दिल्लीतील अपघातात बेळगाव दक्षिणचे आमदार अभय पाटील जखमी; सर्वांची प्रकृती स्थिर.
दिल्ली : दिल्लीतील आयटीओ परिसरात दोन वाहनांची धडक होऊन झालेल्या अपघातात बेळगाव दक्षिणचे आमदार अभय पाटील आणि दिल्लीतील किरारी विधानसभा मतदारसंघाचे आमदार अनिल झा यांच्यासह काही जण किरकोळ जखमी झाले. अपघातानंतर सर्व जखमींना तातडीने लोकनायक जयप्रकाश (LNJP) रुग्णालयात दाखल करण्यात आले असून, सर्वांची प्रकृती स्थिर असल्याची माहिती दिल्ली पोलिसांनी दिली आहे.
दिल्ली पोलिसांनी दिलेल्या प्राथमिक माहितीनुसार, सोमवारी रात्री सुमारे 9.30 वाजता आय.पी. इस्टेट पोलीस ठाण्याच्या हद्दीत रस्ते अपघाताची PCR कॉलद्वारे माहिती मिळाली. पोलिस घटनास्थळी पोहोचले असता इनोव्हा आणि स्विफ्ट या दोन वाहनांचा अपघात झाल्याचे आढळून आले.
लक्ष्मी नगरहून आयटीओच्या दिशेने जात असलेली स्विफ्ट कार आशुतोष पांडे (वय 32) हे चालवत होते. त्यांच्या सोबत त्यांची पत्नी आणि दोन अल्पवयीन मुले होती. PWD कार्यालयाजवळ स्विफ्ट कारने प्रथम दुभाजकाला धडक दिली. त्यानंतर वाहन रेलिंग ओलांडून आयटीओहून लक्ष्मी नगरच्या दिशेने येणाऱ्या इनोव्हा कारला धडकले.
या इनोव्हा कारमध्ये किरारी विधानसभा मतदारसंघाचे विद्यमान आमदार अनिल झा आणि बेळगाव दक्षिणचे आमदार अभय पाटील प्रवास करत होते. धडकेत दोन्ही वाहनांतील प्रवाशांना किरकोळ दुखापत झाली.
अपघाताची माहिती मिळताच अग्निशमन दलाचे पथकही घटनास्थळी दाखल झाले. रस्त्यावर अडथळा निर्माण झालेली दोन्ही वाहने हटवून वाहतूक सुरळीत करण्यात आली. जखमींना उपचारासाठी LNJP रुग्णालयात हलविण्यात आले.
दरम्यान, अपघात नेमका कशामुळे झाला, याबाबत दिल्ली पोलिसांकडून पुढील चौकशी सुरू आहे. प्राथमिक चौकशीत स्विफ्ट कारने दुभाजकाला धडक दिल्यानंतर हा अपघात झाल्याचे समोर आले आहे. या घटनेत कोणतीही जीवितहानी झालेली नसून सर्व संबंधितांची प्रकृती स्थिर असल्याचे पोलिसांनी स्पष्ट केले आहे.
ದೆಹಲಿಯಲ್ಲಿ ಸಂಭವಿಸಿದ ಅಪಘಾತವೊಂದರಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲರಿಗೆ ಗಾಯ; ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಸ್ಪಷ್ಟನೆ.
