बोगस नावे वगळण्यासाठी विशेष मतदार यादी पुनरीक्षण मोहिमेस सर्वांनी सहकार्य करावे; भाजपचे पत्रकार परिषदेत आवाहन.
खानापूर : प्रतिनिधी
भारत निवडणूक आयोगाच्या विशेष संक्षिप्त मतदार यादी पुनरीक्षण (एसआयआर) कार्यक्रमांतर्गत खानापूर तालुक्यात मतदार यादी शुद्धीकरण व अद्ययावतीकरणाची व्यापक मोहीम सुरू झाली असून, या मोहिमेला नागरिकांनी पूर्ण सहकार्य करावे, असे आवाहन भारतीय जनता पक्षाच्या वतीने आयोजित पत्रकार परिषदेत करण्यात आले.
तालुक्यातील 312 मतदान केंद्रांवर बूथस्तरीय अधिकारी (बीएलओ) घराघरात जाऊन मतदारांची पडताळणी करणार असून, प्रत्येक पात्र मतदाराची माहिती अचूक करण्यासाठी ही मोहीम राबविण्यात येत असल्याचे यावेळी सांगण्यात आले. पत्रकार परिषदेला आमदार विठ्ठलराव हलगेकर, भाजपचे राज्य कार्यकारिणी सदस्य प्रमोद कोचेरी, माजी आमदार अरविंद पाटील, धनश्री सरदेसाई, तालुकाध्यक्ष बसवराज सानिकोप, जिल्हा उपाध्यक्ष संजय कुबल यांची प्रमुख उपस्थिती होती. प्रारंभी भाजपचे प्रधान कार्यदर्शी मल्लाप्पा मारीहाळ यांनी उपस्थितांचे स्वागत केले.
प्रमोद कोचेरी यांनी सांगितले की, जांबोटी, हेमाडगा व इतर भागातील अनेक नागरिक रोजगारानिमित्त गोवा व महाराष्ट्रात वास्तव्यास आहेत. अशा नागरिकांनी आपल्या मूळ गावातील मतदार यादीतच नाव कायम ठेवावे. बीएलओ अधिकारी प्रत्येक घरी तीन वेळा भेट देणार असून नागरिकांनी आवश्यक कागदपत्रांसह सहकार्य करावे, असे त्यांनी आवाहन केले.
माजी आमदार अरविंद पाटील यांनी प्रत्येक मतदान केंद्रावर भाजपने बूथ प्रमुखांची नियुक्ती करून जनजागृती सुरू केल्याचे सांगितले. जांबोटी, मान, सडा, होळंद परिसरातील नागरिकांनी गोव्यात मतदार म्हणून नोंद न करता खानापूर तालुक्यातील मूळ गावातील मतदार यादीत नाव ठेवावे, असे त्यांनी स्पष्ट केले. तसेच तालुक्यातील बोगस व परप्रांतीय मतदारांची नावे तपासून वगळण्याची मागणीही त्यांनी केली.
धनश्री सरदेसाई यांनी वांदरमारी आदिवासी समाजातील नागरिकांना आवश्यक ती मदत करण्याचे आवाहन केले. तसेच तालुक्यातील काही नागरिक गोवा, पुणे किंवा इतरत्र वास्तव्यास असून दोन ठिकाणी मतदार नोंद असलेल्या नागरिकांनी एका ठिकाणची नोंद रद्द करून मूळ गावातील मतदार यादीतच नाव कायम ठेवावे, असे त्यांनी सांगितले.
आमदार विठ्ठलराव हलगेकर यांनी केंद्र सरकारच्या मतदार यादी शुद्धीकरण मोहिमेची माहिती देताना, २००२ व २०२५ च्या मतदार यादीचे मॅपिंग करण्यात येत असल्याचे सांगितले. २००२ च्या मतदार यादीत नाव नसलेल्या नागरिकांनी आवश्यक ओळखपत्रे व कागदपत्रे बीएलओकडे सादर करणे आवश्यक असल्याचे त्यांनी स्पष्ट केले. दोन ठिकाणी मतदार नोंद असलेल्या नागरिकांनी एकाच ठिकाणी नाव ठेवावे, असे आवाहन त्यांनी केले.
