नीडगल-खेमेवाडी मंदिर तोडफोड प्रकरणी मनोरुग्ण ताब्यात; खानापूर पोलिसांकडून चौकशी सुरू.
खानापूर : खानापूर तालुक्यातील नीडगल येथील सिद्धेश्वर मंदिर तसेच खेमेवाडी येथील माऊली मंदिरातील मूर्तींच्या तोडफोडीच्या प्रकरणाचा तपास खानापूर पोलिसांकडून सुरू असून, या प्रकरणी पोलिसांनी एका मनोरुग्ण व्यक्तीला ताब्यात घेतले आहे. सदर व्यक्तीची पुढील चौकशी सुरू असल्याचे समजते.
माळअंकले येथील एका शेतकऱ्याने सदर व्यक्तीला मंदिरात बसलेल्या अवस्थेत पाहिल्याचे पोलिसांना सांगितले असल्याचे समजते, त्याबाबत साक्षही दिल्याचे समजते. ताब्यात घेण्यात आलेली व्यक्ती कन्नड भाषेत बोलत असून, नाव व गाव विचारले असता तो कोणतीही माहिती देत नसल्याची माहिती मिळाली आहे.
सदर व्यक्तीच्या बोटाला जखम झाली असून, विशेष म्हणजे, पॅन्ट खाली पडू नये म्हणून कमरेला बांधलेली कापडाची चिंधीच त्याच्या बोटाला झालेल्या जखमेवर बांधण्यात आलेली चिंदी दिसत आहे. याच कापडाचा काही भाग मंदिर परिसरात यापूर्वीच रक्त लागलेल्या अवस्थेत पोलिसांना आढळून आला आहे.
या सर्व बाबींच्या पार्श्वभूमीवर पोलिसांकडून सदर व्यक्तीची कसून चौकशी करण्यात येत असून, मंदिर तोडफोड प्रकरणातील त्याचा नेमका सहभाग आहे का, याचा तपास केला जात आहे.
दरम्यान, ताब्यात घेतलेल्या व्यक्तीला नाव व गाव विचारले असता तो कोणतीही माहिती देत नसल्याने त्याच्या नातेवाईकांचा किंवा ओळखीच्या व्यक्तींचा शोध घेण्यासाठी खानापूर पोलिसांनी नागरिकांना आवाहन केले आहे.
फोटोतील व्यक्तीबाबत कोणाला काही माहिती असल्यास अथवा त्याला ओळखणारे नातेवाईक, मित्र किंवा परिचित असल्यास त्यांनी तातडीने खानापूर पोलीस स्थानकाशी संपर्क साधावा, असे आवाहन खानापूर पोलीसांनी केले आहे.
संपर्क क्रमांक : +91 94808 04033
तसेच या प्रकरणासंदर्भात कोणाकडे काही माहिती असल्यास ती खानापूर पोलिसांना देण्याचे आवाहन करण्यात आले आहे.
ನೀಡಗಲ್–ಖೇಮೇವಾಡಿ ದೇವಸ್ಥಾನ ಧ್ವಂಸ ಪ್ರಕರಣದಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿ ವಶಕ್ಕೆ; ಖಾನಾಪುರ ಪೊಲೀಸರಿಂದ ವಿಚಾರಣೆ ಮುಂದುವರಿಕೆ.
ಖಾನಾಪುರ : ಖಾನಾಪುರ ತಾಲೂಕಿನ ನೀಡಗಲ್ ಗ್ರಾಮದ ಸಿದ್ಧೇಶ್ವರ ದೇವಸ್ಥಾನ ಹಾಗೂ ಖೇಮೇವಾಡಿ ಗ್ರಾಮದ ಮಾವುಲಿ ದೇವಸ್ಥಾನದಲ್ಲಿನ ಮೂರ್ತಿಗಳ ಧ್ವಂಸ ಪ್ರಕರಣದ ತನಿಖೆಯನ್ನು ಖಾನಾಪುರ ಪೊಲೀಸರು ಮುಂದುವರಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ. ಸದರಿ ವ್ಯಕ್ತಿಯ ಮುಂದಿನ ವಿಚಾರಣೆ ಪೊಲೀಸ ಠಾಣೆಯಲ್ಲಿ ಮುಂದುವರಿದಿದೆ.
