केसरेकरांच्या पार्थिवावर आज रात्री 8.30 वाजता हेब्बाळ येथे अंत्यसंस्कार ; हल्ल्यातील आरोपीचे घर प्रशासनाकडून जमीनदोस्त.
खानापूर : खानापूर तालुक्यातील हेब्बाळ येथील मूळ रहिवासी असलेल्या दाम्पत्यावर सांगली जिल्ह्यातील कुपवाड एमआयडीसी परिसरातील विघ्नहर्ता शांती कॉलनी येथे 15 ऑगस्ट रोजी झालेल्या जीवघेण्या हल्ल्याला दुर्दैवी वळण मिळाले आहे. हातोडी व चाकूने करण्यात आलेल्या या हल्ल्यात गंभीर जखमी झालेले मोहन नागाप्पा केसरेकर यांचा उपचारादरम्यान मंगळवारी मृत्यू झाला. यापूर्वी या हल्ल्यात त्यांची पत्नी मनीषा मोहन केसरेकर (वय 37) यांचा मृत्यू झाला होता. त्यामुळे या घटनेत पती-पत्नी दोघांचाही दुर्दैवी अंत झाला आहे.

हल्ल्यानंतर मोहन केसरेकर यांच्यावर मिरज येथील सरकारी रुग्णालयातील अतिदक्षता विभागात उपचार सुरू होते. मात्र, डॉक्टरांच्या अथक प्रयत्नांनंतरही त्यांची मृत्यूशी सुरू असलेली झुंज अखेर अपयशी ठरली.
उत्तरीय तपासणीनंतर मोहन केसरेकर यांचा मृतदेह नातेवाईकांच्या ताब्यात देण्यात आला आहे. मृतदेह आज रात्री हेब्बाळ येथे आणण्यात येणार असून, रात्री सुमारे 8.30 वाजता अंत्यविधी करण्यात येणार असल्याची माहिती त्यांच्या नातेवाईकांनी दिली आहे. या घटनेमुळे हेब्बाळ गावावर शोककळा पसरली आहे.
आरोपीचे घर जेसीबीने जमीनदोस्त..
दरम्यान, या गंभीर प्रकरणातील आरोपीचे घर प्रशासनाने जेसीबीच्या साहाय्याने जमीनदोस्त केले आहे. त्यामुळे या कारवाईकडेही परिसराचे लक्ष लागले आहे.
फास्टट्रॅक कोर्टात खटला चालविण्याचे आश्वासन..
दरम्यान, पालकमंत्री चंद्रकांत दादा पाटील यांनी मृत मोहन नागाप्पा केसरेकर यांचे चुलत भाऊ श्रीधर केसरेकर यांच्याशी संपर्क साधून कुटुंबीयांना न्याय मिळवून देण्याचे आश्वासन दिले आहे. आरोपीविरोधात फास्टट्रॅक कोर्टामध्ये खटला चालविण्यात येणार असून, सहा महिने किंवा जास्तीत जास्त एका वर्षाच्या आत आरोपीला शिक्षा ठोठावली जाईल, असे पालकमंत्र्यांनी सांगितल्याची माहिती आहे.
तसेच मोहन केसरेकर यांच्या मुलगा आणि मुलीचे पालकत्व प्रशासन स्वीकारणार असल्याची ग्वाही पालकमंत्र्यांनी दिली आहे.
एकाच कुटुंबातील पती-पत्नीचा काही दिवसांच्या अंतराने झालेला दुर्दैवी मृत्यू आणि त्यांच्यामागे राहिलेली मुले यामुळे या घटनेने खानापूरसह संपूर्ण परिसर हळहळला आहे. आता या प्रकरणातील आरोपीला कठोरात कठोर शिक्षा मिळावी, अशी मागणी नातेवाईक आणि ग्रामस्थांकडून होत आहे.
ಕೇಸರೆಕರ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು ರಾತ್ರಿ 8.30 ಗಂಟೆಗೆ ಹೆಬ್ಬಾಳದಲ್ಲಿ; ಆಡಳಿತ ವತಿಯಿಂದ ಧ್ವಂಸ ಗೊಳಿಸಿದ ಆರೋಪಿ ಮನೆ.
ಖಾನಾಪುರ : ಖಾನಾಪುರ ತಾಲೂಕಿನ ಹೆಬ್ಬಾಳ ಗ್ರಾಮದ ಮೂಲ ನಿವಾಸಿಗಳಾದ ದಂಪತಿಯ ಮೇಲೆ ಸಾಂಗ್ಲಿ ಜಿಲ್ಲೆಯ ಕುಪವಾಡ ಎಂಐಡಿಸಿ ಪ್ರದೇಶದ ವಿಘ್ನಹರ್ತಾ ಶಾಂತಿ ಕಾಲನಿಯಲ್ಲಿ ಆಗಸ್ಟ್ 15ರಂದು ನಡೆದ ಮಾರಣಾಂತಿಕ ದಾಳಿಗೆ ದುರಂತ ತಿರುವು ದೊರೆತಿದೆ. ಸುತ್ತಿಗೆ ಮತ್ತು ಚಾಕುವಿನಿಂದ ನಡೆಸಲಾದ ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೋಹನ್ ನಾಗಪ್ಪ ಕೇಸರೆಕರ್ ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾರೆ. ಇದಕ್ಕೂ ಮೊದಲು ಇದೇ ದಾಳಿಯಲ್ಲಿ ಅವರ ಪತ್ನಿ ಮನಿಷಾ ಮೋಹನ್ ಕೇಸರೆಕರ್ (ವಯಸ್ಸು 37) ಮೃತಪಟ್ಟಿದ್ದರು. ಹೀಗಾಗಿ ಈ ಘಟನೆಯಲ್ಲಿ ಪತಿ-ಪತ್ನಿ ಇಬ್ಬರೂ ದುರಂತವಾಗಿ ಸಾವನ್ನಪ್ಪಿದ್ದಾರೆ.
