कक्केरी–धारवाड नवी बससेवा सुरू; ग्रामस्थांची दीर्घकालीन मागणी पूर्ण.
कक्केरी (प्रतिनिधी) : कक्केरी येथून धारवाडकडे जाणाऱ्या नव्या बससेवेचा शुभारंभ सोमवारी स्थानिक बिष्टादेवी मंदिरासमोर एका आयोजित कार्यक्रमात उत्साहात करण्यात आला. या बससेवेमुळे ग्रामस्थांची धारवाडला ये-जा करण्याची अनेक वर्षांची मागणी पूर्ण झाल्याचे पीकेपीएसचे अध्यक्ष यल्लाप्पा गुपित यांनी सांगितले.
धारवाड विभागाच्या हल्याळ आगाराच्या वतीने सुरू करण्यात आलेल्या कक्केरी–धारवाड बससेवेचे उद्घाटन मान्यवरांच्या हस्ते करण्यात आले. यावेळी निवृत्त शिक्षक डी. के. फिरोजी यांनी बोलताना सांगितले की, ही बससेवा सुरू करण्यासाठी अखिल कर्नाटक शेतकरी संघटनेचे राज्य उपाध्यक्ष किशोर मिठारी व शेतकरी नेत्यांनी सातत्याने केलेल्या प्रयत्नांना आज यश मिळाले आहे.
ते पुढे म्हणाले की, 2023 मध्ये खानापूर तालुका दुष्काळग्रस्त घोषित करण्यात विलंब झाल्याने गावात पाच तास राज्य महामार्ग रोखून आंदोलन करण्यात आले होते. त्या आंदोलनाच्या परिणामस्वरूप तालुक्यातील शेतकऱ्यांसाठी ₹23 कोटींचा निधी मंजूर करण्यात आला. त्याचे श्रेय शेतकरी नेतृत्वाला जाते.
अखिल कर्नाटक शेतकरी संघटनेचे राज्य उपाध्यक्ष किशोर मिठारी यांनी आपल्या भाषणात खानापूर तालुक्याच्या सर्वांगीण विकासासाठी मालप्रभा नदीवर धरण उभारून संपूर्ण तालुक्याला सिंचन सुविधा उपलब्ध करून द्याव्यात, कक्केरी येथे शासकीय महाविद्यालय, 30 खाटांचे रुग्णालय व उपपोलीस ठाणे सुरू करावे, राज्यात कमी झालेल्या पावसामुळे दुष्काळग्रस्त घोषित करून शेतकऱ्यांना प्रति एकर ₹30 हजारांची मदत द्यावी, तसेच शेतकऱ्यांची संपूर्ण कर्जमाफी करावी, अशी मागणी केली.
याशिवाय कक्केरी परिसराचा नव्याने स्थापन होणाऱ्या अळ्णावर तालुक्यात समावेश करावा, यासह विविध मागण्यांसाठी गावात लवकरच उपोषण आंदोलन करण्यात येणार असून त्यासाठी शेतकऱ्यांनी सहकार्य करावे, असे आवाहनही त्यांनी केले.
कार्यक्रमाच्या प्रारंभी पुजारी बिष्टप्पा केदारजी यांनी पूजाविधी केला. बसचे चालक यल्लाप्पा दोडमनी व वाहक शिवानंद तेली यांचा हिरवी शाल, पुष्पगुच्छ व फळे देऊन सत्कार करण्यात आला.
यावेळी निवृत्त शारीरिक शिक्षण शिक्षक आर. वाय. बेन्नूर, उद्योजक बसवण्णिप्पा अगसिमनी, माजी एसडीएमसी अध्यक्ष संतोष कुकडोळी, भाजप युवा नेते राजू देगांवि, शेतकरी नेते रमेश वीरापूर, बिष्टप्पा सुंबळी, गोपाल अगसिमनी, सेबॅस्टिन सोज, शिवलिंग चन्नापूर, रुद्रप्पा वीरापूर, अँथोनी सोज, पास्कल सोज, गुरुलिंगय्या हिरेमठ, बसप्पा डोळ्ळीन, यशवंत दोडमनी, रमेश कुडुतुरकर, संजीव अळवणी, बसवराज मुरगोड, अप्पय्या लगली, जोकी पुट्टदादू यांच्यासह अनेक ग्रामस्थ उपस्थित होते.
