यंदा पीयूसी कॉमर्सला प्रचंड मागणी 60% विद्यार्थी सीईबीए, एसईबीए; 40% विज्ञान व कला शाखेकडे वळले.
बेंगलोर; राज्यात यंदाच्या पीयूसी प्रवेश प्रक्रियेत कॉमर्स शाखेला मोठी मागणी निर्माण झाली आहे. राज्यातील जवळपास सर्वच महाविद्यालयांमध्ये प्रवेशासाठी गर्दी उसळली असून सुमारे 60 टक्के विद्यार्थी वाणिज्य शाखेत प्रवेश घेण्यास इच्छुक आहेत. उर्वरित 40 टक्के विद्यार्थी विज्ञान आणि कला शाखेकडे वळत आहेत.
राज्याच्या सरासरीच्या तुलनेत यंदा कॉमर्सला अधिक मागणी असल्याचे दिसून येत आहे. प्रतिष्ठित महाविद्यालयांमध्ये प्रवेश प्रक्रिया सुरू होण्यापूर्वीच कॉमर्स शाखेतील जागा भरण्याची चिन्हे दिसत आहेत. परिणामी विज्ञान व कला शाखेत प्रवेश घेणाऱ्या विद्यार्थ्यांची संख्या वर्षागणिक घटत चालली आहे. कॉमर्ससाठी आवश्यक तेवढ्या जागा उपलब्ध नसल्याने अधिक जागा मंजूर कराव्यात, अशी मागणी शिक्षण विभागाकडे करण्यात येत आहे.
दहा वर्षांपूर्वी एसएसएलसीनंतर सुमारे 70 टक्के विद्यार्थी विज्ञान शाखेकडे वळत असत. मात्र बदलत्या परिस्थितीत कॉमर्स पूर्ण केल्यानंतर एमबीए, बँकिंग, व्यवस्थापन, संरक्षण आदी क्षेत्रांत करिअरच्या विविध संधी उपलब्ध होत असल्याने विद्यार्थ्यांचा कल वाणिज्याकडे वाढला आहे. व्यवस्थापन शिक्षण घेतलेल्या विद्यार्थ्यांना कंपन्यांकडून चांगले वेतन दिले जात असून देशातील मोठ्या शहरांमध्ये बहुराष्ट्रीय कंपन्यांकडून त्यांना मोठ्या प्रमाणावर रोजगाराच्या संधी मिळत आहेत. त्यामुळे वर्षागणिक कॉमर्स अभ्यासक्रमाची मागणी वाढत आहे.
एसएसएलसीमध्ये 95% पेक्षा अधिक गुण मिळवलेले विद्यार्थीही कॉमर्सकडे.
यंदा 95 टक्क्यांहून अधिक गुण मिळवलेले विद्यार्थीही विज्ञान शाखा न निवडता कॉमर्सला प्राधान्य देत आहेत. गुणवत्तेनुसार प्रवेश देणे हा नियम असला तरी एवढ्या मोठ्या संख्येने विद्यार्थ्यांनी कॉमर्सची मागणी केल्याने महाविद्यालयांपुढे जागा वाटपाचा प्रश्न निर्माण झाला आहे. काही ठिकाणी राजकीय स्तरावरूनही कॉमर्स प्रवेशासाठी शिफारसी केल्या जात असल्याचे समजते. “सध्या विज्ञान शाखेत प्रवेश घ्या आणि नंतर बदल करू,” असे सांगितले तरी विद्यार्थी व पालक तयार नसल्याची माहिती एका प्रतिष्ठित महाविद्यालयाच्या व्यवस्थापन समिती सदस्यांनी दिली.
एका विद्यार्थ्याने सांगितले, “मी यंदा 97 टक्के गुण मिळवले आहेत. सुरुवातीपासूनच कॉमर्स करण्याचा निर्णय घेतला होता. या शाखेत पुढे अनेक करिअरचे पर्याय उपलब्ध आहेत. त्यामुळे मी आणि माझ्या मित्रांनी कॉमर्सची निवड केली.”
