खानापूर तहसीलदारांच्या कथित गैरवर्तनाविरोधात पीडीओ संघटना आक्रमक; जिल्हाधिकाऱ्यांकडे शिस्तभंग कारवाईची मागणी.
खानापूर, प्रतिनिधी : कर्नाटक राज्य पंचायत विकास अधिकारी (बी-ग्रेड) पदोन्नती संघटनेने खानापूरचे तहसीलदार दुंडप्पा कोमार यांच्या कथित गैरवर्तन, दडपशाही आणि अधिकाऱ्यांशी अपमानास्पद वर्तन केल्याचा आरोप करत जिल्हाधिकारी तथा जिल्हा निवडणूक अधिकारी, बेळगाव यांच्याकडे लेखी तक्रार दाखल केली आहे. संबंधित अधिकाऱ्यावर शिस्तभंगाची कारवाई करून अशा घटना पुन्हा घडू नयेत, अशी मागणी संघटनेने केली आहे.
संघटनेने दिलेल्या निवेदनानुसार, 9 जुलै 2026 रोजी खानापूर तालुका पंचायत सभागृहात विशेष मतदार यादी पुनरावलोकन (SIR) संदर्भात तहसीलदारांच्या अध्यक्षतेखाली बैठक आयोजित करण्यात आली होती. या बैठकीत पंचायत विकास अधिकारी (PDO) आणि डेटा एन्ट्री ऑपरेटर सहभागी झाले होते.
निवेदनात म्हटले आहे की, बैठकीदरम्यान एसआयआर प्रक्रियेबाबत अधिकाऱ्यांनी उपस्थित केलेल्या शंकांना उत्तर देण्याऐवजी तहसीलदारांनी प्रश्न पूर्ण ऐकून न घेता अधिकाऱ्यांना मोठ्या आवाजात झापले, गप्प बसवले आणि अपमानास्पद भाषा वापरली. काही अधिकाऱ्यांनी शांतपणे प्रश्न विचारण्याची संधी द्यावी, अशी विनंती केली असतानाही त्यांच्याशी उद्धटपणे वागण्यात आल्याचा आरोप करण्यात आला आहे.
संघटनेच्या म्हणण्यानुसार, बैठकीत काही पंचायत विकास अधिकाऱ्यांनी तहसीलदारांच्या वागणुकीबाबत आक्षेप घेतला असता, त्यांनाही धमकावण्यात आले. एवढेच नव्हे तर बैठक संपल्यानंतर सभागृहाबाहेरही संबंधित अधिकाऱ्यांशी वाद घालून धक्काबुक्की करण्याचा प्रयत्न झाल्याचा आरोप निवेदनात करण्यात आला आहे.
संघटनेने आपल्या तक्रारीत हा प्रकार पहिल्यांदाच घडलेला नसल्याचा दावा केला आहे. यापूर्वीही पंचायत विकास अधिकारी, महिला अधिकारी आणि ग्रामपंचायत कर्मचाऱ्यांशी अपमानास्पद भाषा वापरणे, सार्वजनिक बैठकीत अवमानकारक वर्तन करणे, तसेच सामाजिक, शैक्षणिक व जातीय जनगणना आणि नैसर्गिक आपत्ती आढावा बैठकीतही अशाच प्रकारचे वर्तन केल्याचे अनेक प्रसंग निवेदनात नमूद करण्यात आले आहेत.
या पार्श्वभूमीवर तहसीलदार दुंडप्पा कोमार यांच्याविरुद्ध सखोल चौकशी करून शिस्तभंगाची कारवाई करावी तसेच तालुक्यातील अधिकारी-कर्मचाऱ्यांना न्याय मिळावा, अशी मागणी कर्नाटक राज्य पंचायत विकास अधिकारी (बी-ग्रेड) पदोन्नती संघटनेने जिल्हाधिकाऱ्यांकडे केली आहे.
ಖಾನಾಪುರ ತಹಶೀಲ್ದಾರರ ವಿರುದ್ಧ ಪಿಡಿಒ ಸಂಘಟನೆ ವತಿಯಿಂದ ಆಕ್ರೋಶ; ಶಿಸ್ತಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಮನವಿ.
ಖಾನಾಪುರ, ಪ್ರತಿನಿಧಿ : ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಬಿ-ಗ್ರೇಡ್) ಪದೋನ್ನತಿ ಸಂಘವು ಖಾನಾಪುರ ತಹಶೀಲ್ದಾರ ದುಂಡಪ್ಪ ಕೋಮಾರ ಅವರ ವಿರುದ್ಧ ಅಧಿಕಾರಿಗಳೊಂದಿಗೆ ಅನುಚಿತ ವರ್ತನೆ, ದಬ್ಬಾಳಿಕೆ ಹಾಗೂ ಅವಮಾನಕಾರಿ ನಡೆ ತೋರಿರುವ ಆರೋಪ ಮಾಡಿ, ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದೆ. ಸಂಬಂಧಿಸಿದ ಅಧಿಕಾರಿಯ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಇಂತಹ ಘಟನೆಗಳು ಮರುಕಳಿಸದಂತೆ ಕ್ರಮವಹಿಸುವಂತೆ ಸಂಘವು ಮನವಿ ಮಾಡಿದೆ.
