असोगा येथे गटार तुंबल्याने रस्त्यावर सांडपाणी; भाविक व नागरिक हैराण! मणतुर्गा ग्रामपंचायतचे दुर्लक्ष!
खानापूर : खानापूर शहरापासून अवघ्या दीड ते दोन किलोमीटर अंतरावर असलेल्या आणि पवित्र तीर्थक्षेत्र म्हणून संपूर्ण बेळगाव जिल्ह्यात प्रसिद्ध असलेल्या असोगा गावात गंभीर स्वच्छता समस्या निर्माण झाली आहे. मलप्रभा नदी पुलाजवळ गटार तुंबल्यामुळे गावातील सांडपाणी मागील काही दिवसांपासून थेट रस्त्यावर येत असून मोठे डबके तयार झाले आहे.
या मार्गावरूनच पवित्र रामलिंगेश्वर मंदिर येथे दर्शनासाठी येणारे भाविक तसेच मणतुर्गा आणि नेरसा गावाकडे जाणारे प्रवासी नागरिक प्रवास करतात. रस्त्यावर साचलेल्या सांडपाण्यामुळे वाहनचालक, पादचारी आणि यात्रेकरूंना मोठ्या अडचणींचा सामना करावा लागत आहे. दुर्गंधी आणि अस्वच्छतेमुळे आरोग्याच्या समस्या उद्भवण्याची भीतीही व्यक्त होत आहे.
या गंभीर समस्येकडे मणतुर्गा ग्रामपंचायतीच्या अधिकाऱ्यांचे तसेच असोगा ग्रामस्थांचे दुर्लक्ष होत असल्याचे स्थानिक नागरिकांचे म्हणणे आहे. विशेष म्हणजे, याच रस्त्यावरून ग्रामपंचायतीचे पीडिओ व कर्मचारी दररोज ये-जा करीत असतानाही कोणतीही ठोस कार्यवाही झालेली नाही.
तालुका पंचायत कार्यनिर्वाहक अधिकारी तसेच ग्रामपंचायतीचे प्रभारी म्हणून कार्यभार स्वीकारलेले सार्वजनिक बांधकाम विभागाचे अभियंता संजय गस्ती यांनी तातडीने लक्ष घालून गटार दुरुस्त करून रस्त्यावर येणारे सांडपाणी थांबवावे, अशी मागणी नागरिकांकडून करण्यात येत आहे. मंदिराला येणाऱ्या भाविकांची व सर्वसामान्य नागरिकांची गैरसोय लक्षात घेऊन प्रशासनाने त्वरीत उपाययोजना कराव्यात, अशी अपेक्षा व्यक्त होत आहे.
ಅಸೋಗಾದಲ್ಲಿ ಒಳಚರಂಡಿ ನೀರು ರಸ್ತೆಯ ಮೇಲೆ; ಭಕ್ತರು ಮತ್ತು ಊರಿನ ನಾಗರಿಕರು ಕಂಗಾಲು! ಮಣತುರ್ಗಾ ಗ್ರಾಮಪಂಚಾಯಿತಿ ನಿರ್ಲಕ್ಷ್ಯ!
