चामराजनगरच्या जंगलात वन विभागाचा गोळीबार; तिघांचा मृत्यू, एन्काऊंटरवर संशयाची छाया.
चामराजनगर (कर्नाटक) : कर्नाटकातील चामराजनगर जिल्ह्यातील हनूर तालुक्यात कावेरी वन्यजीव अभयारण्य परिसरात वन विभागाच्या कर्मचाऱ्यांनी केलेल्या गोळीबारात तिघांचा मृत्यू झाल्याची धक्कादायक घटना समोर आली आहे. १५ ऑगस्टच्या पहाटे घडलेल्या या घटनेनंतर परिसरात तणावाचे वातावरण निर्माण झाले असून, वन विभागाच्या कारवाईवर प्रश्नचिन्ह उपस्थित केले जात आहे.
मृतांची नावे अँथनी सामी, जॉन रोज पीटर आणि कुमार अशी असल्याचे वृत्त आहे. हे तिघेही हनूर तालुक्यातील रहिवासी असल्याचे समोर आले आहे.
वन विभागाचा दावा काय?..
प्राथमिक माहितीनुसार, कावेरी वन्यजीव अभयारण्याच्या परिसरात काही जण बेकायदेशीररीत्या जंगलात प्रवेश करून शिकारीच्या उद्देशाने फिरत असल्याची माहिती वन विभागाला मिळाली होती. त्यानंतर वन कर्मचाऱ्यांनी परिसरात गस्त घालत असताना संशयितांशी सामना झाल्याचे सांगितले जात आहे.
वन विभागाच्या म्हणण्यानुसार, परिस्थिती चिघळल्यानंतर गोळीबार झाला आणि त्यात तिघांचा मृत्यू झाला. मात्र, या कारवाईची नेमकी परिस्थिती काय होती, गोळीबाराची सुरुवात कोणी केली आणि वन कर्मचाऱ्यांना गोळीबार करण्याची आवश्यकता का निर्माण झाली, याबाबत अधिकृत तपासातून स्पष्टता येणे बाकी आहे.
मृतांच्या कुटुंबीयांकडून गंभीर आरोप..
दुसरीकडे, मृत व्यक्तींच्या कुटुंबीयांनी आणि स्थानिक नागरिकांनी वन विभागाच्या कारवाईवर गंभीर प्रश्न उपस्थित केले आहेत. मृत व्यक्ती जंगलात नेमक्या कोणत्या कारणासाठी गेल्या होत्या, त्यांच्याकडे शस्त्रे होती का आणि प्रत्यक्ष चकमक झाली होती का, याची निष्पक्ष चौकशी करण्याची मागणी केली जात आहे.
घटनेनंतर मोठ्या संख्येने नागरिकांनी हनूर पोलीस ठाण्याबाहेर आंदोलन केल्याचे वृत्त आहे. मृतांपैकी अँथनी यांच्या पत्नीच्या तक्रारीवरून पोलिसांनी खुनाच्या कलमांखाली गुन्हा दाखल केला आहे. मात्र, एफआयआरमध्ये अद्याप कोणत्याही वन कर्मचाऱ्याचे आरोपी म्हणून नाव नमूद करण्यात आलेले नाही.
मृतदेहांच्या शवविच्छेदनावरूनही वाद..
मृतदेहांच्या शवविच्छेदनाच्या प्रक्रियेवरूनही स्थानिक पातळीवर नाराजी व्यक्त करण्यात आली आहे. चामराजनगरमधील रुग्णालयात शवविच्छेदन न करता मृतदेह मयतांना मयतांच्या कुटुंबीयांच्या माहितीनुसार पुढील प्रक्रियेसाठी म्हैसूरला नेण्यात आल्याचे वृत्त आहे. या निर्णयावर स्थानिक आमदारांसह काही नेत्यांनी आक्षेप घेतला आहे.
उच्चस्तरीय चौकशीची मागणी…
घटनेनंतर कर्नाटकातील विरोधी पक्षनेते आर. अशोक यांनी या प्रकरणाची न्यायालयीन चौकशी करण्याची मागणी केली आहे. तसेच घटनेची सत्यता आणि गोळीबाराची परिस्थिती निष्पक्षपणे तपासण्याची मागणी जोर धरत आहे.
दरम्यान, तमिळनाडूचे मुख्यमंत्री सी. जोसेफ विजय यांनीही या घटनेवर तीव्र प्रतिक्रिया व्यक्त करत स्वतंत्र आणि निष्पक्ष चौकशीची मागणी केली आहे. त्यांनी कर्नाटक वन विभागाने दिलेले स्पष्टीकरण असमाधानकारक असल्याचे म्हटले असून, दोषी आढळणाऱ्यांवर कठोर कारवाई करण्याची मागणी केली आहे.
नेमके सत्य तपासानंतरच समोर येणार..
