मेरडा येथील ग्रामपंचायत कामांबाबतची लोकायुक्तांकडे केलेली तक्रार फेटाळली; पुराव्याअभावी प्रकरण निकाली. महाबळेश्वर पाटील यांना दिलासा.
खानापूर : प्रतिनिधी
खानापूर तालुक्यातील मेरडा येथील ग्रामपंचायतीच्या विकासकामांमध्ये अनियमितता व भ्रष्टाचार झाल्याचा आरोप करत मेरडा ग्रामपंचायतचे तत्कालीन अध्यक्ष महाबळेश्वर पाटील व तत्कालीन पीडीओ यांच्यावर दाखल करण्यात आलेली तक्रार कर्नाटक लोकायुक्तांनी फेटाळून लावत प्रकरण निकाली काढले आहे. त्यामुळे महाबळेश्वर पाटील यांना दिलासा मिळाला असून न्यायव्यवस्थेने मला न्याय दिला असून सत्याचा विजय झाला आहे, असे महाबळेश्वर पाटील यांनी म्हटले आहे.
मेरडा येथील विष्णू जयवंत पाटील यांनी हलगा ग्रामपंचायतीचे तत्कालीन अध्यक्ष महाबळेश्वर पाटील आणि पंचायत विकास अधिकारी (PDO) यांच्याविरोधात लोकायुक्तांकडे तक्रार दाखल केली होती. तक्रारीत मेरडा गावातील स्वागत कमानीपासून विष्णू गोपाळ पाटील यांच्या घरापर्यंतच्या गटारी फोडून त्यांतील दगड हटविण्यात आल्याचा तसेच 2014 ते 2024 या कालावधीत झालेला सिमेंट काँक्रीट (सीसी) रस्त्यांच्या कामांची माहिती देणारे फलक लावण्यात आले नसल्याचा आरोप करण्यात आला होता.
लोकायुक्तांच्या नोटिशीनंतर दोन्ही प्रतिवादी ग्रामपंचायतचे माजी अध्यक्ष महाबळेश्वर पाटील व पीडीओ या दोघांनी लेखी खुलासा सादर करून सर्व आरोप फेटाळले. तसेच गटारीतील दगड हटविण्यात आले नसल्याचे सांगत संबंधित ठिकाणाची छायाचित्रे सादर करण्यात आली. तसेच 2020 नंतर झालेल्या बहुतांश विकासकामांवर माहिती फलक उभारण्यात आल्याचे पुरावेही सादर करण्यात आले.
याप्रकरणी खानापूर तालुका पंचायतीचे, कार्यकारी अधिकाऱ्यांनीही स्वतंत्र अहवाल सादर करून प्रतिवाद्यांच्या (महाबळेश्वर पाटील व पीडीओ) यांच्या म्हणण्याला दुजोरा दिला. लोकायुक्तांनी तक्रारदार विष्णू पाटील यांना प्रतिउत्तर सादर करण्यासाठी अनेक संधी दिल्या; व अनेक वेळा नोटीस देण्यात आली मात्र त्यांनी कोणतेही प्रतिउत्तर किंवा अतिरिक्त पुरावे सादर केले नाहीत.
लोकायुक्तांनी आदेशात नमूद केले की, 2014 ते 2020 या कालावधीतील आरोपांबाबत तक्रार उशिरा दाखल झाल्याने कर्नाटक लोकायुक्त कायद्याच्या कलम 8(2)(ड) नुसार अशा आरोपांची चौकशी करण्यास कायदेशीर मर्यादा आहेत. तसेच 2020 नंतरच्या कामांबाबत उपलब्ध कागदपत्रे, छायाचित्रे आणि अधिकाऱ्यांच्या अहवालातून बहुतेक कामांवर माहिती फलक लावण्यात आल्याचे स्पष्ट होत असल्याने प्रतिवाद्यांकडून ग्रामपंचायतचे तत्कालीन अध्यक्ष महाबळेश्वर पाटील व पीडीओ यांनी केलेल्या कर्तव्यात कोणत्याही चूका व कसूर झाल्याचे आढळून आले नाही.
