आयआयएसईआर पुणे व लोकमान्य संस्थेतर्फे खानापुरात दोन दिवसीय शिक्षक विकास कार्यशाळा, पत्रकार परिषदेत माहिती.
खानापूर : इंडियन इन्स्टिट्यूट ऑफ सायन्स एज्युकेशन अँड रिसर्च (IISER), पुणे, लोकमान्य मल्टिपर्पज को-ऑपरेटिव्ह सोसायटी लिमिटेड आणि लोकमान्य एज्युकेशन सोसायटी, बेळगाव यांच्या संयुक्त विद्यमाने व लोकमान्य संस्थेचे सर्वेसर्वा किरण ठाकूर यांचे मार्गदर्शन व अध्यक्षखाली ‘iRISE – Inspiring India in Research, Innovation and STEM Education’ या उपक्रमांतर्गत दोन दिवसीय शिक्षक विकास कार्यशाळेचे आयोजन करण्यात आले असल्याची माहिती लोकमान्य एज्युकेशन सोसायटीचे शिक्षण समन्वयक डॉ. दत्तात्रय एन मिसाळे, सचिव श्री. सत्यव्रत व्ही. नाईक, आणि व्ही. वाय. चव्हाण पॉलिटेक्निकचे प्राचार्य डॉ. शिरीष एम. केरूर यांनी मंगळवारी 25 ऑगस्ट रोजी बोलाविलेल्या पत्रकार परिषदेत दिली. यावेळी संस्थेचे संचालक विवेक गिरी व प्रकाश चव्हाण उपस्थित होते. शिक्षक व शिक्षण क्षेत्राशी संबंधित मान्यवरांनी या कार्यशाळेस उपस्थित राहावेत, असे आवाहन यावेळी करण्यात आले.
पुढे माहिती देताना डॉक्टर दत्तात्रय एन मिसाळे म्हणाले, ही कार्यशाळा शुक्रवार दिनांक 28 व शनिवार दिनांक 29 ऑगस्ट 2026 रोजी सकाळी 10 ते दुपारी 12 या वेळेत खानापूर येथील लोकमान्य एज्युकेशन सोसायटीच्या व्ही. वाय. चव्हाण पॉलिटेक्निक महाविद्यालय, लोकमान्य भवन, येथे होणार आहे. कार्यशाळेचे उद्घाटन शुक्रवारी, 28 ऑगस्ट रोजी सकाळी 10 वाजता होणार आहे.
कार्यशाळेच्या उद्घाटन समारंभास भारतीय अंतराळ शास्त्रज्ञ व अभियंता (सेवानिवृत्त) तथा इस्रोचे ग्रुप डायरेक्टर (NDT & LPSC) श्री. विष्णुपंत एन. मिसाळे प्रमुख पाहुणे म्हणून उपस्थित राहणार आहेत. खानापूर येथील ज्ञानवर्धिनी प्रतिष्ठानचे अध्यक्ष पीटर डिसूझा, ब्लॉक एज्युकेशन ऑफिसर श्री. एम. जी. हत्ती, iRISE IISER पुणेचे प्रोजेक्ट मॅनेजर (शाळा) श्री. नितीन तिवाणे, रिसोर्स पर्सन प्रज्ञा पुजारी व भारत टोम्बारे हे सन्माननीय अतिथी म्हणून उपस्थित राहतील.
कार्यक्रमास लोकमान्य संस्थेचे संस्थापक अध्यक्ष व ‘तरुण भारत’चे अॅडव्हायजरी एडिटर डॉ. किरण बी. ठाकूर, अध्यक्ष श्री. पंढरी पी. परब, तसेच लोकमान्य शिक्षण संस्थेचे पदाधिकारी, संचालक व विविध क्षेत्रातील मान्यवर उपस्थित राहणार आहेत.