ಖಾನಾಪುರ : ಖಾನಾಪುರ ಪಟ್ಟಣದಿಂದ ಕೇವಲ ಒಂದರಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಹಾಗೂ ಪವಿತ್ರ ತೀರ್ಥಕ್ಷೇತ್ರವಾಗಿ ಸಂಪೂರ್ಣ ಬೆಳಗಾವಿ ಜಿಲ್ಲೆಯಲ್ಲಿ ಪ್ರಸಿದ್ಧಿಯಾದ ಅಸೋಗಾ ಗ್ರಾಮದಲ್ಲಿ ಗಂಭೀರ ಸ್ವಚ್ಛತಾ ಸಮಸ್ಯೆ ಉಂಟಾಗಿದೆ. ಮಲಪ್ರಭಾ ನದಿ ಸೇತುವೆ ಸಮೀಪ ಒಳಚರಂಡಿ ನೀರು ತಡೆದಿರುವುದರಿಂದ ನೀರು ಕಳೆದ ಕೆಲ ದಿನಗಳಿಂದ ನೇರವಾಗಿ ರಸ್ತೆಗೆ ಹರಿದು ದೊಡ್ಡ ಕೆರೆಗಳಂತೆ ಸಂಗ್ರಹವಾಗಿ ನಿಂತಿದೆ. ಇದರಿಂದ ಭಾರೀ ದುರ್ವಾಸನೆ ಹರಡಿದೆ
ಈ ಮಾರ್ಗದ ಮೂಲಕವೇ ಪವಿತ್ರ ರಾಮಲಿಂಗೇಶ್ವರ ದೇವಸ್ಥಾನಕ್ಕೆ ದರ್ಶನಕ್ಕೆ ಬರುವ ಭಕ್ತರು ಹಾಗೂ ಮಣತುರ್ಗಾ ಮತ್ತು ನೆರ್ಸಾ ಗ್ರಾಮಗಳಿಗೆ ಸಂಚರಿಸುವ ನಾಗರಿಕರು ಪ್ರಯಾಣಿಸುತ್ತಾರೆ. ರಸ್ತೆಯಲ್ಲಿ ನಿಂತಿರುವ ಮಲಿನ ನೀರಿನಿಂದ ವಾಹನ ಸವಾರರು, ಪಾದಚಾರಿಗಳು ಮತ್ತು ಯಾತ್ರಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ದುರ್ಗಂಧ ಮತ್ತು ಅಸ್ವಚ್ಛತೆಯಿಂದ ಆರೋಗ್ಯ ಸಮಸ್ಯೆಗಳು ಉಂಟಾಗುವ ಭೀತಿ ವ್ಯಕ್ತವಾಗುತ್ತಿದೆ.
ಈ ಗಂಭೀರ ಸಮಸ್ಯೆಯ ಕಡೆಗೆ ಮಣತುರ್ಗಾ ಗ್ರಾಮಪಂಚಾಯಿತಿಯ ಅಧಿಕಾರಿಗಳು ಹಾಗೂ ಅಸೋಗಾ ಗ್ರಾಮದವರ ನಿರ್ಲಕ್ಷ್ಯವಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ವಿಶೇಷವೆಂದರೆ, ಇದೇ ರಸ್ತೆಯ ಮೂಲಕ ಗ್ರಾಮಪಂಚಾಯಿತಿಯ ಪಿಡಿಒ ಹಾಗೂ ಸಿಬ್ಬಂದಿಗಳು ಪ್ರತಿದಿನ ಸಂಚರಿಸುತ್ತಿದ್ದರೂ ಯಾವುದೇ ಸೂಕ್ತವಾದ ಕ್ರಮ ಕೈಗೊಳ್ಳಲಾಗಿಲ್ಲ.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಮಪಂಚಾಯಿತಿಯ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಸಾರ್ವಜನಿಕ ಕಾಮಗಾರಿಗಳ ಇಲಾಖೆಯ ಇಂಜಿನಿಯರ್ ಸಂಜಯ ಗಸ್ತಿ ಅವರು ತಕ್ಷಣ ಗಮನಹರಿಸಿ ಒಳಚರಂಡಿಯನ್ನು ದುರಸ್ತಿ ಮಾಡಿ ರಸ್ತೆಗೆ ಹರಿಯುತ್ತಿರುವ ಮಲಿನ ನೀರನ್ನು ತಡೆಗಟ್ಟಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತರು ಮತ್ತು ಸಾಮಾನ್ಯ ನಾಗರಿಕರ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಆಡಳಿತವು ಶೀಘ್ರ ಕ್ರಮ ಕೈಗೊಳ್ಳಬೇಕೆಂದು ನಿರೀಕ್ಷಿಸಲಾಗಿದೆ.


