महाराष्ट्र एकीकरण समितीची मासिक बैठक व दिवंगत नेते दीपक दळवी यांची श्रद्धांजली सभा रविवारी.
खानापूर : महाराष्ट्र एकीकरण समिती, खानापूर तालुका यांच्या वतीने मासिक बैठकीचे आयोजन करण्यात आले असून, समितीचे दिवंगत ज्येष्ठ नेते दीपक दळवी यांना श्रद्धांजली अर्पण करण्यासाठी शोकसभेचेही आयोजन करण्यात आले आहे. ही बैठक व शोकसभा रविवार, दिनांक 22 मार्च 2026 रोजी दुपारी 2.00 वाजता राजा शिवछत्रपती शिवस्मारक येथे होणार आहे.
या बैठकीत तालुक्यातील विविध प्रश्न, संघटनात्मक बाबी तसेच आगामी कार्यक्रमांबाबत सविस्तर चर्चा करण्यात येणार आहे. याचबरोबर समितीच्या कार्यात मोलाचे योगदान देणारे दिवंगत नेते दीपक दळवी यांच्या स्मृतींना उजाळा देत त्यांना श्रद्धांजली अर्पण करण्यात येणार आहे. समितीचे पदाधिकारी व कार्यकर्त्यांनी मोठ्या संख्येने उपस्थित राहावेत, असे आवाहन समितीचे ज्येष्ठ नेते व माजी आमदार दिगंबर पाटील, समितीचे अध्यक्ष गोपाळ देसाई, कार्याध्यक्ष मुरलीधर पाटील, कार्याध्यक्ष निरंजन सरदेसाई, सरचिटणीस आबासाहेब दळवी यांनी केले आहे.
ಮಹಾರಾಷ್ಟ್ರ ಏಕೀಕರಣ ಸಮಿತಿಯ ಮಾಸಿಕ ಸಭೆ ಹಾಗೂ ನಿಧನರಾದ ಸಮಿತಿಯ ನಾಯಕ ದೀಪಕ್ ದಳವಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಸಭೆ ಇದೇ 22 ಭಾನುವಾರದಂದು.
ಖಾನಾಪುರ : ಮಹಾರಾಷ್ಟ್ರ ಏಕೀಕರಣ ಸಮಿತಿ, ಖಾನಾಪುರ ತಾಲೂಕು ಇವರ ವತಿಯಿಂದ ಮಾಸಿಕ ಸಭೆಯನ್ನು ಆಯೋಜಿಸಲಾಗಿದ್ದು, ಸಭೆಯಲ್ಲಿ ಸಮಿತಿಯ ನಿಧನರಾದ ಹಿರಿಯ ನಾಯಕ ದೀಪಕ್ ದಳವಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಶೋಕಸಭೆ ಕೂಡ ಆಯೋಜಿಸಲಾಗಿದೆ. ಈ ಸಭೆ ಹಾಗೂ ಶೋಕಸಭೆ ಭಾನುವಾರ, ದಿನಾಂಕ 22 ಮಾರ್ಚ್ 2026 ರಂದು ಮಧ್ಯಾಹ್ನ 2.00 ಗಂಟೆಗೆ ರಾಜಾ ಶಿವಛತ್ರಪತಿ ಶಿವಸ್ಮಾರಕದಲ್ಲಿ ನಡೆಯಲಿದೆ.
ಈ ಸಭೆಯಲ್ಲಿ ತಾಲೂಕಿನ ವಿವಿಧ ಸಮಸ್ಯೆಗಳು, ಸಂಘಟನಾ ಸಂಬಂಧಿತ ವಿಷಯಗಳು ಹಾಗೂ ಮುಂದಿನ ಕಾರ್ಯಕ್ರಮಗಳ ಬಗ್ಗೆ ಸವಿಸ್ತಾರವಾಗಿ ಚರ್ಚೆ ನಡೆಯಲಿದೆ. ಇದರ ಜೊತೆಗೆ ಸಮಿತಿಯ ಕಾರ್ಯದಲ್ಲಿ ಮಹತ್ವದ ಕೊಡುಗೆ ನೀಡಿ ನಿಧನರಾದ ನಾಯಕ ದೀಪಕ್ ದಳವಿ ಅವರ ಸ್ಮೃತಿಗಳನ್ನು ಸ್ಮರಿಸಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಗುತ್ತದೆ.
ಸಮಿತಿಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗುವಂತೆ ಸಮಿತಿಯ ಹಿರಿಯ ನಾಯಕ ಹಾಗೂ ಮಾಜಿ ಶಾಸಕರಾದ ದಿಗಂಬರ್ ಪಾಟೀಲ, ಸಮಿತಿಯ ಅಧ್ಯಕ್ಷ ಗೋಪಾಳ ದೇಸಾಯಿ, ಕಾರ್ಯಾಧ್ಯಕ್ಷ ಮೂರಳೀಧರ ಪಾಟೀಲ, ಕಾರ್ಯಾಧ್ಯಕ್ಷ ನಿರಂಜನ್ ಸರದೇಶಾಯಿ, ಪ್ರಧಾನ ಕಾರ್ಯದರ್ಶಿ ಆಬಾಸಾಹೇಬ ದಳವಿ ಅವರು ಮನವಿ ಮಾಡಿದ್ದಾರೆ.