या दोन दिवसीय कार्यशाळेसंदर्भात तालुक्यातील 71 हायस्कूल ना भेट देण्यात आली असून शाळेतील प्रत्येकी दोन शिक्षकांची प्रशिक्षणासाठी निवड करण्यात आली आहे. असे एकूण 71 शाळेतील विज्ञान व गणित या दोन शिक्षकांची निवड करण्यात आली आहे. कार्यशाळेत प्रत्येकी दोन प्रमाणे 142 शिक्षकांना आमंत्रित करण्यात आले आहे. त्यामध्ये विज्ञान व गणित शिक्षकांना संशोधन, नवोपक्रम आणि STEM शिक्षणाच्या माध्यमातून विद्यार्थ्यांमध्ये वैज्ञानिक दृष्टिकोन व सर्जनशीलता विकसित करण्यासाठी मार्गदर्शन करण्यात येणार आहे. प्रशिक्षणानंतर यामधील 30 ते 40 शिक्षकांची उच्चस्तरीय प्रशिक्षणासाठी निवड केली जाणार आहे. त्यानंतर त्यांना मास्टर ट्रेनर म्हणून प्रॅक्टिकल ट्रेनिंगसाठी कर्नाटक व महाराष्ट्रातील विविध शाळेमध्ये प्रशिक्षण देण्यात येणार आहे. त्यामुळे शिक्षकांच्या अध्यापन कौशल्याला आधुनिक तंत्रज्ञानाची जोड देण्याच्या दृष्टीने ही कार्यशाळा महत्त्वपूर्ण ठरणार आहे.
IISER पुणेच्या iRISE उपक्रमातून विज्ञान, संशोधन व नवकल्पनांना चालना..
पुणे : इंडियन इन्स्टिट्यूट ऑफ सायन्स एज्युकेशन अँड रिसर्च (IISER), पुणे ही मूलभूत विज्ञानातील उच्च दर्जाचे संशोधन आणि अध्यापनासाठी समर्पित असलेली देशातील अग्रगण्य संस्था आहे. संस्थेची स्थापना 2006 मध्ये तत्कालीन मानव संसाधन विकास मंत्रालयाने केली. 2012 मध्ये संसदेच्या कायद्याद्वारे IISER पुणेला ‘राष्ट्रीय महत्त्वाची संस्था’ (Institute of National Importance) हा दर्जा प्रदान करण्यात आला.
विज्ञान शिक्षणाच्या क्षेत्रातील एक वैशिष्ट्यपूर्ण उपक्रम म्हणून IISER पुणे अध्यापन आणि संशोधन यांचे एकात्मिक स्वरूप विकसित करण्यावर भर देते. अत्याधुनिक संशोधन आणि गुणवत्तापूर्ण शिक्षणाच्या माध्यमातून विद्यार्थ्यांमध्ये वैज्ञानिक दृष्टिकोन, कुतूहल आणि सर्जनशीलता वाढविणे हे संस्थेचे प्रमुख उद्दिष्ट आहे.
iRISE उपक्रमातून संशोधन व नवकल्पनांना प्रोत्साहन
‘Inspiring India in Research, Innovation and STEM Education’ (iRISE) हा विज्ञान आणि तंत्रज्ञान विभाग (DST), IISER पुणे, ब्रिटिश कौन्सिल, रॉयल सोसायटी ऑफ केमिस्ट्री आणि टाटा टेक्नॉलॉजीज यांच्या संयुक्त सहभागातून राबविला जाणारा महत्त्वपूर्ण उपक्रम आहे.
भारतामध्ये शाळा आणि विद्यापीठांमध्ये संशोधन व नाविन्यपूर्णतेला चालना देणारी सक्षम परिसंस्था निर्माण करण्याच्या उद्देशाने हा कार्यक्रम राबविला जात आहे. DSTच्या ‘INSPIRE’ आणि ‘INSPIRE Awards-MANAK’ या उपक्रमांना अधिक बळ देण्याचे काम iRISEच्या माध्यमातून केले जाते.
