शेतकरीहितासाठी झटणारे युवा नेतृत्व; लैला शुगरचे एमडी तथा भाजप रयत मोर्चा जिल्हा उपाध्यक्ष सदानंद पाटील यांचा आज वाढदिवस.
खानापूर (प्रतिनिधी) : भारतीय जनता पार्टीच्या रयत मोर्चाचे बेळगाव जिल्हा उपाध्यक्ष, महालक्ष्मी ग्रुप तोप्पीनकट्टी संचलित लैला शुगरचे व्यवस्थापकीय संचालक (एमडी) तसेच खानापूरचे आमदार विठ्ठलराव हलगेकर यांचे निकटवर्तीय सदानंद मारुतीराव पाटील यांचा आज, सोमवार (दि. 27 जुलै 2026) वाढदिवस असून, त्यांच्या कार्यकर्त्यांकडून, मित्रपरिवाराकडून, शेतकरी बांधवांकडून व हितचिंतकाकडून विविध माध्यमांतून त्यांच्यावर शुभेच्छांचा वर्षाव होत आहे.
सदानंद पाटील यांनी आपल्या कार्यक्षम नेतृत्व, शिस्तबद्ध कामकाज आणि शेतकरीहिताच्या भूमिकेमुळे अल्पावधीतच खानापूर तालुक्यात वेगळी ओळख निर्माण केली आहे. शांत, संयमी आणि अभ्यासू व्यक्तिमत्त्व म्हणून त्यांच्याकडे पाहिले जाते. कारखाना व्यवस्थापनासोबतच सामाजिक आणि संघटनात्मक कार्यातही ते सक्रिय असून, ग्रामीण भागातील शेतकरी व युवकांशी त्यांचा सातत्याने संपर्क असतो.
खानापूर तालुक्यातील शेतकऱ्यांच्या हितासाठी माजी आमदार स्व. निळकंठराव सरदेसाई यांनी सुरू केलेला साखर कारखाना काही कारणामुळे अनेक वर्षे बंद होता. त्यानंतर तो लैला शुगरकडे भाडेतत्त्वावर देण्यात आला; मात्र अपेक्षित यश मिळाले नाही. अशा परिस्थितीत आमदार विठ्ठलराव हलगेकर यांनी पुढाकार घेत महालक्ष्मी ग्रुप तोप्पीनकट्टीच्या माध्यमातून कारखान्याची धुरा स्वीकारली. कारखाना सक्षमपणे व सुरळीत करण्यासाठी त्यांनी सदानंद मारुतीराव पाटील यांच्यावर व्यवस्थापकीय संचालकपदाची जबाबदारी सोपविली.
विशेष म्हणजे, एका अभियांत्रिकी महाविद्यालयात प्राध्यापक म्हणून कार्यरत असलेल्या सदानंद पाटील यांनी स्थिर नोकरीचा त्याग करून कारखाना सुरळीतपणे चालविण्याचे आव्हान स्वीकारले. आमदार विठ्ठलराव हलगेकर यांच्या मार्गदर्शनाखाली त्यांनी अनेक आर्थिक, प्रशासकीय व तांत्रिक अडचणींवर मात करत कारखान्याचे व्यवस्थापन सक्षमपणे सांभाळले. त्यांच्या नियोजनबद्ध कार्यपद्धतीमुळे कारखाना पुन्हा स्थिरावला असून, त्याचा थेट लाभ खानापूर तालुक्यातील हजारो ऊस उत्पादक शेतकऱ्यांना होत आहे.
पूर्वी तालुक्यातील शेतकऱ्यांना आपला ऊस जिल्ह्याबाहेरील किंवा तालुक्याबाहेरील साखर कारखान्यांकडे पाठविण्यासाठी मोठा खर्च, वेळ आणि वाहतुकीच्या अडचणींचा सामना करावा लागत होता. मात्र स्थानिक पातळीवर कारखाना सुरू झाल्याने ऊस गाळपाची सुविधा उपलब्ध झाली असून शेतकऱ्यांचा वेळ, खर्च आणि श्रम यांची मोठ्या प्रमाणात बचत झाली आहे.
