गोकाक येथे पाण्यात बुडालेल्या युवकाचा मृतदेह शोधण्यात यश; सोशल वर्कर रेस्क्यू टीम, एसडीआरएफ व अग्निशमन दलाची संयुक्त मोहीम.
गोकाक (प्रतिनिधी) : गोकाक परिसरात सायंकाळी फिरण्यासाठी गेलेल्या एका युवकाचा पाय घसरून पाण्यात पडल्याने दुर्दैवी मृत्यू झाल्याची घटना घडली. घटनेची माहिती मिळताच रात्री उशिरा बेलगाव येथील सोशल वर्कर रेस्क्यू टीम तातडीने घटनास्थळी दाखल झाली. त्यानंतर राज्य आपत्ती प्रतिसाद दल (SDRF) आणि गोकाक अग्निशमन विभागाच्या जवानांसोबत संयुक्तपणे शोधमोहीम राबविण्यात आली.

दीर्घकाळ सुरू असलेल्या अथक प्रयत्नांनंतर पाण्यात बुडालेल्या युवकाचा मृतदेह शोधून बाहेर काढण्यात पथकाला यश आले. अंधार, पाण्याचा प्रवाह आणि प्रतिकूल परिस्थिती असूनही सर्व यंत्रणांनी समन्वयाने काम करत ही मोहीम यशस्वीरीत्या पूर्ण केली.
या बचाव मोहिमेत अवधूत तुडवेकर, पद्मप्रसाद हुली, निलेश हिरेहोळी आणि मायकेल पिंटो या सोशल वर्कर रेस्क्यू टीमच्या सदस्यांनी धाडस, तत्परता आणि सेवाभावाचे दर्शन घडवले. त्यांच्या कार्याबद्दल स्थानिक नागरिकांनी तसेच प्रशासनाने कौतुक व्यक्त केले आहे.
दरम्यान, या घटनेच्या पार्श्वभूमीवर बचाव पथकाने नागरिकांना आणि पर्यटकांना महत्त्वाचे आवाहन केले आहे. धबधबे, नद्या, तलाव किंवा इतर जलाशय परिसरात फिरताना आवश्यक ती खबरदारी घ्यावी, धोकादायक ठिकाणी जाणे टाळावे, पावसाळ्यात पाण्याचा वेग आणि खोलीचा अंदाज न आल्यास पाण्यात उतरू नये तसेच प्रशासनाने घालून दिलेल्या सुरक्षा सूचनांचे काटेकोरपणे पालन करावे, असे आवाहन करण्यात आले.
“Always Prepared To Serve” या ब्रीदवाक्याप्रमाणे समाजसेवा आणि आपत्कालीन परिस्थितीत नागरिकांच्या मदतीसाठी सदैव तत्पर राहण्याचा निर्धार सोशल वर्कर रेस्क्यू टीमने पुन्हा एकदा आपल्या कार्यातून सिद्ध केला आहे.
ಗೋಕಾಕದ ನೀರಿನಲ್ಲಿ ಮುಳುಗಿದ ಯುವಕನ ಮೃತದೇಹ ಪತ್ತೆ ಹಚ್ಚುವಲ್ಲಿ ಯಶಸ್ಸು; ಸೋಶಿಯಲ್ ವರ್ಕರ್ ರೆಸ್ಕ್ಯೂ ತಂಡ, ಎಸ್ಡಿಆರ್ಎಫ್ ಹಾಗೂ ಅಗ್ನಿಶಾಮಕ ದಳದ ಸಂಯುಕ್ತ ಕಾರ್ಯಾಚರಣೆ.
ಗೋಕಾಕ್ (ಪ್ರತಿನಿಧಿ) : ಗೋಕಾಕ್ ಸಮಿಪ ಸಂಜೆ ವಿಹಾರಕ್ಕೆ ತೆರಳಿದ್ದ ಒಬ್ಬ ಯುವಕನ ಕಾಲು ಜಾರಿ ನೀರಿಗೆ ಬಿದ್ದ ಪರಿಣಾಮದ ಕಾರಣ ದುರ್ಘಟನಾವಶಾತ್ ಮೃತಪಟ್ಟ ಘಟನೆ ನಡೆದಿದೆ. ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ರಾತ್ರಿ ತಡವಾಗಿ ಬೆಳಗಾವಿಯ ಸೋಶಿಯಲ್ ವರ್ಕರ್ ರೆಸ್ಕ್ಯೂ ತಂಡ ತಕ್ಷಣವೇ ಸ್ಥಳಕ್ಕೆ ಧಾವಿಸಿತು. ಬಳಿಕ ರಾಜ್ಯ ವಿಪತ್ತು ಪ್ರತಿಕ್ರಿಯಾ ಪಡೆ (SDRF) ಹಾಗೂ ಗೋಕಾಕ್ ಅಗ್ನಿಶಾಮಕ ಇಲಾಖೆಯ ಸಿಬ್ಬಂದಿಯೊಂದಿಗೆ ಜಂಟಿಯಾಗಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಯಿತು.
