‘राजा शिवाजी’मध्ये रितेश देशमुख आणि जेनेलियाच्या मुलाची एंट्री.
मुंबई : वृत्तसंस्था
‘राजा शिवाजी’ या बहुप्रतिक्षित चित्रपटाच्या झलकने प्रेक्षकांमध्ये प्रचंड उत्सुकता निर्माण केली आहे. यामध्ये एक लहानसा, गोंडस कलाकार सर्वांचे लक्ष वेधून घेत आहे. अवघ्या दहा वर्षांच्या या मुलाने आपल्या अभिनयाची सुरुवात करत मोठ्या पडद्यावर पाऊल ठेवले आहे. विशेष म्हणजे तो एका नामांकित कलाकार दांपत्याचा मुलगा असून त्याच्या घराण्याचा राजकीय वारसाही मोठा आहे.
अभिनेता रितेश देशमुख आणि अभिनेत्री जेनेलिया देशमुख हे पडद्यावर जितके लोकप्रिय आहेत, तितकेच ते खऱ्या आयुष्यातही आदर्श कुटुंब म्हणून ओळखले जातात. या चित्रपटाच्या झलकमध्ये राहिलने साकारलेली छत्रपती शिवाजी महाराजांच्या बालपणीची भूमिका विशेष लक्ष वेधून घेते. हा दुसरा कोणी नसून त्यांचा मुलगा राहिल देशमुख आहे. सुरुवातीच्या दृश्यांमध्ये तो स्वराज्याविषयी बोलताना दिसतो आणि त्यातून प्रेक्षकांना त्या ऐतिहासिक काळात नेण्याचा प्रयत्न करण्यात आला आहे. त्यानंतर कथा पुढे सरकत असताना रितेश देशमुख महाराजांच्या तरुणपणापासून प्रौढत्वापर्यंतचा प्रवास प्रभावीपणे साकारताना दिसतो.
‘ರಾಜಾ ಶಿವಾಜಿ’ ಚಿತ್ರದ ಮೂಲಕ ರಿತೇಶ್ ದೇಶ್ಮುಖ್ ಮತ್ತು ಜೆನೆಲಿಯಾ ದೇಶ್ಮುಖ ಅವರ ಪುತ್ರನ ಚಲನಚಿತ್ರ ರಂಗಕ್ಕೆ ಎಂಟ್ರಿ.
ಮುಂಬೈ : ಸುದ್ದಿಸಂಸ್ಥೆ
‘ರಾಜಾ ಶಿವಾಜಿ’ ಎಂಬ ಬಹು ನಿರೀಕ್ಷಿತ ಚಿತ್ರವು ತನ್ನ ಮೊದಲ ಝಲಕ್ ಮೂಲಕ ಪ್ರೇಕ್ಷಕರಲ್ಲಿ ಅಪಾರ ಕುತೂಹಲ ಮೂಡಿಸಿದೆ. ಈ ಝಲಕ್ನಲ್ಲಿ ಕಾಣಿಸಿಕೊಂಡಿರುವ ಬಾಲ ಕಲಾವಿದ , ಮನಮುಟ್ಟುವ ಕಲಾವಿದ ಎಲ್ಲರ ಗಮನ ಸೆಳೆಯುತ್ತಿದ್ದಾನೆ. ಕೇವಲ ಹತ್ತು ವರ್ಷದ ಈ ಬಾಲಕ ತನ್ನ ಅಭಿನಯ ಜೀವನವನ್ನು ಆರಂಭಿಸಿ ದೊಡ್ಡ ತೆರೆಗೆ ಕಾಲಿಟ್ಟಿದ್ದಾನೆ. ವಿಶೇಷವೆಂದರೆ, ಆತ ಖ್ಯಾತ ನಟ-ನಟಿ ದಂಪತಿಯ ಪುತ್ರನಾಗಿದ್ದು, ರಾಜಕೀಯ ಪರಂಪರೆಯೂಳ್ಳ ಕುಟುಂಬದ ವಾರಸುದಾರನಾಗಿದ್ದಾನೆ.
ನಟ ರಿತೇಶ್ ದೇಶ್ಮುಖ್ ಮತ್ತು ನಟಿ ಜೆನೆಲಿಯಾ ದೇಶ್ಮುಖ್ ಅವರು ತೆರೆ ಮೇಲೆ ಎಷ್ಟು ಜನಪ್ರಿಯರೋ, ನೈಜ ಜೀವನದಲ್ಲಿಯೂ ಆದರ್ಶ ಕುಟುಂಬವಾಗಿ ಗುರುತಿಸಿಕೊಂಡಿದ್ದಾರೆ. ಈ ಚಿತ್ರದ ಝಲಕ್ನಲ್ಲಿ ರಾಹಿಲ್ ದೇಶ್ಮುಖ್ ಅವರು ಛತ್ರಪತಿ ಶಿವಾಜಿ ಮಹಾರಾಜರ ಬಾಲ್ಯಾವಸ್ಥೆಯ ಪಾತ್ರವನ್ನು ನಿರ್ವಹಿಸಿದ್ದು ವಿಶೇಷ ಗಮನ ಸೆಳೆಯುತ್ತಿದೆ. ಆರಂಭಿಕ ದೃಶ್ಯಗಳಲ್ಲಿ ಸ್ವರಾಜ್ಯದ ಕುರಿತು ಮಾತನಾಡುವ ಅವರ ಅಭಿನಯ ಪ್ರೇಕ್ಷಕರನ್ನು ಆ ಐತಿಹಾಸಿಕ ಕಾಲಘಟ್ಟಕ್ಕೆ ಕರೆದೊಯ್ಯುವ ಪ್ರಯತ್ನ ಮಾಡುತ್ತದೆ.
ಕಥೆ ಮುಂದುವರಿದಂತೆ, ರಿತೇಶ್ ದೇಶ್ಮುಖ್ ಅವರು ಶಿವಾಜಿ ಮಹಾರಾಜರ ಯುವಾವಸ್ಥೆಯಿಂದ ಪ್ರೌಢಾವಸ್ಥೆಯವರೆಗಿನ ಜೀವನ ಪ್ರಯಾಣವನ್ನು ಪ್ರಭಾವಿಯಾಗಿ ಮೂಡಿಸಿರುವುದು ಕಾಣುತ್ತದೆ.
ಈ ಚಿತ್ರ ಎಲ್ಲರ ಕುತೂಹಲವನ್ನು ಮತ್ತಷ್ಟು ಏರಿಸಿದೆ.


