खानापूरातील रिक्षाचालकाचा प्रामाणिकपणा; प्रवाशाचा विसरलेला दीड तोळ्याचा सोन्याचा हार व रोख रक्कम केली परत.
खानापूर : शहरातील शिवस्मारक चौक रिक्षा स्थानकावरील रिक्षाचालक सहदेव मोरे यांनी दाखविलेल्या प्रामाणिकपणामुळे सर्वत्र त्यांचे कौतुक होत आहे. महिला प्रवाशाने रिक्षामध्ये विसरलेली पर्स त्यांनी सुरक्षित ठेवून त्यातील दीड तोळ्याचा सोन्याचा हार व रोख रक्कम, पत्रकार वासुदेव चौगुले व रिक्षा चालकांच्या उपस्थितीत प्रामाणिकपणे परत केली.
मूळच्या करंबळ येथील व सध्या पुणे येथे वास्तव्यास असलेल्या राजश्री मनोळकर व त्यांचे पती सुभाष मनोळकर हे नातेवाईकांच्या लग्नसमारंभासाठी खानापूर येथे आले होते. सायंकाळी ते सहदेव मोरे यांच्या रिक्षातून करंबळकडे परत गेले. घाईगडबडीत राजश्री मनोळकर यांनी आपली पर्स रिक्षामध्येच विसरली.
शनिवारी सकाळी रिक्षामध्ये पर्स आढळून आल्यानंतर रिक्षा चालक सहदेव मोरे यांनी तत्काळ शिवस्मारक रिक्षा संघटनेचे अध्यक्ष दत्ता वंजारे यांच्याशी संपर्क साधला. वंजारे यांनी तातडीने प्रवाशांचा शोध घेऊन पर्स सुरक्षित असल्याची माहिती दिली.
दुपारी रिक्षा स्थानकावर राजश्री व सुभाष मनोळकर यांना पर्समधील दीड तोळ्याचा सोन्याचा हार व आठशे रुपयांची रोख रक्कम सुपूर्द करण्यात आली. या वेळी मारुती जोशीलकर, शंकर चौगुले, विशाल पाटील, प्रदीप बोबाटे, पत्रकार वासुदेव चौगुले, गजानन बेळगावकर आदी उपस्थित होते.
सहदेव मोरे यांच्या या प्रामाणिक कृत्यामुळे खानापूर शहरात त्यांच्यावर अभिनंदनाचा वर्षाव होत असून, त्यांच्या प्रामाणिकपणाचा आदर्श इतरांसमोर निर्माण झाला आहे.
ಖಾನಾಪುರದ ಆಟೋ ಚಾಲಕರ ಪ್ರಾಮಾಣಿಕತೆ; ಪ್ರಯಾಣಿಕರು ಮರೆತಿದ್ದ ಒಂದೂವರೆ ತೋಲಿ ಚಿನ್ನದ ಸರ ಹಾಗೂ ನಗದು ಹಣವನ್ನು ಮಾಲಿಕರಿಗೆ ಹಿಂತಿರುಗಿಸಿದರು.
ಖಾನಾಪುರ : ನಗರದ ಶಿವಸ್ಮಾರಕ ಚೌಕ್ ಆಟೋ ನಿಲ್ದಾಣದ ಆಟೋ ಚಾಲಕ ಸಹದೇವ್ ಮೋರೆ ಅವರು ತೋರಿದ ಪ್ರಾಮಾಣಿಕತೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಮಹಿಳಾ ಪ್ರಯಾಣಿಕರು ಆಟೋದಲ್ಲಿ ಮರೆತಿದ್ದ ಪರ್ಸ್ ಅನ್ನು ಸುರಕ್ಷಿತವಾಗಿ ಇಟ್ಟು, ಅದರಲ್ಲಿದ್ದ -ಒಂದೂವರೆ ತೋಲೆ ಚಿನ್ನದ ಸರ ಹಾಗೂ ನಗದು ಹಣವನ್ನು ಅವರು ಪ್ರಾಮಾಣಿಕವಾಗಿ ಹಿಂತಿರುಗಿಸಿದರು.