ಮಾಳಅಂಕಲೆ ಗ್ರಾಮದ ಓರ್ವ ರೈತನು ಸದರಿ ವ್ಯಕ್ತಿಯನ್ನು ದೇವಸ್ಥಾನದಲ್ಲಿ ಕುಳಿತಿರುವ ಸ್ಥಿತಿಯಲ್ಲಿ ನೋಡಿರುವುದಾಗಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಈ ಕುರಿತು ಸಾಕ್ಷ್ಯವನ್ನೂ ನೀಡಿದ್ದಾನೆ ಎಂದು ತಿಳಿದುಬಂದಿದೆ. ವಶಕ್ಕೆ ಪಡೆಯಲಾಗಿರುವ ವ್ಯಕ್ತಿಯು ಕನ್ನಡ ಭಾಷೆಯಲ್ಲಿ ಮಾತನಾಡುತ್ತಿದ್ದು, ಹೆಸರು ಹಾಗೂ ಊರು ವಿಚಾರಿಸಿದಾಗ ಯಾವುದೇ ಮಾಹಿತಿಯನ್ನು ನೀಡುತ್ತಿಲ್ಲ.
ಸದರಿ ವ್ಯಕ್ತಿಯ ಬೆರಳಿಗೆ ಗಾಯವಾಗಿದ್ದು, ಆತ ಆ ಗಾಯವನ್ನು ಪೊಲೀಸರಿಗೆ ತೋರಿಸುತ್ತಾ ವಿಶೇಷವೆಂದರೆ, ಪ್ಯಾಂಟ್ ಕೆಳಗೆ ಬೀಳದಂತೆ ಸೊಂಟಕ್ಕೆ ಕಟ್ಟಿಕೊಂಡಿದ್ದ ಬಟ್ಟೆಯ ಚಿಂದಿಯನ್ನೇ ಆತನ ಬೆರಳಿನ ಗಾಯಕ್ಕೆ ಕಟ್ಟಿ ಕೊಂಡಿದ್ದು ಕಂಡು ಬರುತ್ತದೆ.
ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಪೊಲೀಸರು ಸದರಿ ವ್ಯಕ್ತಿಯನ್ನು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದು, ದೇವಸ್ಥಾನ ಧ್ವಂಸ ಪ್ರಕರಣದಲ್ಲಿ ಆತನ ನಿಖರವಾದ ಪಾತ್ರವಿದೆಯೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದ್ದೆ.
ಈ ನಡುವೆ, ವಶಕ್ಕೆ ಪಡೆಯಲಾಗಿರುವ ವ್ಯಕ್ತಿಯನ್ನು ಹೆಸರು ಹಾಗೂ ಊರು ವಿಚಾರಿಸಿದಾಗ ಆತ ಯಾವುದೇ ಮಾಹಿತಿಯನ್ನು ನೀಡುವ ಪರಿಸ್ಥಿತಿಯಲ್ಲಿ ಇರದ ಕಾರಣ, ಆತನ ಸಂಬಂಧಿಕರು ಅಥವಾ ಪರಿಚಯಸ್ಥರನ್ನು ಪತ್ತೆಹಚ್ಚಲು ಖಾನಾಪುರ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಫೋಟೋದಲ್ಲಿರುವ ವ್ಯಕ್ತಿಯ ಕುರಿತು ಯಾರಿಗಾದರೂ ಯಾವುದೇ ಮಾಹಿತಿ ಇದ್ದಲ್ಲಿ ಅಥವಾ ಆತನನ್ನು ಗುರುತಿಸುವ ಸಂಬಂಧಿಕರು, ಸ್ನೇಹಿತರು ಅಥವಾ ಪರಿಚಯಸ್ಥರು ಇದ್ದಲ್ಲಿ ಅವರು ತಕ್ಷಣ ಖಾನಾಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು, ಎಂದು ಖಾನಾಪುರ ಪೊಲೀಸ್ ಠಾಣೆಯ ಪಿಐ ಎಲ್. ಎಚ್. ಗೋವಂಡಿ ಅವರು ಮನವಿ ಮಾಡಿದ್ದಾರೆ.
ಸಂಪರ್ಕ ಸಂಖ್ಯೆ : +91 94808 04033
ಹಾಗೆಯೇ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರ ಬಳಿಯಲ್ಲಾದರೂ ಯಾವುದೇ ಮಾಹಿತಿ ಇದ್ದಲ್ಲಿ ಅದನ್ನು ಖಾನಾಪುರ ಪೊಲೀಸ ಇಲಾಖೆಗೆ ಮಾಹಿತಿ ನೀಡುವಂತೆ ಪೊಲೀಸ್ ಇಲಾಖೆ ಮನವಿ ಮಾಡಲಾಗಿದೆ.