ದಾಳಿಯ ನಂತರ ಮೋಹನ್ ಕೇಸರೆಕರ್ ಅವರಿಗೆ ಮಿರಜ್ನ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ವೈದ್ಯರ ಸತತ ಪ್ರಯತ್ನಗಳ ನಡುವೆಯೂ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಅವರ ಹೋರಾಟ ಕೊನೆಗೂ ವಿಫಲವಾಯಿತು.
ಮರಣೋತ್ತರ ಪರೀಕ್ಷೆಯ ನಂತರ ಮೋಹನ್ ಕೇಸರೆಕರ್ ಅವರ ಪಾರ್ಥಿವ ಶರೀರವನ್ನು ಸಂಬಂಧಿಕರ ವಶಕ್ಕೆ ನೀಡಲಾಗಿದೆ. ಪಾರ್ಥಿವ ಶರೀರವನ್ನು ಇಂದು ರಾತ್ರಿ ಹೆಬ್ಬಾಳಕ್ಕೆ ತರಲಾಗಲಿದ್ದು, ರಾತ್ರಿ ಸುಮಾರು 8.30 ಗಂಟೆಗೆ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.
ಈ ಘಟನೆಯಿಂದ ಹೆಬ್ಬಾಳ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಆರೋಪಿಯ ಮನೆ ಜೆಸಿಬಿಯಿಂದ ಧ್ವಂಸ..
ಇದ ನಡುವೆ, ಈ ಗಂಭೀರ ಪ್ರಕರಣದ ಆರೋಪಿಯ ಮನೆಯನ್ನು ಆಡಳಿತವು ಜೆಸಿಬಿ ಸಹಾಯದಿಂದ ಧ್ವಂಸಗೊಳಿಸಿದೆ. ಈ ಕ್ರಮದ ಬಗ್ಗೆಯೂ ಸುತ್ತಮುತ್ತಲಿನ ಪ್ರದೇಶದಲ್ಲಿ ತೀವ್ರ ಗಮನ ಹರಿದಿದೆ.
ಫಾಸ್ಟ್ಟ್ರ್ಯಾಕ್ ಕೋರ್ಟ್ನಲ್ಲಿ ವಿಚಾರಣೆ ನಡೆಸುವ ಭರವಸೆ..
ಇದೇ ವೇಳೆ, ಜಿಲ್ಲಾ ಉಸ್ತುವಾರಿ ಸಚಿವ ಚಂದ್ರಕಾಂತ ದಾದಾ ಪಾಟೀಲ್ ಅವರು ಮೃತ ಮೋಹನ್ ನಾಗಪ್ಪ ಕೇಸರೆಕರ್ ಅವರ ಸೋದರ ಸಂಬಂಧಿ ಶ್ರೀಧರ ಕೇಸರೆಕರ್ ಅವರನ್ನು ಸಂಪರ್ಕಿಸಿ, ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಆರೋಪಿಯ ವಿರುದ್ಧ ಫಾಸ್ಟ್ಟ್ರ್ಯಾಕ್ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಸಲಾಗುವುದು. ಆರು ತಿಂಗಳೊಳಗೆ ಅಥವಾ ಗರಿಷ್ಠ ಒಂದು ವರ್ಷದೊಳಗೆ ಆರೋಪಿಗೆ ಶಿಕ್ಷೆ ವಿಧಿಸಲಾಗುವುದು, ಎಂದು ಪಾಲಕ ಸಚಿವರು ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅಲ್ಲದೆ, ಮೋಹನ್ ಕೇಸರೆಕರ್ ಅವರ ಮಗ ಮತ್ತು ಮಗಳ ಪಾಲನೆಯ ಜವಾಬ್ದಾರಿಯನ್ನು ಆಡಳಿತವೇ ವಹಿಸಿಕೊಳ್ಳಲಿದೆ ಎಂಬ ಭರವಸೆಯನ್ನೂ ಜಿಲ್ಲಾ ಉಸ್ತುವಾರಿ ಸಚಿವರು ನೀಡಿದ್ದಾರೆ.
ಒಂದೇ ಕುಟುಂಬದ ಪತಿ-ಪತ್ನಿ ಕೆಲವೇ ದಿನಗಳ ಅಂತರದಲ್ಲಿ ದುರಂತವಾಗಿ ಮೃತಪಟ್ಟಿರುವುದು ಹಾಗೂ ಅವರ ಹಿಂದೆ ಮಕ್ಕಳು ಅನಾಥರಾಗಿರುವುದು ಈ ಘಟನೆಯ ನೋವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಘಟನೆಯಿಂದ ಖಾನಾಪುರ ಸೇರಿದಂತೆ ಇಡೀ ಪ್ರದೇಶವೇ ದುಃಖದಲ್ಲಿ ಮುಳುಗಿದೆ.
ಈ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮೃತರ ಸಂಬಂಧಿಕರು ಹಾಗೂ ಗ್ರಾಮಸ್ಥರು ಆಗ್ರಹಿಸುತ್ತಿದ್ದಾರೆ.