यावेळी नुकत्याच झालेल्या विधान परिषद निवडणुकीत आपण पक्षादेशाविरोधात क्रॉस व्होटिंग केल्याच्या सोशल मीडियावरील अफवा पूर्णपणे खोट्या, दिशाभूल करणाऱ्या व बदनामीच्या उद्देशाने पसरविल्या जात असल्याचा खुलासाही आमदार हलगेकर यांनी केला.
तालुकाध्यक्ष बसवराज सानिकोप व जिल्हा उपाध्यक्ष संजय कुबल यांनीही नागरिकांनी मतदार यादी शुद्धीकरण मोहिमेत सक्रिय सहभाग घ्यावा व बोगस नावे वगळण्यासाठी प्रशासनाला सहकार्य करावे, असे आवाहन केले.
यावेळी माजी जिल्हा परिषद सदस्य बाबुराव देसाई, रयत मोर्चा जिल्हा उपाध्यक्ष तथा लैला शुगरचे एमडी सदानंद पाटील, ॲड. चेतन मनेरिकर, जोतिबा रेमाणी, मोहन पाटील, वसंत देसाई, सुनील मडीमणी, शंकर पाटील, सदानंद मासेकर, यांच्यासह भाजपचे पदाधिकारी व कार्यकर्ते मोठ्या संख्येने उपस्थित होते.
ನಕಲಿ ಮತದಾರರ ಹೆಸರುಗಳನ್ನು ಕೈ ಬಿಡಲು ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನಕ್ಕೆ ಎಲ್ಲರೂ ಸಹಕರಿಸಬೇಕು; ಬಿಜೆಪಿ ಪಕ್ಷದ ವತಿಯಿಂದ ಪತ್ರಿಕಾಗೋಷ್ಠಿಯಲ್ಲಿ ಮನವಿ.
ಖಾನಾಪುರ : ಪ್ರತಿನಿಧಿ
ಭಾರತ ಚುನಾವಣಾ ಆಯೋಗದ ವಿಶೇಷ ಸಂಕ್ಷಿಪ್ತ ಮತದಾರರ ಪಟ್ಟಿ ಪರಿಷ್ಕರಣೆ (ಎಸ್ಐಆರ್) ಕಾರ್ಯಕ್ರಮದ ಅಂಗವಾಗಿ ಖಾನಾಪುರ ತಾಲ್ಲೂಕಿನಲ್ಲಿ ಮತದಾರರ ಪಟ್ಟಿಯ ಶುದ್ಧೀಕರಣ ಹಾಗೂ ನವೀಕರಣದ ವ್ಯಾಪಕ ಅಭಿಯಾನ ಆರಂಭಗೊಂಡಿದ್ದು, ಈ ಅಭಿಯಾನಕ್ಕೆ ಸಾರ್ವಜನಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಲಾಯಿತು.
ತಾಲ್ಲೂಕಿನ 312 ಮತಗಟ್ಟೆಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್ಒ) ಮನೆ ಮನೆಗೆ ತೆರಳಿ ಮತದಾರರ ಪರಿಶೀಲನೆ ನಡೆಸಲಿದ್ದು, ಪ್ರತಿಯೊಬ್ಬ ಅರ್ಹ ಮತದಾರರ ಮಾಹಿತಿಯನ್ನು ನಿಖರಗೊಳಿಸುವ ಉದ್ದೇಶದಿಂದ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಲಾಯಿತು. ಪತ್ರಿಕಾಗೋಷ್ಠಿಯಲ್ಲಿ ಶಾಸಕ ವಿಠ್ಠಲರಾವ್ ಹಲಗೇಕರ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಮೋದ್ ಕೊಚೇರಿ, ಮಾಜಿ ಶಾಸಕ ಅರವಿಂದ ಪಾಟೀಲ, ಧನಶ್ರೀ ಸರದೇಶಾಯಿ, ತಾಲ್ಲೂಕು ಅಧ್ಯಕ್ಷ ಬಸವರಾಜ ಸಾನಿಕೋಪ್ಪ, ಜಿಲ್ಲಾ ಉಪಾಧ್ಯಕ್ಷ ಸಂಜಯ್ ಕುಬಲ ಪ್ರಮುಖವಾಗಿ ಉಪಸ್ಥಿತರಿದ್ದರು. ಆರಂಭದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾರಿಹಾಳ ಅವರು ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು.
