सुवेंदू अधिकारी यांच्या पीएची भररस्त्यात गोळ्या झाडून हत्या; पश्चिम बंगालमध्ये खळबळ.
कोलकाता : पश्चिम बंगालमध्ये पुन्हा एकदा राजकीय हिंसाचाराने डोके वर काढले असून भाजप नेते Suvendu Adhikari यांचे वैयक्तिक सहाय्यक चंद्रनाथ रथ यांची बुधवारी रात्री सिनेस्टाइल पद्धतीने हत्या करण्यात आली. उत्तर २४ परगणा जिल्ह्यातील मध्यग्राम परिसरात ही थरारक घटना घडली. अज्ञात हल्लेखोरांनी त्यांच्या वाहनाचा पाठलाग करून भररस्त्यात गोळीबार केला.
माहितीनुसार, चंद्रनाथ रथ हे आपल्या चालकासह कारमधून प्रवास करत असताना त्यांच्या वाहनामागे एक कार आणि मोटारसायकल लागली होती. काही अंतरावर गेल्यानंतर संशयित कारने त्यांच्या गाडीला अडवले. त्याचवेळी मोटारसायकलवरून आलेल्या हल्लेखोरांनी चंद्रनाथ यांच्यावर जवळून गोळ्या झाडल्या. या हल्ल्यात चंद्रनाथ रथ आणि त्यांचा चालक गंभीर जखमी झाले.
गोळीबारानंतर परिसरात एकच गोंधळ उडाला. स्थानिक नागरिकांच्या मदतीने दोघांनाही तातडीने रुग्णालयात दाखल करण्यात आले. मात्र उपचार सुरू असताना चंद्रनाथ रथ यांनी अखेरचा श्वास घेतला. चालकाची प्रकृती चिंताजनक असल्याचे सांगितले जात आहे.
घटनेनंतर पोलिसांनी संपूर्ण परिसर सील करून तपासाला सुरुवात केली आहे. जशोर रोड परिसरातील सीसीटीव्ही फुटेज तपासण्यात येत असून प्रत्यक्षदर्शींकडून माहिती गोळा केली जात आहे. प्राथमिक तपासात हल्लेखोर मोटारसायकलवरील क्रमांक प्लेट नसल्याची माहिती समोर आली आहे.
घटनेची माहिती मिळताच Suvendu Adhikari स्वतः रुग्णालयात पोहोचले. त्यांनी चंद्रनाथ रथ यांच्या मृत्यूची पुष्टी करत घटनेबद्दल तीव्र संताप व्यक्त केला. या हत्येमागे राजकीय कट असल्याचा आरोप भाजप नेत्यांनी केला आहे.
दरम्यान, विधानसभा निवडणुकीत भाजपच्या मोठ्या विजयानंतर पश्चिम बंगालमध्ये अनेक भागांत तणावाचे वातावरण निर्माण झाले आहे. भाजपने २९४ पैकी २०७ जागांवर विजय मिळवत तृणमूल काँग्रेसची सत्ता उलथवून टाकली. यानंतर विविध जिल्ह्यांत हिंसाचाराच्या घटना समोर येत आहेत.
दक्षिण २४ परगणा जिल्ह्यातील नारायणपूर आणि कॅनिंग भागातही बुधवारी तणाव वाढल्याचे दिसून आले. काही ठिकाणी दगडफेक, मारहाण आणि शस्त्रसाठा जप्तीच्या घटना घडल्या. पोलिसांनी केंद्रीय सुरक्षा दलांच्या मदतीने शोधमोहीम राबवत अनेक संशयितांना ताब्यात घेतले आहे.
या सर्व घटनांमुळे पश्चिम बंगालमधील राजकीय वातावरण पुन्हा तापले असून राज्यातील कायदा-सुव्यवस्थेबाबत गंभीर प्रश्न उपस्थित होत आहेत.