कारखान्याच्या व्यवस्थापनाबरोबरच सदानंद पाटील हे आमदार विठ्ठलराव हलगेकर यांच्या मार्गदर्शनाखाली तालुक्यातील विकासकामे गतीमान करण्यासाठी आणि शासनाच्या विविध लोककल्याणकारी योजना तळागाळातील नागरिकांपर्यंत पोहोचविण्यासाठी सातत्याने कार्यरत आहेत. ग्रामीण भागातील नागरिकांच्या समस्या सोडविणे, शेतकऱ्यांना विविध योजनांची माहिती देणे तसेच युवकांना विकासाच्या मुख्य प्रवाहात आणण्यासाठी ते प्रयत्नशील आहेत.
भारतीय जनता पक्षाच्या संघटनात्मक कार्यातही त्यांचा सक्रिय सहभाग असून, पक्षाच्या धोरणांचा आणि केंद्र व राज्य शासनाच्या विविध योजनांचा प्रचार-प्रसार गावागावांत करण्यासाठी ते सातत्याने कार्यरत आहेत. त्यांच्या संघटन कौशल्याची आणि समर्पित कार्याची दखल घेत पक्षाच्या वरिष्ठ नेतृत्वाने त्यांची भारतीय जनता पार्टी रयत मोर्चा, बेळगाव जिल्हा उपाध्यक्ष म्हणून नियुक्ती केली आहे.
रयत मोर्चाच्या माध्यमातून शेतकऱ्यांच्या विविध प्रश्नांसाठी पाठपुरावा करणे, शासकीय कार्यालयांशी समन्वय साधणे, तसेच तालुक्यातील युवा कार्यकर्त्यांची मजबूत संघटना उभी करण्यासाठी ते विशेष प्रयत्न करीत आहेत. त्यांच्या नेतृत्वामुळे अनेक युवक सामाजिक व राजकीय क्षेत्रात सक्रिय झाले आहेत.
शेतकरी, युवक आणि ग्रामीण विकासासाठी सातत्याने कार्यरत असलेल्या सदानंद मारुतीराव पाटील यांच्या वाढदिनी त्यांना निरोगी, दीर्घायुष्य लाभो आणि त्यांच्या हातून खानापूर तालुक्याच्या विकासासाठी तसेच शेतकरी बांधवांच्या उन्नतीसाठी अधिकाधिक उल्लेखनीय कार्य घडो, अशा शुभेच्छा सर्व स्तरांतून व्यक्त होत आहेत.
“आपलं खानापूर” न्यूज पोर्टल व “आपलं खानापूर” फेसबुक ग्रुप परिवाराच्या वतीने सदानंद मारुतीराव पाटील यांना वाढदिवसाच्या मनःपूर्वक हार्दिक शुभेच्छा!
ರೈತರ ಹಿತಾಸಕ್ತಿಗೆ ಹೋರಾಡುತ್ತಿರುವ ಯುವ ನಾಯಕತ್ವ; ಲೈಲಾ ಸಕ್ಕರೆ ಕಾರ್ಖಾನೆಯ ಎಂ.ಡಿ. ಹಾಗೂ ಬಿಜೆಪಿ ರೈತ ಮೋರ್ಚಾ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಸದಾನಂದ ಪಾಟೀಲರಿಗೆ ಜನ್ಮದಿನದ ಅಂಗವಾಗಿ ಶುಭಾಷಯಗಳು.
ಖಾನಾಪುರ (ಪ್ರತಿನಿಧಿ) : ಭಾರತೀಯ ಜನತಾ ಪಕ್ಷದ ರೈತ ಮೋರ್ಚಾದ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರು, ಮಹಾಲಕ್ಷ್ಮಿ ಗ್ರೂಪ್ ತೊಪ್ಪಿನಕಟ್ಟಿ ವತಿಯಿಂದ ನಿರ್ವಹಿಸಲ್ಪಡುತಿರುವ ಲೈಲಾ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕರು (ಎಂ.ಡಿ.) ಹಾಗೂ ಖಾನಾಪುರ ಶಾಸಕ ವಿಠ್ಠಲರಾವ್ ಹಲಗೆಕರ ಅವರ ಆಪ್ತ ಸಹೋದ್ಯೋಗಿಯಾಗಿರುವ ಸದಾನಂದ ಮಾರುತಿರಾವ್ ಪಾಟೀಲ ಅವರ ಇಂದು, ಸೋಮವಾರ (ದಿ. 27 ಜುಲೈ 2026) ಜನ್ಮದಿನವಾಗಿದ್ದು, ಅವರ ಕಾರ್ಯಕರ್ತರು, ಸ್ನೇಹಿತರು, ರೈತ ಬಂಧುಗಳು ಹಾಗೂ ಹಿತೈಷಿಗಳು ವಿವಿಧ ಮಾಧ್ಯಮಗಳ ಮೂಲಕ ಶುಭಾಶಯಗಳ ಮಹಾಪೂರ ಹರಿಸುತ್ತಿದ್ದಾರೆ.