ಪ್ರಮೋದ್ ಕೊಚೇರಿ ಮಾತನಾಡಿ, ಜಾಂಬೋಟಿ, ಹೇಮಾಡಗಾ ಹಾಗೂ ಇತರ ಪ್ರದೇಶಗಳ ಅನೇಕ ನಾಗರಿಕರು ಉದ್ಯೋಗ ನಿಮಿತ್ತ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ವಾಸವಾಗಿದ್ದಾರೆ. ಇಂತಹ ನಾಗರಿಕರು ತಮ್ಮ ಮೂಲ ಗ್ರಾಮದ ಮತದಾರರ ಪಟ್ಟಿಯಲ್ಲಿಯೇ ತಮ್ಮ ಹೆಸರನ್ನು ಮುಂದುವರಿಸಬೇಕು. ಬಿಎಲ್ಒ ಅಧಿಕಾರಿಗಳು ಪ್ರತಿಯೊಂದು ಮನೆಗೆ ಮೂರು ಬಾರಿ ಭೇಟಿ ನೀಡಲಿದ್ದು, ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಶಾಸಕ ಅರವಿಂದ ಪಾಟೀಲ ಮಾತನಾಡಿ, ಪ್ರತಿಯೊಂದು ಮತಗಟ್ಟೆಯಲ್ಲೂ ಬಿಜೆಪಿ ಬೂತ್ ಪ್ರಮುಖರನ್ನು ನೇಮಿಸಿ ಜನಜಾಗೃತಿ ಕಾರ್ಯ ಆರಂಭಿಸಿದೆ ಎಂದು ತಿಳಿಸಿದರು. ಜಾಂಬೋಟಿ, ಮಾನ್, ಸಡಾ, ಹೋಳಂದ ಪ್ರದೇಶದ ನಾಗರಿಕರು ಗೋವಾದಲ್ಲಿ ಮತದಾರರಾಗಿ ನೋಂದಣಿ ಮಾಡಿಸದೇ ಖಾನಾಪುರ ತಾಲ್ಲೂಕಿನ ತಮ್ಮ ಮೂಲ ಗ್ರಾಮದ ಮತದಾರರ ಪಟ್ಟಿಯಲ್ಲಿಯೇ ಹೆಸರು ಉಳಿಸಿಕೊಳ್ಳಬೇಕು ಎಂದು ಸ್ಪಷ್ಟಪಡಿಸಿದರು. ಅಲ್ಲದೆ, ತಾಲ್ಲೂಕಿನ ನಕಲಿ ಹಾಗೂ ಹೊರರಾಜ್ಯದ ಮತದಾರರ ಹೆಸರುಗಳನ್ನು ಪರಿಶೀಲಿಸಿ ತೆಗೆದುಹಾಕುವಂತೆ ಆಗ್ರಹಿಸಿದರು.
