घोडे गल्लीतील पाणीप्रश्न गंभीर; माजी नगराध्यक्षांसह वार्ड सदस्यांवर नागरिकांचा दुर्लक्षाचा आरोप.
खानापूर : खानापूर शहरातील घोडे गल्ली परिसरात पाणीटंचाईचा प्रश्न गंभीर बनला असून, वार्ड क्रमांक 6 च्या माजी नगरसेविका व माजी नगराध्यक्ष मीनाक्षी प्रकाश बैलूरकर तसेच वार्ड क्रमांक 16 च्या नगरसेवकांनी गेल्या वर्षभरापासून या समस्येकडे दुर्लक्ष केल्याचा आरोप नागरिकांनी केला आहे.
घोडे गल्ली ही दोन वार्डांमध्ये विभागली गेली आहे. रस्त्याच्या एका बाजूची घरे वार्ड क्रमांक 6 मध्ये येतात, तर समोरच्या बाजूची घरे वार्ड क्रमांक 16 मध्ये येतात. त्यामुळे दोन्ही वार्डांच्या नगरसेवकांनी जबाबदारी टाळल्याचा आरोप स्थानिकांनी केला आहे. सध्या उन्हाळ्याची तीव्रता वाढली असून परिसरात पाण्याची भीषण टंचाई निर्माण झाली आहे. या ठिकाणी लक्ष्मीनारायणाचे मंदिर असून त्या ठिकाणी मंदिर स्वच्छता व पूजा विधीसाठी सुद्धा पाणी मिळत नसल्याचा आरोप स्थानिक नागरिकांनी केला आहे.
यासंदर्भात अधिक माहिती देताना स्थानिक रहिवासी अर्जुन गणपती कुंभार यांनी सांगितले की, वर्षभरापूर्वी जल जीवन मिशन योजनेअंतर्गत पाईपलाईन टाकण्यासाठी रस्त्याची खुदाई करण्यात आली होती. त्या वेळी त्यांच्या घरासमोरील पाण्याच्या टाकीला जोडलेला पाईप तुटला. त्यानंतर अनेकदा तक्रार करूनही संबंधित नगरसेवकांनी व नगरपंचायतीने जाणूनबुजून दुर्लक्ष केल्याचा आरोप त्यांनी केला.
“आमच्या घरासमोर कुपनलिका असूनही आम्हाला पाणी मिळत नाही. मात्र याच कुपनलिकेपासून काही अंतरावर माजी नगराध्यक्ष मीनाक्षी प्रकाश बैलूरकर यांचे घर असून त्या भागाला आणि मठ गल्लीतील नागरिकांना आमच्या घरासमोर असलेल्या याच कुपनलिकेचा पाणीपुरवठा केला जातो; मात्र आमच्या गल्लीत मात्र मुद्दाम पाणी देण्यात येत नाही,” असा आरोपही नागरिकांनी केला. तसेच पाण्याच्या टाकीचे नळ नगरपंचायतीचा कर्मचारी अंकुश यांनी काढून नेल्याचेही त्यांनी सांगितले.
मीनाक्षी प्रकाश बैलूरकर यांचा नगरसेवक व नगराध्यक्ष पदाचा कार्यकाळ संपल्यानंतरही गल्लीतील नागरिकांना जाणूनबुजून त्रास दिला जात असल्याची भावना स्थानिकांनी व्यक्त केली. त्यामुळे नगरपंचायतीचे प्रभारी तहसीलदार दुंडाप्पा कोमार व मुख्याधिकारी संतोष कुरबेट यांनी तातडीने प्रत्यक्ष पाहणी करून घोडे गल्लीतील पाणीप्रश्न सोडवावा, अशी मागणी नागरिकांनी केली आहे.
यावेळी अर्जुन कुंभार, राजू कोठारे, विकास खंन्नुकर, विनायक कार्लेकर, श्रीधर कुंभार, चंद्रकांत कुंभार, लोकेश लोहार, इंदुमती लोहार, कीर्ती कार्लेकर व आदीजण उपस्थित होते.