ಸದಾನಂದ ಪಾಟೀಲ ಅವರು ತಮ್ಮ ಕಾರ್ಯಕ್ಷಮ ನಾಯಕತ್ವ, ಶಿಸ್ತಿನ ಕೆಲಸದ ಶೈಲಿ ಹಾಗೂ ರೈತರ ಪರವಾದ ನಿಲುವಿನ ಮೂಲಕ ಅಲ್ಪಾವಧಿಯಲ್ಲೇ ಖಾನಾಪುರ ತಾಲ್ಲೂಕಿನಲ್ಲಿ ವಿಶಿಷ್ಟ ಗುರುತನ್ನು ನಿರ್ಮಿಸಿಕೊಂಡಿದ್ದು. ಶಾಂತ, ಸಂಯಮಿ ಹಾಗೂ ಅಧ್ಯಯನಶೀಲ ವ್ಯಕ್ತಿತ್ವದ ನಾಯಕರೆಂದು ಅವರು ಗುರುತಿಸಿಕೊಂಡಿದ್ದಾರೆ. ಭಾರಿ ಅಡೆತಡೆಗಳ ಮುಂದೆಯೂ ಕಾರ್ಖಾನೆಯನ್ನು ಸಮರ್ಪಕವಾಗಿ ನಿರ್ವಹಣೆಯ ಜೊತೆಗೆ ಸಾಮಾಜಿಕ ಹಾಗೂ ಸಂಘಟನಾ ಕಾರ್ಯಗಳಲ್ಲಿಯೂ ಸಕ್ರಿಯರಾಗಿದ್ದು, ಗ್ರಾಮೀಣ ಭಾಗದ ರೈತರು ಹಾಗೂ ಯುವಕರೊಂದಿಗೆ ನಿರಂತರ ಸಂಪರ್ಕದಲ್ಲಿರುತ್ತಾರೆ.
ಖಾನಾಪುರ ತಾಲ್ಲೂಕಿನ ರೈತರ ಹಿತದೃಷ್ಟಿಯಿಂದ ಮಾಜಿ ಶಾಸಕರಾದ ದಿವಂಗತ ನೀಳಕಂಠರಾವ್ ಸರದೇಶಾಯಿ ಅವರು ಆರಂಭಿಸಿದ್ದ ಸಕ್ಕರೆ ಕಾರ್ಖಾನೆ ಕೆಲವು ಕಾರಣಗಳಿಂದ ಹಲವು ವರ್ಷಗಳ ಕಾಲ ಸ್ಥಗಿತಗೊಂಡಿತ್ತು. ನಂತರ ಅದನ್ನು ಲೈಲಾ ಶುಗರ್ಗೆ ಬಾಡಿಗೆ ಆಧಾರದ ಮೇಲೆ ನೀಡಲಾಗಿದ್ದರೂ ನಿರೀಕ್ಷಿತ ಯಶಸ್ಸು ದೊರೆಯಲಿಲ್ಲ. ಇಂತಹ ಸಂದರ್ಭದಲ್ಲಿ ಶಾಸಕ ವಿಠ್ಠಲರಾವ್ ಹಲಗೆಕರ ಅವರು ಮುಂದಾಳತ್ವ ವಹಿಸಿ ಮಹಾಲಕ್ಷ್ಮಿ ಗ್ರೂಪ್ ತೊಪ್ಪಿನಕಟ್ಟಿ ಮೂಲಕ ಕಾರ್ಖಾನೆಯ ಹೊಣೆ ಹೊತ್ತರು. ಕಾರ್ಖಾನೆಯನ್ನು ಸಮರ್ಥವಾಗಿ ಹಾಗೂ ಸುಗಮವಾಗಿ ನಡೆಸುವ ಉದ್ದೇಶದಿಂದ ಅವರು ಸದಾನಂದ ಮಾರುತಿರಾವ್ ಪಾಟೀಲ ಅವರಿಗೆ ವ್ಯವಸ್ಥಾಪಕ ನಿರ್ದೇಶಕರ ಮಹತ್ವದ ಜವಾಬ್ದಾರಿಯನ್ನು ವಹಿಸಿದರು. ಅವರ ಮೇಲೆ ಇಟ್ಟಿರುವ ಭರವಸೆಗೆ ಇದೊಂದು ಸಾಕ್ಷಿ.