या सर्व बाबींचा विचार करून सहाय्यक निबंधक यांनी केलेल्या कायदेशीर अंतिम तपासणी व टिपणाला मान्यता देत लोकायुक्तांनी तक्रार निकाली काढण्याचे आदेश 22 जून 2026 रोजी दिले आहेत.
महाबळेश्वर पाटील (माजी अध्यक्ष, हलगा ग्रामपंचायत) यांची प्रतिक्रिया :..
“माझ्याविरोधात करण्यात आलेले सर्व आरोप पूर्णपणे बिनबुडाचे आणि तथ्यहीन होते. लोकायुक्तांनी या प्रकरणातील सर्व कागदपत्रांची सखोल पडताळणी करून तक्रार निकाली काढली आहे. त्यामुळे सत्य जनतेसमोर आले आहे. काही व्यक्तींनी जाणीवपूर्वक माझी प्रतिमा मलिन करण्याच्या उद्देशाने खोटे व दिशाभूल करणारे आरोप केले. अशा निराधार आरोपांमुळे माझी वैयक्तिक व सामाजिक बदनामी झाली आहे. त्यामुळे संबंधितांविरोधात आम्ही कायदेशीर मार्गाने मानहानीचा दावा दाखल करणार आहोत. न्यायव्यवस्थेवर माझा पूर्ण विश्वास असून, सत्याचा अखेर विजय झाला आहे.”
ಮೇರಡಾ ಗ್ರಾಮ ಪಂಚಾಯಿತಿ ಕಾಮಗಾರಿಗಳ ಕುರಿತು ಲೋಕಾಯುಕ್ತರಿಗೆ ಸಲ್ಲಿಸಿದ್ದ ದೂರು ವಜಾ; ಸಾಕ್ಷ್ಯಾಧಾರಗಳ ಕೊರತೆಯಿಂದ ಪ್ರಕರಣಕ್ಕೆ ತೆರೆ. ನಿರಾಳತೆಯ ಉಸಿರು ಬಿಟ್ಟ ಮಹಾಬಳೇಶ್ವರ ಪಾಟೀಲ್ .
ಖಾನಾಪುರ : ಪ್ರತಿನಿಧಿಖಾನಾಪುರ ತಾಲ್ಲೂಕಿನ ಮೇರಡಾ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ದೂರನ್ನು ಕರ್ನಾಟಕ ಲೋಕಾಯುಕ್ತರು ತಿರಸ್ಕರಿಸಿ ಪ್ರಕರಣವನ್ನು ವಿಲೇವಾರಿ ಮಾಡಿದ್ದಾರೆ.
ಖಾನಾಪುರ ತಾಲ್ಲೂಕಿನ ಮೇರಡಾ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ದೂರನ್ನು ಕರ್ನಾಟಕ ಲೋಕಾಯುಕ್ತರು ತಿರಸ್ಕರಿಸಿ ಪ್ರಕರಣವನ್ನು ವಿಲೇವಾರಿ ಮಾಡಿದ್ದಾರೆ.
ಮೇರಡಾ ಗ್ರಾಮದ ವಿಷ್ಣು ಜಯವಂತ ಪಾಟೀಲ್ ಅವರು ಹಲಗಾ ಗ್ರಾಮ ಪಂಚಾಯಿತಿಯ ಆಗಿನ ಅಧ್ಯಕ್ಷ ಮಹಾಬಳೇಶ್ವರ ಪಾಟೀಲ್ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ವಿರುದ್ಧ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ದೂರಿನಲ್ಲಿ, ಮೇರಡಾ ಗ್ರಾಮದ ಸ್ವಾಗತ ಕಮಾನುಗಳಿಂದ ವಿಷ್ಣು ಗೋಪಾಳ ಪಾಟೀಲ್ ಅವರ ಮನೆವರೆಗೆ ಇರುವ ಚರಂಡಿಯನ್ನು ಒಡೆದು ಅದರಲ್ಲಿದ್ದ ಕಲ್ಲುಗಳನ್ನು ತೆಗೆದು ಹಾಗೂ 2014 ರಿಂದ 2024ರ ಅವಧಿಯಲ್ಲಿ ನಿರ್ಮಿಸಲಾದ ಸಿಮೆಂಟ್ ಕಾಂಕ್ರೀಟ್ (CC) ರಸ್ತೆ ಕಾಮಗಾರಿಗಳ ಮಾಹಿತಿ ಫಲಕಗಳನ್ನು ಅಳವಡಿಸಿಲ್ಲ ಎಂದು ಆರೋಪಿಸಲಾಗಿತ್ತು.
