बेळगाव : राष्ट्रीय महामार्गावर भीषण अपघात; 2 ठार, चालक गंभीर.
बेळगाव : बेळगाव शहरातील राष्ट्रीय महामार्गावर झालेल्या भीषण अपघातात दोन जणांचा जागीच मृत्यू झाला असून एक जण गंभीर जखमी झाला आहे. या घटनेमुळे परिसरात खळबळ उडाली आहे.
ही दुर्घटना शहरातील येडियुरप्पा मार्गाजवळील राष्ट्रीय महामार्गावर घडली. प्राथमिक माहितीनुसार, कोल्हापूरहून शिवमोग्गा जिल्ह्यातील सोरबकडे कोंबड्या घेऊन जाणारे मालवाहू वाहन रस्त्याच्या कडेला उभ्या असलेल्या ट्रकला जोरदार धडकले.
पहाटेच्या सुमारास चालकाला डुलकी लागल्याने वाहनावरील नियंत्रण सुटले आणि हा अपघात झाला, अशी माहिती समोर येत आहे.
धडकेची तीव्रता इतकी होती की मालवाहू वाहन पूर्णतः चकनाचूर झाले. वाहनातील तिघांपैकी दोघांचा जागीच मृत्यू झाला. मृतांची ओळख शिवमोग्गा जिल्ह्यातील सोरब येथील वसीम आणि कुक्कापेट येथील मुबारक अशी झाली आहे.
अपघातावेळी वाहन चालवत असलेले चालक ईरप्पा हंचिनमनी हे गंभीर जखमी झाले असून त्यांना तातडीने बेळगाव येथील बीम्स रुग्णालयात दाखल करण्यात आले आहे. त्यांच्यावर उपचार सुरू आहेत.
या अपघातात मानवी हानीसोबतच मोठे आर्थिक नुकसानही झाले आहे. कोंबड्या वाहतूक करणाऱ्या वाहनातील शेकडो कोंबड्यांचाही मृत्यू झाल्याचे समजते. अपघातानंतर काही काळ वाहतूक विस्कळीत झाली होती.
घटनेची माहिती मिळताच हिरेबागेवाडी पोलिस ठाण्याचे कर्मचारी घटनास्थळी दाखल झाले. मृतदेह बाहेर काढून रुग्णालयात पाठविण्यात आले असून पोलिसांनी गुन्हा नोंदवून पुढील तपास सुरू केला आहे. अपघाताचे नेमके कारण शोधण्यासाठी अधिक माहिती गोळा केली जात आहे.
ಬೆಳಗಾವಿ : ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ; ಇಬ್ಬರ ಸಾವು, ಚಾಲಕ ಗಂಭೀರ.
ಬೆಳಗಾವಿ : ಬೆಳಗಾವಿ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ.
ಈ ದುರ್ಘಟನೆ ನಗರದ ಯಡಿಯೂರಪ್ಪ ಮಾರ್ಗದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕೊಲ್ಹಾಪುರದಿಂದ ಶಿವಮೊಗ್ಗ ಜಿಲ್ಲೆಯ ಸೋರಬ ಕಡೆಗೆ ಕೋಳಿಗಳನ್ನು ಸಾಗಿಸುತ್ತಿದ್ದ ಸರಕು ವಾಹನ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಲಾರಿಯನ್ನು ಭಾರೀ ವೇಗದಲ್ಲಿ ಡಿಕ್ಕಿ ಹೊಡೆದಿದೆ. ಮುಂಜಾನೆ ವೇಳೆಯಲ್ಲಿ ಚಾಲಕನಿಗೆ ನಿದ್ರೆ ಬಂದು ವಾಹನದ ಮೇಲಿನ ನಿಯಂತ್ರಣ ತಪ್ಪಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಡಿಕ್ಕಿಯ ತೀವ್ರತೆ ಯಷ್ಟು ಹೆಚ್ಚು ಇದ್ದ ಕಾರಣ ಸರಕು ವಾಹನ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ವಾಹನದಲ್ಲಿದ್ದ ಮೂವರಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ಶಿವಮೊಗ್ಗ ಜಿಲ್ಲೆಯ ಸೋರಬದ ವಸೀಂ ಮತ್ತು ಕುಕ್ಕಾಪೇಟೆಯ ಮುಬಾರಕ್ ಎಂದು ಗುರುತಿಸಲಾಗಿದೆ. ಅಪಘಾತದ ವೇಳೆ ವಾಹನ ಚಲಾಯಿಸುತ್ತಿದ್ದ ಚಾಲಕ ಈರಪ್ಪ ಹಂಚಿನಮನಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ತಕ್ಷಣವೇ ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಚಿಕಿತ್ಸೆ ಮುಂದುವರಿದಿದೆ.
ಈ ಅಪಘಾತದಲ್ಲಿ ಮಾನವ ಹಾನಿಯ ಜೊತೆಗೆ ಭಾರೀ ಆರ್ಥಿಕ ನಷ್ಟವೂ ಸಂಭವಿಸಿದೆ. ಕೋಳಿಗಳನ್ನು ಸಾಗಿಸುತ್ತಿದ್ದ ವಾಹನದಲ್ಲಿದ್ದ ನೂರಾರು ಕೋಳಿಗಳೂ ಸಾವನ್ನಪ್ಪಿರುವ ಮಾಹಿತಿ ಲಭ್ಯವಾಗಿದೆ. ಅಪಘಾತದ ನಂತರ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಘಟನೆಯ ಮಾಹಿತಿ ದೊರಕುತ್ತಿದ್ದಂತೆ ಹಿರೇಬಾಗೇವಾಡಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಹೊರತೆಗೆದು ಆಸ್ಪತ್ರೆಗೆ ಕಳುಹಿಸಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಅಪಘಾತದ ನಿಖರ ಕಾರಣ ತಿಳಿಯಲು ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.


