रील्स बनवताना जीव गमावला; भाजप नेत्याच्या मुलाचा दुर्दैवी मृत्यू..!
हुबळी : रील्सच्या नादात भाजप नेत्याच्या मुलाचा मृत्यू झाल्याची धक्कादायक घटना हुबळी येथे घडली आहे. नमीश संगलद (वय 15) असे मृत मुलाचे नाव आहे. तो मैसूर येथे 9 वी इयत्तेत शिक्षण घेत होता. युगादी सणानिमित्त तो घरी आला होता.

दरम्यान, गुरुवारी संध्याकाळी मित्रांसोबत रील्स तयार करण्यासाठी तो शेजवाडकर प्लॉट परिसरात गेला होता. यावेळी त्याने पालकांची ऑडी कार वापरून वेगात बाइक चालवत स्टंट करण्याचा प्रयत्न केला. मात्र, स्टंट करत असताना बाइकला कारची धडक बसली आणि या अपघातात नमीश संगलद याचा जागीच मृत्यू झाला.
मुलाचा मृत्यू झाल्याने वडील वीरेश संगलद यांचा आक्रोश हृदयद्रावक होता. या प्रकरणी पोलिसांनी गुन्हा दाखल करून पुढील तपास सुरू केला आहे.
ರೀಲ್ಸ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಬಿಜೆಪಿ ಮುಖಂಡನ ಪುತ್ರ..!
ಹುಬ್ಬಳ್ಳಿ : ರೀಲ್ಸ್ ಹುಚ್ಚಿಗೆ ಬಿದ್ದು ಬಿಜೆಪಿ ಮುಖಂಡನ ಪುತ್ರ ಪ್ರಾಣ ಕಳೆದುಕೊಂಡ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ನಮೀಷ್ ಸಂಗಳದ (15) ಮೃತ ಬಾಲಕ. ಮೈಸೂರಿನಲ್ಲಿ 9. ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕ ಯುಗಾದಿ ಹಬ್ಬದ ಪ್ರಯುಕ್ತ ಮನೆಗೆ ಬಂದಿದ್ದ.
ಈ ವೇಳೆ ಗುರುವಾರ ಸಂಜೆ ಸ್ನೇಹಿತರ ಜೊತೆ ರೀಲ್ಸ್ ಮಾಡಲು ಶೇಜವಾಡ್ಕರ್ ಪ್ಲಾಟ್ ಗೆ ತೆರಳಿದ್ದಾನೆ. ಪೋಷಕರ ಆಡಿ ಕಾರು ಬಳಸಿಕೊಂಡು ವೇಗವಾಗಿ ಬೈಕ್ ಓಡಿಸಿ ಸ್ಟಂಟ್ ಮಾಡುವ ವೇಳೆ ಬೈಕ್ ಗೆ ಕಾರು ಗುದ್ದಿದ್ದು ನಮೀಷ್ ಸಂಗಳದ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮಗನನ್ನು ಕಳೆದುಕೊಂಡ ವಿರೇಶ್ ಸಂಗಳದ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸಿದ್ದಾರೆ.