ವಿಶೇಷವೆಂದರೆ, ಒಂದು ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಸದಾನಂದ ಪಾಟೀಲ ಅವರು ತಮ್ಮ ಸ್ಥಿರ ಉದ್ಯೋಗವನ್ನು ತ್ಯಜಿಸಿ ಕಾರ್ಖಾನೆಯನ್ನು ಸುಗಮವಾಗಿ ನಡೆಸುವ ಸವಾಲನ್ನು ಸ್ವೀಕರಿಸಿದರು. ಶಾಸಕ ವಿಠ್ಠಲರಾವ್ ಹಲಗೆಕರ ಅವರ ಮಾರ್ಗದರ್ಶನದಲ್ಲಿ ಅವರು ಅನೇಕ ಆರ್ಥಿಕ, ಆಡಳಿತಾತ್ಮಕ ಹಾಗೂ ತಾಂತ್ರಿಕ ಅಡಚಣೆಗಳನ್ನು ಮೀರಿ ಕಾರ್ಖಾನೆಯ ನಿರ್ವಹಣೆಯನ್ನು ಯಶಸ್ವಿಯಾಗಿ ಮುನ್ನಡೆಸಿದರು. ಅವರ ಯೋಜಿತ ಕಾರ್ಯಪದ್ಧತಿಯಿಂದ ಕಾರ್ಖಾನೆ ಮತ್ತೆ ಸ್ಥಿರಗೊಂಡಿದ್ದು, ಅದರ ನೇರ ಪ್ರಯೋಜನ ಖಾನಾಪುರ ತಾಲ್ಲೂಕಿನ ಸಾವಿರಾರು ಕಬ್ಬು ಬೆಳೆಗಾರ ರೈತರಿಗೆ ದೊರೆಯುತ್ತಿದೆ.
ಈ ಹಿಂದೆ ತಾಲ್ಲೂಕಿನ ರೈತರು ತಮ್ಮ ಕಬ್ಬನ್ನು ಜಿಲ್ಲೆಯ ಹೊರಗಿನ ಅಥವಾ ತಾಲ್ಲೂಕಿನ ಹೊರಗಿನ ಸಕ್ಕರೆ ಕಾರ್ಖಾನೆಗಳಿಗೆ ಸಾಗಿಸಲು ಹೆಚ್ಚಿನ ವೆಚ್ಚ, ಸಮಯ ಹಾಗೂ ಸಾರಿಗೆ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿತ್ತು. ಆದರೆ ಸ್ಥಳೀಯ ಮಟ್ಟದಲ್ಲೇ ಕಾರ್ಖಾನೆ ಆರಂಭವಾದ ನಂತರ ಕಬ್ಬು ಅರೆಯುವ (ಗಾಳಪ) ಸೌಲಭ್ಯ ಲಭ್ಯವಾಗಿದ್ದು, ರೈತರ ಸಮಯ, ವೆಚ್ಚ ಹಾಗೂ ಶ್ರಮದಲ್ಲಿ ಗಣನೀಯ ಉಳಿತಾಯವಾಗಿದೆ.
ಕಾರ್ಖಾನೆ ನಿರ್ವಹಣೆಯ ಜೊತೆಗೆ ಸದಾನಂದ ಪಾಟೀಲ ಅವರು ಶಾಸಕ ವಿಠ್ಠಲರಾವ್ ಹಲಗೆಕರ ಅವರ ಮಾರ್ಗದರ್ಶನದಲ್ಲಿ ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡಲು ಹಾಗೂ ಸರ್ಕಾರದ ವಿವಿಧ ಜನಕಲ್ಯಾಣಕಾರಿ ಯೋಜನೆಗಳನ್ನು ಗ್ರಾಮೀಣ ಜನರ ಮನೆಬಾಗಿಲಿಗೆ ತಲುಪಿಸಲು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳನ್ನು ಪರಿಹರಿಸುವುದು, ರೈತರಿಗೆ ವಿವಿಧ ಯೋಜನೆಗಳ ಮಾಹಿತಿ ನೀಡುವುದು ಹಾಗೂ ಯುವಕರನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅವರು ಶ್ರಮಿಸುತ್ತಿದ್ದಾರೆ.