ದೀರ್ಘಕಾಲ ನಿರಂತರವಾಗಿ ನಡೆದ ಶೋಧ ಕಾರ್ಯಾಚರಣೆಯ ಬಳಿಕ ನೀರಿನಲ್ಲಿ ಮುಳುಗಿದ್ದ ಯುವಕನ ಮೃತದೇಹವನ್ನು ಪತ್ತೆಹಚ್ಚಿ ಹೊರತೆಗೆದು ತರುವಲ್ಲಿ ರಕ್ಷಣಾ ತಂಡ ಯಶಸ್ವಿಯಾಯಿತು. ಕತ್ತಲೆ, ನೀರಿನ ತೀವ್ರ ಹರಿವು ಹಾಗೂ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿವೆ.
ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಅವಧೂತ ತುಡವೆಕರ, ಪದ್ಮಪ್ರಸಾದ್ ಹೂಳಿ, ನಿಲೇಶ್ ಹಿರೇಹೊಳಿ ಹಾಗೂ ಮೈಕೆಲ್ ಪಿಂಟೋ ಅವರುಗಳಾದ ಸೋಶಿಯಲ್ ವರ್ಕರ್ ರೆಸ್ಕ್ಯೂ ತಂಡದ ಸದಸ್ಯರು ಧೈರ್ಯ, ಸಮಯಪ್ರಜ್ಞೆ ಹಾಗೂ ಸೇವಾಭಾವವನ್ನು ಪ್ರದರ್ಶಿಸಿದರು. ಅವರ ಸೇವಾ ಮನೋಭಾವವನ್ನು ಸ್ಥಳೀಯ ನಾಗರಿಕರು ಹಾಗೂ ಆಡಳಿತ ವರ್ಗವು ಶ್ಲಾಘಿಸಿದೆ.
ಈ ದುರ್ಘಟನೆಯ ಹಿನ್ನೆಲೆಯಲ್ಲಿ ರಕ್ಷಣಾ ತಂಡವು ನಾಗರಿಕರು ಹಾಗೂ ಪ್ರವಾಸಿಗರಿಗೆ ಮಹತ್ವದ ಮನವಿಯೊಂದನ್ನು ಮಾಡಿದ್ದು
ಜಲಪಾತಗಳು, ನದಿಗಳು, ಕೆರೆಗಳು ಹಾಗೂ ಇತರೆ ಜಲಾಶಯಗಳ ಸಮೀಪ ಸಂಚರಿಸುವಾಗ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಅಪಾಯಕಾರಿ ಸ್ಥಳಗಳಿಗೆ ಹೋಗುವುದನ್ನು ತಪ್ಪಿಸಬೇಕು. ಮಳೆಗಾಲದಲ್ಲಿ ನೀರಿನ ಆಳ ಹಾಗೂ ಹರಿವಿನ ವೇಗದ ಸರಿಯಾದ ಅಂದಾಜು ಇಲ್ಲದಿದ್ದರೆ ನೀರಿಗೆ ಇಳಿಯಬಾರದು. ಅಲ್ಲದೆ, ಆಡಳಿತ ಹೊರಡಿಸಿರುವ ಎಲ್ಲಾ ಸುರಕ್ಷತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಲಾಗಿದೆ.
“Always Prepared To Serve” ಎಂಬ ಧ್ಯೇಯವಾಕ್ಯದಂತೆ ಸಮಾಜಸೇವೆ ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ಸಾರ್ವಜನಿಕರ ನೆರವಿಗೆ ಸದಾ ಸನ್ನದ್ಧರಾಗಿರುವ ತಮ್ಮ ಬದ್ಧತೆಯನ್ನು ಸೋಶಿಯಲ್ ವರ್ಕರ್ ರೆಸ್ಕ್ಯೂ ತಂಡ ಮತ್ತೊಮ್ಮೆ ತಮ್ಮ ಕಾರ್ಯದ ಮೂಲಕ ಸಾಬೀತುಪಡಿಸಿದೆ.