दाखल परिणामाचा प्रभाव….
यंदाच्या विक्रमी निकालाचा परिणाम प्रवेश प्रक्रियेवर स्पष्ट दिसत आहे. अधिक विद्यार्थ्यांनी उत्तीर्ण झाल्याने महाविद्यालयांमध्ये प्रवेशासाठी रांगा लागत आहेत. सर्वांना कॉमर्समध्ये प्रवेश देणे शक्य नसल्याने काहींना विज्ञान किंवा कला शाखा निवडण्याचा सल्ला दिला जात आहे; मात्र त्यास विद्यार्थी आणि पालकांचा विरोध आहे. त्यामुळे कॉमर्सच्या अधिक जागांना मंजुरी द्यावी, अशी मागणी महाविद्यालय प्रशासनाने शिक्षण विभागाकडे केली आहे.
ಈ ವರ್ಷ ಪಿಯುಸಿಯಲ್ಲಿ ವಾಣಿಜ್ಯ ವಿಭಾಗಕಕ್ಕೆ ಭಾರೀ ಬೇಡಿಕೆ
60% ವಿದ್ಯಾರ್ಥಿಗಳು ಸಿಇಬಿಎ, ಎಸ್ಇಬಿಎ ಆಯ್ಕೆ; 40% ವಿಜ್ಞಾನ ಹಾಗೂ ಕಲಾ ವಿಭಾಗದತ್ತ ವಲವು.
ಬೆಂಗಳೂರು : ರಾಜ್ಯದಲ್ಲಿ ಈ ವರ್ಷದ ಪಿಯುಸಿ ಪ್ರವೇಶ ಪ್ರಕ್ರಿಯೆಯಲ್ಲಿ ವಾಣಿಜ್ಯ ವಿಭಾಗಕ್ಕೆ ಭಾರೀ ಬೇಡಿಕೆ ಉಂಟಾಗಿದೆ. ರಾಜ್ಯದ ಬಹುತೇಕ ಎಲ್ಲಾ ಮಹಾವಿದ್ಯಾಲಯಗಳಲ್ಲಿ ಪ್ರವೇಶಕ್ಕಾಗಿ ವಿದ್ಯಾರ್ಥಿಗಳಿಂದ ಭಾರೀ ಆಸಕ್ತಿ ವ್ಯಕ್ತವಾಗುತ್ತಿದ್ದು, ಸುಮಾರು 60 ಶೇಕಡಾ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗ ಓದಲು ಮುಂದಾಗಿದ್ದಾರೆ. ಉಳಿದ 40 ಶೇಕಡಾ ವಿದ್ಯಾರ್ಥಿಗಳು ವಿಜ್ಞಾನ ಮತ್ತು ಕಲಾ ವಿಭಾಗಗಳನ್ನು ಆಯ್ಕೆಯತ್ತ ಒಲವು ತೋರಿದ್ದಾರೆ.
ರಾಜ್ಯದ ಸರಾಸರಿಯ ಹೋಲಿಕೆಯಲ್ಲಿ ಈ ವರ್ಷ ವಾಣಿಜ್ಯ ವಿಭಾಗಕ್ಕೆ ಹೆಚ್ಚಿದ ಬೇಡಿಕೆ ಕಂಡು ಬರುತ್ತಿದೆ. ಪ್ರತಿಷ್ಠಿತ ಮಹಾವಿದ್ಯಾಲಯಗಳಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗುವ ಮುನ್ನವೇ ವಾಣಿಜ್ಯ ವಿಭಾಗದ ಆಸನಗಳು ತುಂಬುವ ಲಕ್ಷಣಗಳು ಗೋಚರಿಸುತ್ತಿವೆ. ಇದರ ಪರಿಣಾಮವಾಗಿ ವಿಜ್ಞಾನ ಮತ್ತು ಕಲಾ ವಿಭಾಗಗಳಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವುದು ಗಮನಾರ್ಹವಾಗಿದೆ.
