हंडी भडंगनाथ मंदिराकडे जाणारा 3 किमी रस्ता खड्ड्यात; भाविकांचे हाल.
खानापूर : खानापूर तालुक्यातील प्रेक्षणीय व प्रसिद्ध पुण्यक्षेत्र म्हणून प्रसिद्ध असलेल्या हंडी भडंगनाथ (कुंभारवाड) मंदिराकडे जाणारा सुमारे 3 किलोमीटरचा रस्ता गेल्या अनेक वर्षांपासून पूर्णपणे खराब झाला आहे. रस्त्यावर ठिकठिकाणी मोठमोठे खड्डे पडल्याने या मार्गावरून दररोज शेकडो भाविकांना जीव मुठीत धरून प्रवास करावा लागत आहे.
रामनगर-धारवाड मार्गावरील कुंभार्डा गावापासून तीन किलोमीटर अंतरावरील डोंगरावर असलेल्या हंडी भडंगनाथ मठ या पुण्यक्षेत्राला भेट देण्यासाठी राज्याच्या विविध भागांतून भाविक दर्शनासाठी येतात. मात्र, खराब रस्त्यामुळे दुचाकी, कार, ट्रॅक्टरसह इतर वाहनचालकांना मोठ्या अडचणींचा सामना करावा लागत आहे. अनेक वाहनांचे अपघात होऊन वाहनधारकांचे नुकसान झाल्याचेही सांगण्यात येत आहे.
हा रस्ता डोंगराच्या मध्यभागातून उंचीवरील भागाकडे जात असल्याने चढावावर वाहन घसरल्यास मागून येणाऱ्या वाहनांना अपघाताचा धोका निर्माण झाला आहे. त्यामुळे या मार्गावर मोठी दुर्घटना घडण्यापूर्वी संबंधित लोकप्रतिनिधी व अधिकाऱ्यांनी तातडीने लक्ष घालून रस्त्याची दुरुस्ती करावी, अशी मागणी भाविक व नागरिकांतून होत आहे.
रस्त्याची तातडीने दुरुस्ती न केल्यास आंदोलन छेडण्यात येईल, असा इशारा अखिल कर्नाटक शेतकरी संघ, बंगळुरूच्या पदाधिकाऱ्यांनी दिला आहे. शेतकरी नेते किशोर मीठारी, रमेश वीरापूर, बिष्टप्पा सुंबळी, पास्कल सोझ, गोपाल अगसिमणी, सेबस्थिन सोझ, योगेश अरहळी, अशोक माटोळी, शिवलिंग चन्नापूर, संतोष कुकडोळी आदींनी रस्ता दुरुस्तीची मागणी केली आहे.
ಹಂಡಿ ಭಡಂಗನಾಥ ದೇವಸ್ಥಾನಕ್ಕೆ ತೆರಳುವ 3 ಕಿ.ಮೀ. ರಸ್ತೆ ಗುಂಡಿಗಳ ಸಾಮ್ರಾಜ್ಯ; ಭಕ್ತರ ಪರದಾಟ.
ಖಾನಾಪುರ : ಖಾನಾಪುರ ತಾಲೂಕಿನ ಪ್ರವಾಸಿ ತಾಣ ಹಾಗೂ ಪ್ರಸಿದ್ಧ ಪುಣ್ಯಕ್ಷೇತ್ರವಾಗಿರುವ ಹಂಡಿ ಭಡಗನಾಥ (ಕುಂಭಾರವಾಡ) ದೇವಸ್ಥಾನಕ್ಕೆ ತೆರಳುವ ಸುಮಾರು 3 ಕಿಲೋಮೀಟರ್ ಉದ್ದದ ರಸ್ತೆ ಕಳೆದ ಹಲವು ವರ್ಷಗಳಿಂದ ಸಂಪೂರ್ಣ ಹದಗೆಟ್ಟಿದೆ. ರಸ್ತೆಯುದ್ದಕ್ಕೂ ಅಲ್ಲಲ್ಲಿ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿರುವುದರಿಂದ ಈ ಮಾರ್ಗದಲ್ಲಿ ಪ್ರತಿದಿನ ನೂರಾರು ಭಕ್ತರು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ.
