कक्केरीत भरधाव स्विफ्ट कारची धडक; दोन वर्षीय चिमुकल्याचा दुर्दैवी मृत्यू.
कक्केरी (प्रतिनिधी) : खानापूर तालुक्यातील कक्केरी गावात भरधाव स्विफ्ट कारच्या धडकेत दोन वर्षांच्या निष्पाप चिमुकल्याचा मृत्यू झाल्याची हृदयद्रावक घटना शुक्रवारी (दि. 10) सायंकाळी घडली. या अपघातात तोहीद अन्वरसाब कक्केरी (वय 2) या बालकाचा मृत्यू झाला असून, संपूर्ण गावात शोककळा पसरली आहे.
मिळालेल्या माहितीनुसार, तोहीद हा नेहमीप्रमाणे आपल्या घरासमोरील रस्त्याजवळ आला होता. सायंकाळी सुमारे चारच्या सुमारास भरधाव वेगाने आलेल्या के ए 22 पी 0154 क्रमांकाच्या स्विफ्ट कारने त्याला जोरदार धडक दिली. धडकेमुळे तोहीद गंभीर जखमी झाला असून, त्याच्या डोक्याच्या उजव्या बाजूला गंभीर दुखापत झाली.
अपघातानंतर स्थानिक नागरिकांनी तातडीने त्याला उपचारासाठी हल्याळ येथील रुग्णालयात दाखल केले. मात्र प्रकृती चिंताजनक असल्याने डॉक्टरांनी पुढील उपचारासाठी धारवाड येथे हलविण्याचा सल्ला दिला. धारवाडकडे नेत असताना वाटेतच तोहीदची प्राणज्योत मालवली.
या घटनेची नोंद नंदगड पोलीस ठाण्यात करण्यात आली असून, अपघाताचे नेमके कारण आणि कारचालकाच्या निष्काळजीपणाबाबत पोलीस अधिक तपास करत आहेत.
अत्यंत लहान वयात झालेल्या या दुर्दैवी मृत्यूमुळे कक्केरी गावावर शोककळा पसरली असून, गावातील नागरिकांनी हळहळ व्यक्त केली आहे.
स्थानिक नागरिकांनी कक्केरी गावातुन जाणाऱ्या अंतर्गत रस्त्यांवर वाहनांचा वेग नियंत्रित करण्यासाठी कठोर उपाययोजना करण्याची तसेच लहान मुलांच्या सुरक्षिततेसाठी आवश्यक खबरदारी घेण्याची मागणी प्रशासनाकडे केली आहे.
ಕಕ್ಕೇರಿಯಲ್ಲಿ ವೇಗವಾಗಿ ಬಂದ ಸ್ವಿಫ್ಟ್ ಕಾರಿನ ಡಿಕ್ಕಿ; ದುರ್ಘಟನೆಯಲ್ಲಿ ಎರಡು ವರ್ಷದ ಮಗು ಸಾವು
ಕಕ್ಕೇರಿ (ಪ್ರತಿನಿಧಿ): ಖಾನಾಪುರ ತಾಲ್ಲೂಕಿನ ಕಕ್ಕೇರಿ ಗ್ರಾಮದಲ್ಲಿ ವೇಗವಾಗಿ ಬಂದ ಸ್ವಿಫ್ಟ್ ಕಾರಿನ ಡಿಕ್ಕಿಯಿಂದ ಎರಡು ವರ್ಷದ ಪುಟ್ಟ ಮಗು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಶುಕ್ರವಾರ (ದಿ. 10) ಸಂಜೆ ಸಂಭವಿಸಿದೆ. ಈ ಅಪಘಾತದಲ್ಲಿ ತೋಹೀದ್ ಅನ್ವರ್ಸಾಬ್ ಕಕ್ಕೇರಿ (ವಯಸ್ಸು 2) ಮೃತಪಟ್ಟಿದ್ದು, ಇಡೀ ಗ್ರಾಮವೇ ಶೋಕಸಾಗರದಲ್ಲಿ ಮುಳುಗಿದೆ.
ಲಭ್ಯವಾದ ಮಾಹಿತಿಯ ಪ್ರಕಾರ, ತೋಹೀದ್ ಎಂದಿನಂತೆ ತನ್ನ ಮನೆಯ ಮುಂಭಾಗದ ರಸ್ತೆಯ ಸಮೀಪ ಬಂದಿತ್ತು. ಸಂಜೆ ಸುಮಾರು 4 ಗಂಟೆಯ ವೇಳೆಗೆ ಅತಿವೇಗದಲ್ಲಿ ಬಂದ KA 22 ಎಜಿ 0154 ನೋಂದಣಿ ಸಂಖ್ಯೆಯ ಸ್ವಿಫ್ಟ್ ಕಾರು ಆತನಿಗೆ ರಭಸದಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ತೋಹೀದ್ ಗಂಭೀರವಾಗಿ ಗಾಯಗೊಂಡಿದ್ದು, ತಲೆಯ ಬಲಭಾಗಕ್ಕೆ ತೀವ್ರ ಪೆಟ್ಟಾಗಿದೆ.
ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಆತನನ್ನು ಚಿಕಿತ್ಸೆಗಾಗಿ ಹಳಿಯಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಮಗುವಿನ ಸ್ಥಿತಿ ಅತ್ಯಂತ ಗಂಭೀರವಾಗಿದ್ದರಿಂದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಧಾರವಾಡ ಆಸ್ಪತ್ರೆಗೆ ಕರೆದೊಯ್ಯುವಂತೆ ಸಲಹೆ ನೀಡಿದರು. ಧಾರವಾಡಕ್ಕೆ ಕರೆದೊಯ್ಯುವ ಮಾರ್ಗಮಧ್ಯೆಯೇ ತೋಹೀದ್ ಕೊನೆಯುಸಿರೆಳೆದನು.
ಈ ಸಂಬಂಧ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ಹಾಗೂ ಕಾರು ಚಾಲಕನ ನಿರ್ಲಕ್ಷ್ಯದ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಮಗು ದುರ್ಮರಣ ಹೊಂದಿರುವ ಈ ದುರ್ಘಟನೆಯಿಂದ ಕಕ್ಕೇರಿ ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮಸ್ಥರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ, ಕಕ್ಕೇರಿ ಗ್ರಾಮದ ಮೂಲಕ ಹಾದು ಹೋಗುವ ಒಳರಸ್ತೆಗಳಲ್ಲಿ ವಾಹನಗಳ ವೇಗವನ್ನು ನಿಯಂತ್ರಿಸಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಹಾಗೂ ಪುಟ್ಟ ಮಕ್ಕಳ ಸುರಕ್ಷತೆಗಾಗಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಸ್ಥಳೀಯರು ಆಡಳಿತವನ್ನು ಒತ್ತಾಯಿಸಿದ್ದಾರೆ.

