गणेशोत्सव शांततेत व एकोप्याने साजरा करा; कायद्याच्या चौकटीत उत्सव साजरा करण्याचे पीआय गौंडी यांचे आवाहन.
खानापूर : आगामी 14सप्टेंबर रोजी होणाऱ्या गणेशोत्सवाच्या पार्श्वभूमीवर खानापूर तालुका पंचायतीच्या सभागृहात आज सोमवार, दिनांक 31 ऑगस्ट रोजी सायंकाळी 4 वाजता शांतता कमिटीची बैठक आयोजित करण्यात आली. बैठकीच्या अध्यक्षस्थानी खानापूर पोलीस ठाण्याचे पीआय एल. एच. गौंडी होते.

यावेळी हेस्कॉमचे सहाय्यक कार्यकारी अभियंता प्रवीण बरगाले, पंचहमी गॅरंटी योजनेचे अध्यक्ष सूर्यकांत कुलकर्णी, प्रकाश देशपांडे, चंबान्ना होसमणी, काँग्रेस अध्यक्ष महांतेश राऊत यांच्यासह विविध विभागांचे अधिकारी उपस्थित होते.
यावेळी मार्गदर्शन करताना पीआय एल. एच. गौंडी म्हणाले, “आम्हीही गणेशोत्सव साजरा करतो आणि त्याचबरोबर तुमच्या सुरक्षेची जबाबदारी पार पाडतो. त्यामुळे उत्सव मंडळांनी पोलिसांना सहकार्य करावे. आम्हीही तुम्हाला योग्य ते सहकार्य करू,” असे आवाहन त्यांनी केले.
गणेशमूर्तीची मिरवणूक काढताना गाडे अथवा रथाची उंची जास्त ठेवू नये तसेच विद्युत तारांचा स्पर्श होणार नाही याची दक्षता घ्यावी, असे त्यांनी सांगितले. मूर्तीसमोरील समई किंवा दिव्याजवळ कपडे व ज्वलनशील वस्तू ठेवू नयेत, अशी सूचनाही त्यांनी केली.
गणेश मंडळांनी मंडपात 24 तास एक कार्यकर्ता उपस्थित राहण्याची व्यवस्था करावी, बॅटरीची पर्यायी व्यवस्था ठेवावी तसेच सीसीटीव्ही कॅमेरे बसवावेत, असेही त्यांनी सांगितले.
मिरवणुका नेहमी रात्री उशिरा सुरू करण्याऐवजी लवकर सुरू कराव्यात, जेणेकरून नागरिकांच्या झोपेच्या वेळेपूर्वी मिरवणूक पूर्ण करता येईल. नदीकाठी विसर्जनाची व्यवस्था योग्य पद्धतीने करावी आणि कोणालाही त्रास होणार नाही याची काळजी घेत मिरवणूक काढावी, असे आवाहन त्यांनी केले.
“कायद्याचे पालन करून आणि कायद्याच्या चौकटीत राहून गणेशोत्सव साजरा करा. सर्वांनी मिळून शांततेत व एकोप्याने गणेशोत्सव साजरा करावा,” असे पीआय गौंडी यांनी स्पष्ट केले.
बैठकीत गणेशोत्सव महामंडळाचे अध्यक्ष पंडित ओगले, लक्ष्मण मादार, संजय कुबल, प्रकाश देशपांडे, विवेक गिरी, सूर्यकांत कुलकर्णी, प्रवीण बरगाले, शिवा मयेकर, रवी काडगी, किरण अष्टेकर आदींनी आपले विचार मांडले.
यावेळी डॉल्बीऐवजी एक बेस व एक स्पीकरला परवानगी देण्यात यावी, अशी मागणी गणेश मंडळांच्या पदाधिकाऱ्यांनी केली. तसेच शांतता राखून व सर्वधर्मीयांमध्ये एकोपा कायम ठेवत सण साजरा करण्याचे आवाहन निवृत्त शिक्षक सलीम कित्तूर व गुड्डू टेकडी यांनी केले.
गणेशोत्सव मंडळांना परवानगी घेण्यासाठी विविध कार्यालयांमध्ये जावे लागू नये, यासाठी ‘एक खिडकी योजना’ अमलात आणावी, अशी मागणीही बैठकीत करण्यात आली.
बैठकीस खानापूर शहर, उपनगर तसेच ग्रामीण भागातील गणेशोत्सव मंडळांचे पदाधिकारी मोठ्या संख्येने उपस्थित होते.