ಖಾನಾಪುರ ಶಹರಿನ ಘೋಡೆ ಗಲ್ಲಿ ಭಾಗದಲ್ಲಿ ನೀರಿನ ಸಮಸ್ಯೆ ಗಂಭೀರ; ಮಾಜಿ ನಗರಾಧ್ಯಕ್ಷೆಯೊಂದಿಗೆ ವಾರ್ಡ್ ಸದಸ್ಯರ ವಿರುದ್ಧ ನಾಗರಿಕರ ನಿರ್ಲಕ್ಷ್ಯದ ಆರೋಪ.
ಖಾನಾಪೂರ : ಖಾನಾಪೂರ ಪಟ್ಟಣದ ಘೋಡೆ ಗಲ್ಲಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಗಂಭೀರ ರೂಪ ಪಡೆದಿದ್ದು, ವಾರ್ಡ್ ಸಂಖ್ಯೆ 6ರ ಮಾಜಿ ನಗರಸಭಾ ಸದಸ್ಯೆ ಹಾಗೂ ಮಾಜಿ ನಗರಾಧ್ಯಕ್ಷೆ ಮೀನಾಕ್ಷಿ ಪ್ರಕಾಶ ಬೈಲೂರಕರ ಮತ್ತು ವಾರ್ಡ್ ಸಂಖ್ಯೆ 16ರ ನಗರಸಭಾ ಸದಸ್ಯರು ಕಳೆದ ಒಂದು ವರ್ಷದಿಂದ ಈ ಸಮಸ್ಯೆಯ ಕಡೆ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪವನ್ನು ನಾಗರಿಕರು ಮಾಡಿದ್ದಾರೆ. ಈ ಸ್ಥಳದಲ್ಲಿ ಲಕ್ಷ್ಮಿನಾರಾಯಣ ದೇವಸ್ಥಾನವಿದ್ದರೂ, ದೇವಾಲಯ ಶುಚಿಗೊಳಿಸುವಿಕೆ ಮತ್ತು ಪೂಜಾ ವಿಧಿವಿಧಾನಗಳಿಗೂ ನೀರು ಲಭ್ಯವಿಲ್ಲ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಘೋಡೆ ಗಲ್ಲಿ ಎರಡು ವಾರ್ಡ್ಗಳಲ್ಲಿ ವಿಭಜನೆಯಾಗಿದೆ. ರಸ್ತೆಯ ಒಂದು ಬದಿಯ ಮನೆಗಳು ವಾರ್ಡ್ ಸಂಖ್ಯೆ 6ರಲ್ಲಿ ಬರುತ್ತವೆ, ಎದುರು ಬದಿಯ ಮನೆಗಳು ವಾರ್ಡ್ ಸಂಖ್ಯೆ 16ರಲ್ಲಿ ಬರುತ್ತವೆ. ಇದರಿಂದ ಎರಡೂ ವಾರ್ಡ್ ಸದಸ್ಯರು ಜವಾಬ್ದಾರಿ ತಪ್ಪಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಪ್ರಸ್ತುತ ಬೇಸಿಗೆಯ ತೀವ್ರತೆ ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರದೇಶದಲ್ಲಿ ಭೀಕರ ನೀರಿನ ಕೊರತೆ ಉಂಟಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ ಸ್ಥಳೀಯ ನಿವಾಸಿ ಅರ್ಜುನ್ ಗಣಪತಿ ಕುಂಭಾರ ಅವರು, ಒಂದು ವರ್ಷದ ಹಿಂದೆ ಜಲ ಜೀವನ ಮಿಷನ್ ಯೋಜನೆಯಡಿ ಪೈಪ್ಲೈನ್ ಅಳವಡಿಸಲು ರಸ್ತೆ ತೋಡಲಾಗಿತ್ತು. ಆ ವೇಳೆ ತಮ್ಮ ಮನೆಯ ಮುಂದೆ ಇರುವ ನೀರಿನ ಟ್ಯಾಂಕ್ಗೆ ಸಂಪರ್ಕ ಹೊಂದಿದ್ದ ಪೈಪ್ ತುಂಡಾಗಿದೆ. ನಂತರ ಅನೇಕ ಬಾರಿ ದೂರು ನೀಡಿದರೂ ಸಂಬಂಧಿಸಿದ ನಗರಸಭಾ ಸದಸ್ಯರು ಹಾಗೂ ನಗರ ಪಂಚಾಯಿತಿ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ತೋರಿದ್ದಾರೆ ಎಂದು ಅವರು ಆರೋಪಿಸಿದರು.