ಕಕ್ಕೇರಿ–ಧಾರವಾಡ ನೂತನ ಬಸ್ ಸೇವೆ ಆರಂಭ; ಗ್ರಾಮಸ್ಥರ ದೀರ್ಘಕಾಲದ ಬೇಡಿಕೆ ಈಡೇರಿಕೆ.
ಕಕ್ಕೇರಿ (ಪ್ರತಿನಿಧಿ) : ಕಕ್ಕೇರಿಯಿಂದ ಧಾರವಾಡಕ್ಕೆ ಸಂಚರಿಸುವ ನೂತನ ಬಸ್ ಸೇವೆಗೆ ಸೋಮವಾರ ಸ್ಥಳೀಯ ಬಿಷ್ಟಾದೇವಿ ದೇವಸ್ಥಾನದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು. ಈ ಬಸ್ ಸೇವೆಯಿಂದ ಗ್ರಾಮಸ್ಥರ ಧಾರವಾಡಕ್ಕೆ ಸಂಚಾರದ ಹಲವು ವರ್ಷಗಳ ಬೇಡಿಕೆ ಈಡೇರಿದೆ ಎಂದು ಪಿಕೆಪಿಎಸ್ ಅಧ್ಯಕ್ಷ ಯಲ್ಲಪ್ಪ ಗುಪಿತ ತಿಳಿಸಿದರು.
ಧಾರವಾಡ ವಿಭಾಗದ ಹಳಿಯಾಳ ಘಟಕದ ವತಿಯಿಂದ ಆರಂಭಿಸಲಾದ ಕಕ್ಕೇರಿ–ಧಾರವಾಡ ಬಸ್ ಸೇವೆಯನ್ನು ಗಣ್ಯರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಡಿ.ಕೆ. ಫಿರೋಜಿ ಮಾತನಾಡಿ, ಈ ಬಸ್ ಸೇವೆ ಆರಂಭಿಸಲು ಅಖಿಲ ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕಿಶೋರ್ ಮಿಠಾರಿ ಹಾಗೂ ರೈತ ಮುಖಂಡರು ನಿರಂತರವಾಗಿ ನಡೆಸಿದ ಪ್ರಯತ್ನ ಇಂದು ಫಲ ನೀಡಿದೆ ಎಂದು ಹೇಳಿದರು.
ಅವರು ಮುಂದುವರಿದು, 2023ರಲ್ಲಿ ಖಾನಾಪುರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲು ವಿಳಂಬವಾದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಐದು ಗಂಟೆಗಳ ಕಾಲ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗಿತ್ತು. ಆ ಹೋರಾಟದ ಪರಿಣಾಮವಾಗಿ ತಾಲೂಕಿನ ರೈತರಿಗಾಗಿ ₹23 ಕೋಟಿ ಅನುದಾನ ಮಂಜೂರಾಗಿದ್ದು, ಅದರ ಶ್ರೇಯಸ್ಸು ರೈತ ನಾಯಕತ್ವಕ್ಕೆ ಸಲ್ಲುತ್ತದೆ ಎಂದು ಹೇಳಿದರು.
