पेरणी हंगामात बियाणे व खतांचा सुरळीत पुरवठा करा; काळाबाजार करणाऱ्यांवर कडक कारवाई करा. कृषी विभागाच्या अधिकाऱ्यांकडून तपासणी मोहीम राबविण्याची मागणी.
बेळगाव : प्रतिनिधी
ऐन पेरणी हंगामात बी-बियाणे आणि खतांचा तुटवडा निर्माण होत असून, युरिया सारख्या खतांचा काळाबाजार मोठ्या प्रमाणात सुरू असल्याचा आरोप करत शेतकरी नेते प्रसाद पाटील यांच्या नेतृत्वाखाली शेतकऱ्यांच्या शिष्टमंडळाने एडीसी बेळगाव यांना निवेदन दिले.
निवेदनात म्हटले आहे की, अनेक ठिकाणी शेतकऱ्यांना योग्य दरात खत उपलब्ध होत नसून काही विक्रेते जादा दराने खतांची विक्री करत आहेत. त्यामुळे शेतकरी आर्थिक अडचणीत सापडत असून कृषी विभागाने तातडीने हस्तक्षेप करून बियाणे आणि खतांचा सुरळीत पुरवठा करावा, अशी मागणी करण्यात आली.
तसेच कृषी सहायक निर्देशक (AD) आणि कृषी निर्देशक (DD) यांनी नियमित तपासणी मोहीम राबवून खत व बियाण्यांचा काळाबाजार रोखावा, दोषींवर कठोर कारवाई करावी आणि शेतकऱ्यांची फसवणूक थांबवावी, अशीही मागणी शिष्टमंडळाने केली.
यावेळी अधिकाऱ्यांनी शेतकऱ्यांवर होणारा अन्याय प्रशासनाला माहीत असल्याचे सांगत, बी-बियाणे आणि खतांचा पुरवठा सुरळीत ठेवण्यासाठी आवश्यक उपाययोजना करण्यात येतील तसेच कृषी विभागाच्या अधिकाऱ्यांकडून तपासणी करून काळाबाजार करणाऱ्यांविरोधात कडक कारवाई केली जाईल, असे आश्वासन दिले.
या प्रसंगी शेतकरी नेते प्रसाद पाटील, माजी जिल्हा पंचायत सदस्य रमेश गोरल, माजी तालुका पंचायत सदस्य मारुती लोकूर, राजेंद्र पाटील, सुरेश जाधव, किरण लोंढे, परशराम जाधव, संतोष पाटील, पुंडलिक मेलगे, संगप्पा कुंभार, संजय सिद्धानी, नागापा कुंभार, सातेरी धामणेकर, सुभाष कुंभार, सुमित मेलगे, परशराम कोलकार यांच्यासह २५० हून अधिक शेतकरी उपस्थित होते.
ಬಿತ್ತನೆ ಹಂಗಾಮಿನಲ್ಲಿ ಬೀಜ ಮತ್ತು ರಸಗೊಬ್ಬರಗಳ ಸರಬರಾಜು ಸುಗಮಗೊಳಿಸಿ; ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ, ಕೃಷಿ ಇಲಾಖೆಯ ಅಧಿಕಾರಿಗಳಿಂದ ಪರಿಶೀಲನಾ ಅಭಿಯಾನ ನಡೆಸುವಂತೆ ಮನವಿ.
ಬೆಳಗಾವಿ : ಪ್ರತಿನಿಧಿ
ಬಿತ್ತನೆ ಹಂಗಾಮಿನ ಸಂದರ್ಭದಲ್ಲಿ ಬೀಜ ಮತ್ತು ರಸಗೊಬ್ಬರಗಳ ಕೊರತೆ ಉಂಟಾಗಿದ್ದು, ಯೂರಿಯಾ ಸೇರಿದಂತೆ ವಿವಿಧ ರಸಗೊಬ್ಬರಗಳ ಕಾಳಸಂತೆಯಲ್ಲಿ ಮಾರಾಟ ಜೋರಾಗಿ ನಡೆಯುತ್ತಿದೆ ಎಂದು ಆರೋಪಿಸಿ ರೈತ ನಾಯಕ ಪ್ರಸಾದ್ ಪಾಟೀಲ ಅವರ ನೇತೃತ್ವದಲ್ಲಿ ರೈತರ ನಿಯೋಗವು ಎಡಿಸಿ ಬೆಳಗಾವಿ ಅವರಿಗೆ ಮನವಿ ಸಲ್ಲಿಸಿತು.
