शिवाजीनगर रेल्वे ब्रिज परिसरात चिकन कचऱ्याची विल्हेवाट लावण्याची मागणी; दुर्गंधीमुळे नागरिक त्रस्त, कारवाईची मागणी.
खानापूर : खानापूर–जांबोटी मार्गावरील रामगुरवाडी ग्रामपंचायतच्या हद्दीत येणाऱ्या शिवाजीनगर, खानापूर येथील रेल्वे ब्रिज परिसरात काही चिकन दुकानदारांकडून चिकनचा कचरा रस्त्याच्या कडेला टाकला जात असल्याने परिसरात तीव्र दुर्गंधी पसरली आहे. त्यामुळे या मार्गाने ये-जा करणाऱ्या प्रवाशांना नाक मुठीत धरून प्रवास करावा लागत असून स्थानिक रहिवाशांनाही याचा मोठा त्रास सहन करावा लागत आहे.
रस्त्यालगत फेकण्यात येणाऱ्या चिकन कचऱ्यामुळे या ठिकाणी कावळे व भटक्या कुत्र्यांची संख्या वाढली असून त्यामुळे स्वच्छतेचा प्रश्न गंभीर बनला आहे. अचानक कुत्रे रस्त्यावर धावत आल्याने लहान-मोठ्या अपघातांची शक्यता वाढली असल्याचीही नागरिकांनी चिंता व्यक्त केली आहे.
दरम्यान, सकाळी व सायंकाळी वॉकिंगसाठी जाणाऱ्या नागरिकांनाही दुर्गंधीमुळे मोठ्या अडचणींचा सामना करावा लागत असून परिसरातील वातावरण अस्वच्छ व आरोग्यास धोकादायक बनत असल्याचे स्थानिकांनी सांगितले.
या पार्श्वभूमीवर रामगुरवाडी ग्रामपंचायतीने तातडीने लक्ष घालून या ठिकाणी साचलेला दुर्गंधीयुक्त कचरा हटवावा, तसेच रस्त्याशेजारी कचरा टाकणाऱ्या संबंधित चिकन दुकान मालकांवर सक्त कायदेशीर कारवाई करावी, अशी मागणी स्थानिक नागरिक, प्रवासी व सकाळी फिरण्यासाठी जाणाऱ्या नागरिकांनी केली आहे.
नागरिकांनी सांगितले की, प्रशासनाने वेळेत उपाययोजना न केल्यास स्वच्छता व आरोग्याचा प्रश्न आणखी गंभीर होण्याची शक्यता असून याबाबत लवकरात लवकर ठोस पावले उचलावीत.
ಶಿವಾಜಿನಗರ ರೈಲ್ವೆ ಸೇತುವೆ ಬಳಿ ಕೋಳಿ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡಲು ಆಗ್ರಹ; ದುರ್ವಾಸನೆಯಿಂದ ನಿವಾಸಿಗಳು ಪರದಾಡ, ಸೂಕ್ತ ಕ್ರಮಕ್ಕೆ ಆಗ್ರಹ.
ಖಾನಾಪುರ : ಖಾನಾಪುರ–ಜಾಂಬೋಟಿ ಮಾರ್ಗದ ರಾಮಗುರವಾಡಿ ಗ್ರಾಮಪಂಚಾಯತ್ ವ್ಯಾಪ್ತಿಗೆ ಬರುವ ಶಿವಾಜಿನಗರ, ಖಾನಾಪುರ ರೈಲ್ವೆ ಬ್ರಿಜ್ ಪ್ರದೇಶದಲ್ಲಿ ಕೆಲವು ಕೋಳಿ ಅಂಗಡಿ ಮಾಲೀಕರು ಕೋಳಿಯ ತ್ಯಾಜ್ಯವನ್ನು ರಸ್ತೆಯ ಬದಿಯಲ್ಲಿ ಎಸೆಯುತ್ತಿರುವುದರಿಂದ ಆ ಪ್ರದೇಶದಲ್ಲಿ ತೀವ್ರ ದುರ್ಗಂಧ ಹರಡಿದೆ. ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಸ್ಥಳೀಯ ನಿವಾಸಿಗಳಿಗೂ ಇದರಿಂದ ದೊಡ್ಡ ಮಟ್ಟದ ತೊಂದರೆ ಉಂಟಾಗಿದೆ.
ರಸ್ತೆಯ ಬದಿಯಲ್ಲಿ ಎಸೆಯಲ್ಪಡುವ ಕೋಳಿ ಕಸದ ಕಾರಣದಿಂದ ಈ ಪ್ರದೇಶದಲ್ಲಿ ಕಾಗೆಗಳು ಹಾಗೂ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದೆ, ಇದರಿಂದ ಸ್ವಚ್ಛತಾ ಸಮಸ್ಯೆ ಗಂಭೀರವಾಗುತ್ತಿದೆ. ಅಚಾನಕ್ ನಾಯಿಗಳು ರಸ್ತೆಗೆ ಓಡಿ ಬರುವುದರಿಂದ ಸಣ್ಣ ಪುಟ್ಟ ಅಪಘಾತಗಳ ಸಂಭವ ಹೆಚ್ಚಾಗಿದೆ ಎಂಬ ಆತಂಕವನ್ನು ನಾಗರಿಕರು ವ್ಯಕ್ತಪಡಿಸಿದ್ದಾರೆ.
ಇದರ ನಡುವೆ ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್ಗೆ ಹೋಗುವ ನಾಗರಿಕರೂ ದುರ್ಗಂಧದಿಂದಾಗಿ ದೊಡ್ಡ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಭಾಗದ ವಾತಾವರಣ ಅಸ್ವಚ್ಛವಾಗಿದ್ದು ಆರೋಗ್ಯಕ್ಕೂ ಅಪಾಯಕಾರಿಯಾಗುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಮಗುರವಾಡಿ ಗ್ರಾಮಪಂಚಾಯತ್ ತಕ್ಷಣ ಗಮನ ಹರಿಸಿ ಇಲ್ಲಿ ಕುಡಿರುವ ದುರ್ಗಂಧಯುಕ್ತ ಕಸವನ್ನು ತೆರವುಗೊಳಿಸಬೇಕು, ಹಾಗೆಯೇ ರಸ್ತೆಯ ಬದಿಯಲ್ಲಿ ಕಸವನ್ನು ಎಸೆಯುತ್ತಿರುವ ಸಂಬಂಧಿತ ಕೋಳಿ ಅಂಗಡಿ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಾಗರಿಕರು, ಪ್ರಯಾಣಿಕರು ಹಾಗೂ ಬೆಳಿಗ್ಗೆ ನಡೆಯಲು ಹೋಗುವವರು ಆಗ್ರಹಿಸಿದ್ದಾರೆ.
ನಾಗರಿಕರು ಹೇಳುವಂತೆ, ಆಡಳಿತವು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಳ್ಳದಿದ್ದರೆ ಸ್ವಚ್ಛತೆ ಮತ್ತು ಆರೋಗ್ಯದ ಸಮಸ್ಯೆ ಇನ್ನಷ್ಟು ಗಂಭೀರವಾಗುವ ಸಾಧ್ಯತೆ ಇದೆ. ಆದ್ದರಿಂದ ಈ ವಿಷಯದಲ್ಲಿ ಶೀಘ್ರವೇ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.