ಭಾರತೀಯ ಜನತಾ ಪಕ್ಷದ ಸಂಘಟನಾ ಕಾರ್ಯಗಳಲ್ಲಿಯೂ ಅವರ ಸಕ್ರಿಯ ಪಾತ್ರವಿದ್ದು, ಪಕ್ಷದ ನೀತಿಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಗ್ರಾಮ ಗ್ರಾಮಕ್ಕೂ ಪ್ರಚಾರ-ಪ್ರಸಾರ ಮಾಡುವ ಕಾರ್ಯವನ್ನು ನಿರಂತರವಾಗಿ ಕೈಗೊಳ್ಳುತ್ತಿದ್ದಾರೆ. ಅವರ ಸಂಘಟನಾ ಕೌಶಲ್ಯ ಹಾಗೂ ಸಮರ್ಪಿತ ಸೇವೆಯನ್ನು ಗುರುತಿಸಿ ಪಕ್ಷದ ಹಿರಿಯ ನಾಯಕತ್ವವು ಅವರನ್ನು ಭಾರತೀಯ ಜನತಾ ಪಕ್ಷದ ರೈತ ಮೋರ್ಚಾ, ಬೆಳಗಾವಿ ಜಿಲ್ಲಾ ಉಪಾಧ್ಯಕ್ಷರಾಗಿ ನೇಮಕ ಮಾಡಿದೆ.
ರೈತ ಮೋರ್ಚಾದ ಮೂಲಕ ರೈತರ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಸಂಬಂಧಿತ ಇಲಾಖೆಗಳೊಂದಿಗೆ ನಿರಂತರವಾಗಿ ಹೋರಾಟ ನಡೆಸುವುದು, ಸರ್ಕಾರಿ ಕಚೇರಿಗಳೊಂದಿಗೆ ಸಮನ್ವಯ ಸಾಧಿಸುವುದು ಹಾಗೂ ತಾಲ್ಲೂಕಿನ ಯುವ ಕಾರ್ಯಕರ್ತರ ಬಲಿಷ್ಠ ಸಂಘಟನೆಯನ್ನು ನಿರ್ಮಿಸಲು ಅವರು ವಿಶೇಷ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವರ ನಾಯಕತ್ವದಿಂದ ಅನೇಕ ಯುವಕರು ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ.
ರೈತರು, ಯುವಕರು ಹಾಗೂ ಗ್ರಾಮೀಣ ಅಭಿವೃದ್ಧಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ ಸದಾನಂದ ಮಾರುತಿರಾವ್ ಪಾಟೀಲ ಅವರಿಗೆ ಜನ್ಮದಿನದ ಅಂಗವಾಗಿ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಲಭಿಸಲಿ ಹಾಗೂ ಅವರ ನಾಯಕತ್ವದಲ್ಲಿ ಖಾನಾಪುರ ತಾಲ್ಲೂಕಿನ ಅಭಿವೃದ್ಧಿಗೆ ಮತ್ತು ರೈತ ಬಂಧುಗಳ ಉನ್ನತಿಗಾಗಿ ಇನ್ನಷ್ಟು ಗಮನಾರ್ಹ ಕಾರ್ಯಗಳು ನೆರವೇರಲಿ ಎಂಬ ಶುಭಾಶಯಗಳು ಎಲ್ಲ ವಲಯಗಳಿಂದ ವ್ಯಕ್ತವಾಗುತ್ತಿವೆ.
“ಆಪಲ ಖಾನಾಪುರ” ನ್ಯೂಸ್ ಪೋರ್ಟಲ್ ಹಾಗೂ “ಆಪಲ ಖಾನಾಪುರ” ಫೇಸ್ಬುಕ್ ಗ್ರೂಪ್ ಕುಟುಂಬದ ಪರವಾಗಿ ಸದಾನಂದ ಮಾರುತಿರಾವ್ ಪಾಟೀಲ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು!



