अक्षय तृतीयेच्या निमित्ताने बेकवाडच्या कलमेश्वर मंदिरात शिवलिंगावर अर्ध नटेश्वर सूर्यकिरणांचे दर्शन.
खानापूर : तालुक्यातील बेकवाड (ता. खानापूर) येथील प्राचीन कलमेश्वर मंदिरात अक्षय तृतीयेच्या शुभमुहूर्तावर एक अद्भुत आणि मनोहर दृश्य पाहावयास मिळाले. पहाटे उगवत्या सूर्याच्या किरणांनी मंदिरातील शिवलिंगावर ‘अर्ध नटेश्वर’ स्वरूपातील प्रकाशरेषा उमटल्याने भाविकांमध्ये मोठी उत्सुकता आणि भक्तिभावाचे वातावरण निर्माण झाले.
सकाळी साधारणपणे 6.45 ते 7.05 या वेळेत हे सूर्यकिरण थेट शिवलिंगावर पडताना दिसून आले. मंदिराच्या रचनेनुसार आणि वास्तुशास्त्रीय वैशिष्ट्यांमुळे दरवर्षी अक्षय तृतीयेच्या सुमारास हे दिव्य दृश्य अनुभवायला मिळते, अशी माहिती स्थानिकांनी दिली.
विशेष म्हणजे हे सूर्यकिरण पुढील काही दिवस सकाळच्या वेळेत दर्शनास येणार असल्याने परिसरातील भाविक या अलौकिक सोहळ्याचे दर्शन घेण्यासाठी मोठ्या संख्येने गर्दी करीत आहेत.
या अद्भुत नैसर्गिक व आध्यात्मिक संगमामुळे बेकवाड परिसरात उत्साहाचे वातावरण असून, कलमेश्वर मंदिराची कीर्ती पुन्हा एकदा अधोरेखित झाली आहे.
ಅಕ್ಷಯ ತೃತೀಯಾ ನಿಮಿತ್ತ ಬೆಕವಾಡ ಊರಿನ ಕಲಮೇಶ್ವರ ದೇವಾಲಯದಲ್ಲಿ ಶಿವಲಿಂಗದ ಮೇಲೆ ಅರ್ಧ ನಟೇಶ್ವರ ಸೂರ್ಯಕಿರಣಗಳ ದರ್ಶನ.
ಖಾನಾಪುರ : ತಾಲೂಕಿನ ಬೆಕವಾಡ (ತಾ. ಖಾನಾಪುರ) ಗ್ರಾಮದ ಪ್ರಾಚೀನ ಕಲಮೇಶ್ವರ ದೇವಾಲಯದಲ್ಲಿ ಅಕ್ಷಯ ತೃತೀಯಾದ ಶುಭ ಮುಹೂರ್ತದಲ್ಲಿ ಒಂದು ಅದ್ಭುತ ಮತ್ತು ಮನಮೂಹಕ ದೃಶ್ಯ ಕಾಣಿಸಿಕೊಂಡಿತು. ಬೆಳಗಿನ ಜಾವ ಉದಯಿಸುವ ಸೂರ್ಯನ ಕಿರಣಗಳು ದೇವಾಲಯದ ಶಿವಲಿಂಗದ ಮೇಲೆ ‘ಅರ್ಧ ನಟೇಶ್ವರ’ ಸ್ವರೂಪದ ಪ್ರಕಾಶರೇಖೆಯನ್ನು ಮೂಡಿಸಿದ ಪರಿಣಾಮ ಭಕ್ತರಲ್ಲಿ ಅಪಾರ ಉತ್ಸಾಹ ಮತ್ತು ಭಕ್ತಿಭಾವದ ವಾತಾವರಣ ನಿರ್ಮಾಣವಾಯಿತು.
ಬೆಳಿಗ್ಗೆ ಸುಮಾರು 6.45ರಿಂದ 7.05ರ ಅವಧಿಯಲ್ಲಿ ಈ ಸೂರ್ಯಕಿರಣಗಳು ನೇರವಾಗಿ ಶಿವಲಿಂಗದ ಮೇಲೆ ಬೀಳುತ್ತಿರುವುದು ಕಾಣಿಸಿತು. ದೇವಾಲಯದ ವಿನ್ಯಾಸ ಮತ್ತು ವಾಸ್ತುಶಿಲ್ಪದ ವೈಶಿಷ್ಟ್ಯಗಳಿಂದಾಗಿ ಪ್ರತಿವರ್ಷ ಅಕ್ಷಯ ತೃತೀಯೆಯ ಸಂದರ್ಭದಲ್ಲಿ ಈ ದಿವ್ಯ ದೃಶ್ಯವನ್ನು ಅನುಭವಿಸಲು ಸಾಧ್ಯವಾಗುತ್ತದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿಶೇಷವೆಂದರೆ, ಮುಂದಿನ ಕೆಲವು ದಿನಗಳ ಕಾಲವೂ ಬೆಳಗಿನ ವೇಳೆಯಲ್ಲಿ ಈ ಸೂರ್ಯಕಿರಣಗಳ ದರ್ಶನ ಸಾಧ್ಯವಾಗುವುದರಿಂದ ಸುತ್ತಮುತ್ತಲಿನ ಭಕ್ತರು ಈ ಅಪೂರ್ವ ನೈಸರ್ಗಿಕ ಹಾಗೂ ಆಧ್ಯಾತ್ಮಿಕ ಸಂಗಮವನ್ನು ನೋಡುವುದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.
ಈ ಅದ್ಭುತ ನೈಸರ್ಗಿಕ ಮತ್ತು ಆಧ್ಯಾತ್ಮಿಕ ಸಂಗಮದಿಂದ ಬೆಕವಾಡ ಪ್ರದೇಶದಲ್ಲಿ ಹರ್ಷೋತ್ಸವದ ವಾತಾವರಣ ನಿರ್ಮಾಣವಾಗಿದ್ದು, ಕಲಮೇಶ್ವರ ದೇವಾಲಯದ ಖ್ಯಾತಿ ಮತ್ತೊಮ್ಮೆ ಪ್ರಜ್ವಲಿಸಿದೆ.