ಧನಶ್ರೀ ಸರದೇಶಾಯಿ ಮಾತನಾಡಿ, ವಾಂದರಮಾರಿ ಆದಿವಾಸಿ ಸಮುದಾಯದ ನಾಗರಿಕರಿಗೆ ಅಗತ್ಯ ಸಹಾಯ ಒದಗಿಸಬೇಕು ಎಂದು ಮನವಿ ಮಾಡಿದರು. ಅಲ್ಲದೆ, ತಾಲ್ಲೂಕಿನ ಕೆಲವು ನಾಗರಿಕರು ಗೋವಾ, ಪುಣೆ ಅಥವಾ ಇತರ ಕಡೆಗಳಲ್ಲಿ ವಾಸವಾಗಿದ್ದು, ಎರಡು ಸ್ಥಳಗಳಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿರುವವರು ಒಂದು ಸ್ಥಳದ ನೋಂದಣಿಯನ್ನು ರದ್ದುಪಡಿಸಿ ತಮ್ಮ ಮೂಲ ಗ್ರಾಮದ ಮತದಾರರ ಪಟ್ಟಿಯಲ್ಲಿಯೇ ಹೆಸರು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಾಸಕ ವಿಠ್ಠಲರಾವ್ ಹಲಗೇಕರ ಅವರು ಕೇಂದ್ರ ಸರ್ಕಾರದ ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನದ ಕುರಿತು ಮಾಹಿತಿ ನೀಡುತ್ತಾ, 2002 ಮತ್ತು 2025ರ ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು. 2002ರ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವ ನಾಗರಿಕರು ಅಗತ್ಯ ಗುರುತಿನ ಚೀಟಿಗಳು ಹಾಗೂ ದಾಖಲೆಗಳನ್ನು ಬಿಎಲ್ಒ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಸ್ಪಷ್ಟಪಡಿಸಿದರು. ಎರಡು ಸ್ಥಳಗಳಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿರುವವರು ಒಂದೇ ಸ್ಥಳದಲ್ಲಿ ತಮ್ಮ ಹೆಸರನ್ನು ಉಳಿಸಿಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಇದೇ ವೇಳೆ ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ತಾವು ಪಕ್ಷದ ಆದೇಶಕ್ಕೆ ವಿರುದ್ಧವಾಗಿ ಕ್ರಾಸ್ ವೋಟಿಂಗ್ ಮಾಡಿದ್ದೇನೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳು ಸಂಪೂರ್ಣ ಸುಳ್ಳು, ದಿಕ್ಕುತಪ್ಪಿಸುವ ಹಾಗೂ ತಮ್ಮ ಮಾನಹಾನಿ ಮಾಡುವ ಉದ್ದೇಶದಿಂದ ಹರಡಲಾಗುತ್ತಿರುವ ಅಪಪ್ರಚಾರ ಎಂದು ಶಾಸಕ ಹಲಗೇಕರ ಸ್ಪಷ್ಟನೆ ನೀಡಿದರು.
ತಾಲ್ಲೂಕು ಅಧ್ಯಕ್ಷ ಬಸವರಾಜ ಸಾನಿಕೋಪ ಹಾಗೂ ಜಿಲ್ಲಾ ಉಪಾಧ್ಯಕ್ಷ ಸಂಜಯ್ ಕುಬಲ ಅವರು ಕೂಡ ಸಾರ್ವಜನಿಕರು ಮತದಾರರ ಪಟ್ಟಿ ಶುದ್ಧೀಕರಣ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ, ನಕಲಿ ಮತದಾರರ ಹೆಸರುಗಳನ್ನು ತೆಗೆದುಹಾಕುವ ಕಾರ್ಯಕ್ಕೆ ಸಾರ್ವಜನಿಕರು ಆಡಳಿತಕ್ಕೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಬಾಬುರಾವ್ ದೇಸಾಯಿ, ರೈತ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಹಾಗೂ ಲೈಲಾ ಶುಗರ್ನ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಪಾಟೀಲ, ಅಡ್ವೊಕೇಟ್ ಚೇತನ ಮನೇರಿಕರ್, ಜೋತಿಬಾ ರೇಮಾಣಿ, ವಸಂತ ದೇಸಾಯಿ, ಸುನೀಲ ಮಡ್ಡಿಮಣಿ ಸೇರಿದಂತೆ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