“ನಮ್ಮ ಮನೆಯ ಮುಂದೆ ಬೋರ್ ವೆಲ್ ಇದ್ದರೂ ನಮಗೆ ನೀರು ಸಿಗುತ್ತಿಲ್ಲ. ಆದರೆ ಇದೇ ಬೋರ್ ವೆಲ್ ನಿಂದ ಕೆಲವೇ ಅಂತರದಲ್ಲಿರುವ ಮಾಜಿ ನಗರಾಧ್ಯಕ್ಷೆ ಮೀನಾಕ್ಷಿ ಪ್ರಕಾಶ ಬೈಲೂರಕರ ಅವರ ಮನೆ ಮತ್ತು ಮಠ ಗಲ್ಲಿಯ ನಿವಾಸಿಗಳಿಗೆ ನಮ್ಮ ಮನೆಯ ಮುಂದೆ ಇರುವ ಇದೇ ಬೋರ್ ವೆಲ್ ನಿಂದ ನೀರು ಪೂರೈಕೆ ಮಾಡಲಾಗುತ್ತಿದೆ; ಆದರೆ ನಮ್ಮ ಭಾಗದ ಗಲ್ಲಿಗೆ ಮಾತ್ರ ಉದ್ದೇಶಪೂರ್ವಕವಾಗಿ ನೀರು ನೀಡಲಾಗುತ್ತಿಲ್ಲ,” ಎಂದು ನಾಗರಿಕರು ಆರೋಪಿಸಿದ್ದಾರೆ. ಹಾಗೆಯೇ ನೀರಿನ ಟ್ಯಾಂಕ್ನ ಕೊಳವೆಗಳನ್ನು ನಗರ ಪಂಚಾಯಿತಿಯ ಸಿಬ್ಬಂದಿ ಅಂಕುಶ ಅವರು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದ್ದಾರೆ.
ಮೀನಾಕ್ಷಿ ಪ್ರಕಾಶ ಬೈಲೂರಕರ ಅವರ ನಗರಸಭಾ ಸದಸ್ಯೆ ಹಾಗೂ ನಗರಾಧ್ಯಕ್ಷೆಯ ಅವಧಿ ಮುಗಿದ ನಂತರವೂ ಗಲ್ಲಿಯ ನಾಗರಿಕರಿಗೆ ಉದ್ದೇಶಪೂರ್ವಕವಾಗಿ ತೊಂದರೆ ನೀಡಲಾಗುತ್ತಿದೆ ಎಂಬ ಭಾವನೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಆದ್ದರಿಂದ ನಗರ ಪಂಚಾಯಿತಿಯ ಪ್ರಭಾರಿ ತಹಶೀಲ್ದಾರ್ ದುಂಡಪ್ಪ ಕೋಮಾರ ಹಾಗೂ ಮುಖ್ಯಾಧಿಕಾರಿ ಸಂತೋಷ ಕುರ್ಬೆಟ್ ಅವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಘೋಡೆ ಗಲ್ಲಿಯ ನೀರಿನ ಸಮಸ್ಯೆಯನ್ನು ಪರಿಹರಿಸಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಅರ್ಜುನ್ ಕುಂಬಾರ್, ರಾಜು ಕೊಠಾರೆ, ವಿಕಾಸ್ ಖನ್ನೂಕರ್, ವಿನಾಯಕ್ ಕರ್ಲೇಕರ್, ಶ್ರೀಧರ್ ಕುಂಬಾರ್, ಚಂದ್ರಕಾಂತ್ ಕುಂಬಾರ್, ಲೋಕೇಶ್ ಲೋಹರ್, ಇಂದುಮತಿ ಲೋಹರ್, ಕೀರ್ತಿ ಕಾರ್ಲೇಕರ್, ಮತ್ತಿತರರು ಉಪಸ್ಥಿತರಿದ್ದರು.


