गृहज्योती योजनेच्या लाभार्थ्यांची माहिती पडताळणार; वीज कंपन्यांकडून अतिरिक्त माहिती संकलनास सुरुवात.
खानापूर (प्रतिनिधी) : कर्नाटक सरकारच्या महत्त्वाकांक्षी गृहज्योती योजनेअंतर्गत नोंदणीकृत लाभार्थ्यांच्या माहितीची पडताळणी करण्यासाठी राज्यातील सर्व वीज वितरण कंपन्यांना अतिरिक्त माहिती संकलित करून तिची पडताळणी व नोंद करण्याचे निर्देश देण्यात आले आहेत.
सरकारने 1 जुलै 2023 पासून गृहज्योती योजना लागू केली असून, या योजनेअंतर्गत पात्र घरगुती वीज ग्राहकांना दरमहा कमाल 200 युनिटपर्यंत मोफत वीज देण्यात येते. 2022-23 या वर्षातील सरासरी वीज वापराच्या आधारे पात्र युनिट निश्चित करण्यात आले असून, त्यावर अतिरिक्त 10 टक्के (किंवा 48 युनिटपेक्षा कमी वापर असलेल्या ग्राहकांसाठी 10 युनिट) सवलत लागू करण्यात आली आहे.
योजनेचा लाभ योग्य लाभार्थ्यांपर्यंत पोहोचावा आणि अपात्र लाभार्थ्यांची नोंद टाळावी, यासाठी आता घराघरांत जाऊन माहितीची पडताळणी करण्यात येणार आहे. या मोहिमेत वीज वितरण कंपन्यांचे कर्मचारी लाभार्थ्यांकडून आवश्यक माहितीची खातरजमा करतील.
पडताळणीदरम्यान खालील माहिती तपासली जाणार आहे :
वीज वितरण कंपनीचे नाव
वीज खाते / कनेक्शन क्रमांक
खातेदाराचे नाव
वीज जोडणीचा पत्ता
मालक अथवा भाडेकरू याची माहिती
आधार क्रमांक
आधारवरील नाव
संपर्कासाठी मोबाईल क्रमांक
लाभार्थ्यांनी पडताळणीवेळी आवश्यक कागदपत्रे उपलब्ध करून देत वीज कंपनीच्या कर्मचाऱ्यांना सहकार्य करण्याचे आवाहन सरकारच्या वतीने करण्यात आले आहे. या प्रक्रियेमुळे गृहज्योती योजनेतील नोंदी अधिक अचूक व पारदर्शक होण्यास मदत होणार असल्याचे शासनाने स्पष्ट केले आहे.
ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಮಾಹಿತಿಯ ಪರಿಶೀಲನೆ; ವಿದ್ಯುತ್ ಸರಬರಾಜು ಕಂಪನಿಗಳಿಂದ ಹೆಚ್ಚುವರಿ ಮಾಹಿತಿ ಸಂಗ್ರಹಕ್ಕೆ ಚಾಲನೆ.
ಖಾನಾಪುರ (ಪ್ರತಿನಿಧಿ) : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆ ಅಡಿಯಲ್ಲಿ ನೋಂದಾಯಿಸಿಕೊಂಡಿರುವ ಫಲಾನುಭವಿಗಳ ಮಾಹಿತಿಯನ್ನು ಪರಿಶೀಲಿಸಲು ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೆ ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸಿ ಅದರ ಪರಿಶೀಲನೆ ಹಾಗೂ ದಾಖಲಾತಿ ಮಾಡುವಂತೆ ನಿರ್ದೇಶನ ನೀಡಲಾಗಿದೆ.
ಸರ್ಕಾರವು 2023ರ ಜುಲೈ 1ರಿಂದ ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯಡಿ ಅರ್ಹ ಗೃಹಬಳಕೆ ವಿದ್ಯುತ್ ಗ್ರಾಹಕರಿಗೆ ಪ್ರತಿ ತಿಂಗಳು ಗರಿಷ್ಠ 200 ಯುನಿಟ್ಗಳವರೆಗೆ ಉಚಿತ ವಿದ್ಯುತ್ ಒದಗಿಸಲಾಗುತ್ತಿದೆ.