ಪಶ್ಚಿಮ್ ಬಂಗಾಳ ರಾಜ್ಯದ ಮುಖ್ಯಮಂತ್ರಿ ಸ್ನಾನಕ್ಕೆ ಮುಂಚೂಣಿಯಲ್ಲಿರುವ ಆಗುವ ಹೆಸರೇ ಸುವೇಂದು ಅಧಿಕಾರಿ ಅವರ ಪಿಎಗೆ ಸಿನಿಮೀಯ ಶೈಲಿಯಲ್ಲಿ ಹತ್ಯೆ; ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಟ್ಟರೂ ಅಂತ್ಯ ದುರ್ಘಟನೆ
ಪಶ್ಚಿಮ ಬಂಗಾಳದಲ್ಲಿ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಬಿಜೆಪಿ ನಾಯಕ ಮತ್ತು ಮುಖ್ಯಮಂತ್ರಿ ಹುದ್ದೆಗೆ ಸ್ಪರ್ಧಿ ಸುವೇಂದು ಅಧಿಕಾರಿ ಅವರ ವೈಯಕ್ತಿಕ ಸಹಾಯಕ (ಪಿಎ) ಚಂದ್ರನಾಥ್ ರಥ್ ಅವರನ್ನು ಬುಧವಾರ ತಡರಾತ್ರಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಲಭಿಸಿದ ಮಾಹಿತಿಯ ಪ್ರಕಾರ, ಉತ್ತರ 24 ಪರಗಣ ಜಿಲ್ಲೆಯ ಮಧ್ಯಗ್ರಾಮ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಚಂದ್ರನಾಥ್ ಅವರನ್ನು ಗುರಿಯಾಗಿಸಿಕೊಂಡು ನಾಲ್ಕು ಸುತ್ತು ಗುಂಡು ಹಾರಿಸಲಾಗಿದೆ. ಈ ದಾಳಿಯಲ್ಲಿ ಚಂದ್ರನಾಥ್ ಹಾಗೂ ಅವರ ಚಾಲಕ ಗಂಭೀರವಾಗಿ ಗಾಯಗೊಂಡಿದ್ದರು. ಇಬ್ಬರನ್ನೂ ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಚಂದ್ರನಾಥ್ ಮೃತಪಟ್ಟಿದ್ದಾರೆ.
ನಿಖರವಾಗಿ ಏನಾಯಿತು?…
ಮಾಹಿತಿಯ ಪ್ರಕಾರ, ಚಂದ್ರನಾಥ್ ಅವರ ಕಾರನ್ನು ರಸ್ತೆಯ ಮಧ್ಯದಲ್ಲಿ ಅಡ್ಡಗಟ್ಟಿ ದಾಳಿ ನಡೆಸಲಾಗಿದೆ. ಪೊಲೀಸ್ ಮೂಲಗಳ ಪ್ರಕಾರ, ಒಂದು ಕಾರು ಮತ್ತು ಒಂದು ಬೈಕ್ ಚಂದ್ರನಾಥ್ ರಥ್ ಅವರ ವಾಹನವನ್ನು ಹಿಂಬಾಲಿಸುತ್ತಿದ್ದವು. ಬಳಿಕ ಕಾರು ಅವರ ವಾಹನವನ್ನು ಓವರ್ಟೇಕ್ ಮಾಡಿದ್ದು, ನಂತರ ಬೈಕ್ನಲ್ಲಿದ್ದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ.
ಘಟನೆ ನಡೆದ ಜಶೋರ್ ರಸ್ತೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಪ್ರಾಥಮಿಕವಾಗಿ ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. ಸಾಕ್ಷಿದಾರರ ಪ್ರಕಾರ, ದಾಳಿಯಲ್ಲಿ ಬಳಸಲಾದ ಬೈಕ್ಗೆ ನೋಂದಣಿ ಸಂಖ್ಯೆ ಇರಲಿಲ್ಲ. ಚಂದ್ರನಾಥ್ ಮೇಲೆ ಅನೇಕ ಸುತ್ತು ಗುಂಡು ಹಾರಿಸಲಾಗಿದೆ ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ಪ್ರದೇಶವನ್ನು ಸೀಲ್ ಮಾಡಲಾಗಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಗಳನ್ನು ಗುರುತಿಸಲು ಪೊಲೀಸರು ಮುಂದಾಗಿದ್ದಾರೆ. ಘಟನೆಯ ಮಾಹಿತಿ ತಿಳಿದ ತಕ್ಷಣ ಸುವೇಂದು ಅಧಿಕಾರಿ ಸ್ವತಃ ಆಸ್ಪತ್ರೆಗೆ ತೆರಳಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಎಎನ್ಐ ವರದಿ ಪ್ರಕಾರ, ಚಂದ್ರನಾಥ್ ಅವರ ಸಾವನ್ನು ಸುವೇಂದು ಅಧಿಕಾರಿ ದೃಢಪಡಿಸಿದ್ದಾರೆ.
