कोल्हापुरात तपासासाठी गेलेल्या बेळगाव पोलिसांवर हल्ल्याचा प्रयत्न.
बेळगाव : कोल्हापूरमध्ये तपासासाठी गेलेल्या बेळगाव पोलिसांवर दरोड्याच्या गुन्ह्यातील आरोपींच्या नातेवाईकांनी हल्ल्याचा प्रयत्न केल्याची घटना घडली असून आरोपीने स्थानिकांना चिथावणी दिल्याने निर्माण झालेल्या या तणावपूर्ण परिस्थितीतून महाराष्ट्र पोलिसांच्या मदतीने पथक सुखरूप बाहेर पडले.
सदलगा पोलीस ठाण्यात दाखल असलेल्या एका दरोड्याच्या गुन्ह्यात चिक्कोडी पोलिसांनी धीरज वाळवाळकर आणि रवी सोनार या दोघांना अटक केली होती. तपासाचा भाग म्हणून चिक्कोडीचे सीपीआय विश्वनाथ चौगला आणि त्यांचे पथक या आरोपींना घेऊन कोल्हापुरातील छत्रपती शिवाजीनगर येथे स्थळ पाहणीसाठी गेले होते. मात्र, घटनास्थळी पोहोचताच आरोपींनी आपण निर्दोष असल्याचे ओरडून सांगत गोंधळ घालण्यास सुरुवात केली. यावेळी आरोपींनी ‘हे पोलीस बनावट आहेत’ असे सांगून स्थानिकांची दिशाभूल केली. यामुळे आरोपींचे नातेवाईक आणि मित्रांनी एकत्र येऊन पोलिसांना घेराव घातला आणि त्यांच्यावर हल्ल्याचा प्रयत्न केला.
परिस्थिती हाताबाहेर जात असल्याचे पाहून चिक्कोडी पोलिसांनी तातडीने स्थानिक महाराष्ट्र पोलिसांशी संपर्क साधला. त्यानंतर कोल्हापूर पोलिसांच्या मदतीने कडक बंदोबस्तात आरोपींना पुन्हा ताब्यात घेऊन पोलीस पथक बेळगावला रवाना झाले. या घटनेमुळे पोलीस वर्तुळात खळबळ उडाली आहे.
ಕೊಲ್ಹಾಪುರದಲ್ಲಿ ತನಿಖೆಗೆ ತೆರಳಿದ್ದ ಬೆಳಗಾವಿ ಪೊಲೀಸರ ಮೇಲೆ ಸ್ಥಳೀಯರಿಂದ ಹಲ್ಲೆಗೆ ಯತ್ನ.
ಬೆಳಗಾವಿ : ತನಿಖೆಗಾಗಿ ಕೊಲ್ಹಾಪುರಕೆ ತೆರಳಿದ್ದ ಬೆಳಗಾವಿ ಪೊಲೀಸರ ಮೇಲೆ ದರೋಡೆ ಪ್ರಕರಣದ ಆರೋಪಿಗಳ ಸಂಬಂಧಿಕರು ಹಲ್ಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಆರೋಪಿ ಸ್ಥಳೀಯರನ್ನು ಪ್ರಚೋದಿಸಿದ ಹಿನ್ನೆಲೆಯಲ್ಲಿ ಉಂಟಾದ ಈ ಉದ್ವಿಗ್ನ ಪರಿಸ್ಥಿತಿಯಿಂದ ಮಹಾರಾಷ್ಟ್ರ ಪೊಲೀಸರ ಸಹಾಯದಿಂದ ಚಿಕ್ಕೋಡಿ ಪೊಲೀಸ ಪಡೆಯಲ್ಲಿ ಇದ್ದವರು ಸುರಕ್ಷಿತವಾಗಿ ಹೊರಬಂದರು.
ಸದಲಗಾ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದರೋಡೆ ಪ್ರಕರಣದಲ್ಲಿ ಚಿಕ್ಕೋಡಿ ಪೊಲೀಸರು ಧೀರಜ ವಾಳವಾಳಕರ ಮತ್ತು ರವಿ ಸೋನಾರ ಎಂಬ ಇಬ್ಬರನ್ನು ಬಂಧಿಸಿದ್ದರು. ತನಿಖೆಯ ಭಾಗವಾಗಿ ಚಿಕ್ಕೋಡಿಯ ಸಿಪಿಐ ವಿಶ್ವನಾಥ ಚೌಗಲಾ ಹಾಗೂ ಅವರ ಸಿಬ್ಬಂದಿ ಆರೋಪಿಗಳನ್ನು ಕರೆದುಕೊಂಡು ಕೊಲ್ಹಾಪುರದ ಛತ್ರಪತಿ ಶಿವಾಜಿನಗರ ಪ್ರದೇಶಕ್ಕೆ ಸ್ಥಳ ಮಹಜರು ಹಾಗೂ ಪರಿಶೀಲನೆಗಾಗಿ ತೆರಳಿದ್ದರು.
ಘಟನಾ ಸ್ಥಳಕ್ಕೆ ತಲುಪುತ್ತಿದ್ದಂತೆಯೇ ಆರೋಪಿಗಳು ತಾವು ನಿರಪರಾಧಿಗಳೆಂದು ಕೂಗಾಡಿ ಗೊಂದಲ ಸೃಷ್ಟಿಸಲು ಆರಂಭಿಸಿದರು. ಅಲ್ಲದೆ, “ಇವರು ನಕಲಿ ಪೊಲೀಸರು” ಎಂದು ಹೇಳಿ ಸ್ಥಳೀಯರನ್ನು ತಪ್ಪು ದಾರಿಗೆಳೆದು ಗೊಂದಲ ಉಂಟುಮಾಡಿದರು. ಇದರ ಪರಿಣಾಮವಾಗಿ ಆರೋಪಿಗಳ ಸಂಬಂಧಿಗಳು ಹಾಗೂ ಸ್ನೇಹಿತರು ಸೇರಿಕೊಂಡು ಪೊಲೀಸರನ್ನು ಸುತ್ತುವರಿದು ಹಲ್ಲೆ ಮಾಡಲು ಯತ್ನಿಸಿದರು.
ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿರುವುದನ್ನು ಗಮನಿಸಿದ ಚಿಕ್ಕೋಡಿ ಪೊಲೀಸರು ತಕ್ಷಣವೇ ಮಹಾರಾಷ್ಟ್ರ ಪೊಲೀಸರನ್ನು ಸಂಪರ್ಕಿಸಿದರು. ಬಳಿಕ ಕೊಲ್ಹಾಪುರ ಪೊಲೀಸರ ಸಹಾಯದಿಂದ ಕಟ್ಟುನಿಟ್ಟಿನ ಬಂದೋಬಸ್ತಿನಲ್ಲಿ ಆರೋಪಿಗಳನ್ನು ಮರು ವಶಕ್ಕೆ ಪಡೆದು ಪೊಲೀಸ್ ಪಡೆ ಬೆಳಗಾವಿಗೆ ಪ್ರಯಾಣಿಸಿತು. ಈ ಘಟನೆಯಿಂದ ಪೊಲೀಸ್ ವಲಯದಲ್ಲಿ ಆತಂಕ ಹಾಗೂ ಚರ್ಚೆ ಉಂಟಾಗಿದೆ.