चामराजनगरमधील या घटनेमुळे वन्यजीव संरक्षण, शिकारीविरोधी कारवाई आणि जंगलालगत राहणाऱ्या नागरिकांच्या सुरक्षेबाबत पुन्हा एकदा गंभीर प्रश्न निर्माण झाले आहेत. वन विभागाचा दावा आणि मृतांच्या कुटुंबीयांकडून केले जाणारे आरोप यामध्ये मोठी तफावत असल्याने निष्पक्ष तपास, घटनास्थळावरील पुरावे, बॅलिस्टिक तपासणी, शवविच्छेदन अहवाल आणि प्रत्यक्षदर्शींची साक्ष या सर्व बाबी महत्त्वाच्या ठरणार आहेत.
ಚಾಮರಾಜನಗರದ ಕಾಡಿನಲ್ಲಿ ಅರಣ್ಯ ಇಲಾಖೆ ಗುಂಡಿನ ದಾಳಿ; ಮೂವರ ಸಾವು, ಎನ್ಕೌಂಟರ್ ಬಗ್ಗೆ ಅನುಮಾನದ ಛಾಯೆ.
ಚಾಮರಾಜನಗರ (ಕರ್ನಾಟಕ): ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಕಾವೇರಿ ವನ್ಯಜೀವಿ ಅಭಯಾರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ನಡೆಸಿದ ಗುಂಡಿನ ದಾಳಿಯಲ್ಲಿ ಮೂವರು ಮೃತಪಟ್ಟಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಆಗಸ್ಟ್ 15ರ ಮುಂಜಾನೆ ನಡೆದ ಈ ಘಟನೆಯ ಬಳಿಕ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಅರಣ್ಯ ಇಲಾಖೆಯ ಕಾರ್ಯಾಚರಣೆ ಕುರಿತು ಹಲವು ಪ್ರಶ್ನೆಗಳು ಎದ್ದಿವೆ. ಮೃತರನ್ನು ಆಂಥೋನಿ ಸಾಮಿ, ಜಾನ್ ರೋಸ್ ಪೀಟರ್ ಮತ್ತು ಕುಮಾರ್ ಎಂದು ಗುರುತಿಸಲಾಗಿದೆ. ಮೂವರೂ ಹನೂರು ತಾಲ್ಲೂಕಿನ ನಿವಾಸಿಗಳೆಂದು ತಿಳಿದುಬಂದಿದೆ.
ಅರಣ್ಯ ಇಲಾಖೆಯ ವಾದವೇನು?
ಪ್ರಾಥಮಿಕ ಮಾಹಿತಿಯ ಪ್ರಕಾರ, ಕಾವೇರಿ ವನ್ಯಜೀವಿ ಅಭಯಾರಣ್ಯ ಪ್ರದೇಶಕ್ಕೆ ಕೆಲವರು ಅಕ್ರಮವಾಗಿ ಪ್ರವೇಶಿಸಿ ಬೇಟೆಯಾಡುವ ಉದ್ದೇಶದಿಂದ ಸಂಚರಿಸುತ್ತಿದ್ದಾರೆ ಎಂಬ ಮಾಹಿತಿ ಅರಣ್ಯ ಇಲಾಖೆಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ಗಸ್ತು ನಡೆಸುತ್ತಿದ್ದ ವೇಳೆ ಶಂಕಿತ ವ್ಯಕ್ತಿಗಳೊಂದಿಗೆ ಮುಖಾಮುಖಿ ಸಂಭವಿಸಿತು ಎಂದು ಹೇಳಲಾಗಿದೆ.
ಪರಿಸ್ಥಿತಿ ಕೈಮೀರಿ ಹೋಗಿದ್ದರಿಂದ ಗುಂಡಿನ ದಾಳಿ ನಡೆಸಲಾಗಿದ್ದು, ಅದರಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಅರಣ್ಯ ಇಲಾಖೆ ತಿಳಿಸಿದೆ. ಆದರೆ ಗುಂಡಿನ ದಾಳಿ ಆರಂಭಿಸಿದ್ದು ಯಾರು? ನಿಜವಾಗಿಯೂ ಅಲ್ಲಿ ಚಕಮಕಿ ನಡೆದಿತ್ತೇ? ಅರಣ್ಯ ಸಿಬ್ಬಂದಿ ಗುಂಡು ಹಾರಿಸುವ ಅನಿವಾರ್ಯತೆ ಏಕೆ ಎದುರಾಯಿತು? ಎಂಬ ಪ್ರಶ್ನೆಗಳಿಗೆ ಅಧಿಕೃತ ತನಿಖೆಯಿಂದಲೇ ಸ್ಪಷ್ಟ ಉತ್ತರ ದೊರೆಯಬೇಕಿದೆ.