ಸಂಘದ ಮನವಿಯ ಪ್ರಕಾರ, ಜುಲೈ 9, 2026 ರಂದು ಖಾನಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ವಿಶೇಷ ಮತದಾರರ ಪಟ್ಟಿಯ ಪರಿಷ್ಕರಣೆ (SIR) ಕುರಿತು ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO) ಹಾಗೂ ಡೇಟಾ ಎಂಟ್ರಿ ಆಪರೇಟರ್ಗಳು ಭಾಗವಹಿಸಿದ್ದರು.
ಮನವಿಯಲ್ಲಿ ತಿಳಿಸಿರುವಂತೆ, ಸಭೆಯ ವೇಳೆ ಎಸ್ಐಆರ್ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡುವ ಬದಲಾಗಿ, ತಹಶೀಲ್ದಾರರು ಪ್ರಶ್ನೆಯನ್ನು ಪೂರ್ಣವಾಗಿ ಆಲಿಸದೇ ಅಧಿಕಾರಿಗಳನ್ನು ಜೋರಾಗಿ ಗದರಿಸಿ, ಮೌನವಾಗಿರಲು ಹೇಳಿ ಅವಮಾನಕಾರಿ ಭಾಷೆ ಬಳಸಿದರು ಎಂದು ಆರೋಪಿಸಲಾಗಿದೆ. ಕೆಲವು ಅಧಿಕಾರಿಗಳು ಶಾಂತವಾಗಿ ತಮ್ಮ ಪ್ರಶ್ನೆಗಳನ್ನು ಮಂಡಿಸಲು ಅವಕಾಶ ನೀಡುವಂತೆ ವಿನಂತಿಸಿದ್ದರೂ, ಅವರೊಂದಿಗೆ ಸಹ ಅಸಭ್ಯವಾಗಿ ವರ್ತಿಸಲಾಗಿದೆ ಎಂದು ಸಂಘ ಆರೋಪಿಸಿದೆ.
ಸಭೆಯ ಸಂದರ್ಭದಲ್ಲಿ ಕೆಲ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಹಶೀಲ್ದಾರರ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದಾಗ, ಅವರನ್ನೂ ಬೆದರಿಸಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಸಭೆ ಮುಗಿದ ಬಳಿಕ ಸಭಾಂಗಣದ ಹೊರಭಾಗದಲ್ಲಿಯೂ ಸಂಬಂಧಿತ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ, ತಳ್ಳಾಟ ನಡೆಸಲು ಪ್ರಯತ್ನಿಸಲಾಗಿದೆ ಎಂಬ ಗಂಭೀರ ಆರೋಪವನ್ನೂ ಮಾಡಲಾಗಿದೆ.
ಈ ಘಟನೆ ಮೊದಲ ಬಾರಿಗೆ ನಡೆದದ್ದಲ್ಲ ಎಂದು ಸಂಘ ತನ್ನ ದೂರಿನಲ್ಲಿ ಹೇಳಿದೆ. ಈ ಹಿಂದೆ ಕೂಡ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಮಹಿಳಾ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತ್ ಸಿಬ್ಬಂದಿಯೊಂದಿಗೆ ಅವಮಾನಕಾರಿ ಭಾಷೆ ಬಳಸುವುದು, ಸಾರ್ವಜನಿಕ ಸಭೆಗಳಲ್ಲಿ ಅವಹೇಳನಕಾರಿ ವರ್ತನೆ ತೋರಿಸುವುದು, ಸಾಮಾಜಿಕ, ಶೈಕ್ಷಣಿಕ ಮತ್ತು ಜಾತಿ ಜನಗಣತಿ ಸಭೆಗಳು ಹಾಗೂ ಪ್ರಕೃತಿ ವಿಕೋಪ ಪರಿಶೀಲನಾ ಸಭೆಗಳಲ್ಲಿಯೂ ಇದೇ ರೀತಿಯ ವರ್ತನೆ ನಡೆಸಿರುವ ಹಲವು ಘಟನೆಗಳನ್ನು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ತಹಶೀಲ್ದಾರ ದುಂಡಪ್ಪ ಕೋಮಾರ ಅವರ ವಿರುದ್ಧ ಸವಿಸ್ತಾರ ತನಿಖೆ ನಡೆಸಿ, ಶಿಸ್ತು ಕ್ರಮ ಕೈಗೊಳ್ಳಬೇಕು. ಜೊತೆಗೆ ತಾಲೂಕಿನ ಅಧಿಕಾರಿ ಹಾಗೂ ಸಿಬ್ಬಂದಿಗೆ ನ್ಯಾಯ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಬಿ-ಗ್ರೇಡ್) ಪದೋನ್ನತಿ ಸಂಘವು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.