ಲೋಕಾಯುಕ್ತರ ನೋಟಿಸ್ನ ನಂತರ ಇಬ್ಬರು ಪ್ರತಿವಾದಿಗಳಾದ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಮಹಾಬಳೇಶ್ವರ ಪಾಟೀಲ್ ಹಾಗೂ ಪಿಡಿಒ ಅವರು ಲಿಖಿತ ಸ್ಪಷ್ಟೀಕರಣ ಸಲ್ಲಿಸಿ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದರು. ಚರಂಡಿಯಲ್ಲಿದ್ದ ಕಲ್ಲುಗಳನ್ನು ತೆಗೆದುಹಾಕಿಲ್ಲ ಎಂದು ತಿಳಿಸಿ ಸಂಬಂಧಿತ ಸ್ಥಳದ ಛಾಯಾಚಿತ್ರಗಳನ್ನು ಸಹ ಸಲ್ಲಿಸಲಾಯಿತು. ಜೊತೆಗೆ 2020ರ ನಂತರ ಕೈಗೊಳ್ಳಲಾದ ಬಹುತೇಕ ಅಭಿವೃದ್ಧಿ ಕಾಮಗಾರಿಗಳಿಗೆ ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ ಎಂಬುದಕ್ಕೆ ಅಗತ್ಯ ದಾಖಲೆಗಳನ್ನೂ ಸಲ್ಲಿಸಲಾಯಿತು.
ಈ ಪ್ರಕರಣದಲ್ಲಿ ಖಾನಾಪುರ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯವರು ಸಹ ಪ್ರತ್ಯೇಕ ವರದಿ ಸಲ್ಲಿಸಿ ಪ್ರತಿವಾದಿಗಳಾದ ಮಹಾಬಳೇಶ್ವರ ಪಾಟೀಲ್ ಹಾಗೂ ಪಿಡಿಒ ಅವರ ವಾದವನ್ನು ಸಮರ್ಥಿಸಿದರು. ಲೋಕಾಯುಕ್ತರು ದೂರುದಾರ ವಿಷ್ಣು ಪಾಟೀಲ್ ಅವರಿಗೆ ಪ್ರತಿಕ್ರಿಯೆ ಸಲ್ಲಿಸಲು ಹಲವು ಅವಕಾಶಗಳನ್ನು ನೀಡಿ ಅನೇಕ ಬಾರಿ ನೋಟಿಸ್ ನೀಡಿದರು ಆದಾಗ್ಯೂ ಅವರು ಯಾವುದೇ ಪ್ರತಿಕ್ರಿಯೆ ಅಥವಾ ಹೆಚ್ಚುವರಿ ಸಾಕ್ಷ್ಯಾಧಾರಗಳನ್ನು ಸಲ್ಲಿಸಲು ವಿಫಲವಾದರು.
ಲೋಕಾಯುಕ್ತರು ತಮ್ಮ ಆದೇಶದಲ್ಲಿ, 2014ರಿಂದ 2020ರ ಅವಧಿಗೆ ಸಂಬಂಧಿಸಿದ ಆರೋಪಗಳ ಕುರಿತು ದೂರು ತಡವಾಗಿ ಸಲ್ಲಿಕೆಯಾಗಿರುವುದರಿಂದ ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಕಲಂ 8(2)(ಡಿ) ಅನ್ವಯ ಇಂತಹ ಆರೋಪಗಳ ತನಿಖೆ ನಡೆಸಲು ಕಾನೂನುಬದ್ಧ ಮಿತಿಗಳಿವೆ ಎಂದು ಉಲ್ಲೇಖಿಸಿದ್ದಾರೆ. ಹಾಗೆಯೇ 2020ರ ನಂತರದ ಕಾಮಗಾರಿಗಳ ಕುರಿತು ಲಭ್ಯವಿರುವ ದಾಖಲೆಗಳು, ಛಾಯಾಚಿತ್ರಗಳು ಹಾಗೂ ಅಧಿಕಾರಿಗಳ ವರದಿಗಳ ಆಧಾರದ ಮೇಲೆ ಬಹುತೇಕ ಕಾಮಗಾರಿಗಳಿಗೆ ಮಾಹಿತಿ ಫಲಕಗಳನ್ನು ಅಳವಡಿಸಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಗ್ರಾಮ ಪಂಚಾಯಿತಿಯ ಆಗಿನ ಅಧ್ಯಕ್ಷ ಮಹಾಬಳೇಶ್ವರ ಪಾಟೀಲ್ ಹಾಗೂ ಪಿಡಿಒ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಯಾವುದೇ ತಪ್ಪು ಅಥವಾ ನಿರ್ಲಕ್ಷ್ಯ ಎಸಗಿರುವುದು ಕಂಡುಬಂದಿಲ್ಲ ಎಂದು ಲೋಕಾಯುಕ್ತರು ಅಭಿಪ್ರಾಯಪಟ್ಟಿದ್ದಾರೆ.
