ಶಾಸಕ ವಿಠ್ಠಲರಾವ್ ಹಲಗೇಕರ ಅವರಲ್ಲಿ ನಿರಂತರವಾಗಿ ಮನವಿ ಮಾಡಿ, ಒತ್ತಾಯಿಸಿ ಹಾಗೂ ಸತತವಾಗಿ ಹೋರಾಟ ನಡೆಸಿದರು. ಅವರ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ದೊರೆತಿದ್ದು, ಇದೀಗ ಬಸ್ ಸೇವೆ ಪುನರಾರಂಭಗೊಂಡಿದೆ.
ಗೋಕೂಲಾಷ್ಟಮಿಯ ಶುಭ ಮುಹೂರ್ತದಲ್ಲಿ ಬಸ್ಗೆ ಪೂಜೆ…
ಶೇಡೆಗಾಳಿಯಲ್ಲಿ ನಡೆದ ಬಸ್ ಸೇವೆ ಆರಂಭ ಕಾರ್ಯಕ್ರಮದಲ್ಲಿ ಶಾಸಕ ವಿಠ್ಠಲರಾವ್ ಹಲಗೇಕರ ಅವರ ನಿಕಟ ಸಹವರ್ತಿ, ಲೈಲಾ ಸಕ್ಕರೆ ಕಾರ್ಖಾನೆಯ ಎಂಡಿ ಹಾಗೂ ಬಿಜೆಪಿ ಕಿಸಾನ್ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಸದಾನಂದ ಪಾಟೀಲ್, ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸುನಿತಾ ಪಾಟೀಲ್, ಸಾಮಾಜಿಕ ಕಾರ್ಯಕರ್ತ ರಾಜು ಪರಶರಾಮ್ ಗುರವ, ಬಾಬು ಚವ್ಹಾಣ್, ಮಶನು ನಾರಾಯಣ ಗುರವ, ಸಂಜಯ್ ಪರಶರಾಮ್ ಗುರವ ಸೇರಿದಂತೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಬಸ್ ಚಾಲಕ ಎಂ. ಎ. ಬೋಗುರ್ ಹಾಗೂ ನಿರ್ವಾಹಕ ನಾಗೇಶ್ ಕಾತಗಾರ್ ಅವರೊಂದಿಗೆ ಸದಾನಂದ ಪಾಟೀಲ್ ಹಾಗೂ ರಾಜು ಗುರವ ಅವರನ್ನು ಗ್ರಾಮಸ್ಥರ ಪರವಾಗಿ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಲಾಯಿತು.
ಬಸ್ನ ಸಮಯ….
ಹೊಸ ಬಸ್ ಸೇವೆಯು ಪ್ರತಿದಿನ ಬೆಳಗ್ಗೆ ನೇರಸಾ–ಅಶೋಕನಗರ– ಮಣತುರಗಾ ಮಾರ್ಗವಾಗಿ ಶೇಡೆಗಾಳಿಗೆ ಬೆಳಗ್ಗೆ 9.45ಕ್ಕೆ ತಲುಪಲಿದೆ. ಬಳಿಕ ಈ ಬಸ್ ಶೇಡೆಗಾಳಿಯಿಂದ ಖಾನಾಪುರದತ್ತ ಪ್ರಯಾಣಿಸಲಿದೆ.
ಅದೇ ರೀತಿ ಸಂಜೆ 5 ಗಂಟೆಗೆ ಖಾನಾಪುರ ಬಸ್ ನಿಲ್ದಾಣದಿಂದ ಬಸ್ ಹೊರಟು ಶೇಡೆಗಾಳಿ ಮಾರ್ಗವಾಗಿ ತಿಓಲಿ ಗ್ರಾಮದತ್ತ ತೆರಳಲಿದೆ.
ಈ ವೇಳಾಪಟ್ಟಿಯಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳೊಂದಿಗೆ ಖಾನಾಪುರಕ್ಕೆ ವಿವಿಧ ಕೆಲಸಗಳಿಗಾಗಿ ಆಗಮಿಸುವ ಗ್ರಾಮಸ್ಥರಿಗೂ ಹೆಚ್ಚಿನ ಅನುಕೂಲವಾಗಲಿದೆ.