2022-23ನೇ ಸಾಲಿನ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಅರ್ಹ ಯುನಿಟ್ಗಳನ್ನು ನಿಗದಿಪಡಿಸಲಾಗಿದ್ದು, ಅದರ ಮೇಲೆ ಹೆಚ್ಚುವರಿಯಾಗಿ 10 ಶೇಕಡಾ (ಅಥವಾ 48 ಯುನಿಟ್ಗಿಂತ ಕಡಿಮೆ ಬಳಕೆ ಹೊಂದಿರುವ ಗ್ರಾಹಕರಿಗೆ 10 ಯುನಿಟ್) ರಿಯಾಯಿತಿಯನ್ನು ಅನ್ವಯಿಸಲಾಗಿದೆ.
ಯೋಜನೆಯ ಪ್ರಯೋಜನವು ನಿಜವಾದ ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪುವಂತೆ ಹಾಗೂ ಅನರ್ಹ ಫಲಾನುಭವಿಗಳ ನೋಂದಣಿಯನ್ನು ತಪ್ಪಿಸುವ ಉದ್ದೇಶದಿಂದ ಇದೀಗ ಮನೆ-ಮನೆಗೆ ತೆರಳಿ ಮಾಹಿತಿಯ ಪರಿಶೀಲನೆ ನಡೆಸಲಾಗುತ್ತಿದೆ. ಈ ಅಭಿಯಾನದಲ್ಲಿ ವಿದ್ಯುತ್ ಸರಬರಾಜು ಕಂಪನಿಗಳ ಸಿಬ್ಬಂದಿ ಫಲಾನುಭವಿಗಳಿಂದ ಅಗತ್ಯ ಮಾಹಿತಿಯನ್ನು ದೃಢೀಕರಿಸಿ ದಾಖಲಿಸಲಿದ್ದಾರೆ.
ಪರಿಶೀಲನೆ ವೇಳೆ ಕೆಳಕಂಡ ಮಾಹಿತಿಯನ್ನು ಪರಿಶೀಲಿಸಲಾಗುತ್ತದೆ :
- ವಿದ್ಯುತ್ ಸರಬರಾಜು ಕಂಪನಿಯ ಹೆಸರು
- ವಿದ್ಯುತ್ ಖಾತೆ / ಸಂಪರ್ಕ ಸಂಖ್ಯೆ
- ಖಾತೆದಾರರ ಹೆಸರು
- ವಿದ್ಯುತ್ ಸಂಪರ್ಕದ ವಿಳಾಸ
- ಮನೆ ಮಾಲೀಕರೇ ಅಥವಾ ಬಾಡಿಗೆದಾರರೇ ಎಂಬ ಮಾಹಿತಿ
- ಆಧಾರ್ ಸಂಖ್ಯೆ
- ಆಧಾರ್ ಕಾರ್ಡ್ನಲ್ಲಿರುವ ಹೆಸರು
- ಸಂಪರ್ಕಕ್ಕಾಗಿ ಮೊಬೈಲ್ ಸಂಖ್ಯೆ
ಪರಿಶೀಲನೆ ಸಂದರ್ಭದಲ್ಲಿ ಅಗತ್ಯ ದಾಖಲೆಗಳನ್ನು ಸಿದ್ಧವಾಗಿರಿಸಿ ವಿದ್ಯುತ್ ಸರಬರಾಜು ಕಂಪನಿಗಳ ಸಿಬ್ಬಂದಿಗೆ ಸಂಪೂರ್ಣ ಸಹಕಾರ ನೀಡುವಂತೆ ಸರ್ಕಾರವು ಫಲಾನುಭವಿಗಳಿಗೆ ಮನವಿ ಮಾಡಿದೆ.
ಈ ಪ್ರಕ್ರಿಯೆಯಿಂದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ದಾಖಲೆಗಳು ಇನ್ನಷ್ಟು ನಿಖರ ಹಾಗೂ ಪಾರದರ್ಶಕವಾಗಲಿದ್ದು, ಯೋಜನೆಯ ಸೌಲಭ್ಯವು ಅರ್ಹರಿಗೆ ಮಾತ್ರ ತಲುಪಲು ಸಹಕಾರಿಯಾಗಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.