ಈ ಎಲ್ಲಾ ಅಂಶಗಳನ್ನು ಪರಿಗಣಿಸಿ, ಸಹಾಯಕ ನಿಬಂಧಕರವರು ನಡೆಸಿದ ಕಾನೂನುಬದ್ಧ ಅಂತಿಮ ಪರಿಶೀಲನೆ ಹಾಗೂ ಟಿಪ್ಪಣಿಗೆ ಅನುಮೋದನೆ ನೀಡಿ, ಲೋಕಾಯುಕ್ತರು 22 ಜೂನ್ 2026ರಂದು ಈ ದೂರನ್ನು ವಿಲೇವಾರಿ ಮಾಡುವಂತೆ ಆದೇಶ ಹೊರಡಿಸಿದ್ದಾರೆ.
ಮಹಾಬಳೇಶ್ವರ ಪಾಟೀಲ್ (ಮಾಜಿ ಅಧ್ಯಕ್ಷರು, ಹಲಗಾ ಗ್ರಾಮ ಪಂಚಾಯಿತಿ) ಆದೇಶದ ನಂತರ ಪ್ರತಿಕ್ರಿಯೆ :
“ನನ್ನ ವಿರುದ್ಧ ಮಾಡಲಾಗಿದ್ದ ಎಲ್ಲಾ ಆರೋಪಗಳು ಸಂಪೂರ್ಣವಾಗಿ ಆಧಾರರಹಿತ ಹಾಗೂ ವಾಸ್ತವಾಂಶವಿಲ್ಲದವು. ಲೋಕಾಯುಕ್ತರು ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಮಗ್ರವಾಗಿ ಪರಿಶೀಲಿಸಿ ದೂರನ್ನು ವಿಲೇವಾರಿ ಮಾಡಿದ್ದಾರೆ. ಇದರಿಂದ ಸತ್ಯ ಜನರ ಮುಂದೆ ಬಂದಿದೆ. ಕೆಲವರು ಉದ್ದೇಶಪೂರ್ವಕವಾಗಿ ನನ್ನ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಸುಳ್ಳು ಹಾಗೂ ದಾರಿತಪ್ಪಿಸುವ ಆರೋಪಗಳನ್ನು ಮಾಡಿದ್ದಾರೆ. ಇಂತಹ ನಿರಾಧಾರ ಆರೋಪಗಳಿಂದ ನನ್ನ ವೈಯಕ್ತಿಕ ಹಾಗೂ ಸಾಮಾಜಿಕ ಪ್ರತಿಷ್ಠೆಗೆ ಧಕ್ಕೆ ಉಂಟಾಗಿದೆ. ಆದ್ದರಿಂದ ಸಂಬಂಧಪಟ್ಟವರ ವಿರುದ್ಧ ನಾವು ಕಾನೂನುಬದ್ಧವಾಗಿ ಮಾನಹಾನಿ ಮೊಕದ್ದಮೆ ಹೂಡಲಿದ್ದೇವೆ. ನ್ಯಾಯಾಂಗ ವ್ಯವಸ್ಥೆಯ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದ್ದು, ಅಂತಿಮವಾಗಿ ಸತ್ಯವೇ ಗೆದ್ದಿದೆ.” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