ಮೂಲತಃ ಕರಂಬಳ ಗ್ರಾಮದವರಾಗಿದ್ದು, ಪ್ರಸ್ತುತ ಪುಣೆಯಲ್ಲಿ ವಾಸಿಸುತ್ತಿರುವ ರಾಜಶ್ರೀ ಮನೋಳ್ಕರ್ ಹಾಗೂ ಅವರ ಪತಿ ಸುಭಾಷ್ ಮನೋಳ್ಕರ್ ಅವರು ಬಂಧುಗಳ ವಿವಾಹ ಸಮಾರಂಭಕ್ಕಾಗಿ ಖಾನಾಪುರಕ್ಕೆ ಬಂದಿದ್ದರು. ಸಂಜೆ ವೇಳೆ ಅವರು ಸಹದೇವ್ ಮೋರೆ ಅವರ ಆಟೋದಲ್ಲಿ ಕರಂಬಳ ಕಡೆಗೆ ತೆರಳಿದ್ದರು. ಈ ವೇಳೆ ಗಡಿಬಿಡಿಯಲ್ಲಿ ರಾಜಶ್ರೀ ಅವರು ತಮ್ಮ ಪರ್ಸ್ ಅನ್ನು ಆಟೋದಲ್ಲೇ ಮರೆತು ಹೋಗಿದ್ದರು.
ಶನಿವಾರ ಬೆಳಿಗ್ಗೆ ಆಟೋದಲ್ಲಿ ಪರ್ಸ್ ಪತ್ತೆಯಾದ ತಕ್ಷಣ ಸಹದೇವ್ ಮೋರೆ ಅವರು ಶಿವಸ್ಮಾರಕ ಆಟೋ ಸಂಘದ ಅಧ್ಯಕ್ಷ ದತ್ತ ವಂಜಾರೆ ಅವರೊಂದಿಗೆ ಸಂಪರ್ಕಿಸಿದರು. ವಂಜಾರೆ ಅವರು ತಕ್ಷಣವೇ ಪ್ರಯಾಣಿಕರನ್ನು ಪತ್ತೆಹಚ್ಚಿ ಪರ್ಸ್ ಸುರಕ್ಷಿತವಾಗಿರುವುದಾಗಿ ಮಾಹಿತಿ ನೀಡಿದರು.
ಮಧ್ಯಾಹ್ನ ಆಟೋ ನಿಲ್ದಾಣದಲ್ಲಿ ರಾಜಶ್ರೀ ಮತ್ತು ಸುಭಾಷ್ ಮನೋಳ್ಕರ್ ಅವರಿಗೆ ಪರ್ಸ್ನಲ್ಲಿದ್ದ ಒಂದೂವರೆ ತೋಲೆ ಚಿನ್ನದ ಸರ ಹಾಗೂ ಎಂಟು ನೂರು ರೂಪಾಯಿ ನಗದು ಹಣವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಮಾರುತಿ ಜೋಶೀಲ್ಕರ್, ಶಂಕರ ಚೌಗುಲೆ, ವಿಶಾಲ್ ಪಾಟೀಲ್, ಪ್ರದೀಪ್ ಬೋಬಾಟೆ, ಪತ್ರಕರ್ತ ವಾಸುದೇವ್ ಚೌಗುಲೆ, ಗಜಾನನ ಬೆಳಗಾವ್ಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಸಹದೇವ್ ಮೋರೆ ಅವರ ಈ ಪ್ರಾಮಾಣಿಕ ಕಾರ್ಯದಿಂದ ಖಾನಾಪುರದಲ್ಲಿ ಅವರ ಮೇಲೆ ಅಭಿನಂದನೆಯ ಸುರಿಮಳೆ ಆಗಿದ್ದು, ಅವರ ಪ್ರಾಮಾಣಿಕತೆ ಇತರರಿಗೆ ಮಾದರಿಯಾಗಿದೆ.