ಗ್ರಾಮದ ಅಭಿವೃದ್ಧಿಗಾಗಿ ರಾಜು ಗುರವ ಅವರ ನಿರಂತರ ಪ್ರಯತ್ನ…
ಬಸ್ ಸೇವೆ ಆರಂಭಿಸಲು ಸಾಮಾಜಿಕ ಕಾರ್ಯಕರ್ತ ರಾಜು ಪರಶರಾಮ್ ಗುರವ ಅವರು ಶಾಸಕ ವಿಠ್ಠಲರಾವ್ ಹಲಗೇಕರ ಅವರನ್ನು ಹಲವು ಬಾರಿ ಭೇಟಿ ಮಾಡಿ ನಿರಂತರವಾಗಿ ಪ್ರಯತ್ನ ನಡೆಸಿದ್ದಾರೆ. ಗ್ರಾಮಸ್ಥರ ದೈನಂದಿನ ಸಮಸ್ಯೆಗಳನ್ನು ಪರಿಹರಿಸುವುದರ ಜೊತೆಗೆ ಗ್ರಾಮದ ಅಭಿವೃದ್ಧಿಗಾಗಿ ಅವರು ಸದಾ ಪ್ರಯತ್ನಿಸುತ್ತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗ್ರಾಮದಲ್ಲಿ ಕುಡಿಯುವ ನೀರಿನ ಪೂರೈಕೆಯನ್ನು ಸುಗಮಗೊಳಿಸಲು ‘ಹರ್ ಘರ್ ಜಲ್’ ಯೋಜನೆಯ ಅನುಷ್ಠಾನಕ್ಕಾಗಿ ಅವರು ಗ್ರಾಮಸ್ಥರೊಂದಿಗೆ ಸೇರಿ ಪ್ರಯತ್ನಿಸಿದ್ದಾರೆ. ಅಲ್ಲದೆ ಗ್ರಾಮದ ಶಾಲಾ ಕಟ್ಟಡಕ್ಕೆ ಸೋರಿಕೆ ಉಂಟಾಗಿ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಸಮಸ್ಯೆಯನ್ನು ಗಮನಕ್ಕೆ ತೆಗೆದುಕೊಂಡು ಶಾಸಕ ಹಾಗೂ ಸಂಬಂಧಿಸಿದ ಸರ್ಕಾರಿ ಇಲಾಖೆಗಳ ಬಳಿ ನಿರಂತರವಾಗಿ ಮನವಿ ಮಾಡಿ ಶಾಲೆಯ ದುರಸ್ತಿ ಕಾರ್ಯ ಕೈಗೊಳ್ಳುವಲ್ಲಿಯೂ ಅವರು ಮುಂದಾಳತ್ವ ವಹಿಸಿದ್ದಾರೆ.
ಗ್ರಾಮವನ್ನು ಸ್ವಚ್ಛವಾಗಿಡಲು ಚರಂಡಿಗಳು ಹಾಗೂ ಕಸವನ್ನು ಸ್ವಚ್ಛಗೊಳಿಸುವ ಕುರಿತು ಗ್ರಾಮ ಪಂಚಾಯಿತಿ ಆಡಳಿತದೊಂದಿಗೆ ಸಂಪರ್ಕ ಸಾಧಿಸಿ ನಿಯಮಿತವಾಗಿ ಪ್ರಯತ್ನಿಸುವ ಕೆಲಸವನ್ನೂ ಅವರು ಮಾಡುತ್ತಿದ್ದಾರೆ. ಗ್ರಾಮದಲ್ಲಿ ಹಲವು ವರ್ಷಗಳ ಹಿಂದೆ ನಿರ್ಮಿಸಲಾಗಿದ್ದ ನೀರಿನ ಟ್ಯಾಂಕ್ಗೆ ನೀರು ಹರಿಸಲಾಗುತ್ತಿಲ್ಲ ಎಂಬ ಸಮಸ್ಯೆಯನ್ನು ಪರಿಹರಿಸಲು ಸಹ ಅವರು ಪ್ರಯತ್ನಿಸಿದ್ದಾರೆ.
15 ವರ್ಷಗಳ ನಂತರ ಗ್ರಾಮದಲ್ಲಿ ಮತ್ತೆ ಬಸ್ ಸೇವೆ ಆರಂಭಗೊಂಡಿರುವುದಕ್ಕೆ ಶೇಡೆಗಾಳಿ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಯುವಕರಿಂದ ಸಂತಸ ವ್ಯಕ್ತವಾಗಿದ್ದು, ಈ ಬಸ್ ಸೇವೆ ಮುಂದೆಯೂ ಶಾಶ್ವತವಾಗಿ ಹಾಗೂ ಯಾವುದೇ ಅಡಚಣೆಯಿಲ್ಲದೆ ಸುಗಮವಾಗಿ ಮುಂದುವರಿಯಬೇಕು ಎಂಬುದು ಗ್ರಾಮಸ್ಥರ ಆಶಯವಾಗಿದೆ.