ಮನವಿಯಲ್ಲಿ ಅನೇಕ ಕಡೆ ರೈತರಿಗೆ ಸರಿಯಾದ ದರದಲ್ಲಿ ರಸಗೊಬ್ಬರ ಲಭ್ಯವಾಗುತ್ತಿಲ್ಲ. ಕೆಲ ವ್ಯಾಪಾರಿಗಳು ಹೆಚ್ಚುವರಿ ದರ ಪಡೆದು ರಸಗೊಬ್ಬರ ಮಾರಾಟ ಮಾಡುತ್ತಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಲಾಗಿದೆ. ತಕ್ಷಣವೇ ಸರ್ಕಾರ ಹಾಗೂ ಕೃಷಿ ಇಲಾಖೆ ಮಧ್ಯಪ್ರವೇಶಿಸಿ ಬೀಜ ಮತ್ತು ರಸಗೊಬ್ಬರಗಳ ಸರಬರಾಜು ಸುಗಮಗೊಳಿಸಬೇಕು ಎಂದು ರೈತರು ಆಗ್ರಹಿಸಿದರು.
ಅದೇ ರೀತಿ ಕೃಷಿ ಸಹಾಯಕ ನಿರ್ದೇಶಕರು (AD) ಮತ್ತು ಕೃಷಿ ನಿರ್ದೇಶಕರು (DD) ನಿಯಮಿತವಾಗಿ ಪರಿಶೀಲನಾ ಅಭಿಯಾನ ನಡೆಸಿ ರಸಗೊಬ್ಬರ ಹಾಗೂ ಬೀಜಗಳ ಕಾಳಸಂತೆಯಲ್ಲಿ ಮಾರಾಟ ಮಾಡುವುದು ತಡೆಯಬೇಕು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ರೈತರ ಮೋಸವನ್ನು ತಡೆಹಿಡಿಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ವೇಳೆ ಅಧಿಕಾರಿಗಳು ರೈತರ ಮೇಲೆ ನಡೆಯುತ್ತಿರುವ ಅನ್ಯಾಯದ ಬಗ್ಗೆ ಆಡಳಿತಕ್ಕೆ ಸಂಪೂರ್ಣ ಮಾಹಿತಿ ಇದೆ ಎಂದು ತಿಳಿಸಿ, ಬೀಜ ಮತ್ತು ರಸಗೊಬ್ಬರಗಳ ಸರಬರಾಜು ಸುಗಮವಾಗಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಕೃಷಿ ಇಲಾಖೆಯ ಅಧಿಕಾರಿಗಳಿಂದ ಪರಿಶೀಲನೆ ನಡೆಸಿ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರೈತ ನಾಯಕ ಪ್ರಸಾದ್ ಪಾಟೀಲ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಮೇಶ್ ಗೋರಲ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ಮಾರುತಿ ಲೋಕೂರ, ರಾಜೇಂದ್ರ ಪಾಟೀಲ, ಸುರೇಶ್ ಜಾಧವ್, ಕಿರಣ್ ಲೋಂಧೆ, ಪರಶುರಾಮ ಜಾಧವ್, ಸಂತೋಷ ಪಾಟೀಲ, ಪುಂಡಲೀಕ ಮೇಲಗೆ, ಸಂಗಪ್ಪ ಕುಂಭಾರ, ಸಂಜಯ್ ಸಿದ್ದಾನಿ, ನಾಗಪ್ಪ ಕುಂಭಾರ, ಸಾತೇರಿ ಧಾಮಣೇಕರ್, ಸುಭಾಷ್ ಕುಂಭಾರ, ಸುಮಿತ್ ಮೇಲಗೆ, ಪರಶುರಾಮ ಕೋಲ್ಕರ್ ಸೇರಿದಂತೆ 250ಕ್ಕೂ ಹೆಚ್ಚು ರೈತರು ಉಪಸ್ಥಿತರಿದ್ದರು.