‘MANAK’ अर्थात ‘Million Minds Augmenting National Aspirations and Knowledge’ या उपक्रमाचा उद्देश विद्यार्थ्यांमध्ये सर्जनशीलता आणि नाविन्यपूर्ण विचारांची संस्कृती रुजविणे हा आहे. विज्ञान तसेच सामाजिक उपयोगांवर आधारित लाखो मूळ कल्पना व नवकल्पना विद्यार्थ्यांकडून विकसित व्हाव्यात, यासाठी या उपक्रमातून प्रोत्साहन दिले जाते.
शिक्षक विकासावर विशेष भर…
iRISE कार्यक्रमाचे शिक्षक विकास विभाग (Teacher Development Strand) विशेष महत्त्वाचा असून, शिक्षकांना विद्यार्थीकेंद्रित अध्यापन पद्धती समजून घेण्यास आणि वर्गामध्ये तिची प्रभावी अंमलबजावणी करण्यास सक्षम करण्यावर भर दिला जातो.
यासोबतच ‘INSPIRE-MANAK’ कार्यक्रमाबाबत शिक्षकांमध्ये आणि विद्यार्थ्यांमध्ये जनजागृती निर्माण करणे, वैज्ञानिक दृष्टिकोन विकसित करणे तसेच सर्जनशीलता व नवकल्पनांना प्रोत्साहन देणे ही या विभागाची प्रमुख उद्दिष्टे आहेत.
iRISE कार्यक्रमांतर्गत शिक्षक विकास विभाग, प्रारंभिक टप्प्यातील संशोधक विभाग (Early Career Researchers Strand), Thought Leadership Forum आणि CXO Forum असे चार प्रमुख विभाग कार्यरत आहेत. उद्योग, शिक्षण आणि संशोधन क्षेत्रातील विविध घटकांना एकत्र आणून भारतातील संशोधन व नवकल्पनांना अधिक बळकटी देण्याचे काम या माध्यमातून केले जात आहे.
एकूणच, IISER पुणेच्या iRISE उपक्रमामुळे शिक्षक, विद्यार्थी, संशोधक आणि उद्योग क्षेत्र यांच्यातील समन्वय वाढत असून, भारतात संशोधन, नवकल्पना आणि STEM शिक्षणाची मजबूत पायाभरणी करण्यास मदत होत आहे.
ಐಐಎಸ್ಇಆರ್ ಪುಣೆ ಹಾಗೂ ಲೋಕಮಾನ್ಯ ಸಂಸ್ಥೆಯ ಸಂಯುಕ್ತ ಆಶ್ರಯದಡಿ ಖಾನಾಪುರದಲ್ಲಿ ಎರಡು ದಿನಗಳ ಶಿಕ್ಷಕರಿಗೆ ಅಭಿವೃದ್ಧಿ ಕಾರ್ಯಾಗಾರ ತರಬೇತಿ.
ಖಾನಾಪುರ : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ (IISER), ಪುಣೆ, ಮತ್ತು ಲೋಕಮಾನ್ಯ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಹಾಗೂ ಲೋಕಮಾನ್ಯ ಎಜುಕೇಶನ್ ಸೊಸೈಟಿ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಹಾಗೂ ಲೋಕಮಾನ್ಯ ಸಂಸ್ಥೆಯ ಸರ್ವಸ್ವರಾದ ಕಿರಣ ಠಾಕೂರ್ ಅವರ ಮಾರ್ಗದರ್ಶನ ಮತ್ತು ಅಧ್ಯಕ್ಷತೆಯಲ್ಲಿ ‘iRISE – Inspiring India in Research, Innovation and STEM Education’ ಎಂಬ ಉಪಕ್ರಮದಡಿ ಎರಡು ದಿನಗಳ ಶಿಕ್ಷಕರ ಅಭಿವೃದ್ಧಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಲೋಕಮಾನ್ಯ ಎಜುಕೇಶನ್ ಸೊಸೈಟಿಯ ಶಿಕ್ಷಣ ಸಂಯೋಜಕ ಡಾ. ದತ್ತಾತ್ರೇಯ ಎನ್. ಮಿಸಾಳೆ, ಕಾರ್ಯದರ್ಶಿ ಶ್ರೀ ಸತ್ಯವ್ರತ ವಿ. ನಾಯಕ್ ಹಾಗೂ ವಿ. ವೈ. ಚವಾಣ್ ಪಾಲಿಟೆಕ್ನಿಕ್ನ ಪ್ರಾಚಾರ್ಯ ಡಾ. ಶಿರೀಷ್ ಎಂ. ಕೇರುರ್ ಅವರು ಮಂಗಳವಾರ, ಆಗಸ್ಟ್ 25ರಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕರಾದ ವಿವೇಕ್ ಗಿರಿ ಹಾಗೂ ಪ್ರಕಾಶ್ ಚವಾಣ್ ಉಪಸ್ಥಿತರಿದ್ದರು. ಶಿಕ್ಷಕರು ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಗಣ್ಯರು ಈ ಕಾರ್ಯಾಗಾರದಲ್ಲಿ ಭಾಗವಹಿಸಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಲಾಯಿತು.
