शांतिनिकेतन डिग्री कॉलेजतर्फे पीयू कॉलेजच्या गुणवंत विद्यार्थ्यांचा सत्कार समारंभ उत्साहात.
खानापूर (दि. 13 एप्रिल 2026) : येथील शांतिनिकेतन डिग्री कॉलेज ऑफ बीबीए अँड बीसीए यांच्या वतीने शांतिनिकेतन पीयू कॉलेज मधील बारावी उत्तीर्ण व गुणवंत विद्यार्थ्यांचा सत्कार समारंभ आज सकाळी 11 वाजता उत्साहात पार पडला.
कार्यक्रमाच्या अध्यक्षस्थानी खानापूरचे आमदार मा. श्री. विठ्ठल हलगेकर हे होते. प्रमुख पाहुणे म्हणून संचालक मंडळाचे सदस्य श्री. यल्लाप्पा तिरवीर उपस्थित होते. तसेच शांतिनिकेतन पीयू कॉलेजच्या प्राचार्या सौ. सुवर्णा निलजकर, शांतिनिकेतन डिग्री कॉलेजच्या प्राचार्या व जनसंपर्क अधिकारी सौ. मनीषा हलगेकर आणि समन्वयक सौ. हमनाझ एम. हुदली यांची प्रमुख उपस्थिती होती.
यावेळी गुणवंत व यशस्वी विद्यार्थ्यांचा पुष्पगुच्छ व प्रमाणपत्र देऊन गौरव करण्यात आला. आपल्या अध्यक्षीय भाषणात आमदार विठ्ठल हलगेकर यांनी विद्यार्थ्यांना करिअरची निवड करताना योग्य दिशा, उपलब्ध संधी आणि यशस्वी होण्यासाठी आवश्यक असलेली जिद्द व सातत्य याबाबत मार्गदर्शन केले. “ध्येय निश्चित करून सातत्याने प्रयत्न केल्यास यश निश्चित मिळते,” असे त्यांनी सांगितले.
कार्यक्रमास पालक, शिक्षकवृंद व विद्यार्थी मोठ्या संख्येने उपस्थित होते. समारंभाचे सूत्रसंचालन व आभार प्रदर्शन समन्वयकांनी केले.
ಶಾಂತಿನಿಕೇತನ ಡಿಗ್ರಿ ಕಾಲೇಜಿನಿಂದ ಪಿಯು ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಸಮಾರಂಭ ಉತ್ಸಾಹದಿಂದ ನೆರವೇರಿತು
ಖಾನಾಪುರ (ದಿ. 13 ಏಪ್ರಿಲ್ 2026) : ಇಲ್ಲಿನ ಶಾಂತಿನಿಕೇತನ ಡಿಗ್ರಿ ಕಾಲೇಜ್ ಆಫ್ ಬಿಬಿಎ ಮತ್ತು ಬಿಸಿಎ ವತಿಯಿಂದ ಶಾಂತಿನಿಕೇತನ ಪಿಯು ಕಾಲೇಜ್ನ ದ್ವಿತೀಯ ಪಿಯುಸಿ ಉತ್ತೀರ್ಣ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸತ್ಕಾರ ಸಮಾರಂಭ ಇಂದು ಬೆಳಿಗ್ಗೆ 11 ಗಂಟೆಗೆ ಉತ್ಸಾಹದಿಂದ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖಾನಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕಾಲೇಜಿನ ಸಂಸ್ಥಾಪಕ ಮಾನ್ಯ ಶ್ರೀ ವಿಠ್ಠಲರಾವ್ ಹಲಗೇಕರ ವಹಿಸಿದ್ದರು. ಮುಖ್ಯ ಅತಿಥಿಯಾಗಿ ನಿರ್ದೇಶಕ ಮಂಡಳಿಯ ಸದಸ್ಯರಾದ ಶ್ರೀ ಯಲ್ಲಪ್ಪ ತಿರವೀರ ಉಪಸ್ಥಿತರಿದ್ದರು. ಹಾಗೆಯೇ ಶಾಂತಿನಿಕೇತನ ಪಿಯು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸುವರ್ಣ ನಿಲಜ್ಕರ್, ಶಾಂತಿನಿಕೇತನ ಡಿಗ್ರಿ ಕಾಲೇಜಿನ ಪ್ರಾಂಶುಪಾಲೆ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಮತಿ ಮನಿಷಾ ಹಲಗೇಕರ ಮತ್ತು ಸಂಯೋಜಕೆಯಾದ ಶ್ರೀಮತಿ ಹಮನಾಜ್ ಎಂ. ಹುದಲಿ ಪ್ರಮುಖವಾಗಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪ್ರತಿಭಾವಂತ ಹಾಗೂ ಯಶಸ್ವಿ ವಿದ್ಯಾರ್ಥಿಗಳಿಗೆ ಪುಷ್ಪಗುಚ್ಛ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಶಾಸಕ ವಿಠ್ಠಲರಾವ್ ಹಲಗೇಕರ ಅವರು ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆ ಮಾಡುವ ಸಂದರ್ಭದಲ್ಲಿ ಸರಿಯಾದ ದಿಕ್ಕು, ಲಭ್ಯವಿರುವ ಅವಕಾಶಗಳು ಮತ್ತು ಯಶಸ್ಸು ಸಾಧಿಸಲು ಅಗತ್ಯವಾದ ಹಠ ಮತ್ತು ನಿರಂತರ ಪ್ರಯತ್ನಗಳ ಬಗ್ಗೆ ಮಾರ್ಗದರ್ಶನ ನೀಡಿದರು. “ಗುರಿಯನ್ನು ನಿಶ್ಚಯಿಸಿ ನಿರಂತರವಾಗಿ ಪ್ರಯತ್ನಿಸಿದರೆ ಯಶಸ್ಸು ಖಚಿತ,” ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಸಮಾರಂಭದ ನಿರೂಪಣೆ ಹಾಗೂ ಕೃತಜ್ಞತಾಪೂರ್ವಕ ವಂದನೆಯನ್ನು ಸಂಯೋಜಕೆಯವರು ನೆರವೇರಿಸಿದರು.