ಗಣೇಶೋತ್ಸವವನ್ನು ಶಾಂತಿಯುತವಾಗಿ ಹಾಗೂ ಸೌಹಾರ್ದತೆಯಿಂದ ಆಚರಿಸಿ; ಕಾನೂನಿನ ಚೌಕಟ್ಟಿನಲ್ಲಿ ಹಬ್ಬ ಆಚರಿಸುವಂತೆ ಪಿಐ ಗೌಂಡಿ ಅವರ ಕರೆ.
ಖಾನಾಪುರ : ಮುಂಬರುವ ಸೆಪ್ಟೆಂಬರ್ 14ರಂದು ನಡೆಯಲಿರುವ ಗಣೇಶೋತ್ಸವದ ಹಿನ್ನೆಲೆಯಲ್ಲಿ ಖಾನಾಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ಸೋಮವಾರ, ದಿನಾಂಕ ಆಗಸ್ಟ್ 31ರಂದು ಸಂಜೆ 4 ಗಂಟೆಗೆ ಶಾಂತಿ ಸಮಿತಿ ಸಭೆ ಆಯೋಜಿಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಖಾನಾಪುರ ಪೊಲೀಸ್ ಠಾಣೆಯ ಪಿಐ ಎಲ್. ಎಚ್. ಗೌಂಡಿ ವಹಿಸಿದ್ದರು.
ಈ ಸಂದರ್ಭದಲ್ಲಿ ಹೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರವೀಣ ಬರ್ಗಾಲೆ, ಪಂಚಹಮಿ ಗ್ಯಾರಂಟಿ ಯೋಜನೆಯ ಅಧ್ಯಕ್ಷ ಸೂರ್ಯಕಾಂತ ಕುಲಕರ್ಣಿ, ಪ್ರಕಾಶ ದೇಶಪಾಂಡೆ, ಚಂಬಣ್ಣ ಹೊಸಮನಿ, ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ರಾವುತ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾರ್ಗದರ್ಶನ ನೀಡಿದ ಪಿಐ ಎಲ್. ಎಚ್. ಗೌಂಡಿ ಅವರು ಮಾತನಾಡಿ, “ನಾವೂ ಗಣೇಶೋತ್ಸವವನ್ನು ಆಚರಿಸುತ್ತೇವೆ. ಅದರ ಜೊತೆಯಲ್ಲೇ ನಿಮ್ಮ ಸುರಕ್ಷತೆಯ ಜವಾಬ್ದಾರಿಯನ್ನೂ ನಿರ್ವಹಿಸುತ್ತೇವೆ. ಆದ್ದರಿಂದ ಗಣೇಶೋತ್ಸವ ಮಂಡಳಿಗಳು ಪೊಲೀಸರಿಗೆ ಸಹಕಾರ ನೀಡಬೇಕು. ಪೊಲೀಸ್ ಇಲಾಖೆ ವತಿಯಿಂದ ನಿಮಗೆ ಅಗತ್ಯವಿರುವ ಸಹಕಾರವನ್ನು ನೀಡುತ್ತೇವೆ,” ಎಂದು ಮನವಿ ಮಾಡಿದರು.
ಗಣೇಶಮೂರ್ತಿಯ ಮೆರವಣಿಗೆ ನಡೆಸುವ ಸಂದರ್ಭದಲ್ಲಿ ಗಾಡಿ ಅಥವಾ ರಥದ ಎತ್ತರವನ್ನು ಹೆಚ್ಚಾಗಿ ಇರಿಸಬಾರದು. ವಿದ್ಯುತ್ ತಂತಿಗಳಿಗೆ ಯಾವುದೇ ರೀತಿಯಲ್ಲಿ ಸ್ಪರ್ಶವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು, ಎಂದು ಅವರು ತಿಳಿಸಿದರು. ಗಣೇಶಮೂರ್ತಿಯ ಎದುರು ಇಡುವ ಸಮೈ ಅಥವಾ ದೀಪದ ಸಮೀಪದಲ್ಲಿ ಬಟ್ಟೆ ಹಾಗೂ ಇತರ ದಹನಶೀಲ ವಸ್ತುಗಳನ್ನು ಇಡಬಾರದು ಎಂದು ಕೂಡ ಅವರು ಸೂಚಿಸಿದರು.
ಗಣೇಶೋತ್ಸವ ಮಂಡಳಿಗಳು ತಮ್ಮ ಮಂಟಪದಲ್ಲಿ 24 ಗಂಟೆಯೂ ಒಬ್ಬ ಕಾರ್ಯಕರ್ತರು ಇರುವಂತೆ ವ್ಯವಸ್ಥೆ ಮಾಡಬೇಕು. ಬ್ಯಾಟರಿಯ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು, ಎಂದು ಪಿಐ ಗೌಂಡಿ ಅವರು ತಿಳಿಸಿದರು.