ಅಖಿಲ ಕರ್ನಾಟಕ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕಿಶೋರ್ ಮಿಠಾರಿ ಮಾತನಾಡಿ, ಖಾನಾಪುರ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಮಲಪ್ರಭಾ ನದಿಗೆ ಅಣೆಕಟ್ಟು ನಿರ್ಮಿಸಿ ಸಂಪೂರ್ಣ ತಾಲೂಕಿಗೆ ನೀರಾವರಿ ಸೌಲಭ್ಯ ಕಲ್ಪಿಸಬೇಕು. ಕಕ್ಕೇರಿಯಲ್ಲಿ ಸರ್ಕಾರಿ ಕಾಲೇಜು, 30 ಹಾಸಿಗೆಗಳ ಆಸ್ಪತ್ರೆ ಹಾಗೂ ಉಪ ಪೊಲೀಸ್ ಠಾಣೆ ಆರಂಭಿಸಬೇಕು. ರಾಜ್ಯದಲ್ಲಿ ಮಳೆ ಕೊರತೆಯಿಂದ ಉಂಟಾಗಿರುವ ಪರಿಸ್ಥಿತಿಯನ್ನು ಪರಿಗಣಿಸಿ ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಪ್ರತಿ ಎಕರೆಗೆ ₹30 ಸಾವಿರ ಪರಿಹಾರ ನೀಡಬೇಕು ಹಾಗೂ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಕಕ್ಕೇರಿ ಪ್ರದೇಶವನ್ನು ಹೊಸದಾಗಿ ರಚನೆಯಾಗಲಿರುವ ಅಳ್ನಾವರ ತಾಲೂಕಿಗೆ ಸೇರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಶೀಘ್ರದಲ್ಲೇ ಗ್ರಾಮದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು. ಇದಕ್ಕೆ ರೈತರು ಸಹಕಾರ ನೀಡುವಂತೆ ಅವರು ಮನವಿ ಮಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ಪೂಜಾರಿ ಬಿಷ್ಟಪ್ಪ ಕೇದಾರಜಿ ಪೂಜಾ ವಿಧಿ ನೆರವೇರಿಸಿದರು. ಬಸ್ ಚಾಲಕ ಯಲ್ಲಪ್ಪ ದೊಡ್ಡಮನಿ ಹಾಗೂ ನಿರ್ವಾಹಕ ಶಿವಾನಂದ ತೆಲಿ ಅವರನ್ನು ಹಸಿರು ಶಾಲು, ಹೂಗುಚ್ಛ ಮತ್ತು ಹಣ್ಣು ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಆರ್.ವೈ. ಬೆನ್ನೂರ, ಉದ್ಯಮಿ ಬಸವಣ್ಣಿಪ್ಪ ಅಗಸಿಮನಿ, ಮಾಜಿ ಎಸ್ಡಿಎಂಸಿ ಅಧ್ಯಕ್ಷ ಸಂತೋಷ ಕುಕಡೋಳಿ, ಬಿಜೆಪಿ ಯುವ ಮುಖಂಡ ರಾಜು ದೇಗಾಂವಿ, ರೈತ ಮುಖಂಡ ರಮೇಶ್ ವೀರಾಪೂರ, ಬಿಷ್ಟಪ್ಪ ಸುಂಬಳಿ, ಗೋಪಾಲ ಅಗಸಿಮನಿ, ಸೆಬಾಸ್ಟಿನ್ ಸೋಜ, ಶಿವಲಿಂಗ ಚನ್ನಾಪೂರ, ರುದ್ರಪ್ಪ ವೀರಾಪೂರ, ಆಂಥೋನಿ ಸೋಜ, ಪಾಸ್ಕಲ್ ಸೋಜ, ಗುರುಲಿಂಗಯ್ಯ ಹಿರೇಮಠ, ಬಸಪ್ಪ ಡೊಳ್ಳೀನ, ಯಶವಂತ ದೊಡ್ಡಮನಿ, ರಮೇಶ್ ಕುಡುತ್ತುರಕರ, ಸಂಜೀವ ಅಳವಣಿ, ಬಸವರಾಜ ಮುರಗೋಡ, ಅಪ್ಪಯ್ಯ ಲಗಲಿ, ಜೋಕಿ ಪುಟ್ಟದಾದು ಸೇರಿದಂತೆ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.