ಮುಂದೆ ಮಾಹಿತಿ ನೀಡಿದ ಡಾ. ದತ್ತಾತ್ರೇಯ ಎನ್. ಮಿಸಾಳೆ ಅವರು, ಈ ಕಾರ್ಯಾಗಾರವು ಶುಕ್ರವಾರ, ಆಗಸ್ಟ್ 28 ಹಾಗೂ ಶನಿವಾರ, ಆಗಸ್ಟ್ 29, 2026ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ಖಾನಾಪುರದ ಲೋಕಮಾನ್ಯ ಎಜುಕೇಶನ್ ಸೊಸೈಟಿಯ ವಿ. ವೈ. ಚವಾಣ್ ಪಾಲಿಟೆಕ್ನಿಕ್ ಕಾಲೇಜು, ಲೋಕಮಾನ್ಯ ಭವನದಲ್ಲಿ ನಡೆಯಲಿದೆ ಎಂದು ತಿಳಿಸಿದರು. ಕಾರ್ಯಾಗಾರದ ಉದ್ಘಾಟನೆ ಶುಕ್ರವಾರ, ಆಗಸ್ಟ್ 28ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಕಾರ್ಯಾಗಾರದ ಉದ್ಘಾಟನಾ ಸಮಾರಂಭಕ್ಕೆ ಭಾರತೀಯ ಬಾಹ್ಯಾಕಾಶ ವಿಜ್ಞಾನಿ ಹಾಗೂ ಇಂಜಿನಿಯರ್ (ನಿವೃತ್ತ), ಇಸ್ರೋ ಸಂಸ್ಥೆಯ ಗ್ರೂಪ್ ಡೈರೆಕ್ಟರ್ (NDT & LPSC) ಶ್ರೀ ವಿಷ್ಣುಪಂತ್ ಎನ್. ಮಿಸಾಳೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಖಾನಾಪುರದ ಜ್ಞಾನವರ್ಧಿನಿ ಪ್ರತಿಷ್ಠಾನದ ಅಧ್ಯಕ್ಷ ಪೀಟರ್ ಡಿಸೋಜಾ, ಬ್ಲಾಕ್ ಎಜುಕೇಶನ್ ಆಫೀಸರ್ ಶ್ರೀ ಎಂ. ಜಿ. ಹತ್ತಿ, iRISE IISER ಪುಣೆಯ ಪ್ರಾಜೆಕ್ಟ್ ಮ್ಯಾನೇಜರ್ (ಶಾಲಾ ವಿಭಾಗ) ಶ್ರೀ ನಿತಿನ್ ತಿವಾಣೆ, ಸಂಪನ್ಮೂಲ ವ್ಯಕ್ತಿಗಳಾದ ಪ್ರಜ್ಞಾ ಪೂಜಾರಿ ಹಾಗೂ ಭರತ್ ತೋಂಬರೆ ಅವರು ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ಕಾರ್ಯಕ್ರಮದಲ್ಲಿ ಲೋಕಮಾನ್ಯ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ‘ತರುಣ ಭಾರತ’ದ ಅಡ್ವೈಸರಿ ಎಡಿಟರ್ ಡಾ. ಕಿರಣ ಬಿ. ಠಾಕೂರ್, ಅಧ್ಯಕ್ಷ ಶ್ರೀ ಪಂಢರಿ ಪಿ. ಪರಬ್, ಹಾಗೆಯೇ ಲೋಕಮಾನ್ಯ ಶಿಕ್ಷಣ ಸಂಸ್ಥೆಯ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿರಲಿದ್ದಾರೆ.