ವಾಣಿಜ್ಯ ವಿಭಾಗಕ್ಕೆ ಅಗತ್ಯವಿರುವಷ್ಟು ಆಸನಗಳು ಲಭ್ಯವಿಲ್ಲದ ಕಾರಣ ಹೆಚ್ಚುವರಿ ಆಸನಗಳನ್ನು ಮಂಜೂರು ಮಾಡಬೇಕೆಂಬ ಬೇಡಿಕೆ ಶಿಕ್ಷಣ ಇಲಾಖೆಗೆ ಸಲ್ಲಿಸಲಾಗಿದೆ.
ಹತ್ತು ವರ್ಷಗಳ ಹಿಂದೆ ಎಸ್ಎಸ್ಎಲ್ಸಿ ನಂತರ ಸುಮಾರು 70 ಶೇಕಡಾ ವಿದ್ಯಾರ್ಥಿಗಳು ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡುತ್ತಿದ್ದರು. ಆದರೆ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ವಾಣಿಜ್ಯ ಪದವಿ ಪೂರ್ಣಗೊಳಿಸಿದ ಬಳಿಕ ಎಂ.ಬಿ.ಎ., ಬ್ಯಾಂಕಿಂಗ್, ನಿರ್ವಹಣಾ ಕ್ಷೇತ್ರ, ರಕ್ಷಣಾ ಸೇವೆಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಿರುವುದರಿಂದ ವಿದ್ಯಾರ್ಥಿಗಳ ಒಲವು ವಾಣಿಜ್ಯತ್ತ ಹೆಚ್ಚಾಗಿದೆ. ನಿರ್ವಹಣಾ ಶಿಕ್ಷಣ ಪಡೆದ ವಿದ್ಯಾರ್ಥಿಗಳಿಗೆ ಕಂಪನಿಗಳು ಉತ್ತಮ ವೇತನ ನೀಡುತ್ತಿದ್ದು, ದೇಶದ ಪ್ರಮುಖ ನಗರಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಂದ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಾಗುತ್ತಿವೆ. ಇದರ ಪರಿಣಾಮವಾಗಿ ವಾಣಿಜ್ಯ ಕೋರ್ಸ್ಗಳ ಬೇಡಿಕೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ.
ಎಸ್ಎಸ್ಎಲ್ಸಿಯಲ್ಲಿ 95% ಕ್ಕಿಂತ ಹೆಚ್ಚು ಅಂಕ ಪಡೆದವರೂ ವಾಣಿಜ್ಯಕ್ಕೆ ಪ್ರಾಧಾನ್ಯ
ಈ ವರ್ಷ 95 ಶೇಕಡಾ ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳೂ ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡದೆ ವಾಣಿಜ್ಯಕ್ಕೆ ಆದ್ಯತೆ ನೀಡುತ್ತಿರುವುದು ವಿಶೇಷ. ಗುಣಮಟ್ಟದ ಆಧಾರದ ಮೇಲೆ ಪ್ರವೇಶ ನೀಡುವ ನಿಯಮ ಇದ್ದರೂ, ಇಷ್ಟು ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗವನ್ನು ಬೇಡಿಕೆ ಇಟ್ಟಿರುವುದರಿಂದ ಮಹಾವಿದ್ಯಾಲಯಗಳ ಮುಂದೆ ಆಸನ ಹಂಚಿಕೆಯ ಪ್ರಶ್ನೆ ಉದ್ಭವಿಸಿದೆ. ಕೆಲವು ಕಡೆ ರಾಜಕೀಯ ಮಟ್ಟದಲ್ಲೂ ವಾಣಿಜ್ಯ ಪ್ರವೇಶಕ್ಕಾಗಿ ಶಿಫಾರಸುಗಳು ನಡೆಯುತ್ತಿರುವುದಾಗಿ ತಿಳಿದುಬಂದಿದೆ.