ದೆಹಲಿ : ದೆಹಲಿಯ ಐಟಿಒ ಪ್ರದೇಶದಲ್ಲಿ ಎರಡು ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಹಾಗೂ ದೆಹಲಿಯ ಕಿರಾರಿ ವಿಧಾನಸಭಾ ಕ್ಷೇತ್ರದ ಶಾಸಕ ಅನಿಲ್ ಝಾ ಸೇರಿದಂತೆ ಕೆಲವರಿಗೆ ಸಣ್ಣಪುಟ್ಟ ಗಾಯ. ಅಪಘಾತದ ಬಳಿಕ ಗಾಯಾಳುಗಳನ್ನು ತಕ್ಷಣವೇ ಲೋಕನಾಯಕ ಜಯಪ್ರಕಾಶ (LNJP) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ದೆಹಲಿ ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿಯ ಪ್ರಕಾರ, ಸೋಮವಾರ ರಾತ್ರಿ ಸುಮಾರು 9.30ರ ವೇಳೆಗೆ ಐ.ಪಿ. ಎಸ್ಟೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಸ್ತೆ ಅಪಘಾತ ಸಂಭವಿಸಿರುವ ಕುರಿತು PCR ಕರೆ ಮೂಲಕ ಮಾಹಿತಿ ಲಭಿಸಿತು. ಮಾಹಿತಿ ದೊರೆತ ತಕ್ಷಣ ಪೊಲೀಸರು ಸ್ಥಳಕ್ಕೆ ತೆರಳಿದಾಗ ಇನೋವಾ ಮತ್ತು ಸ್ವಿಫ್ಟ್ ಎರಡು ವಾಹನಗಳ ನಡುವೆ ಅಪಘಾತ ಸಂಭವಿಸಿರುವುದು ಕಂಡುಬಂದಿದೆ.
ಲಕ್ಷ್ಮೀನಗರದಿಂದ ಐಟಿಒ ಕಡೆಗೆ ತೆರಳುತ್ತಿದ್ದ ಸ್ವಿಫ್ಟ್ ಕಾರನ್ನು ಆಶುತೋಷ್ ಪಾಂಡೆ (ವಯಸ್ಸು 32) ಚಲಾಯಿಸುತ್ತಿದ್ದರು. ಅವರೊಂದಿಗೆ ಅವರ ಪತ್ನಿ ಹಾಗೂ ಇಬ್ಬರು ಅಪ್ರಾಪ್ತ ಮಕ್ಕಳು ಪ್ರಯಾಣಿಸುತ್ತಿದ್ದರು. PWD ಕಚೇರಿ ಸಮೀಪ ಸ್ವಿಫ್ಟ್ ಕಾರು ಮೊದಲು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಕಾರು ರೇಲಿಂಗ್ ದಾಟಿ, ಐಟಿಒದಿಂದ ಲಕ್ಷ್ಮೀನಗರದ ಕಡೆಗೆ ಬರುತ್ತಿದ್ದ ಇನೋವಾ ಕಾರಿಗೆ ಡಿಕ್ಕಿ ಹೊಡೆದಿದೆ.
ಈ ಇನೋವಾ ಕಾರಿನಲ್ಲಿ ಕಿರಾರಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಅನಿಲ್ ಝಾ ಹಾಗೂ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಪ್ರಯಾಣಿಸುತ್ತಿದ್ದರು. ಎರಡು ವಾಹನಗಳ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಎರಡೂ ವಾಹನಗಳಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಅಪಘಾತದ ಮಾಹಿತಿ ದೊರೆತ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿಯೂ ಸ್ಥಳಕ್ಕೆ ಧಾವಿಸಿದರು. ರಸ್ತೆಯಲ್ಲಿ ಅಡ್ಡಿಯಾಗಿದ್ದ ಎರಡೂ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಲಾಯಿತು. ಗಾಯಗೊಂಡವರನ್ನು ಚಿಕಿತ್ಸೆಗಾಗಿ LNJP ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಇದ ನಡುವೆ, ಅಪಘಾತ ನಿಖರವಾಗಿ ಯಾವ ಕಾರಣದಿಂದ ಸಂಭವಿಸಿತು ಎಂಬುದರ ಕುರಿತು ದೆಹಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಸ್ವಿಫ್ಟ್ ಕಾರು ಮೊದಲು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ನಂತರ ಈ ಅಪಘಾತ ಸಂಭವಿಸಿದೆ ಎಂಬುದು ತಿಳಿದುಬಂದಿದೆ.
ಈ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಪಘಾತದಲ್ಲಿ ಗಾಯಗೊಂಡಿರುವ ಎಲ್ಲರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.