ಈ ಎರಡು ದಿನಗಳ ಕಾರ್ಯಾಗಾರದ ಹಿನ್ನೆಲೆಯಲ್ಲಿ ತಾಲೂಕಿನ 71 ಪ್ರೌಢಶಾಲೆಗಳಿಗೆ ಭೇಟಿ ನೀಡಿ, ಪ್ರತಿ ಶಾಲೆಯಿಂದ ತಲಾ ಇಬ್ಬರು ಶಿಕ್ಷಕರನ್ನು ತರಬೇತಿಗಾಗಿ ಆಯ್ಕೆ ಮಾಡಲಾಗಿದೆ. ಒಟ್ಟು 71 ಶಾಲೆಗಳಿಂದ ವಿಜ್ಞಾನ ಮತ್ತು ಗಣಿತ ವಿಷಯಗಳ ತಲಾ ಒಬ್ಬರಂತೆ ಇಬ್ಬರು ಶಿಕ್ಷಕರನ್ನು ಆಯ್ಕೆ ಮಾಡಲಾಗಿದ್ದು. ಈ ಮೂಲಕ ಒಟ್ಟು 142 ಶಿಕ್ಷಕರನ್ನು ಕಾರ್ಯಾಗಾರಕ್ಕೆ ಆಹ್ವಾನಿಸಲಾಗಿದೆ.
ಕಾರ್ಯಾಗಾರದಲ್ಲಿ ವಿಜ್ಞಾನ ಮತ್ತು ಗಣಿತ ಶಿಕ್ಷಕರಿಗೆ ಸಂಶೋಧನೆ, ನವೀನತೆ ಹಾಗೂ STEM ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಸೃಜನಶೀಲತೆಯನ್ನು ಬೆಳೆಸುವ ಕುರಿತು ಮಾರ್ಗದರ್ಶನ ನೀಡಲಾಗುವುದು. ತರಬೇತಿಯ ನಂತರ ಇವರಲ್ಲಿ 30ರಿಂದ 40 ಶಿಕ್ಷಕರನ್ನು ಉನ್ನತ ಮಟ್ಟದ ತರಬೇತಿಗಾಗಿ ಆಯ್ಕೆ ಮಾಡಲಾಗುವುದು. ನಂತರ ಅವರಿಗೆ ಮಾಸ್ಟರ್ ಟ್ರೈನರ್ಗಳಾಗಿ ಪ್ರಾಯೋಗಿಕ ತರಬೇತಿ ನೀಡಿ, ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧ ಶಾಲೆಗಳಲ್ಲಿ ತರಬೇತಿ ನೀಡುವ ಅವಕಾಶ ಕಲ್ಪಿಸಲಾಗುವುದು. ಹೀಗಾಗಿ ಶಿಕ್ಷಕರ ಬೋಧನಾ ಕೌಶಲ್ಯಕ್ಕೆ ಆಧುನಿಕ ತಂತ್ರಜ್ಞಾನದ ಸಂಯೋಜನೆ ನೀಡುವ ದೃಷ್ಟಿಯಿಂದ ಈ ಕಾರ್ಯಾಗಾರ ಮಹತ್ವದ್ದಾಗಲಿದೆ.
