पणजी पुलावरून नदीत उडी; बेळगाव सोशल वर्कर रेस्क्यू टीमची युद्धपातळीवर शोधमोहीम.
बेळगाव (प्रतिनिधी) : गोवा येथील पणजी पुलावरून एका व्यक्तीने आपले वाहन सोडून नदीत उडी घेतल्याची तातडीची माहिती शुक्रवारी रात्री पणजी पोलिसांकडून मिळताच बेळगाव येथील सोशल वर्कर रेस्क्यू टीम तात्काळ मदतीसाठी रवाना झाली.
शनिवारी सकाळी सुमारे 10 वाजता घटनास्थळी पोहोचलेल्या टीमने स्कुबा डायव्हिंग आणि बोटींच्या सहाय्याने युद्धपातळीवर शोध व बचाव मोहीम सुरू केली. सलग दोन ते तीन तास अथक प्रयत्न करूनही नदीतील प्रचंड पाण्याचा वेग, तीव्र प्रवाह आणि अत्यल्प दृश्यमानता यामुळे शोधकार्यात मोठ्या अडचणी निर्माण झाल्या. त्यामुळे शोधमोहीम तात्पुरती स्थगित करण्यात आली.
या मोहिमेत अवधूत तुडवेकर, पद्मप्रसाद हुली, विकी मेहता, ॲलन मोरे, शुभम हुली, मायकेल पिंटो आणि शंकर लमाणी यांनी सक्रिय सहभाग घेतला.
अत्यंत धोकादायक परिस्थितीतही तत्परतेने घटनास्थळी धाव घेऊन निःस्वार्थ भावनेने बचावकार्य केल्याबद्दल स्थानिक प्रशासन, पणजी पोलीस आणि नागरिकांनी सोशल वर्कर रेस्क्यू टीमच्या कार्याचे कौतुक केले.
“नेहमी सेवेसाठी तत्पर” हे ब्रीद जपत कार्यरत असलेल्या या टीमचा हेल्पलाइन क्रमांक : 89510 47677 आहे.
ಪಣಜಿ ಸೇತುವೆ ಮೆಲಿಂದ ನದಿಗೆ ಹಾರಿ ಆತ್ಮಹತ್ಯೆ; ಬೆಳಗಾವಿ ಸೋಶಿಯಲ್ ವರ್ಕರ್ ರೆಸ್ಕ್ಯೂ ತಂಡದಿಂದ ಯುದ್ಧೂಮಟ್ಟದಲ್ಲಿ ಶೋಧ ಕಾರ್ಯಾಚರಣೆ.
ಬೆಳಗಾವಿ (ಪ್ರತಿನಿಧಿ) : ಗೋವಾದ ಪಣಜಿ ಸೇತುವೆ ಮೆಲಿಂದ ಒಬ್ಬ ವ್ಯಕ್ತಿ ತನ್ನ ವಾಹನವನ್ನು ಬದಿಯಲ್ಲಿ ಬಿಟ್ಟು ನದಿಗೆ ಹಾರಿರುವ ಕುರಿತು ಶುಕ್ರವಾರ ರಾತ್ರಿ ಪಣಜಿ ಪೊಲೀಸರಿಂದ ತುರ್ತು ಮಾಹಿತಿ ದೊರಕುತ್ತಿದ್ದಂತೆಯೇ ಬೆಳಗಾವಿಯ ಸೋಶಿಯಲ್ ವರ್ಕರ್ ರೆಸ್ಕ್ಯೂ ತಂಡ ತಕ್ಷಣವೇ ನೆರವಿಗಾಗಿ ಸ್ಥಳಕ್ಕೆ ಧಾವಿಸಿತು.
ಶನಿವಾರ ಬೆಳಿಗ್ಗೆ ಸುಮಾರು 10 ಗಂಟೆಗೆ ಘಟನೆ ನಡೆದ ಸ್ಥಳಕ್ಕೆ ತಲುಪಿದ ತಂಡವು ಸ್ಕೂಬಾ ಡೈವಿಂಗ್ ಹಾಗೂ ದೋಣಿಗಳ ಸಹಾಯದಿಂದ ಯುದ್ಧಮಟ್ಟದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿತು. ಸತತ ಎರಡು ರಿಂದ ಮೂರು ಗಂಟೆಗಳ ಕಾಲ ಅವಿರತವಾಗಿ ಶ್ರಮಿಸಿದರೂ, ನದಿಯಲ್ಲಿದ್ದ ಅಪಾರ ನೀರಿನ ಹರಿವು, ತೀವ್ರ ಪ್ರವಾಹ ಹಾಗೂ ಅತ್ಯಲ್ಪ ದೃಶ್ಯಮಾನತೆಯಿಂದ ಶೋಧ ಕಾರ್ಯದಲ್ಲಿ ಭಾರೀ ಅಡಚಣೆಗಳು ಎದುರಾದವು. ಈ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ಈ ಕಾರ್ಯಾಚರಣೆಯಲ್ಲಿ ಅವಧೂತ ತುಡವೆಕರ, ಪದ್ಮಪ್ರಸಾದ್ ಹೂಳಿ, ವಿಕ್ಕಿ ಮೆಹತಾ, ಆಲನ್ ಮೋರೆ, ಶುಭಂ ಹೂಳಿ, ಮೈಕೇಲ್ ಪಿಂಟೊ ಹಾಗೂ ಶಂಕರ್ ಲಮಾಣಿ ಅವರು ಸಕ್ರಿಯವಾಗಿ ಭಾಗವಹಿಸಿದರು. ಅತ್ಯಂತ ಅಪಾಯಕಾರಿ ಪರಿಸ್ಥಿತಿಯಲ್ಲಿಯೂ ತಕ್ಷಣ ಸ್ಥಳಕ್ಕೆ ಧಾವಿಸಿ ನಿಸ್ವಾರ್ಥ ಸೇವಾಭಾವದಿಂದ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದಕ್ಕಾಗಿ ಸ್ಥಳೀಯ ಆಡಳಿತ, ಪಣಜಿ ಪೊಲೀಸರು ಹಾಗೂ ಸಾರ್ವಜನಿಕರು ಸೋಶಿಯಲ್ ವರ್ಕರ್ ರೆಸ್ಕ್ಯೂ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.
“ಯಾವಾಗಲೂ ಸೇವೆಗೆ ಸಿದ್ಧ” ಎಂಬ ಧ್ಯೇಯವಾಕ್ಯವನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಈ ತಂಡದ ಸಹಾಯವಾಣಿ ಸಂಖ್ಯೆ : 89510 47677 ಆಗಿದೆ.