ತೃಣಮೂಲ ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ…
ಬಿಜೆಪಿಯ ಭಾರೀ ಜಯದ ಬಳಿಕ ಪಶ್ಚಿಮ ಬಂಗಾಳದಲ್ಲಿ ನಿರಂತರ ಹಿಂಸಾಚಾರ ನಡೆಯುತ್ತಿರುವ ಹಿನ್ನೆಲೆಯಲ್ಲೇ ಈ ದಾಳಿ ನಡೆದಿದೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 294 ಸ್ಥಾನಗಳಲ್ಲಿ 207 ಸ್ಥಾನಗಳನ್ನು ಗೆದ್ದು, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು 15 ವರ್ಷಗಳ ನಂತರ ಅಧಿಕಾರದಿಂದ ಕೆಳಗಿಳಿಸಿದೆ. ಸುವೇಂದು ಅಧಿಕಾರಿ ಅವರು ಮಮತಾ ಬ್ಯಾನರ್ಜಿ ಅವರ ಭವಾನೀಪುರ ಕ್ಷೇತ್ರದಲ್ಲೂ ಜಯ ಸಾಧಿಸಿದ್ದಾರೆ. ಈ ಘಟನೆಯ ಹಿಂದೆ ತೃಣಮೂಲ ಕಾಂಗ್ರೆಸ್ ಕೈವಾಡವಿದೆ ಎಂದು ಬಿಜೆಪಿ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.
ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಹಿಂಸಾಚಾರ ಹೆಚ್ಚಳ…
ದಕ್ಷಿಣ 24 ಪರಗಣ ಜಿಲ್ಲೆಯ ಹಲವು ಭಾಗಗಳಲ್ಲಿ ಹಿಂಸಾಚಾರ ಉಲ್ಬಣಗೊಂಡಿದೆ. ಬುಧವಾರ ಬೆಳಗ್ಗೆ ನಾರಾಯಣಪುರ ಮತ್ತು ಕ್ಯಾನಿಂಗ್ ಪ್ರದೇಶಗಳಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ನಾರಾಯಣಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಖಲತಲಾ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಗಲಭೆ ನಡೆದಿದೆ. ಬೆಳಗ್ಗಿನ ವೇಳೆಗೆ ಪರಿಸ್ಥಿತಿ ಏಕಾಏಕಿ ಉದ್ವಿಗ್ನಗೊಂಡು ಸಂಪೂರ್ಣ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ಈ ಘಟನೆಯ ಬಳಿಕ ಪೊಲೀಸರು ಕೇಂದ್ರ ಭದ್ರತಾ ಪಡೆಗಳ ಸಹಾಯದಿಂದ ಶೋಧ ಕಾರ್ಯ ಮತ್ತು ದಾಳಿ ನಡೆಸಿ ಹಲವರನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ಒಂದು ದಿನ ಮೊದಲು ನಾರಾಯಣಪುರ ಗ್ರಾಮ ಪಂಚಾಯಿತಿ ಮುಖ್ಯಸ್ಥ ಸಲಾವುದ್ದೀನ್ ಸರ್ದಾರ್ ಅವರ ಕಚೇರಿಯಿಂದ ದೊಡ್ಡ ಪ್ರಮಾಣದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು.