ಮೆರವಣಿಗೆಗಳನ್ನು ಎಂದಿನಂತೆ ರಾತ್ರಿ ತಡವಾಗಿ ಆರಂಭಿಸುವ ಬದಲು ಸಾಧ್ಯವಾದಷ್ಟು ಬೇಗ ಆರಂಭಿಸಬೇಕು. ಇದರಿಂದ ಸಾರ್ವಜನಿಕರ ನಿದ್ರೆಯ ಸಮಯಕ್ಕೂ ಮುನ್ನವೇ ಮೆರವಣಿಗೆಯನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ, ಎಂದು ಅವರು ಹೇಳಿದರು.
ನದಿ ತೀರದಲ್ಲಿ ಗಣೇಶಮೂರ್ತಿ ವಿಸರ್ಜನೆಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಯಾರಿಗೂ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿ ಮೆರವಣಿಗೆ ನಡೆಸಬೇಕು, ಎಂದು ಅವರು ಗಣೇಶೋತ್ಸವ ಮಂಡಳಿಗಳಿಗೆ ಮನವಿ ಮಾಡಿದರು.
“ಕಾನೂನನ್ನು ಪಾಲಿಸಿ ಹಾಗೂ ಕಾನೂನಿನ ಚೌಕಟ್ಟಿನಲ್ಲಿಯೇ ಗಣೇಶೋತ್ಸವವನ್ನು ಆಚರಿಸಿ. ಎಲ್ಲರೂ ಒಗ್ಗಟ್ಟಿನಿಂದ ಶಾಂತಿಯುತವಾಗಿ ಹಾಗೂ ಸೌಹಾರ್ದತೆಯಿಂದ ಗಣೇಶೋತ್ಸವವನ್ನು ಆಚರಿಸಬೇಕು,” ಎಂದು ಪಿಐ ಗೌಂಡಿ ಅವರು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಗಣೇಶೋತ್ಸವ ಮಹಾಮಂಡಳದ ಅಧ್ಯಕ್ಷ ಪಂಡಿತ ಓಗಲೆ, ಲಕ್ಷ್ಮಣ ಮಾದಾರ, ಸಂಜಯ ಕುಬಲ್, ಪ್ರಕಾಶ ದೇಶಪಾಂಡೆ, ವಿವೇಕ ಗಿರಿ, ಸೂರ್ಯಕಾಂತ ಕುಲಕರ್ಣಿ, ಪ್ರವೀಣ ಬರ್ಗಾಲೆ, ಶಿವಾ ಮಯೇಕರ್, ರವಿ ಕಾಡಗಿ, ಕಿರಣ ಅಷ್ಟೇಕರ್ ಸೇರಿದಂತೆ ಹಲವರು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.
ಈ ಸಂದರ್ಭದಲ್ಲಿ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು ಡಾಲ್ಬಿ ಬದಲಾಗಿ ಒಂದು ಬೇಸ್ ಹಾಗೂ ಒಂದು ಸ್ಪೀಕರ್ಗೆ ಅನುಮತಿ ನೀಡಬೇಕು, ಎಂದು ಮನವಿ ಮಾಡಿದರು.
ಅದೇ ರೀತಿ ಶಾಂತಿ ಕಾಪಾಡಿಕೊಂಡು ಹಾಗೂ ಎಲ್ಲ ಧರ್ಮಗಳ ನಡುವೆ ಸೌಹಾರ್ದತೆ ಮತ್ತು ಸಹೋದರತ್ವವನ್ನು ಖಾಯಂ ಗೊಳಿಸಿ ಹಬ್ಬವನ್ನು ಆಚರಿಸಬೇಕು, ಎಂದು ನಿವೃತ್ತ ಶಿಕ್ಷಕ ಸಲೀಂ ಕಿತ್ತೂರು ಹಾಗೂ ಗುಡ್ಡು ಟೆಕ್ಕಡಿ ಅವರು ಮನವಿ ಮಾಡಿದರು.
ಗಣೇಶೋತ್ಸವ ಮಂಡಳಿಗಳಿಗೆ ಅನುಮತಿ ಪಡೆಯಲು ವಿವಿಧ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗದಂತೆ ‘ಏಕ ಕಿಟಕಿ ಯೋಜನೆ’ (ಒನ್ ವಿಂಡೋ ಸಿಸ್ಟಂ) ಜಾರಿಗೆ ತರಬೇಕು, ಎಂಬ ಬೇಡಿಕೆಯೂ ಸಭೆಯಲ್ಲಿ ಕೇಳಿಬಂದಿತು.
ಸಭೆಗೆ ಖಾನಾಪುರ ನಗರ, ಉಪನಗರ ಹಾಗೂ ಗ್ರಾಮೀಣ ಪ್ರದೇಶಗಳ ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.



