माजी आमदार अरविंद पाटील यांच्या वाढदिवसानिमित्त खानापूरात मोफत आरोग्य तपासणी व रक्तदान शिबिर.
खानापूर : अरविंद चंद्रकांत पाटील यांच्या वाढदिवसानिमित्त नागरिकांसाठी मोफत आरोग्य तपासणी शिबिर व रक्तदान शिबिराचे आयोजन करण्यात आले आहे. हे शिबिर मलप्रभा हॉस्पिटल यांच्या सहकार्याने आयोजित करण्यात आले आहे.
मंगळवार, दि. 17 मार्च 2026 रोजी सकाळी 10.00 ते दुपारी 3.00 या वेळेत हे शिबिर पार पडणार असून, मलप्रभा हॉस्पिटल, नवीन बस स्टँड समोर, मांगिरीश कॉम्प्लेक्स (ग्राउंड फ्लोअर), खानापूर येथे आयोजन करण्यात आले आहे.

या शिबिरामध्ये नागरिकांसाठी मोफत आरोग्य तपासणी, रक्तदान शिबिर, डोळ्यांची तपासणी तसेच दातांची तपासणी करण्यात येणार आहे. तसेच साखर (शुगर), रक्तदाब (बीपी) आणि ईसीजी (ECG) यांचीही मोफत तपासणी करण्यात येणार असून, सर्व रुग्णांना डॉक्टरांकडून मोफत सामान्य तपासणी व आरोग्यविषयक मार्गदर्शन दिले जाणार आहे.
या उपक्रमाचा लाभ घेण्यासाठी खानापूर व परिसरातील नागरिकांनी मोठ्या संख्येने उपस्थित राहावे, असे आवाहन आयोजकांकडून करण्यात आले आहे.

ಮಾಜಿ ಶಾಸಕರಾದ ಅರವಿಂದ ಪಾಟೀಲ್ ಅವರ ಜನ್ಮದಿನದ ನಿಮಿತ್ತ ಖಾನಾಪುರದಲ್ಲಿ ನುರಿತ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ.
ಖಾನಾಪುರ : ಮಾಜಿ ಶಾಸಕರಾದ ಅರವಿಂದ ಚಂದ್ರಕಾಂತ ಪಾಟೀಲ್ ಅವರ ಜನ್ಮದಿನದ ನಿಮಿತ್ತ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರವನ್ನು ಮಲಪ್ರಭಾ ಹಾಸ್ಪಿಟಲ್ ಅವರ ಸಹಕಾರದಲ್ಲಿ ಆಯೋಜಿಸಲಾಗಿದೆ.
ಮಂಗಳವಾರ, ದಿ. 17 ಮಾರ್ಚ್ 2026 ರಂದು ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 3.00 ಗಂಟೆಯವರೆಗೆ ಈ ಶಿಬಿರ ನಡೆಯಲಿದೆ. ಮಲಪ್ರಭಾ ಹಾಸ್ಪಿಟಲ್, ನೂತನ ಬಸ್ ನಿಲ್ದಾಣದ ಎದುರು, ಮಾಂಗಿರೀಶ್ ಕಾಂಪ್ಲೆಕ್ಸ್ (ಗ್ರೌಂಡ್ ಫ್ಲೋರ್), ಖಾನಾಪುರದಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ.
ಈ ಶಿಬಿರದಲ್ಲಿ ಸಾರ್ವಜನಿಕರಿಗಾಗಿ ಉಚಿತ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಕಣ್ಣಿನ ತಪಾಸಣೆ ಹಾಗೂ ಹಲ್ಲಿನ ತಪಾಸಣೆ ಮಾಡಲಾಗುತ್ತದೆ. ಹಾಗೆಯೇ ಸಕ್ಕರೆ (ಶುಗರ್), ರಕ್ತದೊತ್ತಡ (ಬಿಪಿ) ಮತ್ತು ಇಸಿಜಿ (ECG) ಪರೀಕ್ಷೆಯನ್ನೂ ಉಚಿತವಾಗಿ ಮಾಡಲಾಗುತ್ತದೆ. ಎಲ್ಲಾ ರೋಗಿಗಳಿಗೆ ನುರಿತ ವೈದ್ಯರಿಂದ ಉಚಿತ ಸಾಮಾನ್ಯ ತಪಾಸಣೆ ಹಾಗೂ ಆರೋಗ್ಯ ಸಂಬಂಧಿತ ಮಾರ್ಗದರ್ಶನ ನೀಡಲಾಗುತ್ತದೆ.
ಈ ಉಪಕ್ರಮದ ಪ್ರಯೋಜನೆ ಪಡೆಯಲು ಖಾನಾಪುರ ಮತ್ತು ಸುತ್ತಮುತ್ತಲಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.