IISER ಪುಣೆಯ iRISE ಉಪಕ್ರಮದಿಂದ ವಿಜ್ಞಾನ, ಸಂಶೋಧನೆ ಹಾಗೂ ನವೀನ ಆವಿಷ್ಕಾರಗಳಿಗೆ ಉತ್ತೇಜನ
ಪುಣೆ : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ (IISER), ಪುಣೆ, ಮೂಲಭೂತ ವಿಜ್ಞಾನ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಂಶೋಧನೆ ಮತ್ತು ಬೋಧನೆಗೆ ಸಮರ್ಪಿತವಾಗಿರುವ ದೇಶದ ಪ್ರಮುಖ ಸಂಸ್ಥೆಯಾಗಿದೆ. ಸಂಸ್ಥೆಯನ್ನು 2006ರಲ್ಲಿ ಅಂದಿನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಸ್ಥಾಪಿಸಿತು. 2012ರಲ್ಲಿ ಸಂಸತ್ತಿನ ಕಾಯ್ದೆಯ ಮೂಲಕ IISER ಪುಣೆಗೆ ‘ರಾಷ್ಟ್ರೀಯ ಮಹತ್ವದ ಸಂಸ್ಥೆ’ (Institute of National Importance) ಎಂಬ ಸ್ಥಾನಮಾನ ನೀಡಲಾಯಿತು.
ವಿಜ್ಞಾನ ಶಿಕ್ಷಣ ಕ್ಷೇತ್ರದ ವಿಶಿಷ್ಟ ಉಪಕ್ರಮವಾಗಿ IISER ಪುಣೆ ಬೋಧನೆ ಮತ್ತು ಸಂಶೋಧನೆಯ ಸಮಗ್ರ ಸ್ವರೂಪವನ್ನು ಅಭಿವೃದ್ಧಿಪಡಿಸುವತ್ತ ಒತ್ತು ನೀಡುತ್ತದೆ. ಅತ್ಯಾಧುನಿಕ ಸಂಶೋಧನೆ ಹಾಗೂ ಗುಣಮಟ್ಟದ ಶಿಕ್ಷಣದ ಮೂಲಕ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ, ಕುತೂಹಲ ಮತ್ತು ಸೃಜನಶೀಲತೆಯನ್ನು ಬೆಳೆಸುವುದು ಸಂಸ್ಥೆಯ ಪ್ರಮುಖ ಉದ್ದೇಶವಾಗಿದೆ.
iRISE ಉಪಕ್ರಮದ ಮೂಲಕ ಸಂಶೋಧನೆ ಮತ್ತು ನವೀನ ಆವಿಷ್ಕಾರಗಳಿಗೆ ಪ್ರೋತ್ಸಾಹ
‘Inspiring India in Research, Innovation and STEM Education’ (iRISE) ಎಂಬುದು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST), IISER ಪುಣೆ, ಬ್ರಿಟಿಷ್ ಕೌನ್ಸಿಲ್, ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿ ಹಾಗೂ ಟಾಟಾ ಟೆಕ್ನಾಲಜೀಸ್ ಇವರ ಸಂಯುಕ್ತ ಸಹಭಾಗಿತ್ವದಲ್ಲಿ ಜಾರಿಗೊಳಿಸಲಾಗುತ್ತಿರುವ ಮಹತ್ವದ ಉಪಕ್ರಮವಾಗಿದೆ.
ಭಾರತದಲ್ಲಿ ಶಾಲೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಮತ್ತು ನವೀನತೆಯನ್ನು ಉತ್ತೇಜಿಸುವ ಸಶಕ್ತ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತಿದೆ. DSTಯ ‘INSPIRE’ ಮತ್ತು ‘INSPIRE Awards-MANAK’ ಉಪಕ್ರಮಗಳಿಗೆ iRISE ಮೂಲಕ ಮತ್ತಷ್ಟು ಬಲ ನೀಡಲಾಗುತ್ತಿದೆ.