ಮೃತರ ಕುಟುಂಬಸ್ಥರಿಂದ ಗಂಭೀರ ಆರೋಪ
ಮತ್ತೊಂದೆಡೆ, ಮೃತರ ಕುಟುಂಬಸ್ಥರು ಹಾಗೂ ಸ್ಥಳೀಯರು ಅರಣ್ಯ ಇಲಾಖೆಯ ಕಾರ್ಯಾಚರಣೆಯ ಬಗ್ಗೆ ಗಂಭೀರ ಅನುಮಾನ ವ್ಯಕ್ತಪಡಿಸಿದ್ದಾರೆ. ಮೃತರು ಕಾಡಿಗೆ ಯಾವ ಉದ್ದೇಶಕ್ಕಾಗಿ ತೆರಳಿದ್ದರು, ಅವರ ಬಳಿ ಶಸ್ತ್ರಾಸ್ತ್ರಗಳಿದ್ದವೆಯೇ ಹಾಗೂ ನಿಜವಾಗಿಯೂ ಗುಂಡಿನ ಚಕಮಕಿ ನಡೆದಿತ್ತೇ ಎಂಬುದರ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಒತ್ತಾಯಿಸಲಾಗಿದೆ.
ಘಟನೆಯ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ನಾಗರಿಕರು ಹನೂರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಮೃತರಲ್ಲಿ ಒಬ್ಬರಾದ ಆಂಥೋನಿ ಅವರ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕೊಲೆ ಪ್ರಕರಣದ ಕಲಂಗಳಡಿ ಪ್ರಕರಣ ದಾಖಲಿಸಿದ್ದಾರೆ. ಆದರೆ ಎಫ್ಐಆರ್ನಲ್ಲಿ ಇದುವರೆಗೆ ಯಾವುದೇ ಅರಣ್ಯ ಸಿಬ್ಬಂದಿಯನ್ನು ಆರೋಪಿಯಾಗಿ ಹೆಸರಿಸಲಾಗಿಲ್ಲ.
ಮೃತದೇಹಗಳ ಮರಣೋತ್ತರ ಪರೀಕ್ಷೆ ವಿಚಾರದಲ್ಲೂ ವಿವಾದ
ಮೃತದೇಹಗಳ ಮರಣೋತ್ತರ ಪರೀಕ್ಷೆಯ ಪ್ರಕ್ರಿಯೆಯ ಕುರಿತೂ ಸ್ಥಳೀಯ ಮಟ್ಟದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಚಾಮರಾಜನಗರದ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸದೆ, ಮೃತದೇಹಗಳನ್ನು ಕುಟುಂಬಸ್ಥರ ಮಾಹಿತಿಯಂತೆ ಮುಂದಿನ ಪ್ರಕ್ರಿಯೆಗಾಗಿ ಮೈಸೂರಿಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ. ಈ ನಿರ್ಧಾರಕ್ಕೆ ಸ್ಥಳೀಯ ಶಾಸಕರು ಸೇರಿದಂತೆ ಕೆಲ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಉನ್ನತ ಮಟ್ಟದ ತನಿಖೆಗೆ ಆಗ್ರಹ
ಘಟನೆಯ ಬಳಿಕ ಕರ್ನಾಟಕದ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಪ್ರಕರಣದ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ಗುಂಡಿನ ದಾಳಿಯ ನೈಜ ಪರಿಸ್ಥಿತಿ ಹಾಗೂ ಘಟನೆಯ ಸತ್ಯಾಸತ್ಯತೆಗಳನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂಬ ಒತ್ತಾಯವೂ ಹೆಚ್ಚಾಗಿದೆ.
ಇದೇ ವೇಳೆ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಕೂಡ ಘಟನೆ ಕುರಿತು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿ, ಸ್ವತಂತ್ರ ಹಾಗೂ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿದ್ದಾರೆ. ಕರ್ನಾಟಕ ಅರಣ್ಯ ಇಲಾಖೆ ನೀಡಿರುವ ಸ್ಪಷ್ಟೀಕರಣ ತೃಪ್ತಿಕರವಾಗಿಲ್ಲ ಎಂದು ಅವರು ಹೇಳಿದ್ದು, ತಪ್ಪಿತಸ್ಥರು ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ತನಿಖೆಯಿಂದಲೇ ಸತ್ಯ ಹೊರಬರಬೇಕಿದೆ
ಚಾಮರಾಜನಗರದ ಈ ಘಟನೆ ಅರಣ್ಯ ಸಂರಕ್ಷಣೆ, ಬೇಟೆ ತಡೆ ಕಾರ್ಯಾಚರಣೆ ಹಾಗೂ ಕಾಡಂಚಿನಲ್ಲಿ ವಾಸಿಸುವ ಜನರ ಸುರಕ್ಷತೆ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಅರಣ್ಯ ಇಲಾಖೆಯ ವಾದ ಮತ್ತು ಮೃತರ ಕುಟುಂಬಸ್ಥರು ಮಾಡುತ್ತಿರುವ ಆರೋಪಗಳ ನಡುವೆ ಸ್ಪಷ್ಟ ವ್ಯತ್ಯಾಸ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ನಿಷ್ಪಕ್ಷಪಾತ ತನಿಖೆ, ಘಟನಾ ಸ್ಥಳದ ಸಾಕ್ಷ್ಯಗಳು, ಬ್ಯಾಲಿಸ್ಟಿಕ್ ಪರೀಕ್ಷೆ, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಅತ್ಯಂತ ಮಹತ್ವ ಪಡೆಯಲಿವೆ.