ರಾಮನಗರ–ಧಾರವಾಡ ಮಾರ್ಗದಲ್ಲಿರುವ ಕುಂಭಾರ್ಡಾ ಗ್ರಾಮದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಬೆಟ್ಟದ ಮೇಲಿರುವ ಹಂಡಿ ಭಡಂಗನಾಥ ಮಠವು ಪ್ರಸಿದ್ಧ ಪುಣ್ಯಕ್ಷೇತ್ರವಾಗಿದೆ. ಈ ಪುಣ್ಯಕ್ಷೇತ್ರಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಪ್ರತಿದಿನ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಆದರೆ, ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ದ್ವಿಚಕ್ರ ವಾಹನಗಳು, ಕಾರುಗಳು, ಟ್ರ್ಯಾಕ್ಟರ್ಗಳು ಸೇರಿದಂತೆ ಇತರ ವಾಹನಗಳ ಚಾಲಕರು ತೀವ್ರ ತೊಂದರೆ ಎದುರಿಸುವಂತಾಗಿದೆ. ಈ ರಸ್ತೆಯಲ್ಲಿ ಹಲವು ವಾಹನಗಳು ಅಪಘಾತಕ್ಕೀಡಾಗಿ ವಾಹನಗಳಿಗೆ ಹಾನಿಯಾಗಿರುವುದಾಗಿ ಕೂಡ ಸ್ಥಳೀಯರು ತಿಳಿಸಿದ್ದಾರೆ.
ಈ ರಸ್ತೆ ಬೆಟ್ಟದ ಮಧ್ಯಭಾಗದಿಂದ ಎತ್ತರದ ಪ್ರದೇಶದತ್ತ ಸಾಗುವುದರಿಂದ ಏರು ದಾರಿಯಲ್ಲಿ ವಾಹನಗಳು ಜಾರಿದರೆ, ಹಿಂದಿನಿಂದ ಬರುವ ವಾಹನಗಳಿಗೆ ಅಪಘಾತ ಸಂಭವಿಸುವ ಅಪಾಯ ಹೆಚ್ಚಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಯಾವುದೇ ದೊಡ್ಡ ಅನಾಹುತ ಸಂಭವಿಸುವ ಮುನ್ನ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ತಕ್ಷಣ ಗಮನಹರಿಸಿ ರಸ್ತೆಯನ್ನು ದುರಸ್ತಿಪಡಿಸಬೇಕು ಎಂದು ಭಕ್ತರು ಹಾಗೂ ನಾಗರಿಕರು ಆಗ್ರಹಿಸಿದ್ದಾರೆ.
ರಸ್ತೆಯನ್ನು ತಕ್ಷಣ ದುರಸ್ತಿಪಡಿಸದಿದ್ದರೆ ಹೋರಾಟ ನಡೆಸಲಾಗುವುದು ಎಂದು ಅಖಿಲ ಕರ್ನಾಟಕ ರೈತ ಸಂಘ, ಬೆಂಗಳೂರಿನ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ರೈತ ಮುಖಂಡರಾದ ಕಿಶೋರ್ ಮಿಠಾರಿ, ರಮೇಶ್ ವೀರಾಪುರ, ಬಿಷ್ಟಪ್ಪ ಸುಂಬಳಿ, ಪಾಸ್ಕಲ್ ಸೋಜ್, ಗೋಪಾಲ್ ಅಗಸಿಮಣಿ, ಸೆಬಾಸ್ಟಿಯನ್ ಸೋಜ್, ಯೋಗೇಶ್ ಅರಹಳಿ, ಅಶೋಕ್ ಮಾಟೋಳಿ, ಶಿವಲಿಂಗ ಚನ್ನಾಪುರ, ಸಂತೋಷ್ ಕುಕಡೋಳಿ ಸೇರಿದಂತೆ ಹಲವರು ರಸ್ತೆ ದುರಸ್ತಿಗೆ ಆಗ್ರಹಿಸಿದ್ದಾರೆ.