‘MANAK’ ಎಂದರೆ ‘Million Minds Augmenting National Aspirations and Knowledge’. ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಹಾಗೂ ನವೀನ ಚಿಂತನೆಯ ಸಂಸ್ಕೃತಿಯನ್ನು ಬೆಳೆಸುವುದು ಈ ಉಪಕ್ರಮದ ಉದ್ದೇಶವಾಗಿದೆ. ವಿಜ್ಞಾನ ಹಾಗೂ ಸಾಮಾಜಿಕ ಉಪಯೋಗಗಳಿಗೆ ಸಂಬಂಧಿಸಿದಂತೆ ಲಕ್ಷಾಂತರ ಮೂಲ ಕಲ್ಪನೆಗಳು ಮತ್ತು ನವೀನ ಆವಿಷ್ಕಾರಗಳನ್ನು ವಿದ್ಯಾರ್ಥಿಗಳಿಂದ ಅಭಿವೃದ್ಧಿಪಡಿಸಲು ಈ ಉಪಕ್ರಮದ ಮೂಲಕ ಪ್ರೋತ್ಸಾಹ ನೀಡಲಾಗುತ್ತಿದೆ.
ಶಿಕ್ಷಕರ ಅಭಿವೃದ್ಧಿಗೆ ವಿಶೇಷ ಒತ್ತು…
iRISE ಕಾರ್ಯಕ್ರಮದ Teacher Development Strand (ಶಿಕ್ಷಕರ ಅಭಿವೃದ್ಧಿ ವಿಭಾಗ)ಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಶಿಕ್ಷಕರು ವಿದ್ಯಾರ್ಥಿಕೇಂದ್ರಿತ ಬೋಧನಾ ವಿಧಾನಗಳನ್ನು ಅರ್ಥಮಾಡಿಕೊಂಡು, ಅವುಗಳನ್ನು ತರಗತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಮರ್ಥರಾಗುವಂತೆ ಮಾಡುವುದಕ್ಕೆ ಈ ವಿಭಾಗದಲ್ಲಿ ಒತ್ತು ನೀಡಲಾಗುತ್ತದೆ.
ಇದರ ಜೊತೆಗೆ ‘INSPIRE-MANAK’ ಕಾರ್ಯಕ್ರಮದ ಕುರಿತು ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವುದು, ವೈಜ್ಞಾನಿಕ ಮನೋಭಾವ ಬೆಳೆಸುವುದು ಹಾಗೂ ಸೃಜನಶೀಲತೆ ಮತ್ತು ನವೀನ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡುವುದು ಈ ವಿಭಾಗದ ಪ್ರಮುಖ ಉದ್ದೇಶಗಳಾಗಿವೆ.
iRISE ಕಾರ್ಯಕ್ರಮದಡಿಯಲ್ಲಿ Teacher Development Strand, Early Career Researchers Strand, Thought Leadership Forum ಹಾಗೂ CXO Forum ಎಂಬ ನಾಲ್ಕು ಪ್ರಮುಖ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಕೈಗಾರಿಕೆ, ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರಗಳ ವಿವಿಧ ಘಟಕಗಳನ್ನು ಒಂದೇ ವೇದಿಕೆಗೆ ತಂದು ಭಾರತದಲ್ಲಿನ ಸಂಶೋಧನೆ ಮತ್ತು ನವೀನ ಆವಿಷ್ಕಾರಗಳಿಗೆ ಮತ್ತಷ್ಟು ಬಲ ನೀಡುವ ಕಾರ್ಯವನ್ನು ಈ ಮೂಲಕ ಮಾಡಲಾಗುತ್ತಿದೆ.
ಒಟ್ಟಾರೆ, IISER ಪುಣೆಯ iRISE ಉಪಕ್ರಮದಿಂದ ಶಿಕ್ಷಕರು, ವಿದ್ಯಾರ್ಥಿಗಳು, ಸಂಶೋಧಕರು ಮತ್ತು ಕೈಗಾರಿಕಾ ಕ್ಷೇತ್ರಗಳ ನಡುವಿನ ಸಮನ್ವಯ ಹೆಚ್ಚುತ್ತಿದ್ದು, ಭಾರತದಲ್ಲಿ ಸಂಶೋಧನೆ, ನವೀನ ಆವಿಷ್ಕಾರ ಹಾಗೂ STEM ಶಿಕ್ಷಣಕ್ಕೆ ಬಲವಾದ ಅಡಿಪಾಯ ನಿರ್ಮಿಸಲು ಸಹಾಯವಾಗುತ್ತಿದೆ.