“ಪ್ರಸ್ತುತ ವಿಜ್ಞಾನ ವಿಭಾಗದಲ್ಲಿ ಪ್ರವೇಶ ಪಡೆಯಿರಿ, ನಂತರ ಬದಲಾವಣೆ ಮಾಡಬಹುದು,” ಎಂದು ತಿಳಿಸಿದರೂ ವಿದ್ಯಾರ್ಥಿಗಳು ಮತ್ತು ಪೋಷಕರು ಸಮ್ಮತಿಸುತ್ತಿಲ್ಲ ಎಂದು ಪ್ರತಿಷ್ಠಿತ ಮಹಾವಿದ್ಯಾಲಯದ ಆಡಳಿತ ಸಮಿತಿ ಸದಸ್ಯರು ತಿಳಿಸಿದ್ದಾರೆ.
ಒಬ್ಬ ವಿದ್ಯಾರ್ಥಿ ಹೇಳುವುದೇನೆಂದರೆ, “ನಾನು ಈ ವರ್ಷ 97 ಶೇಕಡಾ ಅಂಕಗಳನ್ನು ಪಡೆದಿದ್ದೇನೆ. ಆರಂಭದಿಂದಲೇ ವಾಣಿಜ್ಯ ವಿಭಾಗ ಆಯ್ಕೆ ಮಾಡುವ ನಿರ್ಧಾರ ಮಾಡಿಕೊಂಡಿದ್ದೆ. ಈ ವಿಭಾಗದಲ್ಲಿ ಮುಂದಿನ ದಿನಗಳಲ್ಲಿ ಹಲವಾರು ವೃತ್ತಿ ಅವಕಾಶಗಳಿವೆ. ಆದ್ದರಿಂದ ನಾನು ಮತ್ತು ನನ್ನ ಸ್ನೇಹಿತರು ವಾಣಿಜ್ಯ ಆಯ್ಕೆ ಮಾಡಿದ್ದೇವೆ.”
ದಾಖಲೆ ಪ್ರಮಾಣದ ಫಲಿತಾಂಶದ ಪರಿಣಾಮ…
ಈ ವರ್ಷದ ದಾಖಲೆ ಪ್ರಮಾಣದ ಫಲಿತಾಂಶದ ಪರಿಣಾಮ ಪ್ರವೇಶ ಪ್ರಕ್ರಿಯೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿರುವುದರಿಂದ ಮಹಾವಿದ್ಯಾಲಯಗಳಲ್ಲಿ ಪ್ರವೇಶಕ್ಕಾಗಿ ಸಾಲುಗಳು ಕಂಡು ಬರುತ್ತಿವೆ. ಎಲ್ಲರಿಗೂ ವಾಣಿಜ್ಯ ವಿಭಾಗದಲ್ಲಿ ಪ್ರವೇಶ ನೀಡುವುದು ಸಾಧ್ಯವಾಗದ ಕಾರಣ ಕೆಲವರಿಗೆ ವಿಜ್ಞಾನ ಅಥವಾ ಕಲಾ ವಿಭಾಗವನ್ನು ಆಯ್ಕೆ ಮಾಡುವಂತೆ ಸಲಹೆ ನೀಡಲಾಗುತ್ತಿದೆ. ಆದರೆ ಅದಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ವಿರೋಧ ವ್ಯಕ್ತವಾಗುತ್ತಿದೆ.
ಹೀಗಾಗಿ ವಾಣಿಜ್ಯ ವಿಭಾಗಕ್ಕೆ ಹೆಚ್ಚುವರಿ ಆಸನಗಳನ್ನು ಮಂಜೂರು ಮಾಡಬೇಕೆಂದು ಮಹಾವಿದ್ಯಾಲಯ ಆಡಳಿತವು ಶಿಕ್ಷಣ ಇಲಾಖೆಗೆ ಮನವಿ ಮಾಡಿದೆ.


